ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ    
ಸುದರ್ಶನ್
ಶುಕ್ರವಾರ, 25 ಸೆಪ್ಟೆಂಬರ್ 2009 (05:43 IST)
ಧೂಳಿನಿಂದ ತುಂಬಿಹೋದ ಸಿಡ್ನಿ
ಮೊನ್ನೆ ಬುಧವಾರ ಹಿಂದೆಂದೂ ಕಂಡಿರದಂತಹ ಮಣ್ಣಿನ ಬಿರುಗಾಳಿ ಸಿಡ್ನಿಗೆ ರಾಚಿತ್ತು. ಸಾವಿರಾರು ಮೈಲಿ ದೂರದಿಂದ ಟನ್‌ಗಟ್ಟಳೆ ಮಣ್ಣು ಕಡಲಿಗೆ ಗಾಳಿಯ ಮೇಲೆ ಸವಾರಿ ಹೊರಟಿತ್ತು. ದಾರಿಯಲ್ಲಿ ಸಿಕ್ಕ ಊರಿನ ಮೇಲೆಲ್ಲಾ ಹದವಾಗಿ ಮಳೆಗರೆದು ಗಾಳಿಗೆ ಹಾರುತ್ತಿದ್ದ ಕೂದಲಿನ ಮೇಲೆ ಕೂತಿತ್ತು. ಬೆರಳಿಟ್ಟ ತುಟಿಯ ಮೇಲೆ ಕೂತಿತ್ತು. ತುಟಿಗಿಟ್ಟ ಬೆರಳ ಮೇಲೂ ಹದವಾಗಿ ತೆಳುಪರದೆಯಂತೆ ಕೂತು ನಗುತ್ತಿತ್ತು. ವಸಂತದ ಚಳಿ-ಬೆಚ್ಚಗಿನ ಇರುಳಿಗೆ ಮೈಯೊಡ್ಡಿದಾಗ ಯಾರಿಗೂ ಇದರ ಪರವೆಯೇ ಇರಲಿಲ್ಲ.

ಮುಂಜಾನೆ ಬೆಂಕಿ
ಹೊತ್ತಿಕೊಂಡಂತೆ ಬೆಳಕು ಕಿಟಿಕಿಯಾಚೆ-
ಕ್ಷಣಗಳಂತೆ ನುಣ್ಣಗೆ ನವೆದ
ಕೆಮ್ಮಣ್ಣ ಬಿರುಗಾಳಿ!

ಭೂಮಿಯಲ್ಲಿ ಮಲಗಿ ಮಂಗಳ ಗ್ರಹದ ಮೇಲೆ ಎದ್ದಂತೆ ಹಲವರಿಗೆ ಅನಿಸಿತು. ಲೋಕ ಕಡೆಯ ದಿನ ಮೂಡಿದೆ ಎಂದು ಹಲವರು ಬೆಚ್ಚಿಬಿದ್ದರು. ತಮ್ಮ ಬಿಳಿಯ ಬೆಕ್ಕು ಪೂರ್ತಿ ಕೆಂಪಗಾಗಿತ್ತು, ಬಿಳಿಯ ಕಾರು ಚೆಂದದ ಕೆಂಪಾಗಿತ್ತು ಎಂದೆಲ್ಲಾ ಜೋಕುಗಳನ್ನು ಚೆಲ್ಲಾಡಿದರು. ಜೀವಮಾನಕ್ಕೊಮ್ಮೆ ಎಂಬಂತೆ ಈ ಊರಿಗೆ ರಾಚುವ ಇಂತಹ ಬಿರುಗಾಳಿ ದೂರದ ಮರಳುಗಾಡಲ್ಲಿ ದಿನಾಲೂ ಏಳುತ್ತದಂತೆ. ಸಿಡ್ನಿಗೆ ಆ ಮರಳುಗಾಡೇ ಬಂದು ಬಾಗಿಲು ತಟ್ಟಿದಂತಿತ್ತು. ದಿನವೂ ಹೊಸದಾಗಿ ನಳನಳಿಸಲು ಪರಿತಪಿಸುವ ಊರಿಗೆ ಪಾಠಕಲಿಸಲು ಹೊರಟಂತಿತ್ತು. ಇದೆಲ್ಲಾ ಇಷ್ಟು ಸುಲಭದಲ್ಲಿ ಜೋಕಿಗೆ ನಲುಗಿ ಹೋಗಲು ಆಗುವಂತಹದೇ ಎಂದು ಅನಿಸುತ್ತಿತ್ತು.
 
ಏಕೆ ಒಳಗಿಳಿಯುವುದಿಲ್ಲ
ಬಾಲ್ಯದ ಮಳೆಯ ಪುಲಕದ ಹಾಗೆ
ಯೌವ್ವನದ ಸೂರ್ಯಾಸ್ತದ ರಂಗಿನ ಹಾಗೆ!!

ಧೂಳಿಂದ ತುಂಬಿದ ಸಿಡ್ನಿನಾವು ಮಣ್ಣಿನ ಪಾಲಾಗುವ ಸಂಗತಿ ಮೆದುಳಿಗೆ ಗೊತ್ತು. ಈ ಪಯಣದ ಕೊನೆಯ ನಿಲ್ದಾಣಕ್ಕಿನ್ನೂ ಹೊತ್ತಿದೆ- ಮಣ್ಣು ತುಂಬಾ ದೂರವಿದೆ ಎಂಬ ಭ್ರಮೆಯನ್ನು ಒಡೆಯಲೋ ಎಂಬಂತೆ ಬಂದು ಬಾಗಿಲು ತಟ್ಟುವ ಈ ಮಣ್ಣು ಧೃತಿಗೆಡಿಸಿತು. ನೋಡಿ ಕನ್ನಡದಲ್ಲಿ deathಗೆ ಪದವಿರುವ ಹಾಗೆ mortalityಗೆ ಪದವಿಲ್ಲ. ಈಗೀಗ ಯಾಕೆ ಬೇಕು ಅನಿಸುತ್ತದೆ. ಇಲ್ಲದಿರುವ ಕಲ್ಪನೆಗೆ ಹೆಸರು ಹುಟ್ಟು ಹಾಕುವ ಒತ್ತಡವೇಕೆ ಅನಿಸುತ್ತದೆ. ಸಂಸ್ಕೃತದಿಂದ ಎಳೆದು ಒಳತರುವ ಬದಲು ಇದನ್ನು ಯೋಚಿಸಿ - ಕನ್ನಡದಲ್ಲಿ kangrooಗೂ ಹೆಸರಿಲ್ಲ, giraffeಗೂ ಹೆಸರಿಲ್ಲ - ಹಾಗೆ ನೋಡಿದರೆ lionಗೂ ಇಲ್ಲ. ಹಾಗೆಯೇ mortalityಗೂ ಇಲ್ಲ.

ಚರ್ಮದ ಮೇಲೆ
ಗಾರೆ ಕಲ್ಲು ಹಲಗೆಯ ಮೇಲೆ
ತೆಳುವಾಗಿ ಕೂರುವುದಷ್ಟೇ ಈ ವಯಸ್ಸಿನಲ್ಲಿ?

ಪಿಡಹಾಂ ಎಂಬ ಅಮೆಜಾನಿನ ಬುಡಕಟ್ಟು ಒಂದಿದೆ. ಅವರಿಗೆ ದೇವರಿಲ್ಲ, ದಿಂಡರಿಲ್ಲ, ಪುರಾಣವಿಲ್ಲ, ಎಣಿಕೆಯಿಲ್ಲ, ಎಡಬಲವಿಲ್ಲ, ದಿಕ್ಕು ದೆಸೆಯಿಲ್ಲ. ತಾವು ಕಂಡರಿಯದ್ದನ್ನು ತಮ್ಮ ನುಡಿಗೆ ಹಾಗು ತಲೆಗೆ ಬಿಟ್ಟುಕೊಳ್ಳುವುದಿಲ್ಲ. ಬಂದ ಕ್ರೈಸ್ತ ಪಾದ್ರಿಗಳಿಗೆ ತಮ್ಮ ಹೊಳೆಯ ನೀರು ಕುಡಿಸಿ ಅವರನ್ನೇ ಬದಲಾಯಿಸಿ ಕಳಿಸಿದ್ದಾರೆ. ಬರೇ ಮೂರು ಸ್ವರ ಎಂಟು ವ್ಯಂಜನದ ನುಡಿಯಿಟ್ಟುಕೊಂಡಿದ್ದಾರೆ. ಮಕ್ಕಳ ಜತೆ ಪದಗಳನ್ನೇ ಬಳಸದೆ ಸ್ವರದ ಏರಿಳಿತದಲ್ಲೇ ದಿನಗಟ್ಟಲೆ ಮಾತಾಡುತ್ತಾರೆ. ಯಾವುದೇ ಸಂಪ್ರದಾಯವನ್ನೂ ಹಟದಿಂದ ಹುಟ್ಟು ಹಾಕಿಕೊಳ್ಳದೆ, ಅದಕ್ಕೆ ಕಟ್ಟುಬೀಳದೇ ಮಕ್ಕಳನ್ನು ಬೆಳೆಯಗೊಡುತ್ತಾರೆ. ಕಣ್ಣಿಗೆ ಕಂಡದ್ದು, ಕಂಡವರು ಹೇಳಿದ್ದು, ಅಥವಾ ಸಂಗತಿಗೆ ಆಧಾರವಿದ್ದರೆ ಮಾತ್ರ ಅದರ ಬಗ್ಗೆ ಮಾತಾಡುತ್ತಾರೆ. ಅವರ ಕತೆ ಕೇಳಿ ನಾನೂ ಅಚ್ಚಕನ್ನಡದ ಬುಡಕಟ್ಟಿನವನಾಗಬೇಕು ಅನಿಸಿತು.

"ಹರೆಯದ ಕೊನೆಯಲ್ಲಿ ಸವಿ
ಗನಸಿನ ನಿದ್ದೆಗೆ ಜಾರಿ
ನಲವತ್ತು ದಾಟಿದ ಉರಿಹಗಲಿಗೆ
ಎಚ್ಚೆತ್ತುಕೊಂಡೆ
ನಲ್ಲ"

ಧೂಳಿನಿಂದ ತುಂಬಿಹೋದ ಸಿಡ್ನಿಹೃದಯಾಘಾತವೋ ಅಥವಾ ಜೀವವನ್ನು ಮೆಲ್ಲಗೆ ಹೀರಬಹುದಾದ ಖಾಯಿಲೆಯೊಂದು ಬಾಗಿಲು ತಟ್ಟುವ ತನಕ ಯಾಕೆ ಕಾಯಬೇಕು? ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ, ನನ್ನೆತ್ತರಕ್ಕೆ ನಿಂತ ಮಗ ನಮಗೆ ಗೊತ್ತಿರದ ಹಾಡುಗಾರನ ಸಂಗತಿಗಳನ್ನು ಪರಿಚಯಿಸುತ್ತಾನೆ - ನಮಗೆ ಗೊತ್ತಾಗದಂತೆ ನಮ್ಮ ನಡುವೆ ಒಂದು ಹೊಸ ಲೋಕವನ್ನು ಇವನು ಹುಟ್ಟು ಹಾಕುತ್ತಿದ್ದಾನೆಯೇ? ಆ ಲೋಕಕ್ಕೆ ನಮಗೆ ನಿಯಮಿತ ಪ್ರವೇಶವಲ್ಲವೆ? ಒಂದು ದಿನ ದೊಡ್ಡ ಬಾಗಿಲೊಂದು ನಮ್ಮ ಮುಖಕ್ಕೆ ಬಡಿಯಬಹುದಲ್ಲವೆ? ಅವನ ನುಡಿಯಲ್ಲಿ ಕನ್ನಡದ ಕ್ರಿಯಾಪದಗಳು ಇರುವವರೆಗೆ ನಮಗೆ ಸಮಾಧಾನ. ಕ್ರಿಯಾಪದ ಮಾತ್ರ ನೇರವಾಗಿ ನುಡಿ ಬೇಲಿಯನ್ನು ಹಾರಲಾಗದು ನೋಡಿ. ಬೇರೆ ನುಡಿಯ ಕ್ರಿಯಾಪದಕ್ಕೆ ಕನ್ನಡದ "ಆಗು" "ಮಾಡು"ಗಳ ಊರುಗೋಲು ಬೇಕೇಬೇಕು. ಇಲ್ಲದಿದರೂ ನಮ್ಮದಲ್ಲದ ಕ್ರಿಯಾಪದವನ್ನು "ಇಸು" ಎಂಬ ಹೊಸಿಲಾಚೆಯಿಡುವವರು ನಾವು, ಕನ್ನಡದವರು - ಅಮೆಜಾನಿನ ಬುಡಕಟ್ಟಿನವರ ಹಾಗೆ ಬೇರೆ ನುಡಿಯ ಕ್ರಿಯಾಪದಗಳಿಗೆ ಬೆನ್ನು ಮಾಡದಿದ್ದರೂ ದೂರ ಇಡುವವರು!

ಆಕಾಶ ಕೆಮ್ಮಣ್ಣು ತುಂಬಿದ ಮುಂಜಾನೆ ಎಂದಿಗೂ ಈ ನಾಡು ಅಪರಿಚಿತವಾಗಿಯೇ ಉಳಿಯುತ್ತದೆಯೇ ಎಂದು ದಿಗಿಲಾಗುತ್ತದೆ. ಪರಿಚಿತವಿದ್ದ ಊರು ವರ್ಷ ಉರುಳಿದಂತೆ ದೂರದಲ್ಲಿ ಅಪರಿಚಿತವಾಗುತ್ತಾ ಹೋಗುತ್ತದೆ. ಬಂದಿಳಿದ ಊರು ವರ್ಷ ಉರುಳಿದರೂ ಹೀಗೆ ಅಪರಿಚಿತವಾಗಿಯೇ ಉಳಿಯುತ್ತದೆಯಲ್ಲಾ! ಆಸ್ಟ್ರೇಲಿಯಕ್ಕೆ ಬೆನ್ನು ಹಾಕಿ ಹೊರಟವರ ಬಗ್ಗೆ ಇಲ್ಲಿಯವರಿಗೆ ತುಂಬಾ ಅಸಹನೆಯಿದೆ. ಭಾರತ ಬಿಟ್ಟು ಬಂದವರ ಬಗ್ಗೆ ಇರುವಂತೆಯೇ. ಕಡೆಗೆ ಎಲ್ಲಿಯೂ ಸಲ್ಲದವನಾಗುತ್ತೇನೆ ಎಂಬ ದಿಗಿಲು ಯಾರೂ ಎಲ್ಲಿಯೂ ಸಲ್ಲುವುದಿಲ್ಲ ಎಂಬ ಅನುಮಾನದ ನಡುವೆಯೂ ಕಾಡುತ್ತದೆ.

ಗಾಳಿಗೆ ತೂರಿ ಹೋಗಿ
ಕೂತಲ್ಲೇ ಕರಗಿ ಮಣ್ಣು
ಈ ನಿಗೂಢ
ಬೆಳಕು ಬಣ್ಣಕಳಕೊಂಡು
ಮತ್ತೆ "ಶುದ್ಧ"ವಾಗಿ
ಬಾಗಿಲ ಮೇಲೀಗ
ಗಾಳಿ-ಮಣ್ಣು-ಬೆಳಕಿನ ಬಡಿತವಿಲ್ಲ
ಯಾಕೋ ನಿಶಬ್ದ...

[ಚಿತ್ರಗಳು-ಲೇಖಕರದು]
ಪುಟದ ಮೊದಲಿಗೆ
 
Votes:  1     Rating: 4    
 
 
ಸಂಬಂಧಿಸಿದ ಲೇಖನಗಳು
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ
  ಪ್ರೇಮಶೇಖರ ಕಾಲಂ: ಚೀನಾದೊಳಗೆ ಉಯ್ಘರ್ ಗಳ ಅಳಲು
  ಪುಸ್ತಕ ಪ್ರೀತಿ: ಮೂರು ಹೊಸ ಹೊತ್ತಗೆಗಳು