ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!    
ಸಂಪಾದಕ
ಮಂಗಳವಾರ, 3 ಮಾರ್ಚ್ 2009 (06:32 IST)
ನೀರು ಜೀವಜಲ. ನಮಗೆ ತಿಳಿದಿರುವಂತೆ ಗಾಳಿ, ಬೆಳಕು, ನೀರು, ಆಕಾಶದ ಅಗತ್ಯ ಪ್ರತಿಯೊಂದು ಜೀವಿಗೂ, ಅದರಲ್ಲೂ ಮಾನವನಿಗೆ ಬೇಕೇ ಬೇಕು. ಆದರೆ  ಬುದ್ಧಿವಂತ ಎಂದು ಕರೆಯಿಸಿಕೊಳ್ಳುವ ಮಾನವ ಮಾಡಿರುವುದಾದರೂ ಏನು. ತಾಯಿಯಂತೆ, ಜೀವ ದ್ರವವಂತೆ ಭಾವಿಸುವ ಜಲವನ್ನು ಮಾರಾಟಕ್ಕಿಟ್ಟಿರುವುದು. ಈ ಕೆಳಗಿನ ವರದಿಯನ್ನು ಓದಿ.

ಫಾರ್ಚೂನ್ ಪತ್ರಿಕೆಯ ೨೦೦೦ನೇ ಮೇ ತಿಂಗಳ ಸಂಚಿಕೆಯ ಒಂದು ವರದಿ ಹೇಳುತ್ತದೆ, ”೨೦ನೇ ಶತಮಾನದಲ್ಲಿ ತೈಲದ ಮಹತ್ವ ಏನಿತ್ತೋ ಅದರ ಸ್ಥಾನವನ್ನು ೨೧ನೇ ಶತಮಾನದಲ್ಲಿ ನೀರು ಆಕ್ರಮಿಸಿಕೊಂಡಿದೆ. ಇದು ಶ್ರೀಮಂತ ರಾಷ್ಟ್ರಗಳ ಮಾರಾಟದ ಹೊಸ ಸರಕಾಗಿದೆ. ಇಂದಿಗಾಗಲೇ ಈ ದಂದೆ ತೈಲ ಮತ್ತು ಔಷಧ ಕ್ಷೇತ್ರವನ್ನು ಮೀರಿಸುವ ಹಂತದಲ್ಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಪ್ರಖರ ಭವಿಷ್ಯವಿದೆಯೆಂದು ಹೇಳಲಾಗಿದೆ. ಇದರ ಪ್ರಕಾರ ವಾರ್ಷಿಕ ಏನಿಲ್ಲವೆಂದರೂ ಶೇಕಡಾ ೧೦ರಷ್ಟು ವ್ಯಾಪಾರ ಹೆಚ್ಚುತ್ತಾ ಹೋಗುತ್ತದೆಯಂತೆ. ಉದಾಹರಣೆಯಾಗಿ ನಾವು ಕೊಲರಾಡೋದ ಶಿಲಾವೃತ ಪರ್ವತ ಪ್ರದೇಶಗಳಲ್ಲಿ ಜೂನ್, ೧೯೯೯ ರಿಂದ ೨೦೦೦ ದ ನಡುವೆ ೧೦೦೦ ಕ್ಯೂ.ಮೀ. ನೀರಿನ ಬೆಲೆ ೪೦೦೦ ಡಾಲರ್‌ಗಳಿಂದ ೧೪೦೦೦ ಡಾಲರ್‍ಗಳಿಗೆ ಹೆಚ್ಚಾಗಿದ್ದನ್ನು ನೋಡಬಹುದು. ಒಂದು ವೇಳೆ ನಾವೇನಾದರೂ ಈ ವಿದೇಶಿ ಕಂಪನೆಗಳಿಗೆ ನೀರು ಸರಬರಾಜು ಮಾಡಲು ಬಿಡಲಿಲ್ಲವೆಂದರೆ ಅಂತರರಾಷ್ಟ್ರೀಯವಾಗಿ ಹಲವು ದಿಗ್ಭಂಧನಗಳನ್ನು ಎದುರಿಸಬೇಕಾಗುತ್ತದೆ.

ಮೊದಲು ವಿದೇಶಿ ಬಂಡವಾಳದಾರರು ನಮ್ಮದೇ ನಗರಗಳ ಜಲಮಂಡಲಿಗಳ ಜೊತೆ ಸೇರಿಕೊಂಡು, ರಾಜ್ಯದ ಕುಡಿಯುವ ನೀರಿನ ನಿರ್ಮಲೀಕರಣದಂತಹ ಯೋಜನೆಗೆ ಸಾಲ ಅಥವಾ ಸಹಾಯಧನ ಕೊಡುತ್ತಾರೆ. ಜೊತೆಗೆ ಅವರದೇ ಹಣ ಹೂಡಿ ವಿಶ್ವ ಜಲದಿನವನ್ನು ನಮ್ಮ ನಗರಗಳಲ್ಲಿ ಆಚರಿಸುತ್ತಾರೆ. ಮೊದಲು ನೀರಿನ ಮಹತ್ವ ಹಾಗೂ ಕೊರತೆಯ ಬಗ್ಗೆ ಅಂಕಿ ಅಂಶಗಳ ಸಹಿತ ಭಾಷಣ ಮಾಡಿ ಗಾಬರಿ ಹುಟ್ಟಿಸುತ್ತಾರೆ. ನಾವು ಗಾಬರಿಯಾದಾಗ ಅದಕ್ಕೆ ಅವರದೇ ಆದ `ಪರಿಹಾರ’ಗಳನ್ನು ಮಂಡಿಸುತ್ತಾರೆ. ಸುಗಮವಾಗಿ ನೀರು ಕೊಡುವ ಕನಸು ಬಿತ್ತುತ್ತಾರೆ. ನೀರಿಗಾಗಿ ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ಯಾಕೆ ಕೊಡಬಾರದು ಎನ್ನುವ ಭವಿಷ್ಯದ ಸೌಲಭ್ಯದ ಕುರಿತು ವರ್ಣಿಸುತ್ತಾರೆ. ಇಂತದೊಂದು ಅಭಿಪ್ರಾಯವನ್ನು ಸೃಷ್ಟಿಸಿ ಅನಿವಾರ್ಯವಾಗಿ ನಾವು ಮಣಿಯುವಂತೆ ಇಂತಹ ಕಂಪನಿಗಳು ಮಾಡುತ್ತವೆ. ಮುಂದೆ ಏನಾಗುತ್ತೆದೆ ಎನ್ನುವುದನ್ನು ಒಂದು ಜೀವಂತ ಉದಾಹರಣೆಯ ಮೂಲಕ ನೋಡೋಣ.

ಬೋಲಿವಿಯಾ, ದಕ್ಷಿಣ ಅಮೆರಿಕಾದಲ್ಲಿ ಬ್ರೆಜಿಲಿನ ನೈರುತ್ಯಕ್ಕಿರುವ ಒಂದು ಪುಟ್ಟ ರಾಷ್ಟ್ರ, ಇದರ ರಾಜಧಾನಿ ಲಾಪಾಝನಿಂದ ಇನ್ನೊಂದು ಮುಖ್ಯನಗರ ಸಾಂತಾಕ್ರೂಸಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಕೋಚಬಾಂಬಾ ಎನ್ನುವ ನಗರ ಸಿಗುತ್ತದೆ. ಇದು ವಿಶ್ವದ ದೊಡ್ಡ ನಗರದ ಪಟ್ಟಿಯಲ್ಲಿ ಸ್ಥಾನವನ್ನೇನೂ ಪಡೆದಿಲ್ಲ. ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಕುಳಿತು ಅದರ ಬಗ್ಗೆ ಯೋಚಿಸುವವರಿಗೆ ಅದರ ನಿಖರ ಜನಸಂಖ್ಯೆ, ಜನ ಜೀವನ, ಉದ್ದಿಮೆಗಳು, ಸಾಂಸ್ಕೃತಿಕ ವೈಶಿಷ್ಠಗಳ ಬಗ್ಗೆ ಒಳ್ಳೆ ಮಾಹಿತಿಗಳೇನೂ ಸಿಕ್ಕಿರಲಿಲ್ಲ. ಆದರೂ ಈ ನಗರ ಜಗತ್ತಿನ ಗಮನ ಸೆಳೆದಿತ್ತು.

೨೦೦೦ನೇ ಇಸವಿಯ ಏಪ್ರಿಲ್ ತಿಂಗಳ ಒಂದು ಮುಂಜಾವು ಸಾಧಾರಣ ಮೈಕಟ್ಟಿನ ೪೫ವರ್ಷ ಪ್ರಾಯದ ವ್ಯಕ್ತಿಯೊಬ್ಬ ಈ ಕೊಚಬಾಂಬಾದಿಂದ ವಾಷಿಂಗ್‌ಟನ್ ಡಿಸಿಗೆ ಹೋಗುವ ವಿಮಾನ ಹತ್ತಲು ತಯಾರಾಗಿ ನಿಂತಿದ್ದ. ಇವನ ಹೆಸರು ಆಸ್ಕರ್ ಓಲಿವೆರಾ ಎಂದು. ಈತ ವೃತ್ತಿಯಲ್ಲಿ ಒಬ್ಬ ಯಂತ್ರಶಿಲ್ಪಿ. ಇವನ ಉದ್ದೇಶ ವಿಶ್ವಬ್ಯಾಂಕಿನ ಅಧ್ಯಕ್ಷ ಜೇಮ್ಸ್ ಊಲ್ಫೆನ್‌ಸನ್‌ರನ್ನು ಮುಖಾಮುಖಿ ನೋಡಿ ತನ್ನ ನಾಡಿನ ಜನರ ಸಂದೇಶವನ್ನು ಅವರಿಗೆ ತಲುಪಿಸುವುದಾಗಿತ್ತು.

ಈ ಸಂದೇಶದ ಹಿನ್ನೆಲೆಯಲ್ಲಿ ಕೋಚಬಾಂಬಾದ ಚರಿತ್ರೆಯೇ ಇತ್ತು. ೧೯೯೮ರಲ್ಲಿ ವಿಶ್ವಬ್ಯಾಂಕ್ ಬೋಲಿವಿಯಾ ಕೇಳಿದ್ದ ೨೫ಮಿಲಿಯನ್ ಡಾಲರ್‌ಗಳ ಸಾಲವನ್ನು ನವೀಕರಣಗೊಳಿಸಲು ನಿರಾಕರಿಸುತ್ತು. ನಿಮ್ಮ ಸರ್ಕಾರ ಕೋಚಬಾಂಬಾ ನಗರದ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿ, `ಪೂರ್ಣ ದರ’ ದಲ್ಲಿ ನೀರು ಸರಬರಾಜು ಮಾಡಲು ನಾವು ಸೂಚಿಸುವ ಕಂಪನಿಗೆ ಅನುಮತಿ ಕೊಡುವುದಾದರೆ ಸಾಲವನ್ನು ನವೀಕರಿಸುವುದಾಗಿಯೂ ಹಾಗೂ ಈ ಸಾಲದ ಹಣವನ್ನು ಯಾವುದೇ ಕಾರಣದಿಂದ ನೀರಿನ ಸಬ್ಸಿಡಿಗಾಗಿ ವಿನಿಯೋಗಿಸ ಕೂಡದೆಂದೂ ಈ ಷರತ್ತುಗಳಿಗೆ ಒಪ್ಪುವುದಾದರೆ ಸಾಲ ನವೀಕರಣ ಸಾಧ್ಯವೆಂದೂ ಹೇಳಿತ್ತು. ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಬೋಲಿವಿಯಾ ಅನಿವಾರ್ಯವಾಗಿ ಈ ಷರತ್ತುಗಳಿಗೆ ಒಪ್ಪಿಕೊಂಡಿತು, ಹಾಗು ನೀರು ಸರಬರಾಜು ಸಂಸ್ಥೆಯಾದ `ಚೆಕ್‌ಟೆಲ್’ ಕಂಪನಿಗೆ ಕೊಚಬಾಂಬಾಕ್ಕೆ ನೀರು ಸರಬರಾಜು ಮಾಡುವ ಗುತ್ತಿಗೆ ದೊರೆಯಿತು.

ಈ ಕಂಪನಿ ಸರಬರಾಜು ಆರಂಭಿಸಿದ್ದೆ ತಡ ನೀರಿನ ದರವನ್ನು ದುಪ್ಪಟ್ಟುಗೊಳಿಸಿತು. ನೇರವಾಗಿ ೩೫ರಷ್ಟು ಹೆಚ್ಚಾದರೆ, ಪರೋಕ್ಷವಾಗಿ ಆಡಳಿತ ವೆಚ್ಚ, ಸೇವಾ ತೆರಿಗೆ, ಅದೂ...ಇದೂ... ಎಂದು ಇನ್ನಷ್ಟು ಸೇರಿಸಿತು. ಈ ದುಬಾರಿ ನೀರಿನ ಶುಲ್ಕ ಕೊಡಲಾಗದಂಥ ೪೦೦ ಸಣ್ಣ ಸಣ್ಣ ಸಮುದಾಯಗಳ ವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕವನ್ನು ನಿರ್ದಯವಾಗಿ ಕಡಿದು ಹಾಕಲಾಯಿತು. ಕೊಚಬಾಂಬಾದ ಜನರ ಎಲ್ಲಾ ಮನವಿಗಳನ್ನು ನೋಡುವ ಮೊದಲೇ ತಿರಸ್ಕರಿಸಿತು. ಒಪ್ಪಂದದ ಪ್ರಕಾರ ಸರ್ಕಾರ ಈ ವಿಷಯದಲ್ಲಿ ತಲೆಹಾಕಲಾಗದೆ ಹಿಂದುಳಿಯಿತು. ಈ ಹಿನ್ನೆಲೆಯಲ್ಲಿಯೇ ಆಸ್ಕರ್ ಓಲಿವೆರಾ ವಾಷಿಂಗ್‌ಟನ್ನಿಗೆ ಹೊರಟ್ಟಿದ್ದು. ಇವನು ಅಲ್ಲಿಗೆ ತಲುಪಿದಾಗ ಏಕಾಂಗಿಯಾಗಿರಲಿಲ್ಲ. ಇವನೊಂದಿಗೆ ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ ಹಾಗೂ ಐಎಫ್‌ಸಿಗಳ ಈ ನೀರಿನ ದರೋಡೆಯ ವಿರುದ್ಧ ಪ್ರತಿಭಟಿಸಲು ವಿಶ್ವದ ನಾನಾ ದೇಶಗಳಿಂದ ಬಂದಿದ್ದ ಸಾವಿರಾರು ಜನ ಪರಿಸರ, ಸಾಮಾಜಿಕ, ಜಲ, ಕಾರ್ಯಕರ್ತರಿದ್ದರು. ವಿಶ್ವದ ಬಹುದೊಡ್ಡ ನೀರು ಸರಬರಾಜು ಕಂಪೆನಿಗಳಾದ `ಸೂಜ್’ ಮತ್ತು `ವಿವೆಂಡಿ’ ಎಂಬ `ಜಲ ಬ್ರಹ್ಮ’ರುಗಳಿಗೆ ಟ್ರಿಲಿಯಾಂತರ ಡಾಲರುಗಳ ಸಾಲ ನೀಡಿ, ಇವುಗಳ ಮೂಲಕ ತೃತೀಯ ಜಗತ್ತಿನ ಎಲ್ಲಾ ಬಡದೇಶಗಳನ್ನು `ಜಲ ನಿಯಂತ್ರಣಕ್ಕೆ’ ಒಳಪಡಿಸ ಬಯಸಿದ್ದರು. ಇದಕ್ಕೆ ಸಾಲ, ಆರ್ಥಿಕ ಸಹಾಯ, ಬೆದರಿಕೆ, ಬ್ಲಾಕ್‌ಮೇಲ್ ತಂತ್ರಗಳನ್ನು ಬಳಸುತ್ತಿದ್ದರು.

ಆಸ್ಕರ್ ಒಲಿವೆರಾ ಹೇಳಿದ, `ನಾನು ವಿಶ್ವಬ್ಯಾಂಕಿನ ಅಧ್ಯಕ್ಷನಿಗೆ ತಿಳುವಳಿಕೆ ಕೊಡಬಯಸುತ್ತೇನೆ. ನಮ್ಮ ಜನರ ಆದಾಯ ಕುಟುಂಬದ ಆಹಾರಕ್ಕೇ ಸಾಕಾಗುತ್ತಿಲ್ಲ ಹೀಗಿರುವಾಗ ಅವರ ಆದಾಯದ ಅರ್ಧ ಭಾಗ ನೀರಿಗೇ ಹೋಗುತ್ತಿದೆ. ಬೇಕಾದರೆ ನಮ್ಮ ಊರಿಗೆ ಬಂದು ನೋಡಿ’ ಎಂದ. ಆದರೆ ಅವರಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಕೊನೆಗೆ ಜನರು ರೋಸಿಹೋಗಿ ಬೀದಿಗೀಳಿಯುವ ಸ್ಥಿತಿ ತಲುಪಿದರು. ಅವರ ಬೇಡಿಕೆಯಂದರೆ ಒಂದೇ ಅದು `ಜನರ ನೀರಿನ ಹಕ್ಕನ್ನು ಜನಕ್ಕೆ ಹಿಂತಿರುಗಿಸಿ’ ಎಂದು, ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಬಿತ್ತು. ಪರಿಸ್ಥಿತಿ ಕೈ ಮೀರಿ ಹೋಗಿತ್ತು, ಸುತ್ತಲ ಊರಿನ ಸಾರಿಗೆ ಸೇರಿ ಎಲ್ಲಾ ವ್ಯವಸ್ಥೆಗಳು ಬಂದಾದವು. ಇದರಿಂದ ಪೊಲೀಸರು ಕಂಡವರನ್ನೆಲ್ಲಾ ಬಂಧಿಸಿದರು. ಅದರ ನಡುವೆ ೧೭ವರ್ಷದ ಯುವಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾದ. ಕೊನೆಗೆ ರಾಷ್ಟ್ರದ ಅಧ್ಯಕ್ಷ ಹ್ಯೊಗೋ ಬೆಂಝೀರ್ ಮಾರ್ಷಿಲ್ ಒತ್ತಡ ಹೇರಿ ಕಂಪನಿಯೊಂದಿಗಿನ ಒಪ್ಪಂದಕ್ಕೆ ಕೈಮುಗಿದ.

ಈ ಹೊತ್ತಿಗಾಗಲೇ ಬೋಲಿವಿಯಾದ ಕಿಚ್ಚು ನಿಧಾನವಾಗಿ ವಿಶ್ವಕ್ಕೆಲ್ಲಾ ವ್ಯಾಪಿಸುತ್ತಿದೆ. ಜಗತ್ತಿನಲ್ಲಿಯೇ ನೀರನ್ನು ಪ್ರಜೆಗಳ ಮೂಲಭೂತಹಕ್ಕಾಗಿ ಸಂವಿಧಾನದಲ್ಲಿ ನಮೂದಿಸಿರುವ ಏಕೈಕ ರಾಷ್ಟ್ರವೆಂದರೆ ಆಫ್ರಿಕಾ, ಆದರೆ ಅಲ್ಲಿಯೇ ಈ ನೀರನ್ನು ಮಾರಿದ್ದಾರೆ. ಅದಿರಲಿ ಈ ಸಂವಿಧಾನದ ತಿರುಳನ್ನೇ ಬಂಡವಾಳ ಮಾಡಿಕೊಂಡು ಸಾರ್ವಜನಿಕ-ಸಾರ್ವಜನಿಕ (Public-Public) ಎಂಬ ವ್ಯವಸ್ಥೆಯನ್ನು ಹುಟ್ಟಿಹಾಕಿದರು. ಇವರದೇ ಬೇರೆ ಬೇರೆ ಹೆಸರಿನ ನಾಲ್ಕು ಪ್ರತ್ಯೇಕ ಕಂಪನಿಗಳನ್ನು ಒಂದುಗೂಡಿಸಿ `ಸಾರ್ವಜನಿಕ’ ಮಾಡಿದರು ಮತ್ತು ಈ ಹೊಸ ಹೆಸರಿನಲ್ಲಿ ಜೋಹಾನ್ಸ್ ಬರ್ಗ್ ಹಾಗೂ ಡರ್ಬಾನ್ ನಗರಗಳ ನೀರು ಸರಬರಾಜನ್ನು ಗುತ್ತಿಗೆ ಪಡೆದವು. ನಿರೀಕ್ಷೆಯಂತೆ ಅವುಗಳ ದರ ಜನರ ಮಾಸಿಕ ಆದಾಯದ ಮೂರನೇ ಒಂದು ಭಾಗಕ್ಕೇರಿತು ಈ ಶುಲ್ಕ ಕಟ್ಟಲಾಗದೆ ಲಕ್ಷಾಂತರ ಬಡವರ ಮನೆಗಳಿಗೆ ನೀರಿನ ಸಂಪರ್ಕ ಕಡಿದು ಹಾಕಿದರು. ಆದರೆ ಆ ಕಂಪನಿಗಳ `ಸಾರ್ವಜನಿಕ-ಸಾರ್ವಜನಿಕ’ದ ಕುತಂತ್ರ ತಿಳಿದಿದ್ದ ಜನ ಸುಮ್ಮನೆ ಕೂರದೆ `ನೆರೆಹೊರೆಗಾಗಿ ನೆರೆಹೊರೆ’ (Neighbourers to Neighbourer) ಎಂಬ ಚಳುವಳಿಯನ್ನು ಹುಟ್ಟುಹಾಕಿದರು. ಇಡೀ ನಗರ ಬೀದಿಗಿಳಿಯಿತು.

ಇದ್ದಕ್ಕಿದ್ದಂತೆ ನೀರಿನ ಖಾಸಗೀಕರಣದ ಬಗ್ಗೆ ಈಗೇಕೆ ಚರ್ಚೆಯೆಂದು ತಿಳಿಯಬೇಡಿ, `ಕ್ವಾಸಿಪ್’ ಎಂಬ ಯೋಜನೆಯಡಿ ಅತಿಯಾಗಿ ವಿರೋಧವಿರುವ ಬೆಂಗಳೂರನ್ನು ಬಿಟ್ಟು, ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ-ಧಾರವಾಡ ನಗರಗಳನ್ನು ಈ ಖಾಸಗೀಕರಣ ಆಗಲೇ ಆಕ್ರಮಿಸಿಕೊಂಡಿದೆ ಮತ್ತು ನಮ್ಮದೇ ಸರ್ಕಾರ ಕಾನೂನು ಬಾಹಿರವಾಗಿ ನಮ್ಮ ಸಂವಿಧಾನದ ಮೂಲ ಆಶಯವಾದ `ಕಲ್ಯಾಣ ರಾಜ್ಯದ’ ಕಲ್ಪನೆಯನ್ನು ಗಾಳಿಗೆ ತೂರಿ ಖಾಸಗೀಕರಣಕ್ಕೆ ಚಾಲನೆ ನೀಡಿದೆ.

ನಾಳೆ ಇಂತದೊಂದು ಪರಿಸ್ಥಿತಿ ನಿಮ್ಮ ಊರಿಗೆ ಬಂದರೆ ನೀವು ಏನು ಮಾಡುತ್ತೀರಿ?

[ಲೇಖನ - ವೇದಾ ನೂಪುರಾ]

ವೇದಾ ನೂಪುರಾ ಬೆಂಗಳೂರಿನ ಯೂನಿರ್ವಸಿಟಿ ಲಾ ಕಾಲೇಜಿನಲ್ಲಿ ಐದನೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ಕತೆ, ಕವಿತೆ, ವಿಮರ್ಶೆ, ಸಿನೆಮಾ, ಲಘು ಹರಟೆ, ಪ್ರವಾಸ, ಕ್ಯಾಂಪಸ್ ಸಮಾಚಾರಗಳ ಕುರಿತು ನಮಗೆ ಬರೆಯಿರಿ. ಬರಹದ ಜೊತೆಗೆ ನಿಮ್ಮ ಪುಟ್ಟ ಪರಿಚಯವೂ ಇರಲಿ. ಲೇಖನಗಳನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪಿಸಿ editor@kendasampige.com ಗೆ ಇಮೇಲ್ ಮಾಡಿ. ]
ಪುಟದ ಮೊದಲಿಗೆ
 
Votes:  3     Rating: 3.33    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು