ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು    
ಸಂಪಾದಕ
ಶನಿವಾರ, 11 ಏಪ್ರಿಲ್ 2009 (01:53 IST)

ಈ ವಾರದ ಮಕ್ಕಳ ಸಂಪಿಗೆಯಲ್ಲಿ ಸಂಕೇತ್ ಪಿ.ಭಾರತೀಶ್ ಎನ್ನುವ ಬಹುಮುಖ ಪ್ರತಿಭೆಯ ಪರಿಚಯ. ಚಿತ್ರಕಲೆ, ಕಾವ್ಯರಚನೆ, ಸಂಗೀತ, ನೃತ್ಯ, ನಟನೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನ ತೊಡಗಿಸಿಕೊಂಡಿರುವ ಸಂಕೇತ್ ಎಲ್ಲದರಲ್ಲೂ ಒಂದು ಕೈ ಮುಂದು.

ಹಾಸನದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಸಂಕೇತ್ ಈಗ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುವ ಖುಷಿಯಲ್ಲಿದ್ದಾನೆ. ಚಿಕ್ಕಂದಿನಿಂದಲೂ ಬಣ್ಣಗಳು ಅಂದರೆ ಆಸೆ ಇಟ್ಟುಕೊಂಡಿರುವ ಹುಡುಗ ಅವುಗಳನ್ನ ಬಳಸಿ ಚಂದ ಚಂದದ ಚಿತ್ರಗಳನ್ನ ಬಿಡಿಸುತ್ತಾನೆ. ‘ನಿನಗೆ ಯಾವುದೋ ಚಿತ್ರವನ್ನ ನೋಡಿ ಅದರಂತೆ ಬರೆಯೋದು ಇಷ್ಟವಾ, ಇಲ್ಲ ನೀನೇ ಕಲ್ಪನೆ ಮಾಡಿಕೊಂಡು ಬಿಡಿಸೋದು ಇಷ್ಟವಾ?’ ಅಂದರೆ ‘ಎರಡೂ ಇಷ್ಟ. ಎರಡೂ ರೀತಿಯಲ್ಲೂ ಬಿಡಿಸುತ್ತೇನೆ’ ಅಂತ ನಗುತ್ತಾನೆ.

ನೀಲಿ, ಬಿಳಿ ಬಣ್ಣಗಳು ಅವನ ಇಷ್ಟದ ಬಣ್ಣಗಳು. ಗಾಢ ಬಣ್ಣಗಳನ್ನ ಹೆಚ್ಚೆಚ್ಚು ಬಳಸಿ ಚಿತ್ರ ಬರೆಯೋದು ಅವನಿಗಿಷ್ಟ. ನದಿ,ತೊರೆ, ಮರ, ಕೆರೆ, ಕಮಲ, ಗುಡಿ ಗೋಪುರಗಳಿಂದ ಶುರುವಾಗಿ ಹಂಪಿಯ ವಿರೂಪಾಕ್ಷ, ಬಸವಣ್ಣ, ಭಗತ್ ಸಿಂಗ್ ವರೆಗೆ ಎಲ್ಲರನ್ನೂ ಈತ ತನ್ನ ಕುಂಚದಿಂದ ಚಿತ್ರಿಸಿದ್ದಾನೆ.

 

 

ಸಂಕೇತ್ ಕೇವಲ ಚಿತ್ರ ಕಲಾವಿದ ಮಾತ್ರವಲ್ಲ. ಒಳ್ಳೆಯ ಕವಿ ಕೂಡ. ತನ್ನ ಹದಿಮೂರನೇ ವಯಸ್ಸಿನಲ್ಲೇ ಚೊಚ್ಚಲ ಕವನ ಸಂಕಲನವನ್ನ ಪ್ರಕಟಿಸುವ ಮೂಲಕ ಈಗಾಗಲೇ ಅಧಿಕೃತವಾಗಿ ಕವಿ ಅಂತ ಕೂಡ ಕರೆಸಿಕೊಂಡಿದ್ದಾನೆ. ೨೦೦೮ರ ಮಾರ್ಚ್ ನಲ್ಲಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ  ಸಂಕೇತನ ‘ಕಲರವ’ ಕವನ ಸಂಕಲನ ಬಿಡುಗಡೆಯಾಗಿದೆ. ಅದೇ ವೇಳೆ ಸಂಕೇತನ ಚಿತ್ರಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವೂ ನಡೆದಿದೆ.

 

 
 
ಧಾರವಾಡದ ರಾಜ್ಯಮಟ್ಟದ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಕೇತ್ , ೨೦೦೮ರ ಧಾರವಾಡ ಚಿಣ್ಣರ ಮೇಳದ ಉದ್ಘಾಟಕನಾಗಿ ಆಯ್ಕೆ ಆದದ್ದು ಹೆಮ್ಮೆಯ ವಿಚಾರ. ೨೦೦೭-೦೮ ರಲ್ಲಿ ಜಿಲ್ಲಾ ಮಟ್ಟದಲ್ಲಿ ಕಲಾ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಈ ಪ್ರತಿಭೆ, ೨೦೦೮ರ ನವೆಂಬರ್ ೧೪ ರಂದು ಶ್ರವಣ ಬೆಳಗೊಳದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ಬಾನುಲಿಯಲ್ಲಿ ಕಾವ್ಯವಾಚನ ಮಾಡಿದ್ದಾನೆ. ೨೦೦೮ರ ಜುಲೈನಲ್ಲಿ ಇತನ ಬಹುಮುಖ ಪ್ರತಿಭೆ ಕುರಿತು ಹಾಸನ ಆಕಾಶವಾಣಿಯಲ್ಲಿ ಸಂದರ್ಶನ ಪ್ರಸಾರವಾಗಿದೆ.


ಕೇಂದ್ರ ಸರ್ಕಾರದ ಸಿಸಿಆರ್ ಟಿ ಸ್ಕಾಲರ್ ಶಿಪ್ ಪುರಸ್ಕೃತ ಸಂಕೇತ್, ಧರ್ಮಸ್ಠಳ ಆಯುರ್ವೇದ ಕಾಲೇಜು, ಪ್ರೇರಣಾ ವಿಕಾಸ ವೇದಿಕೆ, ಶಾಂತಲಾ ಫೈನ್ಸ್ ಆಟ್ಸ್, ಹೊಯ್ಸಳ ಉತ್ಸವ, ಬಿಜಿಎಸ್ ತೋಟಗಾರಿಕೆ, ಎಂಸಿಇ, ಎಂಸಿಎಫ್ ಗ್ರಾಹಕ ವೇದಿಕೆ ಮುಂತಾದ ಕಡೆಗಳಲ್ಲಿ ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾನೆ. ಅನೇಕ ಕಡೆ ಕವನ ವಾಚನ ಮಾಡಿದ್ದಾನೆ. ರಾಜ್ಯ ಸರ್ಕಾರ ಕೂಡ ಈತನ ಪ್ರತಿಭೆ ಗುರುತಿಸಿ ನಗದು ಪುರಸ್ಕಾರ ನೀಡಿದೆ.

 

 ಚಿತ್ರ ಬಿಡಿಸೋದು, ಕವಿತೆ ಬರೆಯೋದಲ್ಲದೆ, ಕ್ಲೇ ಮಾಡಲಿಂಗ್, ಸಂಗೀತ, ನೃತ್ಯ, ಅಭಿನಯ, ಪ್ರಬಂಧ ರಚನೆ, ಪುಷ್ಪಾಲಂಕಾರ ಮುಂತಾದ ಹವ್ಯಾಸಗಳು ಈತನಿಗಿವೆ. ನೂರಾರು ಹಳೆಯ ಅಂಚೆ ಚೀಟಿಗಳು ಈತನ ಸಂಗ್ರಹದಲ್ಲಿವೆ. ಕ್ರಿಕೆಟ್ ಆಟದಲ್ಲಿ ಕೂಡ ತನ್ನ ಪ್ರತಿಭೆ ಪ್ರದರ್ಶಿಸಿರುವ ಸಂಕೇತ್ ೨೦೦೬-೦೭ರಲ್ಲಿ ೧೩ ವರ್ಷದೊಳಗಿನ ಕ್ರಿಕೆಟ್ ತಂಡದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದಾನೆ.

ವಿವೇಕಾನಂದ, ಭಗತ್ ಸಿಂಗ್, ಕುವೆಂಪು, ಅಬ್ದುಲ್ ಕಲಾಂ, ಲಿಯೋನಾರ್ಡೋ ಡಾ ವಿಂಚಿ ಈತನ ಮೆಚ್ಚಿನ ವ್ಯಕ್ತಿಗಳು. ಸಂಕೇತ್, ಹಾಸನದ ದೇಸಾಯಿ ಹವ್ಯಾಸಿ ಚಿತ್ರಕಲಾ ಶಾಲೆಯಲ್ಲಿ ದೇಸಾಯಿ ಗುರುಗಳ ಬಳಿ ಚಿತ್ರಕಲೆಯನ್ನ ಅಭ್ಯಾಸ ಮಾಡುತ್ತಿದ್ದಾನೆ.

ಹಾಸನದ ಸಿ.ಕೆ. ಭಾರತೀಶ್, ಹೆಚ್. ಆರ್ ಪರಿಮಳ ಸಂಕೇತನ ತಂದೆ-ತಾಯಿ. ಏರೋನಾಟಿಕಲ್ ಇಂಜಿನಿಯರ್ ಆಗಬೇಕು ಅನ್ನುವುದು ಈ ಹುಡುಗನ ಕನಸು.

ಸಂಕೇತನ ಪ್ರತಿಭೆ ಬಗ್ಗೆ ಓದಿ ನಿಮಗೇನನಿಸಿತು? ನಿಮಗೆ ತಿಳಿದಿರುವ, ನಿಮ್ಮ ಪಕ್ಕದ ಮನೆಯವರೂ ಆಗಿರಬಹುದಾದ ಇಂತಹ ಪುಟಾಣಿ ಪ್ರತಿಭೆಗಳ ಕುರಿತು ಮಕ್ಕಳ ಸಂಪಿಗೆಗೆ ಬರೆಯಿರಿ. ಅವರ ಕಥೆ, ಕವಿತೆ, ಲೇಖನ, ಚಿತ್ರಗಳನ್ನು editor@kendasampige.com ಗೆ ಕಳುಹಿಸಿ ಕೊಡಿ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸೋಣ.

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು