ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ:ಐನೂರು ಚದರಗಳ ಅನಾಮಿಕತೆಯ ಬಿಕ್ಕಟ್ಟು    
ನಾಗರಾಜ ವಸ್ತಾರೆ
ಶುಕ್ರವಾರ, 15 ಮೇ 2009 (11:49 IST)
ಇದು ಮೂರನೆಯ ಸಲ. ಏನು ತಾನೇ ಬರೆಯುವುದು? ಇಲ್ಲಿನ ತಲೆಬುಡವಿಲ್ಲದ ಪ್ರತಿಕ್ರಿಯೆಗಳಿಗೆ (ಹೌದು. ಬುಡವೇ ಇಲ್ಲ, ತಲೆ ಮೊದಲೇ ಇಲ್ಲ!!) ಏನಂತ ಹೇಳುವುದು? ಹೇಗಂತ ಸುಮ್ಮನಿರುವುದು? ಎಲ್ಲ ವಿಚಿತ್ರವೆನಿಸುತ್ತದೆ. ಮೋಜೆನಿಸುತ್ತದೆ. ಏನೋ ಉಡಾಫೆಯೆನಿಸುತ್ತದೆ. ಮೈ ಫುಟ್ ಅಂತಲೋ, ಬಿಗ್ ಡೀಲ್ ಅಂತಲೋ ಇಲ್ಲಿ ನಾನು ಬದುಕುವ ‘ನಾಗರಿಕ’ ಪರಿಭಾಷೆಗಳಲ್ಲಿ ಸಿಡುಕಿ ಸುಮ್ಮನಾಗೋಣವೆಂದರೆ, ಈ ಕೆಂಡಸಂಪಿಗೆಯಲ್ಲೇ ಒಬ್ಬರು ಹೇಳಿದ ಹಾಗೆ ನಡುಬೆರಳು ತೋರಿ ನನ್ನಷ್ಟಕ್ಕೆ ಇದ್ದುಬಿಡೋಣವೆನ್ನಲಿಕ್ಕೆ ಆಗುತ್ತದೆಯೆ? ಊಹ್ಞೂಂ... ಇಲ್ಲವೇ ಇಲ್ಲ. ಅದು ಸಾಧುವೂ ಅಲ್ಲ. ಹಾಗಾದರೆ ಹೇಗಿರುವುದು?

ನೆರೆರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ನನ್ನ ಓರಗೆಯವಳೊಬ್ಬಳು (ಓರಗಿತ್ತಿ ಅನ್ನಬಹುದೆ?) ಒಂದು ಮನೆಯನ್ನು ವಿನ್ಯಾಸ ಮಾಡಿದ್ದಾಳಂತೆ. ಇಪ್ಪತ್ತು ಎಕರೆ ವಿಸ್ತೀರ್ಣದ ಪ್ಲಾಟು. ಐನೂರಿಪ್ಪತ್ತು ಚದರಗಳ ಕಟ್ಟಡ. ಅರ್ಥಾತ್ ಐವತ್ತೆರಡು ಸಾವಿರ ಚದರಡಿಗಳಲ್ಲಿ ಹರಡಿಕೊಂಡಿರುವ ಒಂದು ಯಕಃಶ್ಚಿತ್ ಮನೆ! ಎರಡು ರೂಮು, ಕಿಚನು, ಹಾಲು, ಪೂಜಾ, ಎರಡು ಟಾಯ್ಲೆಟು... ಅಂತ ಈ ಬೃಹನ್ನಗರಿಯ ‘ಥರ್ಟಿ-ಫಾರ್ಟಿ’ಗಳಲ್ಲಿ ಮೂಡಿಕೊಳ್ಳುವ- ಕೆಳಮಧ್ಯಮವರ್ಗದೊಂದು ಸಾಧಾರಣ ಬದುಕಿನ, ಎಂಟು ಹತ್ತು ಚದರಗಳ ಖಾಯೀಷೊಂದನ್ನು ಐವತ್ತು ಅರವತ್ತು ಪಟ್ಟು ವಿಸ್ತರಿಸಿದರೆ ಆಗುವುದಲ್ಲ- ಅಷ್ಟು ದೊಡ್ಡದು ಎನ್ನುವ ಸರಳ ಸಮಾನುಪಾತವನ್ನೂ ಮೀರಿ ಬೃಹತ್ತಾಗಿರುತ್ತದೆ ಈ ಮನೆಯ ಲೆಕ್ಕಾಚಾರ! ಒಮ್ಮೆ ಯೋಚಿಸಿ.... ಈ ದೇಶದ ‘ಅಂಬಾನಿ’ಗಳು ಇಪ್ಪತ್ತೈದು ಅಂತಸ್ತುಗಳಲ್ಲಿ ಮನೆಯನ್ನು ಹಬ್ಬಿಸಿ ತಮ್ಮ ಅಪ್ಪಟ ‘ಬಿಳಿ’ ಸಿರಿವಂತಿಕೆಯನ್ನು ಬೀಗುತ್ತಿರುವಾಗಲೇ, ನಾವು ಚುನಾಯಿಸುವ ನಮ್ಮವರೇ ಪುಢಾರಿಗಳು ಲೆಕ್ಕಕ್ಕೆ ಸಿಗದಂತೆ ಕಲೆ ಹಾಕಿದ ‘ಕಪ್ಪು’ ಕಪ್ಪವನ್ನು ಹೀಗೆಲ್ಲೋ ಪೋಲು ಮಾಡುತ್ತಿರುತ್ತಾರೆ. ಇರಲಿ.... ಇಷ್ಟು ದೊಡ್ಡ ಮನೆಯಲ್ಲಿ ಏನು ತಾನೇ ಮಾಡಬಹುದು? -ಈ ಪ್ರಶ್ನೆಯನ್ನು ಸಂದೇಹ, ಸೋಜಿಗಗಳಲ್ಲಿ ಅವಳೆದುರು ಉದ್ಗರಿಸಿದೆ. ಸುಮ್ಮನೆ ನಕ್ಕುಬಿಟ್ಟಳು. ಮನೆಯ ಕಟ್ಟಡ ಆಲ್ಮೋಸ್ಟ್ ಮುಗಿದಿರುವಂತಹ ಸಂದರ್ಭದಲ್ಲಿ ಈ ಮುಖ್ಯಮಂತ್ರಿಗಳು, ಅವರಿಗೆಂದು ಸಜ್ಜಾಗಿದ್ದ ಮಲಗುವ ಕೋಣೆಯಿಂದ ದೂರಬೆಟ್ಟದ ಹಸಿರು ತಪ್ಪಲಿನಲ್ಲಿಣಿಕುತ್ತಿದ್ದ ಗುಡಿಯ ಶಿಖರವನ್ನು ನೋಡಿ ಕೆಂಡವಾದರಂತೆ. ‘ನೀವೇನು ಮಾಡುತೀರೋ ಗೊತ್ತಿಲ್ಲ... ನನಗೆ ಇಲ್ಲಿಂದ ಆ ಗುಡಿ ಕಾಣಿಸಬಾರದು ಅಷ್ಟೆ. ಅದು ಕಾಣದ ಹಾಗೆ ಏನಾದರೂ ಮಾಡಿ...’ ಅಂತೊಮ್ಮೆ ಹೂಂಕರಿಸಿದರಂತೆ. ಇವಳು ಅಂದರೆ ನನ್ನ ‘ಓರಗಿತ್ತಿ’ ಕೂಡಲೇ ಹೀಗೆ ಸಲಹೆ ಕೊಟ್ಟಳಂತೆ. `Why don't we do your indoor tennis court here? By virtue of the height that demands it shall not only overpower the temple, but also shall obstaculate the sight!!’ ಈ ಸಲಹೆ ಸಾಕಾರಗೊಂಡು ಅರವತ್ತು ಅಡಿಯೆತ್ತರದ ಮುಚ್ಚಿಗೆಯನ್ನು ಕವಿಯುವಲ್ಲಿ ದೇಗುಲದ ದೃಶ್ಯ ಕಣ್ಮರೆಯಾಯಿತಂತೆ!

ಈ ಕಟ್ಟುವ ಕ್ರಿಯೆಯಿದೆಯಲ್ಲ ಅದಕ್ಕೆ ಮನೋಬಲ ಬೇಕು. ಒಮ್ಮೊಮ್ಮೆ ಇಂತಹ ಧಾರ್ಷ್ಟ್ಯವೂ ಆಗಬೇಕೇನೋ... ಅದಿರಲಿ. ಈ ಐನೂರಿಪ್ಪತ್ತು ಚದರವೆಂದರೆ ಎಷ್ಟು ವೆಚ್ಚವೆಂಬುದನ್ನು ನೀವು ಅಂದಾಜಿಸಬಹುದು. ನಿಮ್ಮ ಊಹೆಯಲ್ಲಿ ಅದಕ್ಕೊಂದಷ್ಟು ಕೋಟಿ ದುಡ್ಡಿರಬಹುದು. ನನ್ನ ತಜ್ಞ ಮತ್ತು ಅನುಭವಸ್ಥ ಎಣಿಕೆಯಲ್ಲಿ ಅದೇ ಊಹೆ ಇನ್ನಷ್ಟು ನಿಖರಗೊಳ್ಳಬಹುದು... ಆದರೆ ಈ ಮನೆಗೆ ನೂರೈವತ್ತು ಕೋಟಿ ದುಡ್ಡು ವ್ಯಯವಾಯಿತೆಂದು ಓರಗಿತ್ತಿ ಹೇಳಿದಾಗ ಹೌಹಾರಿದೆ. ‘ಆಪ್ ಮಹಾನ್ ಹೋ’ -ಅಂದು, ‘ನಿಮ್ಮ ಪಾದಗಳ ನೆರಳಚ್ಚು ಸಿಗಬಹುದೆ... ದಿನಾ ಹೂವೇರಿಸಬಹುದೂ...’ ಎಂದೊಂದಿಷ್ಟು ನಾಟಕವನ್ನೂ ಮಾಡಿದೆ. ಬಳಿಕ, ಅದೇ ಸಂಜೆ ಇನ್ನೊಂದು ಮೀಟಿಂಗಿನಲ್ಲಿ ಈ ಮನೆಯ ವಿಷಯ ಮತ್ತೊಮ್ಮೆ ಹೇಗೋ ತಲೆದೋರಿತು. ಇನ್ನೂರು ಎಕರೆ ವಿಸ್ತಾರದಲ್ಲಿ ಏಳೆಂಟು ಲಕ್ಷ ಚದರಡಿಗಳ ಕಾಲೇಜು ಕಟ್ಟಿಸಿರುವ ನನ್ನ ಕ್ಲಯಂಟು ವಿಷಯ ಕೇಳಿದ್ದೇ ಭಾವುಕರಾದರು. ‘ಈ ಕಾಲೇಜಿಗೊಂದು ಸುಸೂತ್ರವಾದ ವ್ಯವಸ್ಥೆ ಆಯಿತೆಂದರೆ ನಾನು ಹಿಂದಕ್ಕೆ ಸರಿದುಹೋಗುತ್ತೇನೆ, ಸರ್... ಅನಾಮಿಕವಾಗಿ ಬದುಕೋದು ಎಷ್ಟು ಚಂದ ಅಲ್ಲವಾ? ನಾನಿರೋ ಮನೆ ನೋಡಿದೀರಲ್ಲ- ಹೆಚ್ಚೆಂದರೆ ಎರಡು ಸಾವಿರ ಸ್ಕೇರ್‍‍ಫುಟ್ ಇದೆ ಅಷ್ಟೆ. ಸಾಮಾನ್ಯವಾಗಿ ಬದುಕೋಕೂ ದಮ್ಮಿರಬೇಕು!!’ ಎನ್ನುತ್ತ ಈ ‘ಅನಾನಿಮಿಟಿ’ಯನ್ನು ಕುರಿತು ಒಂದಷ್ಟು ಹರಟಿದರು. ಏಳೆಂಟು ವರ್ಷಗಳಲ್ಲಿ ಕಾಲೇಜೊಂದನ್ನು ಕಟ್ಟಿ ಬೆಳೆಸಿರುವ, ನನ್ನಷ್ಟೇ ವಯಸ್ಸಿನ ಈ ಮಹಾನುಭಾವ ನಿಜಕ್ಕೂ ತಕ್ಕ ಮಟ್ಟಿಗೆ ಅನಾಮಿಕವಾಗಿಯೇ ಬದುಕುತ್ತಾರೆ. ಅವರ ಕಾಲೇಜಿನ ಎಷ್ಟೋ ವಿದ್ಯಾರ್ಥಿಗಳಿಗೆ ಅವರನ್ನು ನೋಡಿದರೆ ಯಾರಂತ ಗುರುತಾಗುವುದಿಲ್ಲ, ಹಾಗೆ ಎಲ್ಲರಲ್ಲೊಬ್ಬರಂತೆ ಇದ್ದಾರೆ! ಹಾಗಿರುವುದನ್ನು ನಾನೇ ನೋಡಿದ್ದೇನೆ.

ಅನಾಮಿಕತೆಯ ಬಗ್ಗೆ ಅವರು ಮಾತು ಬೆಳೆಸಿದಕ್ಕೆ ನೂರೈವತ್ತು ಕೋಟಿ ವೆಚ್ಚದ ಮನೆಯನ್ನು ಕಟ್ಟಿದ ಈ ಸಿಎಂ ಸಾಹೇಬರ ಮನೆಯ ನೆವ ಮಾತ್ರವೇ ಇತ್ತೇನೋ. ನಮ್ಮ ಮಾತು ಹೀಗೆ ಸುರುಗೊಂಡು ಇನ್ನೆಲ್ಲಿಗೋ ಹೋಯಿತು. ದುಡ್ಡು ಮಾಡುವುದೂ ಒಂದು ನಮೂನೆ ಮತ್ತಿನಲ್ಲಿ ಎಸಗಿಕೊಳ್ಳುವ ಕ್ರಿಯೆ. ಅದೊಂದು ಅಪ್ಪಟ ಅಮಲೇ ಸರಿ. ಚಿರಂಜೀವಿ ಎಂಬ ಚಿತ್ರರಂಗದ ಧೀಮಂತ ರಾಜಕೀಯಕ್ಕೆ ಇಳಿದಿರುವುದೂ ಇದೇ ಅಮಲಿನಿಂದ ತಾನೆ? ಇಷ್ಟು ವರ್ಷಗಳ ಪರಿಶ್ರಮದಿಂದ ಅವನು ಕೂಡಿಟ್ಟ ಹಣದ ಮುಪ್ಪಟ್ಟು ಮೊತ್ತವನ್ನು ಆತ ಬರೇ ಪಕ್ಷ ಕಟ್ಟಿ ಮಾಡಿಕೊಂಡನಂತೆ! ಇಂತಹ ಅಮಲಿನಲ್ಲಿದ್ದುಕೊಂಡು ಅನಾಮಿಕವಾಗುವುದು ಹೇಗೆ ಸಾಧ್ಯ? -ಹೀಗೊಂದಿಷ್ಟು ಹರಟುವಾಗ ನನಗೇಕೋ ಕೆಂಡಸಂಪಿಗೆಯಲ್ಲಿ ಬಂದು ಸುರಿದು, ಒರಲಿಕೊಳ್ಳುವ ಬೇನಾಮಿ ಪ್ರತಿಕ್ರಿಯೆಗಳು ನೆನಪಾಗಿದ್ದು ಬರೇ ಇನ್‍ಸಿಡೆಂಟಲೆನಿಸಲಿಲ್ಲ.  

ಹಾಗೆ ನೋಡಿದರೆ ಬರಹ, ವಿನ್ಯಾಸ, ಕಲೆ ಇವುಗಳು ಜರುಗುವುದೂ ಅವರು ಹೇಳಿದ ಹಾಗೆ- ಇಂಥದೇ ಒಂದು ಮನೋವಿಲಾಸದ ಮತ್ತಿನಲ್ಲಿ. ಒಂದು ಪದ್ಯ ಸಂಭವಿಸುವ ಹೊತ್ತಿನಲ್ಲಿ, ಕತೆಯೊಂದು ಘಟಿಸಿ ಬರೆದುಕೊಳ್ಳುತ್ತಿರುವಾಗ, ಗೋಡೆ, ಸೂರುಗಳನ್ನು ಕವಿಯುತ್ತ, ‘It is all about articulating walls and roofs, and thereby to impart a spatial order' -ಅಂತ ಗೆರೆಗಳಲ್ಲಿ ಇರವುಗಳನ್ನು ಊಹಿಸಿ, ಇರವಿಗೊಂದು ‘ಕಾನ್ಸೆಪ್ಟು’ ಹೇಳುತ್ತ ವಿನ್ಯಾಸವಾಗುವಾಗ್ಗಿನ ಮನಸ್ಸಿನ ಸ್ವೇಚ್ಛೆ-ಸ್ವಚ್ಛಂದಗಳ, ಸ್ವೋಪಜ್ಞ-ಸ್ವೈರಗಳ ಸ್ಥಿತಿಯಿರುತ್ತದಲ್ಲ, ಅದಕ್ಕೆ ಸಾಟಿಯಾಗಬಲ್ಲ ನಶೆ ಇನ್ನೊಂದಿದೆಯೆ? ಈ ಅಮಲಿನೆದುರು ಜಗತ್ತಿನ ಇನ್ನುಳಿದ ಅನುಭವಗಳು, ಸಂವೇದನೆಗಳು ಬರೇ ಲೌಕಿಕವೆನಿಸುವುದು ಯಾಕೆ? ಇಂತಹದೊಂದು ಮಹಾತ್ಮೆಯಲ್ಲಿ ಮನಸ್ಸನ್ನು ಸದಾ ಇಟ್ಟಿರಬಾರದೆ- ನೀನು ಓ ದೇವರೆ... ನಿಜಕ್ಕೂ ಈ ಸ್ಥಿತಿಯನ್ನು ಹೇಳಿಕೊಳ್ಳಲಿಕ್ಕೆ ಭಾಷೆಗೆ ಮಿತಿಯಾಯಿತೆನಿಸುತ್ತದೆ. ಅನುಭವ ಏನಿದ್ದರೂ ಮಿಗಿಲಾಗುತ್ತದೆ. ಮಾತು ತೊಡರುತ್ತದೆ. ಅಡಚಣೆಯೆನಿಸುತ್ತದೆ.

ಹೀಗೆಲ್ಲ ಯೋಚಿಸುತ್ತಲೇ ಹೊತ್ತು ಮತ್ತೊಮ್ಮೆ ಇನ್ನೊಂದು ಶುಕ್ರವಾರಕ್ಕೆ ಹೊರಳಿಕೊಂಡಿದೆ. ಇಲ್ಲಿ ಕೆಂಡಸಂಪಿಗೆಯಲ್ಲಿ ಸಲ್ಲದ ಕೋಲಾಹಲ. ಪರಂಪರೆಗೆ, ಸಾಹಿತ್ಯಕ್ಕೆ, ಸಾತತ್ಯಕ್ಕೆ ಒಪ್ಪಿಸಿಕೊಳ್ಳಿ ಅಂತ ನನಗೆ ಖುದ್ದು ಗೊತ್ತಿರುವ ಒಬ್ಬರು ಪ್ರೀತಿಯಿಂದ ಹೇಳಿದ್ದಾರೆ. ಚರಿತ್ರೆಯಲ್ಲಿ ಹೀಗೊಬ್ಬ ಲೇಖಕರಿದ್ದರು ಅಂತ ದಾಖಲಾಗುವುದನ್ನು ಯೋಚಿಸಿದರೆ ನವಿರೇಳುವುದಲ್ಲವೆ ಅಂತ ಕೇಳಿದ್ದಾರೆ. ಈಗ ಕಂಚಿನ ಕೊರಳಿಟ್ಟು ಹೇಳುತ್ತಿದ್ದೇನೆ- Is that a big deal? ಈ ಹೆಸರು, ಮೊಹರು, ಕೊಸರುಗಳೆಲ್ಲ ಯಾವ ಪುರುಷಾರ್ಥಕ್ಕೆ? ನಿಜ ಹೇಳುತ್ತೇನೆ. ಮೂರ್ತಯಿಸಿಕೊಳ್ಳುವ ಎಲ್ಲ ಮನುಷ್ಯ ಯೋಚನೆಗಳಿಗೆ ಧಿಕ್ಕಾರವಿರಲಿ. Let us denounce every ‘human’ thought that ‘manifests’. This may sound very cleched as I have voiced this too often. But there is a need for me to reiterate on this platform. I am often haunted by the very fact that every act of human endeavour takes form... a physical form. ನಾವು ಮನುಷ್ಯರ ಪ್ರತಿಯೊಂದು ಕೃತ್ಯವೂ ಇನ್ನುಳಿದ ಜೀವಸಂಕುಲದಲ್ಲಿರದಂತೆ ರೂಪು ತಳೆದುಬಿಡುತ್ತದೆ. ಕೂರಲು ಕುರ್ಚಿ, ಮಲಗಲು ಹಾಸಿಗೆ, ತಿನ್ನಲು ತಟ್ಟೆ, ಓಡಲು ಟ್ರೆಡ್‍ಮಿಲ್, ತೊಡಲು ತೊಡಿಕೆ, ಉಡಲು ಉಡುಗೆ, ಇರಲು ಮನೆ! ಈ ಮನೆಯೆನ್ನುವುದೋ- ನಮ್ಮೆಲ್ಲ ಲೋಲುಪ ಕರ್ಮಕಾಂಡಗಳ ಭೌತ ರೂಪ!! ಈ ಹೇಳಿಕೆ ನನ್ನ ವೃತ್ತಿ ಮತ್ತು ನನ್ನ ನಿಜದ ಪ್ರವೃತ್ತಿಗೆ ವಿರೋಧಾಭಾಸವಾಗಿದೆ. ನನಗೆ ವಿನ್ಯಾಸ ಮಾಡುವುದರಲ್ಲಿ ದಕ್ಕುವ ಆನಂದ ಆ ವಿನ್ಯಾಸವನ್ನು ಕಟ್ಟಿ ನಿಲ್ಲಿಸುವಷ್ಟರಲ್ಲಿ ಸೋತು ಸೊರಗಿರುತ್ತದೆ. I enjoy being an architect; but build only out of obligation of being one!

ಈ ವಿಷಯವನ್ನು ಹೀಗೇ ಅಂತಲೇ ಕಟ್ಟಾ ನಂಬಿಕೊಂಡಿರುವಾಗ, ಅಷ್ಟೇ ಮನಸಾ ಇರುತ್ತಿರುವಾಗ ಯಾಕೋ ಸಾಹಿತ್ಯದ ಮಟ್ಟಿಗಿನ ಇಲ್ಲಿನ ಚರ್ಚೆಗಳು ಇರಿಸುಮುರಿಸು ತರುತ್ತವೆ. ಇವು ನನ್ನೀ ನಂಬಿಕೆಗಳನ್ನು ಎಡರಿಕೊಳ್ಳುತ್ತವೆ. ನೀವು ಹೇಳುವ- ಸಾಹಿತ್ಯವೇ ಬದುಕಿನ ಸಾರಾಸಗಟು ಅಭಿವ್ಯಕ್ತಿಯೆನ್ನುವುದು ಬರೇ ಧೋರಣೆಯೆನಿಸುತ್ತದೆ. ಹೀಗಿರುವಾಗ ನಾನು ಮುಂದೊಮ್ಮೆ ಚರಿತ್ರೆಯಲ್ಲಿ ಹೆಸರಾಗಿ ಉಳಿಯುವುದಂತೂ ಒಗ್ಗದ ಮಾತು. ಒಪ್ಪಲಿಕ್ಕೂ ಆಗದ್ದು. ತೋಚಿದ್ದು ಬರೆಯುವ, ಅನಿಸಿದ್ದು ಹಂಚಿಕೊಳ್ಳುವ ಮತ್ತು ಬದುಕಿನ ಕ್ಯಾನ್ವಾಸಿನಲ್ಲಿ ಪುಟಾಣಿ ಅಭಿವ್ಯಕ್ತಿಯಾಗಿರುವ ಈ ಬರವಣಿಗೆಯೆಂಬುದನ್ನು ಓದಿಕೊಂಡು, ಅದು ನೀವೆಲ್ಲ ನಂಬಿರುವ ಸಾಹಿತ್ಯದ ಸಾತತ್ಯದಲ್ಲೊಂದು ಬಿಡಿಯಾದೀತು ಅಂತ ನಾನೆಂದೂ ಗ್ರಹಿಸಿಲ್ಲ. ಮತ್ತು ಹೀಗೆ ಬರೆಯುತ್ತಿರುವ ಉದ್ದೇಶವೂ ಅದಲ್ಲ.

ಇದನ್ನು ಸಮಾರೋಪಿಸುವಾಗ ಐನೂರಿಪ್ಪತ್ತು ಚದರಗಳ ಆ ಮನೆಯೂ, ಆ ಸಿಎಂ ಸಾಹೇಬನೂ, ಮನೆಯನ್ನು ಕುರಿತು ‘It is a palatial!!’  ಅಂತ ಕಣ್ಣರಳಿಸಿ ಕೊಚ್ಚಿಕೊಂಡ ಈ ನನ್ನ ಓರಗಿತ್ತಿಯೂ ಮತ್ತೆ ನೆನಪಾಗುತ್ತಿದ್ದಾರೆ. ವೃತ್ತಿಯ ದಾಕ್ಷಿಣ್ಯದಿಂದಾಗಿ ಆಗಾಗ ಎದುರಿಗೆ ಬಂದೊದಗುವ ಇಂತಿಂಥ ನಮೂನೆಗಳನ್ನು, ಕೆಂಡಸಂಪಿಗೆಯಲ್ಲಿ ಅನಿಸಿದ್ದು ಬರೆದಿದ್ದಕ್ಕೆ ತೋರುವ ಓದುಗರ ತಕರಾರುಗಳನ್ನು ಒಟ್ಟಿಗಿಟ್ಟು ತೂಗುತ್ತಿದ್ದೇನೆ. ದುಡ್ಡಿರುವವರೆಲ್ಲ ಅರಮನೆಗಳನ್ನು ಕಟ್ಟುತ್ತಿರುವ ನಮ್ಮ ಹೊತ್ತುಗೊತ್ತುಗಳಲ್ಲಿ, ನನ್ನನ್ನೂ ಒಳಗೊಂಡಂತೆ ಸಾಕ್ಷರರೆಲ್ಲ ಅಕ್ಷರಕೃಷಿಕರಾಗಿ ತಲೆದೋರಿರುವ ನಿಮ್ಮೆದುರಿನ ಬಿಕ್ಕಟ್ಟಿಗೆ ಈ ಹೊತ್ತನ್ನೇ, ಗೊತ್ತನ್ನೇ ದೂರಬೇಕೇನೋ.

ಕೊನೆಗೆ ನಿಮ್ಮಲ್ಲೊಂದು ಅರಿಕೆ. ನನ್ನ ತೊದಲುಗಳನ್ನು ಮನ್ನಿಸಿ.

ನಮಸ್ಕಾರ.         

-ನಾಗರಾಜ ವಸ್ತಾರೆ, ಅತಿಥಿ ಸಂಪಾದಕ
ಪುಟದ ಮೊದಲಿಗೆ
 
Votes:  4     Rating: 3.75    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?