ಕೆಂಡಸಂಪಿಗೆಯ ಕಾಲೇಜು ಸಂಪಿಗೆ ಅಂಗಳದಲ್ಲಿ ಈ ದಿನ ಲಕ್ಷ್ಮಿ ವಾರಣಾಶಿ ಬರೆದ ಕವಿತೆ ಇದೆ. ಲಕ್ಷ್ಮಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿದ್ದಾರೆ. ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ಕತೆ, ಕವಿತೆ, ವಿಮರ್ಶೆ, ಲಘು ಹರಟೆ, ಪ್ರವಾಸ, ಕ್ಯಾಂಪಸ್ ಸಮಾಚಾರಗಳ ಕುರಿತು ನಮಗೆ ಬರೆಯಿರಿ. ಬರಹದ ಜೊತೆಗೆ ನಿಮ್ಮ ಪುಟ್ಟ ಪರಿಚಯವೂ ಇರಲಿ. ಲೇಖನಗಳನ್ನು ನುಡಿ, ಬರಹ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಟೈಪಿಸಿ editor@kendasampige.com ಗೆ ಇಮೇಲ್ ಮಾಡಿ.
ಕೆಂಡಸಂಪಿಗೆಗೆಂದು ಲಕ್ಷ್ಮಿ ವಾರಣಾಶಿ ಬರೆದ ಕವಿತೆ ಇಲ್ಲಿದೆ.
ನಿ೦ತಲ್ಲಿಯೇ ಕ೦ಬವಾದೆ
ಅರೆ ಕತ್ತಲೆಯ ಏಕಾ೦ತದಲಿ ಗೋಡೆಯೊಡನೆ ಬೆರೆತುಹೋದೆ ಹಲವು ಕನಸುಗಳೊಡನೆ ನನ್ನ ನಾ ಮರೆತುಹೋದೆ!
ಸುಮ್ಮನಿರದು ಜೀವ ಬಯಕೆಗಳೊಡನೆ ನಡೆದಿದೆ ಭಾವ ಯೋಚನೆಗಳೊಡನೆ ತಲ್ಲೀನಳಾಗಿ ಸ್ಥಬ್ಧವಾದೆ ನಿ೦ತಲ್ಲಿಯೇ ಕ೦ಬವಾದೆ.
ನುಡಿಯತೊಡಗಿತು ಕಲ್ಲಿನೊಳಗಿನ ದನಿ ವರುಷಗಳ ಹಿ೦ದೆ ನಿನ್ನ೦ತೆಯೇ ಯಾರೋ ಜೊತೆಯಾದರು ಕೆಲಕ್ಷಣದಲಿ ಮರೆಯಾದರು ನೆನಪಿಸಿತು ತನ್ನೊಳಗೆ ಕ೦ಬನಿಯ ಕಾಣಿಸದೆ ಕರಗಿತು ಕಲ್ಲು ನನಗರಿವಿಲ್ಲದೆ ಮರುಕ್ಷಣವೇ ಮರಳಿದೆನು ಜಗದೆಡೆಗೆ, ಪೂರ್ಣ ಬೆಳಕಿನೆಡೆಗೆ...
-ಲಕ್ಷ್ಮಿ ವಾರಣಾಶಿ
|