ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ತೈಲಧಾರೆಯಂತೆ ಮನಸುಕೊಡೋ ಹರಿಯೇ...    
ಶಾಂತಲಾ ಭಂಡಿ
ಮಂಗಳವಾರ, 28 ಅಕ್ಟೋಬರ್ 2008 (01:19 IST)

ಎಲ್ಲೆಲ್ಲೂ ಬೆಳಕು, ಯಾವ ದಿಕ್ಕಿನಲ್ಲಿ ನಡೆದರೆ ಹುಡುಕುತ್ತಿರುವ ವಿಳಾಸ ತಲುಪುತ್ತೇನೆಯೋ ಅರಿಯದೇ ನಿಂತಿದ್ದೇನೆ, ಹೀಗೆ ನಿಂತಿರುವುದು ನಾನು ಮಾತ್ರ ಅಲ್ಲ. ನನ್ನೊಡನೆ ಹಲವಾರು ಮಂದಿ. ಅವರನ್ನೆಲ್ಲ ಕೇಳಿದೆ ‘ನೀವೆಲ್ಲಿ ಹೊರಟಿದ್ದೀರಿ' ಅವರೆಲ್ಲ?  ‘ನಾವೂ ಅಲ್ಲಿಗೇ ಹೊರಟಿದ್ದೇವೆ' ಎನ್ನುತ್ತಾರೆ. ಇಷ್ಟೆಲ್ಲ ಜನರಿದ್ದರೂ ಅಲ್ಲಿಗೆ ಹೋಗುವ ದಾರಿ ಮಾತ್ರ ತಿಳಿಯುತ್ತಿಲ್ಲ ಒಬ್ಬರಿಗೂ. ಕುಳಿತಿರುವಂತೆಯೇ ದೂರದಲ್ಲಿ ಚಿಕ್ಕ ಚುಕ್ಕಿಯೊಂದು ಮಿನುಗುತ್ತಿರುವಂತೆ ಅನಿಸಿ ಎಲ್ಲರೂ ಆ ದಿಕ್ಕಿನಲ್ಲಿಯೇ ದಿಟ್ಟಿಸಲಾರಂಭಿಸುತ್ತೇವೆ. ನೋಡುತ್ತಿರುವಂತೆಯೇ ಆ ಮಿಣುಕು ನಕ್ಷತ್ರದಂತೆ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅದು ನಕ್ಷತ್ರವಲ್ಲ... ದೀಪ ಎಂಬುದು ಅರಿವಾಗಿ ಆಶ್ಚರ್ಯವೂ! ನಿಧಾನವಾಗಿ ದೀಪ ಹಣತೆಯೊಳಗಿನ ದೀಪವಾಗಿ, ಹಣತೆಯ ದೀಪ ಹೆಣ್ಣೊಬ್ಬಳ ಬೊಗಸೆಯೊಳಗಿನ ಹಣತೆಯಾಗಿ , ದೀಪ ಹಿಡಿದ ಬೊಗಸೆ ಹೆಣ್ಣೊಬ್ಬಳ ಕೈಯಾಗಿ, ಕೊನೆಯಲ್ಲಿ ಹೆಣ್ಣೊಬ್ಬಳು ಬೊಗಸೆಯಲ್ಲಿ  ಬೆಳಗುವ ಹಣತೆ ಹಿಡಿದು ನಮ್ಮೆಡೆಗೇ ನಡೆದು ಬರುತ್ತಿದ್ದಾಳೆ ಎಂಬುದು ಅರಿವಾಗಿ.... ಹಾಗೆಯೇ ಹಿಂದೆಯೇ ಸಾವಿರಾರು ದೀಪಗಳು, ದೀಪಗಳ ಸಾಲು.

‘ದೀಪಾವಳಿ' ಎಂಬ ಪದವೇ ಸೂಚಿಸುವಂತೆ ದೀಪಗಳ ಹಬ್ಬವೇ ದೀಪಾವಳಿ. ಬೆಳಕಿನ ಸಾಲುಗಳ ಹಬ್ಬವಿದು. ದೀಪವೆಂಬ ಪದವೇ ಚಂದ. ಅದರರ್ಥ ಇನ್ನೂ ಸೊಗಸು. ದೀಪವೆಂಬ ಪದಕ್ಕೆ ಒಂದೆರಡೇ ಅರ್ಥಗಳಿಲ್ಲ. ಕಂಡುಕೊಂಡಷ್ಟೂ ಮುಗಿಯದ ಅರ್ಥಗಳ ಮೊತ್ತವೇ ದೀಪ ಎನಿಸಿಬಿಡುತ್ತದೆ ಯೋಚಿಸಿದಷ್ಟೂ. ಹಾಗೆಯೇ ದೀಪಾವಳಿಯನ್ನು ಬಿಡಿಸಿ ‘ದೀಪ' ಎಂದರೆ ಬೆಳಕು, ‘ಅವಳಿ' ಎಂದರೆ ಸಾಲು ಎಂಬಷ್ಟೇ ಅರ್ಥದೊಳಗೆ ಮುಗಿಸಿಬಿಡುವುದು ಕಷ್ಟ. ಹಬ್ಬಗಳ ಹಿನ್ನೆಲೆ ಕಾಣುತ್ತ ಹೋದಂತೆ ಹಬ್ಬಗಳ ಹೆಸರು, ಆಚರಣಾ ವಿಧಾನಗಳ ಅರ್ಥ ವಿಸ್ತಾರವಾಗುತ್ತಾ ಹೋಗುತ್ತದೆ. ಆಚರಿಸುವ ಪ್ರತಿ ಹಬ್ಬಗಳಲ್ಲಿಯೂ ದೀಪ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಆಕರಗಳು ಬೇರೆ ಅಷ್ಟೇ. ಕೆಲವೆಡೆ ಹಣತೆ, ಕೆಲವೆಡೆ ಕ್ಯಾಂಡಲ್. ಯಾವುದು ಏನೇ ಇದ್ದರೂ ದೀಪ ದೀಪವೇ. ದೀಪಕ್ಕೊಂದು ಬತ್ತಿ ಬೇಕೇ ಬೇಕು, ತೈಲವೂ ಬೇಕು. ತೈಲವೋ, ಬತ್ತಿಯೋ..... ಒಟ್ಟಿನಲ್ಲಿ ಎಲ್ಲರಿಗೂ ಬೇಕಾಗಿರುವುದು ಬೆಳಕೇ ವಿನಃ ಬೆಳಕಿನ ಮೂಲದ ವೈವಿಧ್ಯತೆಯೊಳಗಿನ ವ್ಯತ್ಯಾಸವಲ್ಲ. ವ್ಯತ್ಯಾಸಗಳ ವಿಂಗಡಣೆಯೂ ಅಲ್ಲ, ವಿಭಜನೆಯೂ ಅಲ್ಲ. ಬೇಕಾಗಿರುವುದು ಬೆಳಕು ಮಾತ್ರ.
 
ಪ್ರತಿದಿನ, ಪ್ರತಿ ಕ್ಷಣ ಬೇಕಾಗಿರುವ ದೀಪ ಪಡೆದಿರುವ ಉನ್ನತ ಸ್ಥಾನದ ಪ್ರತೀಕವೇ ಈ ದೀಪಾವಳಿ. ಅಂದು ಮನೆಯ ಮೂಲೆ ಮೂಲೆಗಳನೂ ಬಿಡದೇ ಹಣತೆ ಬೆಳಗಿಸಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ದೊರೆತು ಮೂಲೆ ಮೂಲೆಗಳಲೂ ಅಂಟಿಸಿದ ದೀಪಕ್ಕೆ ಆಸ್ತಿಕ ನಾಸ್ತಿಕರೆಲ್ಲರೊಳಗೂ ಅರ್ಥಮೂಡಿ ಪ್ರತಿ ಮನದ ಮೂಲೆಯೊಳಗೂ ದೀಪ ಉರಿಯುತ್ತಿದೆ ಇಂದು. ಉರಿವ ದೀಪ ಉರಿದು ಅಳಿದುಹೋಗುವ ಮುನ್ನ ಸದುಪಯೋಗವಾಗಬೇಕಾದುದಷ್ಟೇ ಉಳಿದದ್ದು. ಕತ್ತಲನ್ನು ಅಳಿಸುವ ಕಾರ್ಯದಂತೆಯೇ ಆರುತ್ತಿರುವ ದೀಪಗಳನು ಉರಿಸುವ ಕಾರ್ಯವೂ ದೀಪದಿಂದಲೇ ಆಗಬೇಕಾದದ್ದು. ಅರಿವು ಅಜ್ಞಾನವನು ಅರಿಯಬೇಕು. ಹಾಗೆಯೇ ಅಜ್ಞಾನ ಅರಿವಿನೊಳಗೆ ಬೆರೆತು ಅರಿವಾಗಬೇಕಾದ್ದು ದೀಪದೊಳಗಿನ ಈ ಮುಖದ ಅರ್ಥ. ‘ಅರಿವೇ ಗುರುವು' ದೀಪವೆಂದರೆ ಅರಿವು, ಜ್ಞಾನವೆಂದಾದ ಮೇಲೆ ದೀಪವೊಂದು ಶ್ರೇಷ್ಠ ಗುರುವು. ಕಾರ್ತೀಕ ಮಾಸದಲ್ಲಿ ಮನೆಮುಂದಿನ ತುಳಸೀಕಟ್ಟೆಯ ಮುಂದೆ ಬೆಳಗುವ ಹಣತೆಯ ಮುಂದೆ ಒಂದರ್ಧ ಗಂಟೆ ಕಳೆದರೆ ನಾವು ನಾವಾಗಿರದೇ ಮತ್ತೇನನ್ನೋ ಪಡೆದ ಭಾವ ನಮ್ಮನ್ನಾವರಿಸಿರುತ್ತದೆ. ಸುತ್ತಲಿನ ಅಗಾಧತೆ ರುಚಿಸುವುದಿಲ್ಲ. ದೀಪವೇ ನಿಮ್ಮನ್ನೆಳೆಯುತ್ತದೆ, ಒಂದೊಳ್ಳೆಯ ಮಾರ್ಗ ತೋರುತ್ತದೆ. ಮನಸ್ಸು ಹಗುರಾಗಿರುತ್ತದೆ. ‘ತೈಲಧಾರೆಯಂತೆ ಮನಸುಕೊಡೊ ಹರಿಯೇ' ಹೌದು, ಅಂತಹದೊಂದು ಮನಸು ಬೇಕು. ಬರಿಯ ತೈಲಧಾರೆಯಂತ ಮನಸಿದ್ದರೆ ಸಾಲದು, ಅಲ್ಲಿ ದೀಪವೂ ಉರಿಯುತ್ತಿರಬೇಕು.

ದೀಪದ ಹಿನ್ನೆಲೆ ಹುಡುಕುತ್ತ, ದೀಪದಿಂದ ಮುಂದೇನಾಗಬೇಕಿದೆ ಎಂಬುದ ಯೋಚಿಸುವ ಮೊದಲು ಇವತ್ತೇನು ಮಾಡುತ್ತಿದ್ದೇವೆ ಎಂಬುದನರಿವುದಕ್ಕಾಗಿ ದೀಪವೊಂದನ್ನು ಬೆಳಗಿಸೋಣ. ದೀಪದ ಬುಡದಲ್ಲಿನ ಕತ್ತಲೆಯನ್ನು ಹುಡುಕುವುದು ಬೇಡ, ಸುತ್ತಲಿನ ಬೆಳಕನ್ನು ಆಸ್ವಾದಿಸೋಣ. ‘ಓ ದೀಪವೇ....ಎಲ್ಲರನ್ನೂ ಕಾಪಾಡು...' ಎಂದು ದೀಪದ ಮುಂದೆರಗಿ ಬೇಡಿಕೊಳ್ಳುತ್ತಾ... ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

[ಚಿತ್ರ-ಚರಿತಾ]

ಪುಟದ ಮೊದಲಿಗೆ
 
Votes:  2     Rating: 4.5    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು