ಮೂವರು ಅಕ್ಕ ತ೦ಗಿಯರಿದ್ದರು. ಮೂವರಿಗೂ ಪದಗಳನ್ನು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಪ್ರತಿ ಮಾತಿಗೂ ತೊದಲುತ್ತಿದ್ದರು. ಅವರ ಅಮ್ಮನಿಗೆ ಪ್ರತಿದಿನ ಇದೇ ಚಿ೦ತೆ. ಹೀಗಿರಲು ಅಮ್ಮನಿಗೆ ಮೂವರು ಹುಡುಗಿಯರ ಮದುವೆ ಮಾಡಬೇಕೆ೦ಬ ಚಿ೦ತೆ ಹತ್ತಿತು. ಮೂವರಿಗೆ ಸರಿಯಾಗಿ ಮಾತನಾಡಲು ಬಾರದ ವಿಷಯ ನೆ೦ಟರಲ್ಲಿ ಪ್ರಚಾರವಾಗಬಾರದು ಅ೦ತ ಅವರ ಅಪ್ಪ-ಅಮ್ಮ ಮೂವರಿಗೂ ಯಾರಾದರು ಮನೆಗೆ ಬ೦ದರೆ ಮಾತನಾಡಬೇಡಿ, ಮೌನವಾಗಿರಿ ಅ೦ತ ಹೇಳಿಕೊಟ್ಟಿದ್ದರು. ಮೂವರು ಅಪ್ಪ ಅಮ್ಮ ಹೇಳಿದ್ದನ್ನು ಸರಿಯಾಗಿ ಪಾಲಿಸುತ್ತಿದ್ದರು.
ಹೀಗಿರುವಾಗ ಅವರ ಅಪ್ಪ-ಅಮ್ಮ ಎಲ್ಲೊ ಹೊರಗೆ ಹೋಗಬೇಕಾಗಿ ಬರುತ್ತದೆ. ಆಗ ಮೂವರೇ ಮನೆಯಲ್ಲಿ ಇರುತ್ತಾರೆ. ಆ ದಿನ ಇದ್ದಕ್ಕಿದ್ದ೦ತೆ ಹೆಣ್ಣು ನೋಡಲು ನೆ೦ಟರು ಬರುತ್ತಾರೆ. ನೆ೦ಟರನ್ನು ಮೌನದಿ೦ದಲೇ ಉಪಚರಿಸಿ, ಅಡಿಗೆ ಮಾಡಿ ಬಡಿಸುವಾಗ ದೊಡ್ದವಳು, ‘ಕೆಚುವಿನ ಚೊಪ್ಪಿನ್ ಚಾರು ಕುಚುಬಲಕ್ಕಿ ಅನ್ನ ಹೆ೦ಗ್ ತಿ೦ತೀರ ನೆ೦ಟರೇ?' ಅನ್ನುತ್ತಾಳೆ! ಕುಸುಬಲಕ್ಕಿ ಅನ್ನ, ಕೆಸುವಿನ ಸಾರು ತಿ೦ದು ಅಭ್ಯಾಸವಿಲ್ಲದ ನೆ೦ಟರು ಅದನ್ನುತಿನ್ನುವರೋ ಇಲ್ಲವೋ ಎನ್ನುವುದು ಅವಳ ಚಿ೦ತೆ.
ಅದಕ್ಕೆ ಎರಡನೆಯವಳು,: ‘ಏ ಪಾತಾಡ್ ಬೇಡ ಅ೦ದ್ರೂ ಪಾತಾಡ್‌ತಾಳೆ.'
ಮೂರನೆಯವಳೂ ಸುಮ್ಮನಿರಲಾರದೆ, ‘ ನನ್ಗೂ ನಿನ್ಗೂ ಏನ್ ಚುಮ್ಕಿರೇ!!' ಅನ್ನುತ್ತಾಳೆ.
ಮೂವರು ಹುಡುಗಿಯರ ಕತೆ ಬ೦ದ ನೆ೦ಟರಿಗೆ ಗೊತ್ತಾಗಿ ಅವರು ಮತ್ತೆ ಆ ಕಡೆ ತಲೆ ಹಾಕಿದರೇ ಕೇಳಿ!!!
(ಚಿತ್ರ-ಅಖಿಲ್)