ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಜಾಹೀರಾತಿಗೆ ‘ಜೈಹೋ’ : ಸಿಂಧು ಬರೆಯುವ ಲಾವಂಚ    
ಸಿಂಧು
ಬುಧವಾರ, 10 ಫೆಬ್ರವರಿ 2010 (05:25 IST)
ಚಿತ್ರ: ಗುಜ್ಜಾರಪ್ಪ

ಜಾಹೀರಾತುಗಳು ನನ್ನ ಜೀವನಾಡಿಯಾಗಿಬಿಟ್ಟಿವೆ.

ಅಲ್ಲಿ ಡಾಲಿಯ ಹಲ್ಲಿನ ಹುಳುಕನ್ನ ಆ ಪುಟ್ಟ ಹುಡುಗಿ ಹುಡುಕುವಾಗ ಇಲ್ಲಿ ತುತ್ತೊಂದು ಬಾಯಿಗೆ ಹೋಗುತ್ತದೆ. ಡಾಲಿ ಗೊಂಬೆಯ ಹಲ್ಲು ಗಟ್ಟಿ ಮುಟ್ಟಾಗಿರಲಿಕ್ಕೆ ಕೋಲ್ಗೇಟೇ ಕಾರ‍ಣ ಅಂತ ಹಲ್ಲುತಜ್ಞೆ ಅಮ್ಮ ಮತ್ತು ಮಗಳು ನಿರ್ಧರಿಸುವ ಆ ಒಂದು ನಿಮಿಷದಲ್ಲಿ ನಮಗೆ ಎರಡು ತುತ್ತು ಮತ್ತು ಒಂದು ಹೋಳು ಒಳಗೆ ಹೋಗಿರುತ್ತದೆ. ಅಯ್ಯೋ ಆ ಜಾಹಿರಾತು ಮುಗಿದು ಹೋಯಿತು ಅಂದರೆ ನಾವು ನಿಂತಲ್ಲಿಂದ ಒಂದು ಸುತ್ತು ಅಡುಗೆ ಮನೆ, ಪ್ಯಾಸೇಜು ಕಡೆ ಹೋಗಿ ಬಿಡುತ್ತೇವೆ. ಈಗ ಊಟ ಯಾಕೋ ಸೇರುವುದಿಲ್ಲ, ಮುಖ ತಿರುಗಿಸುವುದೇ ಕೆಲಸ. ಅಷ್ಟರಲ್ಲಿ ಕುಂಯ್ ಕುಂಯ್ ಅಂತ ಶಬ್ಧ. ಓಹ್ ರೋಸೀ ಮೀಸ್... ಅಂತ ಮತ್ತೆ ಜಾಹೀರಾತಿನ ಮುಂದೆ. ಅಲ್ಲಿ ಅಣ್ಣನ ಮಂಗಾಟ ನೋಡುತ್ತ ಇನ್ನೆರಡು ತುತ್ತು, ಒಂದೆರಡು ಹೋಳು ಗುಳುಂ ಆಗುತ್ತದೆ. ಸದ್ಯ ಅದು ಮುಗಿದ ಕೂಡಲೇ ಡೊಕೊಮೋ ಬಂತು. ಚಿಂತಾಮಣೀ ಇದ್ದರಂತೂ ಇನ್ನೂ ಒಳ್ಳೆಯದು. ಊಟ ಯಾವ ತೊಂದರೆಯೂ ಇಲ್ಲದೆ ಮುನ್ನಡೆಯಿತು.

ಇನ್ನೇನು ಕೊನೆಯ ತುತ್ತು ಅನ್ನುವಾಗ ಜಾಹೀರಾತು ಮುಗಿಯಿತು. ಆದರೆ ನಾನು ಆಜನ್ಮ ದ್ವೇಷಿಸಿದ ಟೀವಿ ಧಾರಾವಾಹಿಯ ಶೀರ್ಷಿಕೆ ಶುರುವಾಯಿತು. ಮನೆಯೊಂದೂ ಮೂಊಊಊಊರು ಬಾಆಗಿಲು. ಅಬ್ಬಾ ಸದ್ಯ ಎಂದು ನಿಟ್ಟುಸಿರಿಟ್ಟು ಊಟ ಮುಗಿಸಿದ್ದಾಯಿತು. ಗೀತೆ ಮುಗಿಯುವುದರೊಳಗೆ ಬಾಯಿ ಒರಸಿ, ಒಂದೆರಡು ಕುಡ್ತೆ ನೀರು ಕುಡಿದೂ ಆಯಿತು.

ಸರಿಯಾಗಿ ಒಂದು ವರ್ಷ ೩ ತಿಂಗಳು ಮೊದಲು ಯಾರಾದರೂ ಈ ಜಾಹಿರಾತುಗಳು ಮತ್ತು ಧಾರಾವಾಹಿಗಳ ಬಗ್ಗೆ ಮಾತಾಡಿದ್ದರೆ ನಾನು ಅದರ ವಿರೋಧವಾಗಿ ಗಂಟೆಗಟ್ಟಲೆ ಗಲಾಟೆ ಮಾಡುತ್ತಿದ್ದೆನೇನೋ. ಈಗ ಅವುಗಳಿಂದಲೇ ನನ್ನ ಬದುಕು ನಿಭಾಯಿಸುತ್ತಿದ್ದೇನೆ. ನಿಖರವಾಗಿ ಹೇಳಬೇಕೆಂದರೆ ನನ್ನ ಪುಟ್ಟ ಮಗಳ ಊಟದ ಆಟವನ್ನ, ಆಟೋಟವನ್ನ ಹಗುರವಾಗಿ ಮಾಡಿರುವುದೇ ಈ ಜಾಹೀರಾತುಗಳು. ಆಗೀಗ ಮಕ್ಕಳ ಗೀತೆಗಳು ಮತ್ತು ಪುಸ್ತಕಗಳು ಸಹಾಯ ಮಾಡುತ್ತವಾದರೂ ಈ ಜಾಹೀರಾತುಗಳಿಗೇ ಜಾಸ್ತಿ ಟೀಆರ್ ಪೀ. ಎರಡು ತಿಂಗಳು ಮೊದಲು ಈ ಕೀ ಐಡಿಯಾ ನನಗೆ ಗೊತ್ತಾಗಿರಲಿಲ್ಲ. ಎರಡು ತುತ್ತು ಗಲಾಟೆಯಿಲ್ಲದೆ ಅವಳ ಗಂಟಲಲ್ಲಿ ಇಳಿಯುವುದು ಕಷ್ಟವಾಗಿರುತ್ತಿತ್ತು.

ಒಂದೊಂದ್ಸಲ ಅವಳಿಗೆ ಚೆನ್ನಾಗಿ ಹಸಿವಾಗಲಿ ಅಂತ ಎರಡು ಊಟದ ನಡುವಿನ ಸಮಯವನ್ನು ಹೆಚ್ಚಿಸಿದ್ದೂ ಇದೆ. ಏನೇ ಆದರೂ ಸರ್ಕಸ್ ಮಾಡುವುದು, ಕೊನೆಕೊನೆಯ ತುತ್ತುಗಳನ್ನು ಚೆಲ್ಲುವುದು ತಪ್ಪುತಿರಲಿಲ್ಲ. ನೀರು ಕುಡಿಯುವುದಂತೂ ಕೇಳಲೇ ಬಾರದು. ಅವಳ ಊಟ ಚೆಲ್ಲುವಾಗ ನನ್ನ ಸಹನೆ ಮೀರುತ್ತದೆ. ಒಂದೊತ್ತಿನ ಊಟಕ್ಕೆ ಕಷ್ಟ ಪಡುವವರಿರುವಾಗ ಇವಳಿಗೆ ಸಮಯಕ್ಕೆ ಸರಿಯಾಗಿ ತಿನ್ನಿಸಲು ಹೋಗುವುದಕ್ಕೇ ಕೊಬ್ಬು ಜಾಸ್ತಿ ಅನ್ನಿಸಿ ಸಿಡಿಗುಡುತ್ತೇನೆ.

ಹತ್ತಿರ ಬಂದು ಕೆನ್ನೆ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಒಂದು ಮುದ್ದು ನಗು ಸುರಿಸಿ ಮ್ಮಾಆಆಆವ್ ಅಂತಂದು ತೂರಾಡುತ್ತ ನಡೆಯುವ ಗೊಂಬೆಯನ್ನ ನೋಡುತ್ತ ಎಲ್ಲ ಮರೆಯುತ್ತದೆ. ಮತ್ತೆ ಅನುಸಂಧಾನ, ಸಮಾಧಾನ, ಮುತ್ತು ಪ್ರದಾನ... ಜಾಹೀರಾತು ಬಂದ ಕೂಡಲೆ ಓಡಿಬರುವ ಪೋರಿಯ ಕಂಡು ಹೊಳೆದಿದ್ದು ಈ ವಿಧಾನ. ಈಗ ಊಟ ಚೆಲ್ಲುವುದಿಲ್ಲ, ಅವಳಿಗೆ ಜಂಭವಿಲ್ಲ, ನನಗೆ ಬೇಸರವಿಲ್ಲ. :)

ಅಪ್ಪ ಅಮ್ಮ ಊರಲ್ಲಿ ಕಷ್ಟ ಪಟ್ಟು ದುಡಿದುಕೊಂಡು ಇದ್ದರು. ನಾವಿಬ್ಬರೂ ಮಕ್ಕಳು ಇಲ್ಲಿ ಕೆಲಸದಲ್ಲಿ ಇರುವಾಗ ನೀವು ಅಲ್ಲಿ ಯಾಕೆ ದುಡಿದುಕೊಂಡಿರಬೇಕು ಅಂತ ಹಟ ಮಾಡಿ, ಮುದ್ದು ಮಾಡಿ ಅಲ್ಲಿಂದ ಎಬ್ಬಿಸಿಕೊಂಡು ಬಂದು ಇಲ್ಲಿ ನೆಲೆ ನಿಲ್ಲಿಸಿದ ಮೇಲೆ ಅವರಿಗೆ ಈಗ ಕೆಲಸವಿಲ್ಲ, ಬೇಸರ ಕಳೆಯುವುದಿಲ್ಲ, ಹೊತ್ತು ಹೋಗುವುದಿಲ್ಲ. ನಮಗೆ ಸೊಫೆಸ್ಟಿಕೇಟೆಡ್ ಗಾಣ ತಿರುಗದೆ ಬದುಕು ನಡೆಯುವುದಿಲ್ಲ. ಹಗಲಿನ ಮೂರ್ಹೊತ್ತೂ ಕರೆಸಿಕೊಂಡ ಮಕ್ಕಳೂ ಜೊತೆಗಿಲ್ಲ. ಪಕ್ಕದ ಮನೆಯವರು ಮಾತನಾಡಿಸುವುದಿಲ್ಲ, ಏನು ಮಾಡಬೇಕು ಅವರು- ಬದುಕು ನೋಡಿ ಬೃಂದಾವನವಾಗಿ ಗಿರಿಯಮ್ಮನೊಡನೆ ಪ್ರಾರ್ಥಿಸಿ ಸುಕನ್ಯಳನ್ನು ಗುಪ್ತಗಾಮಿನಿಯಾಗಿಸಿ ಮೂರು ಬಾಗಿಲಿನ ಮನೆಯೊಳಗೆ ಕರೆತರುವಾಗ ಮಹಾನವಮಿಯಲ್ಲಿ ಕೈಮುಗಿಯುವ ಸಮಯ, ವಾರ್ತೆ ಕೇಳಿ ಮುತ್ತಿನ ತೋರಣ ಕಟ್ಟುವಾಗ ಮಕ್ಕಳು ಮನೆಗೆ ಬಂದರೇ ಇವತ್ತಿನ ಗಾಣದಿಂದ ಬದುಕು ಮುಕ್ತ ಮುಕ್ತ ಮುಕ್ತಾ.. ಏನೇ ಆದರೂ ಮತ್ತೆ ನಾಳೆಯಿಂದ ಬಂದೇ ಬರತಾವ ಕಾಲ..

ಯಾವಾಗಲೂ ಯಾಕೆ ಟೀವಿ ನೋಡುತ್ತಿರುತ್ತೀರ ಅಂತ ಕೇಳಿದರೆ ಮತ್ತೇನು ಮಾಡಬಹುದು ಎಂಬ ಚಿಂತೆ ಎರಡು ದಿನ ರಜ ಹಾಕಿ ಮನೆಯಲ್ಲಿ ಕೂರುವ ನನಗೇ ಬರುತ್ತದೆ. ಏನೂ ಮಾಡದೆ ಸುಮ್ಮನೆ ಕೂರು ಅಂತ ಹೇಳುವ ಶಿಕ್ಷೆಯನ್ನ ನನ್ನ ಬಾಲ್ಯದಲ್ಲೆಂದೂ ಕೊಡದ ಅಪ್ಪ ಅಮ್ಮನಿಗೆ  ಈಗ ಸುಮ್ಮನೆ ಕೂತುಕೊಳ್ಳಿ ಅಂತ ಕೇಳಲು ನಾನು ಎಷ್ಟರವಳು.

ಅವರ ಬೇಸರದ ಕ್ಷಣಗಳನ್ನು ಸರಿಸಲು ಹೊಸ ಅವಕಾಶಗಳನ್ನು ತೆರೆಯಲಾಗದ ನಾನು, ಅವರಾಗಿಯೇ ಕಂಡುಕೊಂಡ ಗವಾಕ್ಷವನ್ನು ಮುಚ್ಚಲು ಹೋಗುವುದು ಯಾಕೆ ಅಂತ ಹೊಳೆದಾಗಿನಿಂದ ಸುಮ್ಮನಾಗಿಬಿಟ್ಟಿದೇನೆ. ಎರಡು ಆರೋಗ್ಯಕರ ಪಕ್ವ ಮನಸ್ಸುಗಳನ್ನು ಕೊಳೆಯಿಸುತ್ತಿರುವ ಈ ವ್ಯವಸ್ಥೆಯಲ್ಲಿ ನಾನು ನೇರ ಭಾಗೀದಾರಳಿದ್ದೇನೆ.

ಇವತ್ತು ಗಲಾಟೆಯಿಲ್ಲದೆ ಮಗಳು ತಿನ್ನಲಿ ಎಂದು ಟೀವಿ ಹಚ್ಚುವ ನಾನು, ನಾಳೆ ಓದಿಕೋ ಮಗೂ ಅಂತ ಟೀವಿ ಆಫ್ ಮಾಡಲು ಹೋದರೆ ಅವಳು ಸುಮ್ಮನಿರುತ್ತಾಳಾ?

ಈ ಗೊಂದಲಗಳು ದಿನ ಕಳೆದಂತೆ ಕರಗಿ ನಾನೂ ಆ ಗೊಂದಲದ ಭಾಗವೇ ಆಗಿ ಹೋಗುವ ಪ್ರಕ್ರಿಯೆಯಿಂದ ಅದು ಹೇಗೋ ನಾನು ಕಳಚಿಕೊಂಡು ಬಿಟ್ಟಿದ್ದೇನೆ ಅನ್ನಿಸುತ್ತಿದೆ. ಇಲ್ಲದಿದ್ದರೆ ನಾನೂ ಯಾಕೆ ಈ ಎಲ್ಲ ಗೊಂದಲ ಮರೆಯಲು ಎದೆ ತುಂಬಿ ಹಾಡುವುದನ್ನ, ಸ್ಟಾರ್ ಸಿಂಗರನ್ನ ನೋಡುತ್ತಾ ಕೇಳುತ್ತಾ ಕೂತುಕೊಳ್ಳಲು ಆಗುತ್ತಿಲ್ಲ? ಬದಲಾಗಿ  ಬಕ,ಕೆರೆ ಮತ್ತು ಮರ ಯಾವುದೂ ಇಲ್ಲವೆಂದೂ ಗೊತ್ತಿದ್ದೂ ಈ ಎಲ್ಲ ಯಕ್ಷಪ್ರಶ್ನೆಗಳಿಗೆ ಉತ್ತರ ಹುಡುಕಹೊರಟಿದ್ದೇನೆ ಯಾಕೆ?

ನಿಮಗೆ ಇದಕ್ಕೆ ಏನಾದರೂ ಉತ್ತರ ಗೊತ್ತಾ. ಇನ್ನು ೩೦ ಸೆಕೆಂಡುಗಳಲ್ಲಿ ಹೇಳಲಿಕ್ಕೆ ಸಾಧ್ಯವಾದರೆ ನೋಡಿ. ನೀವು ಕೋಟ್ಯಾಧಿಪತಿಯಾಗಬಹುದು. ಶಾರೂಖ್ ಖಾನ್ ಹೇಳುತ್ತಿದ್ದಾನೆ. ರೀಜನ್ಲೀ ಹೋಗುವುದಾದರೆ ಉಪೇಂದ್ರ ನಿಮ್ಮ ಸರಿಯುತ್ತರವನ್ನು ತಾಳೆ ನೋಡುತ್ತಾನೆ. ಅಥವಾ ವೋಟರ್ಸ್ ಚಾಯ್ಸ್ ಇಡಬಹ್ದು. ಜಾಸ್ತಿ ಎಸ್ಸೆಮ್ಮೆಸ್ ಬಂದರೆ ಉತ್ತರ ಸರಿಯಿಲ್ಲದಿದ್ದರೂ ಗೆಲ್ಲುವ ಅವಕಾಶವಿದೆ.
ಇಷ್ಟೆಲ್ಲ ಪ್ರೋಗ್ರಾಂಗಳು ಟೀವಿಯಲ್ಲಿರುವುದನ್ನ ನನಗೆ ತಿಳಿಸಿಕೊಟ್ಟ ಎಲ್ಲ ಜಾಹೀರಾತುಗಳಿಗೂ ನನ್ನ ವಂದನೆಗಳು.

ಪುಟದ ಮೊದಲಿಗೆ
 
Votes:  2     Rating: 4    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು