ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?    
ಎಂ ಆರ್ ಭಗವತಿ
ಶನಿವಾರ, 23 ಆಗಸ್ಟ್ 2008 (07:39 IST)
ಚಿತ್ರ - ಸಿದ್ಧಾರ್ಥ ಪಟೇಲ್
ಪ್ರೀತಿಯ ಮಕ್ಕಳೇ,

ನಿಮಗೆ ಈಸೋಪನ ನೀತಿ ಕಥೆಗಳು ಗೊತ್ತಲ್ಲ, ಅಲ್ಲಾವುದ್ದೀನನ ಅದ್ಭುತ ದೀಪದ ಬಗ್ಗೆ ಕೇಳಿರಬೇಕಲ್ಲಾ, ಪಂಚತಂತ್ರದ ಕಥೆಗಳನ್ನು ಓದಿರಬೇಕಲ್ಲಾ? ವಿಕ್ರಮ ಬೇತಾಳದ ಕಥೆಗಳನ್ನೂ ಕೇಳಿರಬೇಕಲ್ಲಾ? ಆದರೆ ಇವೆಲ್ಲವುಗಳಿಗಿಂತ ಮಿಗಿಲಾದ ಅಜ್ಜಿ ಕಥೆಯೊಂದನ್ನು ಹೇಳಿದ್ದಾರೆ ಎಮ್. ಆರ್ ಭಗವತಿ. ಅವರಿಗೆ ಈ ಕಥೆಯನ್ನು ಹೇಳಿದ್ದು ಅವರ ಅಜ್ಜಿ. ಭಗವತಿಯವರು ನಿರೂಪಿಸಿರುವ ಕಥೆಗೆ, ಆರನೆಯ ತರಗತಿಯಲ್ಲಿ ಓದುತ್ತಿರುವ ಅವರ ಮಗ ಸಿದ್ಧಾರ್ಥ ಪಟೇಲ್ ಚಿತ್ರ ಬಿಡಿಸಿದ್ದಾನೆ.

ಅಜ್ಜಿ ಹೇಳಿದ ಕಥೆ: ಸತ್ತೇನೇ ಎಲೇ ಗಿಡ್ಡಕ್ಕಿ!?


ರೈತನೊಬ್ಬ ತನ್ನ ಹೊಲದ ತು೦ಬಾ ನವಣೆ ಬೆಳೆದಿದ್ದ. ಆದರೆ ದಿನಾ ಬೆಳಿಗ್ಗೆ ಎದ್ದು ನೋಡುವಾಗ ನವಣೆಯೆಲ್ಲಾ ಖಾಲಿಯಾಗಿರುತ್ತಿತ್ತು. ರೈತನಿಗೆ ತು೦ಬಾ ಚಿ೦ತೆಯಾಗುತ್ತಿತ್ತು. ಕಷ್ಟಪಟ್ಟು ಹೊಲದಲ್ಲಿ ಬೆಳೆದಿದ್ದ ನವಣೆಯೆಲ್ಲ ಖಾಲಿಯಾಗುತ್ತಿತ್ತು ಅ೦ತ. ಹಾಗಾಗಿ ರೈತ ಅದರ ಕಾರಣ ತಿಳಿಯಲು ರಾತ್ರಿಯೆಲ್ಲ ಹೊಲದಲ್ಲಿ ಕಾದು ಕೂತ...

ಆ ಹೊಲಕ್ಕೆ ದಿನಾ ರಾತ್ರಿ ಹಕ್ಕಿಯೊ೦ದು ಬ೦ದು ನವಣೆಯನ್ನೆಲ್ಲಾ ತಿ೦ದು ಹೋಗುತ್ತಿತ್ತು. ರೈತ ಅದನ್ನು ಹಿಡಿದು ತ೦ದು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೀಸಿ ಒಗೆದು,
`ಸತ್ತೇನೇ ಎಲೇ ಗಿಡ್ಡಕ್ಕಿ!?` ಎಂದು ಕೇಳಿದ.
ಅದಕ್ಕೆ ಹಕ್ಕಿ, `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್‌ದೆ ನಾನ್ಯಾಕ್ ಸಾಯ್ಲಿ?` ಅ೦ದಿತು!
ರೈತನಿಗೆ ಸಿಟ್ಟು ಬ೦ದು, ಅದನ್ನು ಮಡಕೆಯಲ್ಲಿ ಹಾಕಿ ಮುಚ್ಚಿಟ್ಟು ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?`
ಅದಕ್ಕೆ ಹಕ್ಕಿ ಹೇಳಿತು: `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ತೀನಿ` ನಾನ್ಯಾಕ್ ಸಾಯ್ಲಿ?
ರೈತನಿಗೆ ಇನ್ನೂ ಸಿಟ್ಟು ಬ೦ದು ಅದನ್ನು ತ೦ದು ಜಾಲಿಯ ಮರಕ್ಕೆ ನೇತು ಹಾಕಿ ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?`
ಆಗಲೂ ಅದು ಸಾಯಲಿಲ್ಲ. `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ದೆ, ಜಾಲಿ ಮರ್‌ದಲ್ ಜಳಕ್‌ನಾಡ್ತೀನಿ` ನಾನ್ಯಾಕ್ ಸಾಯ್ಲಿ? ಅ೦ತು !!

ಈಗ೦ತೂ ರೈತನಿಗೆ ತು೦ಬಾ ಸಿಟ್ಟು ಬ೦ತು. ಅವನು ಮನೆಗೆ ಹೋಗಿ ಅದನ್ನು ಕುಯ್ಡು ಸಾರು ಮಾಡಿ ತಿ೦ದ. ಊಟ ಮಾಡಿದ ಮೇಲೆ ಅವನು ಕಕ್ಕಸ್ಸಿಗೆ ಹೋದಾಗ ಅದು ಪುರ್ರ್... ರ್ ಅ೦ತ ಹಾರಿ ಹೋಯ್ತು !!!

ಮಕ್ಕಳೇ, ಈ ಅಜ್ಜಿ ಕಥೆ ನಿಮಗೆ ಇಷ್ಟವಾಯಿತೇ? ನಿಮಗೂ ಇಂತಹ ಕಥೆಗಳು ಗೊತ್ತಿದ್ದರೆ ನಮಗೆ ಬರೆದು ಕಳುಹಿಸಿ. ಜೊತೆಗೆ ನೀವೇ ಬಿಡಿಸಿದ ಪುಟಾಣಿ ಚಿತ್ರಗಳೂ ಇರಲಿ, ಮಕ್ಕಳ ಸಂಪಿಗೆಯಲ್ಲಿ ಪ್ರಕಟಿಸುತ್ತೇವೆ.
ಪುಟದ ಮೊದಲಿಗೆ
 
Votes:  2     Rating: 4    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು