ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅನಂತಮೂರ್ತಿಯವರ ಇನ್ನೂ ಮೂರು ಕವಿತೆಗಳು    
ಯು ಆರ್ ಅನಂತಮೂರ್ತಿ
ಸೋಮವಾರ, 13 ಅಕ್ಟೋಬರ್ 2008 (04:57 IST)
ವರ್ಣಚಿತ್ರ - ಪೂರ್ಣಚಂದ್ರ ತೇಜಸ್ವಿ
ಊರು ಎಂಬುದು ನಮ್ಮ ಮಟ್ಟಿಗೆ ಮೂರ್ತವಾದುದು. ಅಲ್ಲಿನ ಜಾತಿ ಜಗಳ, ಸಣ್ಣ ಸಣ್ಣ ಅಸೂಯೆಗಳು, ಜಮೀನಿನ ಗಡಿ ತಕರಾರುಗಳ ಜತೆಗೆ ಕಾಲ ಮುಂದಕ್ಕೆ ಹೋಗದೆಯೇ ನಿಂತು ಬಿಟ್ಟಿದೆಯೇನೋ ಎನಿಸುವಷ್ಟು ಜಂಜಾಟಗಳಿಂದಲೇ ತುಂಬಿದ್ದರೂ ಆ ಊರು ಎಲ್ಲರ ಇಷ್ಟದ್ದು. ಅಲ್ಲಿನ ಬೀದಿಗಳಿಂದ ಆರಂಭಿಸಿ ಜಗಳಗಳ ತನಕ ಎಲ್ಲವೂ ಸವಿ ನೆನಪುಗಳ ಪಟ್ಟಿಗೆ ಸೇರುವಂಥವು.

ದೇಶ ಹಾಗಲ್ಲ. ಅದು ಅಮೂರ್ತವಾದುದು. ಅದಕ್ಕೆ ಸೇನೆ ಬೇಕು. ಅದಕ್ಕೆ ದೇಶಾಭಿಮಾನವೂ ಬೇಕು. ಊರಿಗೆ ಬೇಕಾದ ಪ್ರೀತಿಯಷ್ಟೇ ಅದಕ್ಕೆ ಸಾಕಾಗುವುದಿಲ್ಲ. ದೇಶವನ್ನು ಉಳಿಸಲು ಯುದ್ಧವೂ ಬೇಕಾಗಬಹುದು. ಶ್ರೀಲಂಕಾ ಒಂದು ದೇಶವಾಗುವ ತನಕ ಅದಕ್ಕೆ ಯಾವ ಸಮಸ್ಯೆಯೂ ಇರಲಿಲ್ಲ. ದೇಶವಾದ ತಕ್ಷಣ ಅದರ ಭಾಷೆಯಾವುದು ಎಂಬ ಸಮಸ್ಯೆ ಬಂತು. ತಮಿಳು ಉಗ್ರರು ಹುಟ್ಟಲು ಒಂದು ಅವಕಾಶವಾಯಿತು.

ಬರೇ ಊರಿನಲ್ಲಿ ಬದುಕಲು ಸಾಧ್ಯವೇ? ರಸ್ತೆಗಳಿಂದ ಆರಂಭಿಸಿ ಎಲ್ಲ ಬಗೆಯ ಸಂಪರ್ಕ ಸಾಧನಗಳೂ, ಕರೆನ್ಸಿಯಂಥ ವಿನಿಮಯ ಮಾಧ್ಯವೂ ಸಾಧ್ಯವಾಗುವುದು ದೇಶದಿಂದ. ಊರುಗಳೆಲ್ಲಾ ಊರಾಗಿಯೇ ಇದ್ದು ದೇಶವಾಗುವ ಒಂದು ಪರಿಕಲ್ಪನೆಯನ್ನು ಗಾಂಧಿ ಗ್ರಾಮ ಸ್ವರಾಜ್ಯದ ಮೂಲಕ ನೀಡಿದ್ದರು. ಈ ಎಲ್ಲಾ ಕಲ್ಪನೆಗಳೂ 'ಊರು-ದೇಶ'ವೆಂಬ ಅನಂತಮೂರ್ತಿಯವರ ಈ ಸರಣಿ ಪದ್ಯಗಳಲ್ಲಿ ಅನಾವರಣಗೊಂಡಿದೆ.

ಊರು - ದೇಶ


ಸತ್ತು ಬದುಕಿ ಊರು
ಸೋತು ಗೆದ್ದು ದೇಶ

ಒಳದಾರಿ ತುಳಿದು ಊರು
ಹೆದ್ದಾರಿ ತಿಳಿದು ದೇಶ

ಗೊತ್ತಾಗಿ ಇರೋದು ಊರು
ಗುರಿಯಾಗಿ ಉಳಿಯೋದು ದೇಶ

ಎಣ್ಣಿ ಊರು; ಎಣಿಸಿ ದೇಶ
ಹರಟಿ ಊರು; ಸ್ತುತಿಸಿ ದೇಶ

ಒಂದು ಮಮತೆಗೆ
ಇನ್ನೊಂದು ಘನತೆಗೆ

ಬದುಕಿದ್ದು ಊರು
ಭಾವಿಸಿದ್ದು ದೇಶ

ಒಂದು ಕಥೆ
ಇನ್ನೊಂದು ಇತಿಹಾಸ
--------
ಊರಿಲ್ಲದ ದೇಶ

ಊರಿಗೊಂದು ದೇಶವಾಗಿ
ದೇಶಕ್ಕೊಬ್ಬ ರಾಜನಾಗಿ
ಊರೇ ಇಲ್ಲದ ದೇಶಗಳಲ್ಲಿ
ಮಲಗೋದು ಇಲ್ಲಿ
ಏಳೋದು ಅಲ್ಲಿ

ದೇಶಕ್ಕೊಂದು ಬಾವುಟವಾಗಿ
ಬಾವುಟಕ್ಕೊಂದು ಚರಿತ್ರೆಯಾಗಿ
ನನಪೇ ಉಳಿಯದ ದೇಶಗಳಲ್ಲಿ
ಅಣ್ಣ ಸ್ವದೇಶಿ
ತಮ್ಮ ವಿದೇಶಿ
---------
ಊರಾದ ದೇಶ

ಕೂಲಿಗೆ ಜ್ಞಾನಿಗೆ ಪಕ್ಷಿಗೆ ಜಿಪ್ಸಿಗೆ
ಹರಿಯುವ ನೀರಿಗೆ ಮುಗಿಲಿನ ತೆವಲಿಗೆ
ದನಗಳ ಮೇವಿಗೆ ಕವಿಗಳ ಊಹೆಗೆ
ಬಿಸಿಲಿನ ಇಲ್ಲಿಗೆ, ತಂಪಿನ ಅಲ್ಲಿಗೆ
ಕಂಡೂ ಕಾಣದ ಊರಿರಬೇಕು
ನೋಡಿ ಮಗಿಯದ ದೇಶವು ಬೇಕು

ಡೊಂಬಗೆ ಡ್ಯಾಂಡಿಗೆ ಚೆಂಡಿನ ಹುಚ್ಚಗೆ
ಕಾಮಿಯ ತೀಟೆಗೆ ಸಂತನ ಕಾಣ್ಕೆಗೆ
ಸಕಾಲ ಋತುವಿಗೆ ತತ್ಪರ ಬಂಡೆಗೆ
ಮಗ್ಧನ ಕನಸಿಗೆ ಧೀರನ ನಿಲುವಿಗೆ
ಕಂಡೂ ಕಾಣದ ಊರಿರಬೇಕು
ನೋಡಿ ಮಗಿಯದ ದೇಶವು ಬೇಕು

- ಯು.ಆರ್ ಅನಂತಮೂರ್ತಿ
ಪುಟದ ಮೊದಲಿಗೆ
 
Votes:  3     Rating: 4.67    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?