ಸೆಪ್ಟೆಂಬರ್ ೧೫, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಯೋಗಿಂದ್ರ ಬರೆಯುವ ಬ್ರಿಸ್ಟಲ್ ಪುರಾಣ: ಆಕಾಶದ ಕನಸಿಗೆ ನೂರು ವರ್ಷ    
ಯೋಗೀಂದ್ರ ಮರವಂತೆ
ಮಂಗಳವಾರ, 23 ಫೆಬ್ರವರಿ 2010 (04:30 IST)
ಜಾರ್ಜ್ ವೈಟ್

ಜಾರ್ಜ್- ಬ್ರಿಸ್ಟಲ್ ನ ಒಬ್ಬ ಸಾಮಾನ್ಯ ಪೈಂಟರನ ಮಗ. ಶಾಲೆಗೆ ಹೋಗು ಎಂದರೆ ಚಕ್ಕರ್ ಹೊಡೆದು ಹಗಲು ಕನಸು ಕಾಣುತ್ತ ತಿರುಗುತ್ತಿದ್ದವನು. ತನ್ನ  ಹದಿನಾಲ್ಕನೆಯ  ವಯಸ್ಸಿನಲ್ಲಿ  ಇನ್ನು  ಶಾಲೆ ಗೀಲೆ ಬೇಡ ಎನ್ನುತ್ತಾ ಓದನ್ನು ನಿಲ್ಲಿಸಿ  'ಆಫೀಸು  ಬಾಯ್' ಆಗಿ  ಕೆಲಸಕ್ಕೆ  ಸೇರಿಕೊಂಡ. ನಂತರ ಶೇರು ವ್ಯವಹಾರ ಆರಂಭಿಸಿ ಕೈಯಲ್ಲಿ ಸ್ವಲ್ಪ ಕಾಸು ಮಾಡಿಕೊಂಡು, ೧೮೭೪ರಲ್ಲಿ ಅಂದರೆ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಬ್ರಿಟನ್ನಿನ ಮೊದಲ ವಿದ್ಯುತ್ ಚಾಲಿತ ಟ್ರಾಮ್  ಫ್ಯಾಕ್ಟರಿ ಸ್ಥಾಪಿಸಿದ.

ಬ್ರಿಸ್ಟಲ್ ನ ಈ ಟ್ರಾಮ್ ಫ್ಯಾಕ್ಟರಿಯ ತಳಗಟ್ಟಿನ ಮೇಲೆಯೇ  ಜಾರ್ಜ್ ನ ಕನಸುಗಳ ಸೌಧ ಆಕಾರ ಪಡೆಯುತ್ತಿದ್ದುದು. ಅಂದಿನ ಬ್ರಿಟನ್ನಿನ ಟ್ರಾಮ್ ಮತ್ತು ಬಸ್ಸುಗಳಲ್ಲಿ ಬಹುಪಾಲು ಜಾರ್ಜ್ ನ ಫ್ಯಾಕ್ಟರಿಯಲ್ಲಿ ಹುಟ್ಟು ಪಡೆದವು. ೧೯೦೩ ರಲ್ಲಿ ಅಮೇರಿಕಾದ ರೈಟ್ ಸಹೋದರರು ಮೊದಲ ಬಾರಿಗೆ ಯಂತ್ರಚಾಲಿತ ವಿಮಾನ ಹಾರಿಸಿದ್ದು ಒಂದು ಚಾರಿತ್ರಿಕ ಘಟನೆ. ಇಲ್ಲಿಂದಲೇ ಸ್ಪೂರ್ತಿ ಪಡೆದು ಜಾರ್ಜ್ ವೈಟ್ ೧೯೧೦ರ ಫೆಬ್ರವರಿ ೧೯ರಂದು ಬ್ರಿಸ್ಟಲ್ ನಲ್ಲಿ ಟ್ರಾಮ್ ಫ್ಯಾಕ್ಟರಿಯ ಮಾಡಿನ ಕೆಳಗೇ ವಿಮಾನ ಕಂಪೆನಿಯನ್ನು ಆರಂಭಿಸಿದ-  `ಬ್ರಿಸ್ಟಲ್ ಏರೋಪ್ಲೇನ್ ಕಂಪೆನಿ'. 

ಇಲ್ಲಿಂದ ನಂತರದ ಜಾರ್ಜ್ ನ ಕಥೆ ಆಕಾಶದ ತುಂಬಾ ಹರಡಿದೆ. ಜಗತ್ತಿನ ಕೆಲವು ಅತ್ಯುತ್ತಮ ತಂತ್ರಜ್ಞರನ್ನು ವಿನ್ಯಾಸಕಾರರನ್ನು ತನ್ನ ಕಂಪೆನಿಗೆ ಸೇರಿಸಿಕೊಂಡು ಐದಾರು ತಿಂಗಳಲ್ಲಿ 'ಬಾಕ್ಸ್ ಕೈಟ್' ಎನ್ನುವ ವಿಮಾನ ಸಿದ್ದಗೊಳಿಸಿದ. ೧೯೧೦ರ ಜುಲೈ ೩೦ ರಂದು ಈ ವಿಮಾನ ಬರೇ ೧೫೦ ಅಡಿಗಳ ಮೊದಲ ಹಾರಾಟ ನಡೆಸಿ ಬ್ರಿಟನ್ನನ್ನು ರೋಮಾಂಚನಗೊಳಿಸಿತು. ಅಂದು ಆರಂಭಗೊಂಡ ವಿಮಾನಗಳ ನಂಟು ಬ್ರಿಸ್ಟಲ್ ನನ್ನು ಬಿಡಲೇ ಇಲ್ಲ.... ನೂರು ವರ್ಷ ಕಳೆದರೂ.  ವಿಮಾನಗಳ ವಂಶದಲ್ಲಿ ಬ್ರಿಸ್ಟಲ್ ನಲ್ಲಿ ಹುಟ್ಟಿ ಬೆಳೆದು ಹಣ್ಣಾದ ವಿಮಾನಗಳು ಒಂದೆರಡಲ್ಲ. ಅಂಬೆಗಾಲಿಟ್ಟು ನಡೆದ ಬಾಕ್ಸ್ ಕೈಟ್, ದೈತ್ಯ ವಿಮಾನ ಬ್ರಬಜೋನ್, ಮೊದಲ ಬಾರಿಗೆ ಉತ್ತರ ಅಟ್ಲಾಂಟಿಕ್ ಸಮುದ್ರವನ್ನು ಲಂಘಿಸಿದ ಬ್ರಿಟಾನಿಯ ಮತ್ತೆ ಶಬ್ದವನ್ನು ಹಿಂದಿಕ್ಕುವ 'ಕಾಂಕರ್ಡ್'.. ಇನ್ನೆಷ್ಟೋ ಸೇನಾವಿಮಾನಗಳು.... ಪಟ್ಟಿ ಬೆಳೆಯುತ್ತದೆ. ಈಗಷ್ಟೇ ಗಗನ ಪಟ್ಟವನ್ನು ಏರಿ ಆಳುತ್ತಿರುವ ಜಂಬೋ A380.... ಇನ್ನು ಬರಲಿಕ್ಕಿರುವ ಇವುಗಳ ಮಕ್ಕಳು ಮೊಮ್ಮಕ್ಕಳು. ಎಲ್ಲವೂ ಆರಂಭಗೊಂಡಿದ್ದು ಬ್ರಿಸ್ಟಲ್ ನಲ್ಲಿ ಒಂದು ಮುರುಕು ಮಾಡಿನ ಶೆಡ್ಡಿನಲ್ಲಿ.

'ಬ್ರಿಸ್ಟಲ್ ಏರೋಪ್ಲೇನ್ ಕಂಪೆನಿ' ೧೯೭೦ರಲ್ಲಿ ಯೂರೋಪಿನ ಇತರ ವಿಮಾನ ಕಂಪೆನಿಗಳೊಡನೆ ವಿಲೀನಗೊಂಡು ಏರ್ಬಸ್ ಎನ್ನುವ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ಪುನರ್ಜನ್ಮ ಪಡೆಯಿತು. ಜಾರ್ಜ್  ವೈಟ್ ನ ಟ್ರಾಮ್ ಫ್ಯಾಕ್ಟರಿ, ವಿಮಾನ ಫ್ಯಾಕ್ಟರಿ ಇದ್ದ ಸ್ಥಳದಲ್ಲೇ ಈಗ ಏರ್ಬಸ್ ಕಂಪೆನಿಯ ಬ್ರಿಟನ್ನಿನ ಶಾಖೆ ಇರುವುದು. ಆಕಾಶದಲ್ಲಿ  ಕನಸಿನಂತೆ ತೇಲುತ್ತ  ಸಾಗುವ ನಮ್ಮ ಪೀಳಿಗೆಯ ವಿಮಾನಗಳು  ಬ್ರಿಸ್ಟಲ್ ನ  ಮೇಲೆ ಹಾರುವಾಗ ಅಜ್ಜನ ಮನೆಯ ನೆನಪಾಗಿ ರೋಮಾಂಚನಗೊಂಡು ಮೇಲಿಂದ  ರೆಕ್ಕೆ ಬಡಿಯುವುದೂ ಉಂಟು. ಕೆಳಗೆ ಅಜ್ಜನ ಮನೆಯಲ್ಲಿ ಕೆಲಸ ಮಾಡುವವರು ಗೋಡೆಯ ಮೇಲಿನ ಚಿತ್ರಪಟದಲ್ಲಿ ಜಾರ್ಜ್ ವೈಟ್ ನನ್ನು , ಅವನ ಆಸೆಗಳು ತುಂಬಿ ದಪ್ಪಗಾಗಿದ್ದ ಮೀಸೆಯ ಹುರಿಯನ್ನು ನೋಡುತ್ತಾ ನಿಲ್ಲುವುದುಂಟು.... ಅವು ವಿಮಾನದ ರೆಕ್ಕೆಗಳಂತಹ ಮೀಸೆಗಳು.

ಈ ವರ್ಷದ ಫೆಬ್ರವರಿ ೧೯  ಬ್ರಿಟನ್ನಿನ ವಿಮಾನ ಉದ್ಯಮದ ನೂರನೆಯ ಹುಟ್ಟು ಹಬ್ಬ. ಅಜ್ಜನಮನೆ ತುಂಬ ಸಂಭ್ರಮ, ಮಾತುಗಳು ಮತ್ತು ಸಿಹಿ ನೆನಪುಗಳು. ನೂರು ವರ್ಷಗಳ ಹಿಂದೆ ವಿಮಾನ ಕಟ್ಟಿದವರು, ವ್ಯವಸ್ಥಿತ ಮಾಧ್ಯಮಗಳು ಮತ್ತು ಮಾಹಿತಿ ತಂತ್ರಜ್ಞಾನದ ಸಹಾಯ ಇಲ್ಲದೆ ಹೇಗೆ ಸುದ್ದಿ ಮಾಡಿರಬಹುದು, ಹೇಗೆ ವಿಮಾನಗಳ ಮಾರಾಟ ಮಾಡಿರಬಹುದು ಎನ್ನುವುದೂ ಒಂದು ಕುತೂಹಲವೇ. ೧೯೧೦ರಲ್ಲಿ ವಿಮಾನದ ಮೊದಲ ಹಾರಾಟ ಪರೀಕ್ಷೆ ಮುಗಿದು ಮಾರಾಟಕ್ಕೆ ತಯಾರಾದ ವಿಮಾನದ ಬಗ್ಗೆ ಜಾಹಿರಾತಿನ ಕರಪತ್ರಗಳು ಇಂಗ್ಲೆಂಡಿನ ಖಾಲಿ ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದವಂತೆ; ವಿಮಾನವೇ ನಾಯಕನಾದ ಸಿನೆಮಾ ಜಾಹಿರಾತುಗಳಂತೆ. ೧೯೧೧ರಲ್ಲಿ ಸಿದ್ಧ ಆದ ಇಬ್ಬರನ್ನು ಕೊಂಡೊಯ್ಯಬಲ್ಲ, ಐವತ್ತು  ಅಶ್ವಶಕ್ತಿಯ ಎಂಜಿನ್ ನ ವಿಮಾನದ ಬೆಲೆ ೯೫೦ ಪೌಂಡುಗಳು!

೧೯೧೭ರ ಹೊತ್ತಿಗೆ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಲು ವಿಮಾನ ಫ್ಯಾಕ್ಟರಿಯ ಕೆಲಸಗಾರರು ಅನಿವಾರ್ಯವಾಗಿ ಹೋಗಬೇಕಾಯಿತು. ವಿಮಾನ ತಯಾರಿಗೆ ಎಲ್ಲಿಂದ ಜನ ತರುವುದು ಎನ್ನುವ ಸಮಸ್ಯೆ ಉಂಟಾಯಿತು. ಯುದ್ಧಕ್ಕೆ ನಡೆದ ತಮ್ಮ ಮನೆಯ ಗಂಡಸರ ಜಾಗಕ್ಕೆ ಮನೆಯ ಹೆಂಗಸರು ಬಂದು ವಿಮಾನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಆ ಕಾಲದಲ್ಲಿ  ವಿಮಾನದ ರೆಕ್ಕೆಗಳು  ಲೋಹದಿಂದ ಮಾಡಿದವು ಆಗಿರುತ್ತಿರಲಿಲ್ಲ ಮರದ ಚೌಕಟ್ಟುಗಳ ಹಂದರಕ್ಕೆ ಬಟ್ಟೆಯ ಹಾಸಿನ ಹೊದಿಕೆ ಸುತ್ತುತ್ತಿದ್ದ ಕಾಲ... ದೊಡ್ಡ ಹಕ್ಕಿಯ ರೆಕ್ಕೆಗಿಂತ ಸ್ವಲ್ಪ ಗಟ್ಟಿ ಇರುತ್ತಿದ್ದವೇನೋ ಆ ರೆಕ್ಕೆಗಳು.

ಮೊದಲ ಮಹಾಯುದ್ಧ ಮುಗಿದ ನಂತರವೂ  ಹೆಂಗಸರು ವಿಮಾನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದರು... ಅಂದಿನಂತೆ ಅಲ್ಲದಿದ್ದರೂ ಈಗಲೂ ಬ್ರಿಸ್ಟಲ್ ನ ಏರ್ಬಸ್ ಫ್ಯಾಕ್ಟರಿಯಲ್ಲಿ ಕೆಲವು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ವಿಮಾನ ಉದ್ಯಮ ಕಳೆದ ನೂರು ವರ್ಷಗಳಲ್ಲಿ ಬ್ರಿಸ್ಟಲ್ ನ ಎಲ್ಲ ಮನೆಗಳಿಗೂ  ಒಂದು ಸಂಬಂಧ ಕಲ್ಪಿಸಿಕೊಂಡಿದೆ. ಬ್ರಿಸ್ಟಲ್ ನ ಜನಸಾಮಾನ್ಯರು ಮನೆಯ ಪೈಪು ರಿಪೇರಿ ಮಾಡುವವರು, ಟಾಕ್ಸಿ ಓಡಿಸುವವರು, ಗ್ಯಾರೇಜು ಇಟ್ಟುಕೊಂಡವರು ಎಲ್ಲರೂ ವಿಮಾನ ಎಂದರೆ ಕೆಂಪು ಮುಖವನ್ನು ಇನ್ನಷ್ಟು ಕೆಂಪು ಮಾಡಿಕೊಂಡು ಕಣ್ಣಲ್ಲಿ ಜೀವ ತುಂಬಿಕೊಂಡು ಹಳೆಯ ಅನುಭವಗಳನ್ನು ಹೆಕ್ಕಿ ಹೆಕ್ಕಿ ಇಡುತ್ತಾರೆ. ವಿಮಾನವನ್ನು ನೋಡಿದರೆ ಒಂದು ಚಂದದ ಹಕ್ಕಿಯನ್ನು ನೋಡಿದಷ್ಟೇ ಉಲ್ಲಸಿತರಾಗುತ್ತಾರೆ. ಆಗಷ್ಟೇ ನೀಲಿ ಆಕಾಶದಲ್ಲಿ ಬಿಳಿ ಹೊಗೆಯ ಗೆರೆ ಗೀಚಿ ಮಾಯ ಆದ ವಿಮಾನದ ಹುಟ್ಟಿದ ದಿನ ನಕ್ಷತ್ರ ಘಳಿಗೆಗಳ    ಬಗ್ಗೆ ಉತ್ಸಾಹದಿಂದ ಮಾತಾಡುತ್ತಾರೆ.

ನೂರರ ಸಂಭ್ರಮಕ್ಕೆ ಬ್ರಿಸ್ಟಲ್ ನ ಬೀದಿಗಳಲ್ಲಿ  ನೂರಾರು ಮಾತುಗಳು, ಕಥೆಗಳು, ನೆನಪುಗಳು ನಡೆದಾಡುತ್ತಿವೆ.

ಪುಟದ ಮೊದಲಿಗೆ
 
Votes:  4     Rating: 4    
 
 
ಸಂಬಂಧಿಸಿದ ಲೇಖನಗಳು
  ವೈದ್ಯರನ್ನು ಉಳಿಸಲು ಮಿಂಚುಳ್ಳಿ ಮಾಡಿರುವ ಮೊರೆ
  ಮುರುಗೇಶ ಮತ್ತು ಕಿವುಡು ಕಾಮಧೇನು:ಗುರು ಕುಲಕರ್ಣಿ ಬರಹ
  ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು
  ಚೆನ್ನಾಗಿದ್ಯಾ ಟೋನಿ? ಚೆನ್ನಾಗಿಲ್ವಾ ಟೋನಿ?:ವಿಕಾಸ್ ಬರಹ
  ನಳಿನಿ ಮಯ್ಯ ಬರೆದ ಅಪೂರ್ವ ದಾಂಪತ್ಯ ಜೀವನ ಚಿತ್ರಗಳು
  ಪುಟಗಳಿಗೆ ಕಿಟಕಿಗಳಿಲ್ಲ:ಚರಿತಾ ಬರೆದ ಮೌನಲಹರಿ
  ನರಸಿಂಹ ರಾಯಚೂರ್ ವಿರಚಿತ ವಾರಾಂತ್ಯ ರಾಜಕೀಯ ಕಾಲಕ್ಷೇಪ
  ಜಲಪ್ರಳಯ: ನಾವು ಕಲಿಯಬೇಕಾದ ಪಾಠಗಳು:ಡಿ.ಎಸ್.ನಾಗಭೂಷಣ ಬರಹ
  ಚಿತ್ತಾಲರ ಶಿಕಾರಿ ಓದಿ ಸಚಿನ್ ಕೊಳಿಗೆ ಬರೆದದ್ದು
  ಸೀನಿಯರ್ ಬಹದ್ದೂರ ದೇಸಾಯಿ ಬರೆಯುವ ಪುಗಸಟ್ಟೆ ಸಲಹೆಗಳು
  ಪ್ರಶಸ್ತಿ ಪಿ.ಸಾಗರ ವಿರಚಿತ ಪೀಜಿ ಪುರಾಣವು
  ಜೇನಲ್ಲಿ ಮೂನಿಲ್ಲದ ಕಾಲ:ಮಿಂಚುಳ್ಳಿ ಸ್ವಗತ
  ಕೇದಾರದ ಹರೀಶ ಬದುಕಿರಲಿ ಶಿವನೇ:ರಾಜೀವ ಮೊರೆ
  ಅಪ್ಪ ಮತ್ತು ಟೆಲಿಗ್ರಾಂ:ನವೀನ ಹಣಮಂತಗಡ ಬರಹ
  ನಿನ್ನೆ ಅಪ್ಪಂದಿರ ದಿನ ಇಂದು ಪ್ರಶಸ್ತಿ ಮಾಡುವ ಅಪ್ಪನ ನಮನ
  ಗಡಸಿನ ಅಪ್ಪ, ಮಮತೆಯ ಅಪ್ಪ:ಸುಧೀಂದ್ರ ಬುಧ್ಯ ಬರಹ
  ಧಾರ್ಮಿಕ ಅನುಭವವೆಂದರೇನು? ಯು.ಜಿ. ಕೃಷ್ಣಮೂರ್ತಿ ಚಿಂತನೆ
  ಕಾಮರೂಪಿಯ ಅನಿಸಿಕೆಗಳೆಂಬ ಬ್ಲಾಗು
  ಸೂರಿಯ ಕಡ್ಡಿಪುಡಿಯ ಕುರಿತು ದತ್ತರಾಜ್ ವ್ಯಾಖ್ಯಾನ
  ಸೀನಿಯರ್ ದೇಸಾಯಿ ಬರೆಯುವ ಲಘು ಕಾಮೆಂಟರಿ ಶುರುವಾಯಿತು
  ಡೈರೆಕ್ಟರ್ಸ್ ಸ್ಪೆಷಲ್ ಕುರಿತು ಅಜೇಯ ಸಿಂಹಾವಲೋಕನ
  ನೆನಪುಗಳ ನೆರಳುಗಳನ್ನು ಅರಸಿ:ಕಾಮರೂಪಿ ಬ್ಲಾಗಿನಿಂದ
  ಅಮೇರಿಕಾದಲ್ಲಿರುವ ನಾಗ ಐತಾಳ ವಿರಚಿತ ಶ್ವಾನ ಪಾರಾಯಣ
  ಶ್ಯಾಮಲಾ ಗುರುಪ್ರಸಾದ ಬರೆದ ಫ್ರೀದಾ ಕಾಹ್ಲೋ ಕಲಾ ಕಥನ
  ಮಲೆಗಳಲ್ಲಿ ಮದುಮಗಳು ಎಂಬ ಭ್ರಮ ನಿರಸನ:ಅಶೋಕವರ್ಧನ ಬ್ಲಾಗ್
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ