ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅನಂತಮೂರ್ತಿ ಬರೆದ ವ್ಯಾಲಂಟನ್ ಕವಿತೆ    
ಯು ಆರ್ ಅನಂತಮೂರ್ತಿ
ಶುಕ್ರವಾರ, 13 ಫೆಬ್ರವರಿ 2009 (11:18 IST)
ಡಾ.ಯು.ಆರ್.ಅನಂತಮೂರ್ತಿಯವರು ಇದೀಗ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ್ದಾರೆ. ಇದು ನಮಗೂ ಖುಷಿಯ ವಿಷಯ.

ಹೊಸದಾಗಿ ಬರೆಯುವವರೂ ಬೆರಗಾಗುವಂತೆ, ಎಲ್ಲ ಬಗೆಯ ಓದುಗರೂ ಆರಾಮಕುರ್ಚಿಯಿಂದ ಬೆನ್ನು ಸಡಿಲಿಸಿಕೊಂಡು ತಲೆಯೆತ್ತಿ ಓದುವಂತೆ ಮಾಡುತ್ತಿರುವ ಈ ಹೊಸ ಕವಿತೆಗಳು ಆಧುನಿಕ ಭಾರತದ ಹಿರಿಯ ಬರಹಗಾರನೊಬ್ಬನ ಇಳಿ ವಯಸ್ಸಿನ ಸಂಕೋಚ, ಸಡಗರ ಹಾಗೂ ಹೆದರಿಕೆಗಳನ್ನು ಸಹಜ ಹರಿವಿನ ಕನ್ನಡದಲ್ಲಿ ದಾಖಲಿಸುತ್ತಿವೆ.
ಈ ದಿನ ಅನಂತಮೂರ್ತಿಯವರು ಪ್ರೇಮಿಗಳ ದಿನಕ್ಕಾಗಿ ಇಸ್ತಾರು ಭಗವತಿಯ ಕುರಿತು ಬರೆದ ಕವಿತೆ ಇದೆ.

ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ

ಭಗವತಿ ಇಸ್ತಾರು
ಸಕಲ ಸೃಷ್ಟಿಯ ಮಾತೃದೇವತೆ
ಸಮರದ ದೇವತೆ, ಕಾಮದ ದೇವತೆ.

ಜಗಭಂಡೆ.
ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿ
ಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ?

ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರ
ಐದುಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ ಪುರಾತನ ತಾಯಿ
ಸಲಹುವ ತಾಯಿ, ಕೊಲ್ಲುವ ತಾಯಿ
ಒಬ್ಬಗಂಡನನ್ನು ಕಪ್ಪೆ ಮಾಡಿದ ದೇವಿ;
ಇನ್ನೊಬ್ಬನನ್ನು ಅಮೃತ ಹುಡುಕಲು ಅಟ್ಟಿದ ತಾಯಿ;
ತಾನೊಲಿದ ಮಗದೊಬ್ಬನನ್ನು ಅಧೋಲೋಕದಲ್ಲಿ ಹುಡುಕಿ ಪಡೆದ ತಾಯಿ.
ಕಾಮಿಸಿ ಕೂಡಿದರೂ ಅಕ್ಷತ ಕನ್ಯೆ.

ನೆಬುಷೆಡ್ನಸಾರ್ ಎಂಬ ಮಹಾ ಸಾಮ್ರಾಟ ಇಸ್ತಾರಳ ಭಕ್ತನಾಗಿ ಇವಳಿಗೊಂದು ಮಹಾದ್ವಾರ ನಿರ್ಮಿಸಿದ
ಗ್ರೀಕ್ ಭಾಷೆಯಲ್ಲಿ ಇದು ಬಾಬಿಲು, ದೇವರ ಬಾಗಿಲು.
ಬ್ಯಾಬಿಲೋನಿನ ಅದ್ಭುತವಾದ ತೂಗು ತೋಟವನ್ನು ಇವನೇ ನಿರ್ಮಿಸಿದ
ಸಾಕುವ, ಸಲಹುವ, ಔಷಧ ಕ್ಷೇತ್ರದ ಅಧಿದೇವತೆಯಾಗಿ
ನರಳುವ ರೋಗಿಗಳ ದಣಿವಾರಿಸುವ
ಈ ದೇವಿಗಾಗಿ ನೆಬುಷೆಡ್ನಸಾರ್ ಕಾಲಾನುಕ್ರಮದಲ್ಲಿ ಮಾಡಿದ್ದೆಲ್ಲ ಮಣ್ಣಾಗಿದೆ. ಮಣ್ಣಿನ ರಾಣಿಯೂ ಇಸ್ತಾರಳೆ !

ನೆಬುಷೆಡ್ನಸಾರ್ ಕೆತ್ತಿಸಿಕೊಂಡಿದ್ದ ಅವನ ಹೆಸರುಮಾತ್ರ ಕಲ್ಲಿನ ಇಟ್ಟಿಗೆಗಳಲ್ಲಿ
ಬಾಗ್ದಾದ್ ಬಳಿ ಸಿಗುವ ಅವಶೇಷಗಳಾಗಿ ಉಳಿದಿವೆ.
ಅವನು ಆಳಿದ್ದಾಯಿತು ಅಳಿದದ್ದಾಯಿತು
ಈ ಅವಶೇಷಗಳ ಮೇಲೆಯೇ
ಈಚೆಗೆ ಬಾಗ್ದಾದ್ ಆಳಿದ ಧಿಮಾಕಿನ ದೊರೆ ಸದ್ದಾಮ ಹುಸೇನ್ ತನ್ನ ಹೆಸರು ಕೆತ್ತಿಸಿಕೊಂಡಿದ್ದಾನೆ
ಅವನು ಆಳಿದ್ದೂ ಆಯಿತು, ಅಳಿದದ್ದೂ ಆಯಿತು
ಅವಿತ ಬಿಲದಿಂದ ಈ ಸದ್ದಾಮನನ್ನು ಹೊರಗೆಳೆದು ತಂದು ಕೊಂದ ಇನ್ನೊಬ್ಬ ಬುಷ್‌ ಎನ್ನುವ ಹಣದ ಹುಂಬು ಗುಲಾಮರ ಮಹಾದೊರೆ
ಈ ಅವಶೇಷಗಳನ್ನು ರಕ್ಷಿಸುವ ಯಜಮಾನಿಕೆ ಹೊತ್ತಿದ್ದಾನೆ
ಅವನೂ ಆಳಿದ್ದಾಯಿತು, ಅಳಿದದ್ದೂ ಆಯಿತು.

ಪ್ರತಿ ಹುಣ್ಣಿಮೆ ರಜಸ್ವಲೆಯಾಗುವ ನಮ್ಮ ತಾಯಿ ಇಸ್ತಾರು
ಮಡಿವಂತರ ಶತ್ರು, ನಿತ್ಯ ಕನ್ಯೆ, ಸಿಂಹವನ್ನು ತನ್ನ ಚಿಹ್ನೆಮಾಡಿಕೊಂಡ
ಭೂಮ್ಯಾಕಾಶಗಳ ಮಹಾಕಾಮಿ
ಬರೆದಿಟ್ಟದ್ದು ಹೀಗಿದೆ:
‘ಕಾಮ ವಿರೋಧಿಗಳು ಜೀವ ವಿರೋಧಿಗಳು
ಸಾವನ್ನು ಒಲ್ಲದವರು ಜೀವ ಹೇಡಿಗಳು
ಇವರಿಗೆ ಜೀವನದಲ್ಲಿ ಸಂತೋಷವಿಲ್ಲ
ಸುಖ ಮರಣವೂ ಇಲ್ಲ’

-ಯು.ಆರ್.ಅನಂತಮೂರ್ತಿ

ಪುಟದ ಮೊದಲಿಗೆ
 
Votes:  7     Rating: 3.71    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?