ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಡುನಾಯಿಗಳ ಸಿನೆಮಾ-3, ಕಿರುಮದಿಯ ಅಸ್ತಿತ್ವವಾದ    
ಕೃಪಾಕರ್ ಸೇನಾನಿ
ಸೋಮವಾರ, 19 ಅಕ್ಟೋಬರ್ 2009 (03:21 IST)
ಕಾಡುನಾಯಿ

ಕಿರುಮದಿ ಅನ್ನುವುದು ಒಂದು ಹೆಣ್ಣು ಕಾಡುನಾಯಿಗೆ ನಾವಿಟ್ಟ ಹೆಸರು. ಅದು ತುಂಬಾ ಬ್ರಿಲಿಯಂಟ್. ಧೈರ್ಯಶಾಲಿ. ಆದರೆ ಅದಕ್ಕೆ ಆ ಹಿಂಡಿನಲ್ಲಿ ಅಧಿಕಾರವಿರಲಿಲ್ಲ. ಬೇರೊಂದು ಹೆಣ್ಣುನಾಯಿ ಆಗಲೇ ಅಲ್ಫಾ ಹೆಣ್ಣಿನ ಅಧಿಕಾರ ವಹಿಸಿಕೊಂಡಿತ್ತು. ಅದು ಸಾಯುವವರೆಗೆ ಅಥವಾ ಕಾಯಿಲೆ ಬೀಳುವವರೆಗೆ ಕಿರುಮದಿಗೆ ಯಜಮಾನತಿಯ ಪಟ್ಟ ದೊರಕುವ ಹಾಗಿರಲಿಲ್ಲ. ಗಂಡಿನ ಜೊತೆ ಕೂಡುವ ಹಾಗೂ ಇರಲಿಲ್ಲ. ಕಿರುಮದಿ ತುಂಬಾ ಮಹಾತ್ವಾಕಾಂಕ್ಷಿ ನಾಯಿ. ಅದಕ್ಕೆ ಅಲ್ಲಿಯವರೆಗೆ ತಾಳಿಕೊಳ್ಳುವ ವ್ಯವಧಾನವೂ ಇರಲಿಲ್ಲ. ಒಂದು ದಿನ ಕಿರುಮದಿ ಹಿಂಡು ಬಿಟ್ಟು ಹೋಗೇಬಿಟ್ಟಿತು. ಹೋಗಿ ಇನ್ನು ಯಾವುದೇ ಒಂದು ಕಾಡುನಾಯಿ ಹಿಂಡಿನ ಇಂತಹದೇ ಅವಕಾಶ ವಂಚಿತ ಗಂಡು ನಾಯೊಂದರ ಸಹವಾಸ ಮಾಡಿ ಕೆಲವು ಕಾಲದ ನಂತರ ತನ್ನ ಮರಿಗಳೊಂದಿಗೆ ಹಿಂತಿರುಗಿತು.

ಅದು ಮರಿಗಳೊಂದಿಗೆ ಹಿಂಡಿಗೆ ಹಿಂತಿರುಗಿದಾಗ ಸ್ವಾಗತ ಸಿಗಲಿಲ್ಲ. ಆಹಾರವೂ ಸಿಗಲಿಲ್ಲ. ಯಾಕೆಂದರೆ ಒಮ್ಮೆ ಹಿಂಡು ಬಿಟ್ಟು ಹೋದ ನಾಯಿಗಳನ್ನು ಹಿಂಡಿಗೆ ಪುನಃ ಸೇರಿಸಿಕೊಳ್ಳುವುದಿಲ್ಲ. ಓಡಿಹೋದ ನಾಯಿ ಕುಲದಿಂದ ಹೊರಗೆ. ಅವುಗಳನ್ನ ಬೌಂಡರಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದರೂ ಕಿರುಮದಿ ತನ್ನ ಮರಿಗಳನ್ನು ಅಸಾಧಾರಣ ಧೈರ್ಯದಿಂದ ಸಾಕಿದಳು. ಕದ್ದು ಮುಚ್ಚಿಟ್ಟು ಆಹಾರ ತಂದು ಸಲಹಿದಳು. ಕಿರುಮದಿಯದು ಅಸಾಧಾರಣ ಹೋರಾಟ. ಆ ಕಡೆಯಿಂದ ಒಂದು ಹಿಂಡು, ಈ ಕಡೆಯಿಂದ ಇನ್ನೊಂದು ಹಿಂಡು. ಈ ಎರಡು ಹಿಂಡುಗಳ ನಡುವೆ ಜಾಗ ಮಾಡಿಕೊಂಡು ತನ್ನ ಸಾಮ್ರಾಜ್ಯ ಬೆಳೆಸಿದಳು. ನಾವು ಸಿನೆಮಾ ಮಾಡುತ್ತಿದ್ದ ಹಾಗೇ ಹೀಗೇ ಇನ್ನೊಂದಿಷ್ಟು ಮರಿಗಳನ್ನು ಮಾಡಿಕೊಂಡು ಬಂದು ತನ್ನ ಅಧಿಕಾರವನ್ನು ವಿಸ್ತರಿಸಿದಳು. ಅಲ್ಲಿದ್ದ ಎಲ್ಲ ಗಂಡು ನಾಯಿಗಳೂ ಅವಳ ಮೇಲೆ ಅವಲಂಬಿತವಾಗುವ ಹಾಗೆ ಮಾಡಿದಳು. ಒಂದು ಸಲ ಕಿರುಮದಿ ಬೇಟೆಯಾಡಲು ಹೋಗಿ ಗಾಯಮಾಡಿಕೊಂಡು ಬಂದಳು. ಬೇಟೆಯ ಗಾಯ ಮಾರಣಾಂತಿಕವಾಗಿರುತ್ತದೆ. ಗುಣವಾಗುವುದು ತೀರಾ ಅಪರೂಪ. ಕಿರುಮದಿಯ ಗಾಯದಿಂದಾಗಿ ಅವಳ ಇಡೀ ಸಂಸಾರಕ್ಕೆ ಗರ ಬಡಿದ ಹಾಗಾಗಿತ್ತು. ಎಲ್ಲ ನಾಯಿಗಳೂ ಕಿರುಮದಿಯನ್ನು ಸಂತೈಸುವುದು, ಗಾಯವನ್ನು ನೆಕ್ಕುವುದು ಇತ್ಯಾದಿಗಳನ್ನು ಮಾಡುತ್ತಿದ್ದವು. ದೇವರ ದಯದಿಂದಾಗಿ ಕಿರುಮದಿ ಗುಣಮುಖವಾಯಿತು.


ಇದನ್ನೆಲ್ಲಾ ವೈಜ್ಞಾನಿಕವಾಗಿ ವಿವರಿಸಲಾಗುವುದಿಲ್ಲ. ಪ್ರಾಣಿವಿಜ್ಞಾನಿಗಳ ಜೊತೆ ಈ ಕತೆಗಳನ್ನೆಲ್ಲಾ ಹೇಳಿದರೆ ಅವರು ನಕ್ಕು ಬಿಡುತ್ತಾರೆ. ನಾಯಿ ಸಂಸಾರದ ಕತೆಗಳನ್ನು ಮನುಷ್ಯನ ಕಣ್ಣಿಂದ ನೋಡಿದರೆ ಆಗುವ ಅಪಾಯ ನಿಮ್ಮ ಕತೆಗಳಲ್ಲಿ ಎದ್ದು ಕಾಣುತ್ತದೆ ಎಂದು ನಕ್ಕು ಬಿಡುತ್ತಾರೆ. ಆದರೆ ಕೇವಲ ವೈಜ್ಞಾನಿಕವಾಗಿ ಪ್ರಾಣಿ ಸ್ವಭಾವವನ್ನು ಅಧ್ಯಯನ ಮಾಡುವುದೂ ಕೂಡಾ ಪರಿಪೂರ್ಣವಲ್ಲ ಅನ್ನುವುದು ನಮ್ಮ ಅನುಭವದ ಮಾತು.

ಒಮ್ಮೆ ಹೀಗೇ ಆಯಿತು. ಕಿರುಮದಿ ಎಂಬ ಹೆಣ್ಣು ನಾಯಿಯ ಹಿಂಡು ಬೆಳೆದು ದೊಡ್ಡದಾಗಿ ಕಾಡಿನ ಒಳಗಿನ ಒಂದು ಆಯಕಟ್ಟಿನ ಜಾಗದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡಿತ್ತು.ಅದೊಂದು ದಿನ ನಮಗೆ ಇನ್ನೂ ನೆನಪಿದೆ. ಸಣ್ಣಗೆ ಮಳೆಬರುತ್ತಿತ್ತು. ಕಾಡೆಲ್ಲಾ ಒಂದು ಥರಾ ನೀರಸವಾಗಿತ್ತು. ಕಿರುಮದಿ ತನ್ನ ಅಲ್ಫಾಗಂಡೊಂದನ್ನು ಹುರಿದುಂಬಿಸಿ ಬೇಟೆಗೆ ಹೊರಡಿಸಿತು. ಜೊತೆಯಲ್ಲಿ ವಯಸ್ಸಿಗೆ ಬಂದಿದ್ದ ಎರಡು ಗಂಡು ನಾಯಿಗಳೂ ಹೊರಟವು.

ಈ ಎರಡು ಗಂಡುನಾಯಿಗಳಿಗೆ ಈ ಹಿಂಡಿನಲ್ಲಿರಲು ಆಸಕ್ತಿ ಇರಲಿಲ್ಲ. ಏಕೆಂದರೆ ಅವುಗಳು ಆಗತಾನೇ ಪ್ರಾಯಕ್ಕೆ ಬಂದಿದ್ದವು ಆದರೆ ಅವುಗಳಿಗೆ ಲೈಂಗಿಕಕ್ರಿಯೆ ನಡೆಸಲು ಅನುಮತಿ ಇರಲಿಲ್ಲ. ಏಕೆಂದರೆ ಅವುಗಳು ಅಲ್ಫಾ ಗಂಡಾಗಿರಲಿಲ್ಲ. ಅದೂ ಅಲ್ಲದೆ ಪಕ್ಕದ ಹಿಂಡಿನ ಇಂತಹದೇ ಅತೃಪ್ತ ಹೆಣ್ಣು ನಾಯಿಗಳೆರಡು ಕೊಂಚ ದೂರದಿಂದಲೇ ಸುತ್ತಿ ಸುಳಿದಾಡಿ ಇವೆರಡರ ಗಮನ ಸೆಳೆಯಲು ನೋಡುತ್ತಿದ್ದವು. ಹೀಗಾಗಿ ಆ ಎರಡು ಗಂಡುನಾಯಿಗಳೂ ಒಂದು ತರಹದ ಗೊಂದಲದಲ್ಲಿದ್ದವು. ಇರುವ ಹಾಗಿರಲಿಲ್ಲ-ಹೋಗುವ ಹಾಗಿರಲೂ ಇಲ್ಲ. ಏಕೆಂದರೆ ಅವು ಕಿರುಮದಿಯ ಸಂಸಾರದ ಶಕ್ತ ಬೇಟೆನಾಯಿಗಳಾಗಿದ್ದವು. ಸಣ್ಣ ನಾಯಿಮರಿಗಳಿಗೂ ಅವೆರಡು ಅಚ್ಚು ಮೆಚ್ಚಾಗಿದ್ದವು. ಅವುಗಳು ಬೇಟೆಗೆ ಹೊರಟಾಗ ಮರಿಗಳೂ ಕೊಂಚ ದೂರದ ತನಕ ಹೋಗಿ ಬೀಳ್ಕೊಡುತ್ತಿದ್ವವು. ಬೇಟೆ ಮುಗಿಸಿದ ಅವುಗಳು ಮರಿಗಳನ್ನು ಬೇಟೆಯಾಡಿದ ಮಿಕದ ಕಡೆಗೆ ಕರೆದೊಯ್ಯಲು ಬಂದಾಗ ಓಡಿ ಹೋಗಿ ಅವುಗಳ ಬಾಯಿಯನ್ನು ನೆಕ್ಕುತ್ತಿದ್ದವು ಏಕೆಂದರೆ ಅವುಗಳ ಬಾಯಿಯಲ್ಲಿ ಬೇಟೆಯಾದ ಮಿಕದ ನೆತ್ತರ ವಾಸನೆ ಇರುತ್ತಿತ್ತು.

ನಾವು ಹೇಳಿದ ಆದಿನ ಸಂಜೆ. ಬೇಟೆಗೆ ಹೋದವರಲ್ಲಿ ಅಲ್ಫಾ ಗಂಡು ಮಾತ್ರ ವಾಪಸ್ಸು ಬಂತು. ಮರಿಗಳು ಬೇಟೆ ಮುಗಿಸಿ ಬಂದ ಅದನ್ನು ಬಾಯಿ ನೆಕ್ಕಿ ಸ್ವಾಗತಿಸುವ ಬದಲು ಯಾಕೋ ಅಳಲು ತೊಡಗಿದವು. ನಮಗೆ ತಟ್ಟನೆ ಹೊಳೆಯಿತು. ಆ ಮರಿಗಳ ಅಚ್ಚುಮೆಚ್ಚಿನ ಆ ಎರಡು ಗಂಡು ನಾಯಿಗಳು ಇನ್ನೊಂದು ಹಿಂಡಿನ ಅತೃಪ್ತ ಹೆಣ್ಣು ನಾಯಿಗಳ ಹಿಂದೆ ಓಡಿ ಹೋಗಿದ್ದವು. ಆ ಇಡೀ ದಿನ ಆ ಹಿಂಡು ಶೋಕದಲ್ಲಿ ಮುಳುಗಿತ್ತು.

ಪ್ರಾಣಿವಿಜ್ಞಾನ ಇದರ ಕುರಿತು ಏನು ಹೇಳುತ್ತದೆ ಗೊತ್ತಿಲ್ಲ. ಆದರೆ ಆ ದಿನದ ಶೋಕದ ವಾತಾವರಣವನ್ನು ನಾವು ಚಿತ್ರೀಕರಿಸಿಕೊಂಡಿದ್ದೇವೆ. ಓಡಿಹೋದ ಆ ಎರಡು ಗಂಡು ನಾಯಿಗಳು ಕೊನೆಗೂ ಬರಲೇ ಇಲ್ಲ.

ಹಿಂದಿನ ಪ್ರತಿಕ್ರಿಯೆಗಳು

rohinihs:

February 6th, 2008 at 10:29 am
nice one. i too believe it. animals also have emotions.

ಸುಖೇಶ.ಪಿ:

February 13th, 2008 at 1:21 pm
ಕೃಪಾಕರ ಸೇನಾನಿ ಅವರ ಅಭೂತ ಪೂರ್ವ ಸಾಧನೆಯ ಕತೆಯನ್ನು ಪ್ರಕಟಿಸಿರುವ ನಿಮಗೆ ಅನಂತ ಧನ್ಯವಾದಗಳು

ಸೂರ್ಯ:

March 14th, 2008 at 10:40 pm
ಕೃಪಾಕರ ಸೇನಾನಿ ಅವರ ಈ ಸಾಧನೆ ಅಭೂತಪೂರ್ವವಾದುದು. ಈ ಸಾಧನೆಯ ಕಥೆಯನ್ನು ಪ್ರಕಟಿಸಿದ ನಿಮಗ ಧನ್ಯವಾಗಳು.

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಖೇಣಿ ಪುರಾಣ-೪ : ಬೀದರಿಗೆ ಮದುಮಗನಂತೆ ಬಂದರು
  ಪೆಜತ್ತಾಯ ಆತ್ಮಕಥೆ : ಕಲ್ಲು ದೇವಸ್ಥಾನದ ಸುಬ್ಬರಾಯರು
  ಚೆನ್ನಿ ಕಥಾಕಾಲ : ಇಸಾಬೆಲ್ ಅಯೆಂದೇ ಬರೆದ ಇವಾಲೂನಾ
  ರಾಮ್ ಗಣೇಶ್ ಭಟ್ಟರ ಗೇರು ಸೈಕಲ್ ಯಾನ- ೨
  ವಿ.ಕೆ.ಮೂರ್ತಿ ಚರಿತೆ: ಮೈಸೂರಿನ ಮಂಕು ಸಂಜೆಗಳು
  ಖೇಣಿ ಪುರಾಣ-3 ಕನ್ನಡ ನುಡಿಯಲು ತೊಡಗಿದರು ಅಶೋಕ್ ಖೇಣಿಯವರು
  ರಾಮ್ ಗಣೇಶ್ ಭಟ್ಟರ ಗೇರು ಸೈಕಲ್ ಯಾನ
  ಪೆಜತ್ತಾಯ ಆತ್ಮಕಥೆ ‘ಕಾಗದದ ದೋಣಿ' : ಬಾಬು ರೈಟರು -೩
  ಖೇಣಿ ಪುರಾಣ: ರಂಜೇರುವಿನಲ್ಲಿ ದೊರೆಗಳ ಅರಮನೆ
  ‘ಸಾರಿ ಹೇಳಿದ ಬಾಬು ರೈಟರಿಗೆ ಪೂರಿ ತಿನ್ನಿಸಿದೆ'
  ಉಮಾ ಬರೆಯುವ ವಿ.ಕೆ. ಮೂರ್ತಿಯವರ ಚರಿತೆ
  ಪೆಜತ್ತಾಯ ಆತ್ಮ ಕಥೆ:ರೈಟರ್ ಬಾಬು ಪೂಜಾರಿ
  ಏನಕೇನ ಖೇಣಿ ಪುರಾಣ- ಚನ್ಬಸವ ಬರೆಯುವ ಸರಣಿ ಶುರು
  ಕಣಗಾಲ್ ಸರಣಿ: ಕಟ್ಟಿದ್ದ ಸೆಟ್ಟೆಲ್ಲವೂ ಸುಟ್ಟುಹೋಯಿತು
  ಸುಮಿತ್ರಾ ಆತ್ಮಕಥೆ: ಒಂದು ಎತ್ತಿನ ಗಾಡಿ ಪ್ರಯಾಣ
  ಗುಮ್ಮಟನಾಡಿನ ಕಥನ ೯: ಕೂಡಲಸಂಗಮದಲ್ಲಿ
  ಕೆ ಟಿ ಗಟ್ಟಿ ‘ಪರಿಧಿ’ ೪: ನೆನಪೆಂಬ ಭೂತಕಾಲ
  ದಿವ್ಯ ಶಯನದ ಚಂಚಲೆ ಎಮ್ಮಾ
  ಪೆಜತ್ತಾಯ ಆತ್ಮಕಥೆ: ಶರೀಫ್ ಸಾಹೇಬರ ಜೊತೆ
  ನೂರು ರೂಪಾಯಿ ಕೊಟ್ಟು ಹೊರಟುಹೋಗು ಎಂದ ಪುಟ್ಟಣ್ಣ
  ಲೋಕ ಸಿನೆಮಾ: ‘ಬೈಸಿಕಲ್ ಥೀಫ್’
  ಸುಮಿತ್ರಾ ಆತ್ಮಕಥೆ: ನನ್ನ ಗೋವರ್ಧನ ಗಿರಿಯಂಥ ಛತ್ರಿ
  ಕೆ.ಟಿ. ಗಟ್ಟಿ ‘ಪರಿಧಿ’ ೩: ಹುಟ್ಟೆಂಬ ಲೈಂಗಿಕ ಗೊಂದಲ
  ‘ಚಂಚಲೆ’: ಪ್ಯಾರಿಸ್ಸಿನ ಪ್ರೇಮಕಾರಂಜಿ ನಿನಾನ್
  ಪೆಜತ್ತಾಯ ಆತ್ಮಕಥೆ: ನನ್ನ ಕುದುರೆ ಸವಾರಿ
  ಕಣಗಾಲ್ ಸರಣಿ: ಕ್ಯೂನಲ್ಲಿ ನಿಂತರೂ ಸಿಗದ ಪುಟ್ಟಣ್ಣ
  ಲೋಕ ಸಿನೆಮಾ: ‘ಲೈಫ್ ಈಸ್ ಬ್ಯೂಟಿಫುಲ್’
  ಸುಮಿತ್ರಾ ಆತ್ಮಕಥೆ: ಅಣ್ಣ ಹೈಸ್ಕೂಲು ಬಿಟ್ಟದ್ದು
  ಜಾತಿ ಮತಗಳ ಹಂಗಿಲ್ಲದ ‘ಶ್ರೀ ಕೃಷ್ಣ ಪಾರಿಜಾತ’
  ಕೆ.ಟಿ. ಗಟ್ಟಿ ‘ಪರಿಧಿ’ ೨: ಭವಿಷ್ಯದ ಭೂತ ವರ್ತಮಾನ
  ಕಾಟಿಬೆಟ್ಟ ಕೊನೆಯ ಕಂತು: ಮೈಸೂರಲ್ಲಿ ಲೀನವಾದ ಕಾಡಬದುಕು
  ಪೆಜತ್ತಾಯ ಆತ್ಮಕಥೆ : ಮಲ್ಲಾಡಿ ಹಳ್ಳಿಯ ಸಂತನ ಜೊತೆಗೆ
  ಚಂಚಲೆಯರ ಕಥಾನಕ: ರೋಮ್ ‘ರಾತ್ರಿರಾಣಿ’ ಮೆಸ್ಸಾಲೀನ
  ‘ಪುಟ್ಟಣ್ಣನವರನ್ನು ನೋಡಹೋದರೆ ರಟ್ಟೆ ಹಿಡಿದು ಹೊರಹಾಕಿದರು’
  ಲೋಕ ಸಿನೆಮಾ: ‘ಒನ್ ಫ್ಲ್ಯೂ ಓವರ್ ದ ಕಕೂಸ್ ನೆಸ್ಟ್’
  ಸುಮಿತ್ರಾ ಆತ್ಮಕಥೆ: ಅಣ್ಣನ ಮಾತು ಕೇಳಿ ಒಂಟಿ ಕಾಲಲಿ ನಿಂತೆ
  ಕೆ.ಟಿ. ಗಟ್ಟಿಯವರ ‘ಪರಿಧಿ’ ಕಾದಂಬರಿ
  ಕೆ.ಟಿ.ಗಟ್ಟಿ ‘ಪರಿಧಿ’ ಕಾದಂಬರಿ ನಿಮಗಾಗಿ ಹೊಸ ರೂಪದಲ್ಲಿ
  ಪೆಜತ್ತಾಯ ಆತ್ಮಕಥೆ : ನನ್ನ ಪ್ರೀತಿಯ ಆದಮ್ ಡಾಕ್ಟರು
  ಎನ್.ಎಸ್. ಶಂಕರ್ ಬರೆವ ಚಂಚಲೆಯರ ಕಥಾನಕ ಆರಂಭ
  ಗುರು ಪುಟ್ಟಣ್ಣ ಕಣಗಾಲ್: ಪಿ.ಎಚ್ ವಿಶ್ವನಾಥ್ ಸರಣಿ ಶುರು
  ಲೋಕ ಸಿನೆಮಾ: ಬರ್ಗ್‌ಮನ್ ನ ‘ವೈಲ್ಡ್ ಸ್ಟ್ರಾಬೆರೀಸ್’
  ಗುಮ್ಮಟ ನಾಡಿನ ಕಥನ ೭: ಅಮೀರ್ ಬಾಯಿ ಮತ್ತು ಗೋಹರ್ ಬಾಯಿ
  ಸುಮಿತ್ರಾ ಆತ್ಮಕಥೆ: ಹಸಿರು ಗುಲಾಬಿಯ ತೋಟ
  ಕಾಟಿಬೆಟ್ಟದ ಕಥೆಗಳು: ರಟ್ಟಿಹೋದ ಹುತ್ತರಿ ಪಟಾಕಿ
  ಕಾಗದದ ದೋಣಿ ೨೫: ಜೇನು ಭಟ್ಟರ ಸಂಗ
  ಲೋಕ ಸಿನೆಮಾ ಕಥಾನಕ: ಓಡುತ್ತಲೇ ಇರುವ ಲೋಲಾ
  ಸುಮಿತ್ರಾ ಆತ್ಮಕಥೆ: ನನ್ನ ತಂಗಿ ಸಾವಿತ್ರಿ
  ‘ಕಾಗದದ ದೋಣಿ’ ೨೪: ನಾನು ಕೊಳ್ಳದ ತೆಂಗಿನ ತೋಟ
  ಉಸಿರಿಗಂಟಿದ ಒಂದು ವಾಸನೆಯ ಚಿತ್ರ
  ಸುಮಿತ್ರಾ ಆತ್ಮಕಥೆ : ಒಂದು ದೋಸೆಗಾಗಿ ಎಷ್ಟೆಲ್ಲಾ....
  ಹಳಕಟ್ಟಿ ಸಾಹೇಬರು ಮತ್ತು ಕಂದಗಲ್ ಹನುಮಂತರಾಯರು
  ಪೆಜತ್ತಾಯ ಆತ್ಮಕಥೆ : ನನ್ನ ಅರ್ಧಲೋಕ ಯಾತ್ರೆ ಮತ್ತೆ
  ‘ಸೈಲೆಂಟ್ ವಾಟರ್ಸ್’: ಒಂದು ಪಾಕಿಸ್ತಾನಿ ಚಿತ್ರ
  ಸುಮಿತ್ರಾ ಆತ್ಮಕಥೆ: ಕಲ್ಯಾಣಿ ಆಕಳೂ, ಮುದುಕಿ ದುರ್ಗಿಯೂ