ಮೇ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನೀಲಿ ಬೆಳಕು: ಆಧ್ಯಾತ್ಮವೆಂಬುದು ಆಟ    
ಸ್ವಾಮಿ ಸೃಜನಾನಂದ
ಶನಿವಾರ, 4 ಜುಲೈ 2009 (06:57 IST)
ಗಾಳಿಯು ನಮ್ಮದೆ, ಪಟವೂ ನಮ್ಮದೆ

ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ಆಟದಲ್ಲಿ ಆಸಕ್ತಿ ಹೊಂದಿರುತ್ತಾರೆ. ಮಕ್ಕಳಂತೂ ಆಟಕ್ಕಾಗಿ ಹಾತೊರೆಯುತ್ತಾರೆ. ಮನುಷ್ಯನ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಆಟದ ಪರಿಕಲ್ಪನೆಯ ಕುರಿತು ಸ್ವಲ್ಪ ಸೂಕ್ಷ್ಮವಾಗಿ ಯೋಚಿಸಿದರೆ ಅದರ ಮತ್ತೊಂದು ಆಯಾಮ ನಮಗೆ ಕಾಣಿಸುತ್ತದೆ. ಎಲ್ಲಾ ಆಟಗಳೂ ಬದುಕಿಗೆ ಅತ್ಯಂತ ಮುಖ್ಯವಾಗಿರುವ ಒಂದು ಜ್ಞಾನವನ್ನು ನಮಗೆ ನೀಡಲು ಪ್ರಯತ್ನಿಸುತ್ತಿರುತ್ತವೆ. ಅದನ್ನು ಅರಿಯುವಷ್ಟು ಸೂಕ್ಷ್ಮತೆ ನಮಗಿರಬೇಕಷ್ಟೇ.

ಯಾವ ಆಟವನ್ನು ತೆಗೆದುಕೊಂಡರೂ ಒಂದಂತೂ ಸ್ಪಷ್ಟ. ಎಷ್ಟೇ ಪ್ರತಿಭೆಯಿದ್ದರೂ ಪ್ರತೀ ಬಾರಿಯೂ ಗೆಲುವೆಂಬ ಗುರಿಯನ್ನು ತಲುಪುವುದು ಕಷ್ಟ. ಆದರೆ ಪ್ರತೀ ಸೋಲೂ ತಪ್ಪು ಮಾಡುವ ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿ ಕೊಡುತ್ತಲೇ ಇರುತ್ತದೆ. ಈ ಅನಂತವಾದ ಸೋಲಿನ ಸಾಧ್ಯತೆಗಳನ್ನು ಮೀರುವ ಕ್ರಿಯೆಯನ್ನು ಆಟದ ಸಂದರ್ಭದಲ್ಲಿ ‘ಅದೃಷ್ಟ’ ಎಂದೂ ಹೇಳುತ್ತಾರೆ. ಈ ಅದೃಷ್ಟದ ಸಾಧ್ಯತೆಗೆ ಹೆಚ್ಚಿನ ಒತ್ತು ನೀಡಿದಾಗ ಆಟ ಜೂಜಾಗಿಬಿಡುತ್ತದೆ. ಈ ‘ಅದೃಷ್ಟ’ದ ಆಯಾಮವನ್ನು ಆಚೆಗಿಟ್ಟು ಆಟಗಳ ಬಗ್ಗೆ ಚಿಂತಿಸಿದರೆ ಅವು ‘ಸೋಲು’ ಎಂಬ ಪರಮಸತ್ಯದ ಕುರಿತು ತಿಳಿವಳಿಕೆ ನೀಡುವ ಅಧ್ಯಾತ್ಮಿಕ ವ್ಯಾಯಾಮದಂತೆ ಕಾಣಿಸುತ್ತದೆ.

ಹಾಗೆ ನೋಡಿದರೆ ಆಧ್ಯಾತ್ಮ, ಆಧ್ಯಾತ್ಮಿಕತೆ ಎಂಬ ಪರಿಕಲ್ಪನೆಗಳ ಮೂಲ ನೆಲೆಯಿರುವುದೇ ಸೋಲನ್ನು ಹೇಗೆ ನಿರ್ವಹಿಸಬೇಕು ಎಂಬ ಹುಡುಕಾಟದಲ್ಲಿ. ಮನುಷ್ಯ ಸಂಸ್ಕೃತಿ ಈ ಹುಡುಕಾಟವನ್ನು ಆಟಗಳ ಮೂಲಕ ಕಲಿಸುತ್ತಿರುತ್ತದೆ. ಸೋಲೆಂಬುದು ಬದುಕಿನ ಪರಮಸತ್ಯಗಳಲ್ಲೊಂದು ಎಂಬುದನ್ನು ಬಹಳ ಸಣ್ಣ ವಯಸ್ಸಿನಲ್ಲೇ ಕಲಿಯುವುದಕ್ಕಾಗಿಯೇ ಆಟಗಳು ರೂಪುಗೊಂಡಿವೆಯೇನೋ?

ಹೀಗೆ ಆಟಗಳಲ್ಲಿ ಆಧ್ಯಾತ್ಮವನ್ನು ಹುಡುಕುವುದು ಒಂದು ರೀತಿ ಅತಿಯಲ್ಲವೇ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿಬಹುದು. ನಿತ್ಯ ಜೀವನದ ಕ್ರಿಯೆಗಳಲ್ಲೇ ಅಸಾಧಾರಣವಾದ ಅಥವಾ ದೈವೀಕವಾದ ಯಾವುದೋ ಒಂದರ ಹುಡುಕಾಟ ವರ್ತಮಾನದ ವಿದ್ಯಮಾನವೇನಲ್ಲ. ಇದಕ್ಕೆ ಮನುಷ್ಯನ ಆಲೋಚನೆಯಷ್ಟೇ ದೊಡ್ಡ ಇತಿಹಾಸವಿದೆ. ಬೌಲರ್ ಒಬ್ಬ ಎಸೆಯುವ ಪ್ರತಿ ಚೆಂಡಿನ ಉದ್ದೇಶವೂ ಒಂದು ವಿಕೆಟ್ ಪಡೆಯುವುದು. ಆದರೆ ಪ್ರತಿಯೊಂದು ಚೆಂಡೂ ವಿಕೆಟ್ ಉರುಳಿಸಿದರೆ ಅದು ಆಟವೇ ಅಲ್ಲ. ಎದುರು ನಿಂತಿರುವ ಬ್ಯಾಟ್ಸ್ ಮನ್, ಅವನ ಕೈಯಲ್ಲಿರುವ ಬ್ಯಾಟ್, ಅವನದನ್ನು ಬಳಸುವುದರಲ್ಲಿ ಪಡೆದಿರುವ ನೈಪುಣ್ಯ, ಬೀಸುವ ಗಾಳಿಯ ವೇಗ, ದಿಕ್ಕು ಮುಂತಾದ ಅನೇಕ ಅಡೆತಡೆಗಳನ್ನು ಮೀರಿ ಚೆಂಡು ಚಲಿಸುವಂತೆ ಬೌಲರ್ ನೋಡಿಕೊಳ್ಳಬೇಕು. ಹೀಗೆ ಪರಿಸ್ಥಿತಿಯನ್ನು ಮೀರುವ ಒಂದು ಕ್ಷಣ ವಿಕೆಟ್ ಬೀಳುತ್ತದೆ. ಅಲ್ಲಿಯ ತನಕದ ಎಸೆತಗಳೆಲ್ಲಾ ಗುರಿತಲುಪುವ ಎಸೆತಕ್ಕಾಗಿ ನಡೆಸುವ ಹುಡುಕಾಟ. ಬ್ಯಾಟ್ಸ್ ಮನ್ ಕೂಡಾ ಅಷ್ಟೇ. ಬೌಲರ್ ನ ನಿಖರತೆಗೆ ಸವಾಲೊಡ್ಡುವ ಕ್ರಿಯೆಯಲ್ಲಿ ಅವನ ನಿಖರತೆಯ ಹುಡುಕಾಟವಿದೆ.

ಈ ಇಬ್ಬರ ಅಥವಾ ಎರಡು ತಂಡಗಳ ನಿಖರತೆಯ ಹುಡುಕಾಟದಲ್ಲಿ ದೊರೆಯುವ ಸಂತೋಷ ಈ ಆಟದ ನಿಜವಾದ ಫಲಿತಾಂಶ. ಇಲ್ಲಿನ ಸೋಲು-ಗೆಲುವುಗಳು ಕೇವಲ ಆನುಷಂಗಿಕ ಮಾತ್ರ. ಬದುಕಿನ ಮಟ್ಟಿಗೂ ಇದು ನಿಜ. ಸಂಪೂರ್ಣತೆಯನ್ನು ಸಾಧಿಸುವುದು ಅಥವಾ ಸಾಧಿಸದೇ ಇರುವುದಕ್ಕಿಂತ ಈ ಪ್ರಯತ್ನದಲ್ಲಿ ದೊರೆಯುವ ಸಂತೋಷವೇ ನಿಜವಾದ ಬದುಕು. ಇದನ್ನು ಸ್ವಲ್ಪ ಸರಳೀಕರಿಸುವುದಾದರೆ ತಪ್ಪುಗಳನ್ನು ನಿರ್ವಹಿಸುವುದೇ ನಮ್ಮ ಬದುಕು ಎನ್ನಬಹುದು. ಈ ತಪ್ಪುಗಳನ್ನು ನಾವು ನಿರಾಕರಿಸುವುದೆಂದರೆ ನಾವು ನಮ್ಮ ಅಸ್ತಿತ್ವವನ್ನೇ ನಿರಾಕರಿಸಿಕೊಂಡಂತೆ.

ಮನುಷ್ಯ ‘ಎಲ್ಲವೂ ಅಲ್ಲ’ ಹಾಗೆಂದು ಅವನು ‘ಏನೂ ಅಲ್ಲ’ ಎಂದೂ ಹೇಳಲಾಗುವುದಿಲ್ಲ. ಈ ಎರಡರ ನಡುವಣ ಅವಕಾಶದೊಳಗೆ ಇರಬಹುದಾದ ಸತ್ಯವೊಂದರ ಹುಡುಕಾಟವನ್ನೇ ನಮ್ಮ ಎಲ್ಲಾ ಋಷಿಗಳು, ಸಂತರು, ತತ್ವಜ್ಞಾನಿಗಳು, ವಿಜ್ಞಾನಿಗಳು ನಡೆಸಿದ್ದು ಮತ್ತು ಈಗಲೂ ನಡೆಸುತ್ತಿರುವುದು. ಎಲ್ಲಾ ಕಾಲ, ದೇಶಗಳ ಋಷಿಗಳೂ ಒಂದು ಅಂಶವನ್ನಂತೂ ಸ್ಪಷ್ಟವಾಗಿಯೇ ಕಂಡುಕೊಂಡಿದ್ದಾರೆ. ನಮ್ಮ ತಪ್ಪುಗಳಿಗಾಗಿ ನಮ್ಮನ್ನು ಸೇರಿಸಿಕೊಂಡಂತೆ ನಾವು ಯಾರನ್ನೂ ದೂಷಿಸಬೇಕಾಗಿಲ್ಲ. ನಾವು ಅವುಗಳನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಈ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ನಮ್ಮ ‘ಮನುಷ್ಯತ್ವ’ವಿದೆ.

ಯಾವುದೋ ಒಂದು ಕೆಲಸವನ್ನು ‘ಸರಿಯಾಗಿ’ ಮಾಡುವುದು ಒಳ್ಳೆಯದಾಗಿದ್ದರೆ ಅದನ್ನು ಕೆಟ್ಟದಾಗಿ ಮಾಡುವುದೂ ಒಳ್ಳೆಯದೇ.

[ಚಿತ್ರ-ರಶೀದ್]

ಪುಟದ ಮೊದಲಿಗೆ
 
Votes:  4     Rating: 4.75    
 
 
ಸಂಬಂಧಿಸಿದ ಲೇಖನಗಳು
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ
  ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ:ಪ್ರಶಾಂತ್ ಆಡೂರ ಕಥನ
  ಬ್ಯಾಂಗಲೋರ್ ಮತ್ತು ಬಾಲ್ಸೆವಿಕ್ ಸಿಂಗರ್:ಶ್ರೀರಾಮ್ ಬರಹ
  ಪುಟ್ಟಹಕ್ಕಿಯ ನಿದ್ದೆಪುರಾಣ: ಸಿಂಧು ಬರೆಯುವ ಅಮ್ಮನ ಕಾಲಂ