ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಖೇಣಿ ಪುರಾಣ 9 : 'ಮೂಸಿ'ಯೂ ಖೇಣಿಯೂ ಚರಿತ್ರೆಯೂ    
ಚನ್ಬಸವ, ಬೀದರ್
ಸೋಮವಾರ, 22 ಮಾರ್ಚ್ 2010 (07:57 IST)
ಮಹಾರುದ್ರಪ್ಪ ಖೇಣಿ

ಕೃಷ್ಣಾ ನದಿಯ ಉಪನದಿ 'ಮೂಸಿ'. 'ಹೈದರಾಬಾದ್' ಎಂದು ಈಗ ಕರೆಯಲಾಗುವ 'ಭಾಗ್ಯನಗರ'ವು ನಿರ್ಮಾಣವಾದದ್ದು ಈ ನದಿಯ ದಡದ ಮೇಲೆಯೇ. ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬರುವ ವಿಕಾರಾಬಾದ್ ಸಮೀಪದ ಅನಂತಗಿರಿ ಘಟ್ಟಗಳಲ್ಲಿ ಹುಟ್ಟುವ 'ಮೂಸಿ'ಯನ್ನು 'ಮುಚುಕುಂದಾ'ನದಿ ಎಂದೂ ಕರೆಯಲಾಗುತ್ತದೆ. ಹೈದರಾಬಾದ್ ನಗರದ ಮಧ್ಯೆ ಹಾದು ಹೋಗುವ ಈ ನದಿಯು ಹಳೆ ಮತ್ತು ಹೊಸನಗರಗಳನ್ನು ವಿಭಾಗಿಸುತ್ತದೆ. ಈ ನದಿಗೆ ಅಡ್ಡಲಾಗಿಯೇ 'ಹಿಮಾಯತ್ ಸಾಗರ' ಮತ್ತು 'ಹುಸೇನ್ ಸಾಗರ' ಎಂಬ ಎರಡು ಜಲಾಶಯಗಳನ್ನು ಕಟ್ಟಲಾಗಿದೆ. ಹೈದರಾಬಾದ್ ನಗರದ ಬಾಯಾರಿಕೆಯನ್ನು ಈ ಸಾಗರಗಳು ಹಿಂಗಿಸುತ್ತಿವೆ. ನಂತರ ನಲಗೊಂಡ ಜಿಲ್ಲೆಯ ವಜೀರಾಬಾದ್ ಬಳಿ ಮೂಸಿಯು ಕೃಷ್ಣೆಯನ್ನು ಸೇರುತ್ತದೆ.

ನದಿಗಳ ದಂಡೆಗಳಲ್ಲಿ ನಾಗರಿಕತೆ ಹುಟ್ಟಿಕೊಳ್ಳುವುದು ಹೊಸತೇನಲ್ಲ. ಜೀವದಾಯಿನಿ ನೀರು ಇರುವೆಡೆಯಲ್ಲೆಲ್ಲ ಜೀವರಾಶಿ ಇದ್ದೇ ಇರುತ್ತದೆ. 'ಮೂಸಿ' ಕೂಡ ಅದಕ್ಕೆ ಹೊರತೇನಲ್ಲ. ಹಾಗೆ ನೋಡಿದರೆ 'ಮೂಸಿ' ಅಂತಹ ದೊಡ್ಡ ನದಿಯೇನಲ್ಲ. ತೊರೆಯಷ್ಟು ಸಣ್ಣದೂ ಅಲ್ಲ. ಇಂತಹ 'ಮೂಸಿ'ಗೂ ಚರಿತ್ರೆಗೂ ನಂಟಿದೆ. ಎಲ್ಲ ನದಿಗಳಿಗೂ ಇರುವ ಹಾಗೆ.

ಬೀದರ್ ನಲ್ಲಿದ್ದ ಬಹಮನಿ ಸಾಮ್ರಾಜ್ಯ ಕುಸಿದ ನಂತರ ಗೋಲ್ಕಂಡವನ್ನು ರಾಜಧಾನಿ ಆಗಿಸಿಕೊಂಡು ಕುತುಬ್ಷಾಹಿ ಅರಸು ಮನೆತನ ಆಡಳಿತ ನಡೆಸಲು ಆರಂಭಿಸಿತು. ಕುತುಬ್ಷಾಹಿ ಅರಸು ಮನೆತನದ ನಾಲ್ಕನೇ ಅರಸ ಕುಲಿ ಕುತುಬ್ಶಹಾನದೊಂದು ಪ್ರೇಮಕಥೆ. ಮೂಸಿ ನದಿಯ ದಕ್ಷಿಣ ದಡದ ಮೇಲೆ ಬರುವ ಕುಗ್ರಾಮದ ಚಿಚಲಮ್ ಗ್ರಾಮದ ಯುವತಿಯನ್ನು ಕಂಡು ಬೆರಗಾದ. ಆಸ್ಥಾನ ನರ್ತಕಿಯಾಗಿದ್ದ ಭಾಗಮತಿಯನ್ನು ಪ್ರೀತಿಸಿ, ಪ್ರೇಮಿಸಿದ. ಒಮ್ಮೆ ಅರಸ ಭಾಗಮತಿಯನ್ನು ಭೇಟಿ ಮಾಡಲು ಹೊರಟಾಗ ತುಂಬಿ ಹರಿಯುತ್ತಿದ್ದ ಮೂಸಿಯು ಪ್ರೇಮಿಗಳ ಭೇಟಿಗೆ ಅಡ್ಡಿಯುಂಟು ಮಾಡಿತು. ಪ್ರೇಮಿಯು ಅರಸನಾದರೇನಾಯಿತು? ಪ್ರೇಯಸಿಯನ್ನು ಕಾಣುವ ಉತ್ಕಟ ಬಯಕೆಯ ಜೊತೆಗೆ ಹರಯದ ಉನ್ಮಾದದಲ್ಲಿ ಇದ್ದ ರಾಜಕುಮಾರ ನೆರೆ ಬಂದು ಎರಡೂ ದಡ ಸೋಸಿ ಹರಿಯುತ್ತಿದ್ದ ನದಿಯನ್ನೂ ಲೆಕ್ಕಿಸದೇ ಧುಮುಕಿದ, ದಡ ಸೇರಿದ. ತನ್ನ ತಂದೆಯ ನಂತರ ಸಿಂಹಾಸನದ ಮೇಲೆ ಕೂರುವ ಸಂದರ್ಭದಲ್ಲಿ 'ಪ್ರೇಯಸಿ'ಯಾಗಿದ್ದ ಭಾಗಮತಿಯನ್ನು 'ಮಹಾರಾಣಿ' ಆಗಿಸಿ ಪಕ್ಕದಲ್ಲಿ ಕೂರಿಸಿಕೊಂಡ. ಮದುವೆಯಾದ ಮೇಲೆ ಗೋಲ್ಕೊಂಡದ ಕೋಟೆಯೊಳಗಿನ ನಗರ ಮತ್ತು ಅರಮನೆ ಸಣ್ಣದೆನಿಸತೊಡಗಿತು. ರಾಜಧಾನಿಯನ್ನು ವರ್ಗಾಯಿಸಲು ನಿರ್ಧರಿಸಿದ ಅರಸನಿಗೆ ಹೊಳೆದದ್ದು 'ಮೂಸಿ' ನದಿಯ ದಡ. ಹೀಗೆ 'ಭಾಗ್ಯನಗರ' ಹುಟ್ಟಿಕೊಂಡಿತು. ನಂತರ ಅದು ಹೈದರಾಬಾದ್ ಆದದ್ದು ಬೇರೆಯದೇ ಕಥೆ. ಇಂತಹ ಮೂಸಿ ತುಂಬಿ ಬಂದಾಗಲೆಲ್ಲ ಹೈದರಾಬಾದ್ ನಗರವನ್ನು ಕಂಗೆಡಿಸುತ್ತಿದ್ದಳು. ಜನರ ಜೀವ, ಆಸ್ತಿ- ಪಾಸ್ತಿ ತನ್ನ ಒಡಲೊಳಗೆ ಸೇರಿಸಿಕೊಳ್ಳುತ್ತಿದ್ದಳು. 20ನೇ ಶತಮಾನದ ವರೆಗೂ 'ಮೂಸಿ' ಕಣ್ಣೀರು ಸುರಿಸುವ ಕಾರಣಕ್ಕಾಗಿಯೇ ಜನಪ್ರಿಯಳಾಗಿದ್ದಳು. 1908ರಲ್ಲಿ ಹೈದರಾಬಾದ್ ನಗರವು ಕಂಡು ಕೇಳರಿಯದ ಭಾರಿ ಪ್ರಮಾಣದ ಪ್ರವಾಹ ಬಂದು ಅಪ್ಪಳಿಸಿತು. ಸೆಪ್ಟೆಂಬರ್ 28ರ ಒಂದೇ ರಾತ್ರಿ 17 ಸೆಂ.ಮೀ. ಸುರಿದ ಮಳೆ ಅಫಜಲ್ ಗಂಜ್ ಪ್ರದೇಶದವರೆಗೂ ಮೂಸಿಯ ಪ್ರವಾಹ ಉಕ್ಕೇರುವಂತೆ ಮಾಡಿತು. 'ಅಫಜಲ್ಗಂಜ್' ಎಂದರೆ ಈಗಿನ ಕೇಂದ್ರ ಬಸ್ ನಿಲ್ದಾಣ, ಸಾಲಾರ್ಜಂಗ್ ಮ್ಯೂಸಿಯಂ, ಸೆಂಟ್ರಲ್ ಲೈಬ್ರರಿಗಳು ಇರುವ ಪ್ರದೇಶ. ಆಗ ನಗರದ ಹೊರವಲಯದ ಗಂಜ್ ಪ್ರದೇಶವಾಗಿತ್ತು. ನೆಲಮಟ್ಟದಿಂದ 11 ಅಡಿಗಳಷ್ಟು ಎತ್ತರದ ವರೆಗೆ ನೀರು ಬಂದು ಇಡೀ ನಗರದ ಬದುಕು ಅಸ್ತವ್ಯಸ್ತಗೊಂಡಿತ್ತು. ನೂರಾರು ಜೀವ ಬಲಿ ತೆಗೆದುಕೊಂಡಿತು. ಈ ಪ್ರವಾಹವೇ ಹೈದರಾಬಾದ್ ನಗರದ ನವೀಕರಣದ ನೀಲನಕಾಶೆಗಳಿಗೆ ಯೋಜನೆ ಕಲ್ಪಿಸಿತು. ಖೇಣಿಯ ಮನೆಯ ದೃಶ್ಯ

ಅದೆಲ್ಲ ಸರಿ, ಅದಕ್ಕೂ ಖೇಣಿ ಪುರಾಣಕ್ಕೂ ಏನು ಸಂಬಂಧ? ಎಂದು ನಿಮಗೆ ಅನ್ನಿಸಿರಬಹುದು. ಪುರಾಣದಲ್ಲಿ ಏನೇನಲ್ಲ ಕಥೆ- ಉಪಕಥೆಗಳು ಬರುತ್ತವೆ. ಅವು ಇಲ್ಲದಿದ್ದರೆ ಅದನ್ನು ಪುರಾಣ ಎಂದು ಕರೆಯುವುದಾದರೂ ಹೇಗೆ? ಅಲ್ಲವೇ? ಅಂದಹಾಗೆ 'ಖೇಣಿ' ಮನೆತನಕ್ಕೂ ಈ ಮೂಸಿ ಪ್ರವಾಹಕ್ಕೂ ಸಂಬಂಧ ಇದೆ.

'ಮೂಸಿ'ಯಲ್ಲಿ ಪ್ರವಾಹ ಬಂದಾಗ ಏನು ಮಾಡಬೇಕು? ಎಂದು ಜನ ಆತಂಕಕ್ಕೆ ಒಳಗಾಗಿದ್ದರು. ಉಕ್ಕಿ ಹರಿಯುತ್ತಿದ್ದ ನದಿ ತನ್ನ ತೋಳುಗಳನ್ನು ಚಾಚುತ್ತಲೇ ಮುನ್ನಡೆಯುತ್ತಿದ್ದಳು. ಅವಳ ಆರ್ಭಟ ತಡೆಯುವುದಾದರೂ ಹೇಗೆ ಎಂಬ ಯೋಚನೆ. ಆಗ ಯುವರಾಜನಾಗಿದ್ದ ಉಸ್ಮಾನ್ ತಾನು 'ಮೂಸಿ'ಗೆ ಹಿಂದೆ ಸರಿಯುವಂತೆ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ. ಸಾಲದೆಂಬಂತೆ ತನ್ನ ಸಹಚರ ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿದ್ದ ನದಿಯೆಡೆಗೆ ನಡೆದೇ ಬಿಟ್ಟ. ಸ್ವಲ್ಪ ದೂರ ಸಾಗಿದ ಯುವರಾಜ ಮನೆಯೊಂದರ ಕಟ್ಟೆಯ ಮೇಲೆ ನಿಂತು ಪ್ರಾರ್ಥನೆ ಸಲ್ಲಿಸಿದ. ಅಚ್ಚರಿಯೆಂಬಂತೆ ನದಿಯ ಪ್ರವಾಸ, ಭರಾಟೆ ಕಡಿಮೆಯಾಗಲು ತೊಡಗಿತು. ಯುವರಾಜ್ ಉಸ್ಮಾನ್ ನಿಂತು ಪ್ರಾರ್ಥಿಸಿದ ಮನೆಯ ಕಟ್ಟೆ ಖೇಣಿ ಮಹಾರುದ್ರಪ್ಪ ಅವರಿಗೆ ಸೇರಿದ್ದಾಗಿತ್ತು.

ಸದ್ಯ ಲಭ್ಯ ಇರುವ ಮಾಹಿತಿಗಳ ಪ್ರಕಾರ ಮಹಾರುದ್ರಪ್ಪ ಖೇಣಿ ಅವರೇ 'ಖೇಣಿ' ಮನೆತನದ ಜನಪ್ರಿಯ ಹೆಸರು. ಮಹಾರುದ್ರಪ್ಪ ಅವರಿಗೂ ಯುವರಾಜ ಉಸ್ಮಾನ್ ಗೂ ದೋಸ್ತಿ ಬೆಳೆಯಿತು. ಉಸ್ಮಾನ್ಪಾಷಾ ಅರಸನಾದ ಮೇಲೆಯೂ ಮಹಾರುದ್ರಪ್ಪ ಅವರ ಜೊತೆಗಿನ ಒಡನಾಟ ಮುಂದುವರೆಯಿತು. ವ್ಯಾಪಾರ -ವಹಿವಾಟು ನಡೆಸುತ್ತಿದ್ದ ಮಹಾರುದ್ರಪ್ಪ ಅವರು ಹೈದರಾಬಾದ್ ಪ್ರಾಂತ್ಯದ ಅರಸನಾಗಿದ್ದ ಉಸ್ಮಾನ್ ಪಾಷಾನಿಗೆ ಆಪ್ತರಾಗಿದ್ದರು. 'ನಿಜಾಂ' ಎಂದು ಕರೆಯಲಾಗುತ್ತಿದ್ದ ಉಸ್ಮಾನ್ ಪಾಷನಿಗೇ ಸಾಲ ಕೊಡುತ್ತಿದ್ದರು ಎಂದು ಪ್ರತೀತಿ ಇದೆ. ಹೈದರಾಬಾದ್ ನಲ್ಲಿ ಖೇಣಿ ಅವರ ಪರಿವಾರಕ್ಕೆ ಸೇರಿದ ಅರಮನೆಯಂತಹ ಮನೆಗಳಿದ್ದವು. ವ್ಯವಹಾರ ನಡೆಸುವ ಅಂಗಡಿಗಳೂ ಇದ್ದವು.ಖೇಣಿ ಮನೆಯ ಮತ್ತೊಂದು ಚಿತ್ರ

ಆಗಿನ ಅರಸ ಉಸ್ಮಾನ್ ಪಾಷಾನ ಆಸ್ಥಾನದಲ್ಲಿ ಮಹಾರುದ್ರಪ್ಪ ಖೇಣಿ ಅವರು ಕೂಡಲು ಪ್ರತ್ಯೇಕ ಆಸನದ ವ್ಯವಸ್ಥೆಯೇ ಇತ್ತಂತೆ. ಉಸ್ಮಾನ್ ಪಾಷಾನ ಕುದುರೆಗಳಿಗೆ ತಿನ್ನಿಸಲಾಗುತ್ತಿದ್ದ ಕಡಲೆಯನ್ನು ರಂಜೋಳದಿಂದ ಕಳುಹಿಸಲಾಗುತ್ತಿತ್ತು ಎಂದು ಊರಿನ ಜನ ಸ್ಮರಿಸುತ್ತಾರೆ.
ಉಸ್ಮಾನ್ ಪಾಷಾನನ್ನು ಕೂಡ ದೈವತ್ವಕ್ಕೆ ಏರಿಸಿ ಕಥೆ ಹೇಳುತ್ತಾರೆ. ಉಸ್ಮಾನ್ ಪಾಷಾನ ಹೆಸರು ಹೇಳಿದರೆ ಹರಿದು ಹೋಗುತ್ತಿದ್ದ ಹಾವುಗಳು ತಟ್ಟನೆ ನಿಲ್ಲುತ್ತಿದ್ದವಂತೆ. ಹಾವು ಕಚ್ಚಿದವರಿಗೆ ಉಸ್ಮಾನ್ ಪಾಷಾನ ಹೆಸರು ಹೇಳಿ ನೀರು ಕುಡಿಸಿದರೆ ವಿಷ ಮೈಯಲ್ಲಿ ಹರಡುತ್ತಿರಲಿಲ್ಲವಂತೆ. ಕಿರಿಕಿರಿ ಮಾಡುವ, ಅಳುವ ಮಕ್ಕಳಿಗೆ ಉಸ್ಮಾನ್ ಪಾಷಾನ ಹೆಸರಿನಲ್ಲಿ ತಾಯಿತ ಕಟ್ಟಲಾಗುತ್ತಂತೆ. 'ಸಂತ' ಎಂಬಂತೆಯೇ ಚಿತ್ರಿತನಾಗುವ ಉಸ್ಮಾನ್ ಪಾಷಾ ಮನೆಯಿಂದ ಹೊರಟ ಮೇಲೆ ತಲೆ ಎತ್ತಿ ನೋಡುವಂತಹ ಬೃಹತ್ ಕಟ್ಟಡ ಇತ್ತಂತೆ. ಹಾಗೆ ತಲೆ ಎತ್ತಿ ನೋಡಿದಾಗ ತಲೆಯ ಮೇಲಿನ ಕಿರೀಟ, ಟೋಪಿ ಕೆಳಗೆ ಬೀಳುವಷ್ಟು ಎತ್ತರ ಕಟ್ಟಡದ ಒಡೆಯ ಮಹಾರುದ್ರಪ್ಪ ಖೇಣಿ ಆಗಿದ್ದರು ಎಂದು ಹೇಳಲಾಗುತ್ತದೆ.

(ಮುಂದುವರೆಯುತ್ತದೆ)

ಪುಟದ ಮೊದಲಿಗೆ
 
Votes:  2     Rating: 3    
 
 
ಸಂಬಂಧಿಸಿದ ಲೇಖನಗಳು
  ತರೀಕೆರೆ ಹೊಸ ತಲೆಮಾರಿನ ಲೇಖಕರು: ವಿಕ್ರಮ ವಿಸಾಜಿ
  ಭಾಗವತ ೨೮:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ
  ಗೂಬೆ ಹಿಡಿದ ಹುಡುಗ, ಬೆಕ್ಕು ತಂದ ಹುಡುಗಿ
  ಮೂರ್ತಿ ಚರಿತೆ: ಕನ್ನಡದ ನೆಲದಲ್ಲಿ
  ಮುಂಗಾರು ಕೊಂಡಿ ಕಳಚಿಕೊಂಡಿತು
  ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ
  ಭಾಗವತ೨೭:ಮೋಹವ ಹರಿಯುವ ಭಗವಂತ
  ಮೂರ್ತಿ ಚರಿತೆ: ಕ್ಷಣದಲ್ಲೇ ಪರಿಹಾರ!
  ವಡ್ಡರ್ಸೆ ೧೩: ‘ಚೆಲುವ ಕನ್ನಡನಾಡು' ಚಿಂದಿ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ಶೈಲಜ ಹಿರೇಮಠ
  ಭಾಗವತ ೨೫:ದಶರಥರಾಮನೂ, ಕೊಡಲಿರಾಮನೂ
  ಜೋಯಪ್ಪ ಸರಣಿ: ಕೊರೆದ ಚಿಪ್ಪು ಹಂದಿ
  ಮೂರ್ತಿ ಚರಿತೆ: ಸುರೈಯ್ಯಾ ಇಂದ ಕರಿಶ್ಮಾವರೆಗೆ
  ವಡ್ಡರ್ಸೆ ಸರಣಿ:ಮುಂಗಾರಿಗೆ ಕಾಸಿನ ಕಷ್ಟಗಳು
  ಭಾಗವತ:ತಿರುಪೆ ಎತ್ತಿದ ಭಗವಂತ
  ವಿ.ಕೆ.ಮೂರ್ತಿ ಚರಿತೆ: ಮದರಾಸಿನ ನೆನಪುಗಳು
  ಹೊಸ ತಲೆಮಾರಿನ ಲೇಖಕರು: ಬಿ.ಎಂ.ರಶೀದ್
  ವಡ್ಡರ್ಸೆ ಸರಣಿ-೧೧: ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
  ತೋಳ್ಪಾಡಿ ಭಾಗವತ:ನರಮೃಗ ರೂಪದ ಭಗವಂತ
  ಮೂರ್ತಿ ಚರಿತೆ:ಶುರುವಾಯಿತು ಬಣ್ಣದ ಯುಗ
  ಚುನಾವಣೆಗಳನ್ನು ಗೆಲ್ಲದ ಖೇಣಿ ಕುಟುಂಬ
  ತರೀಕೆರೆ ಬರೆಯುವ ಹೊಸ ತಲೆಮಾರಿನ ಲೇಖಕರು: ವಿನಯಾ
  ವಡ್ಡರ್ಸೆ ಸರಣಿ-೧೦: ಬಸವಣ್ಣನ ಬುಲೆಟ್ ಸವಾರಿ
  ಭಾಗವತ:ಹಾಲ್ಗಡಲನ್ನು ಕಡೆದ ಕಥೆ
  ಅವರಿವರ ಕಣ್ಣಲ್ಲಿ ಕಂಡ ಮೂರ್ತಿ:ಉಮಾ ಸರಣಿ
  ಹೊಸ ತಲೆಮಾರಿನ ಲೇಖಕರು: ಮಂಜುನಾಥ್ ಲತಾ
  ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
  ಗುರುವಿನ ಪ್ಯಾಂಟ್ ಕೇಳಿದ ಶಿಷ್ಯ!
  ಭಾಗವತ:ಭಗವಂತ ಮೀನಾದ ಕಥೆ
  ವಿ.ಕೆ.ಮೂರ್ತಿ ಚರಿತೆ: `ಗುರುದತ್ ಗಯಾ' ಎಂದ ಗುರುಸ್ವಾಮಿ
  ಖೇಣಿ ಪುರಾಣ 21: ರಾಜಕೀಯಕ್ಕೆ ಖೇಣಿ ಕುಟುಂಬ
  ತರೀಕೆರೆ ಹೊಸ ತಲೆಮಾರಿನ ಲೇಖಕರು:ಪೀರ್ ಬಾಶಾ
  ವಡ್ಡರ್ಸೆ ೮:ರಾಮಪ್ಪಣ್ಣನವರ ಮನೆಯ ಕೋಲ
  ಭಾಗವತ ೨೧:ಜಡಭರತನಾದ ಭರತಚಕ್ರವರ್ತಿ
  ವಿ.ಕೆ.ಮೂರ್ತಿ ಚರಿತೆ:ಎಂದೆಂದೂ ಕಾಡುವ ಛೋಟಿ ಬಹೂ
  ಖೇಣಿ ಪುರಾಣ:ಅಲ್ದೆ ಗುಂಡಪ್ಪ 'ಚೋರ ಚರಿತೆ'
  ವಡ್ಡರ್ಸೆ ಸರಣಿ-೭: ಎಡವಟ್ಟಾದ ಯಂತ್ರದ ಥಿಯರಿ
  ಹೊಸ ತಲೆಮಾರಿನ ಲೇಖಕರು: ಚಿದಾನಂದ ಸಾಲಿ
  ಭಾಗವತ:ಕಣ್ಣು ಕೊಟ್ಟು ನೋಟವನ್ನೂ ಕೊಟ್ಟ ಭಗವಂತ
  ಮೂರ್ತಿಚರಿತೆ:ಗ್ರೀಸ್,ಗ್ರೆಗರಿಪೆಕ್,ಗನ್ಸ್ಆಫ್ ನ್ಯಾವರೋನ್.
  ಕಹಿಯೋ ಸಿಹಿಯೋ ನೆನೆದರೆ ಜುಂ ಅನ್ನುವ ಪ್ರಸಂಗ
  ವಡ್ಡರ್ಸೆ ೬: ಕರಾವಳಿಯಲ್ಲಿ ಮುಂಗಾರು ತಲ್ಲಣ
  ಹೊಸ ತಲೆಮಾರಿನ ಲೇಖಕರು: ತಾರಿಣಿ ಶುಭದಾಯಿನಿ
  ಭಾಗವತ ೧೯:ಅಜಾಮಿಳನ ಮಗ ನಾರಾಯಣ
  ವಿ.ಕೆ.ಮೂರ್ತಿ ಚರಿತೆ:`..ಫೂಲ್' ಒಂದು ಅಪೂರ್ವ ಕೃತಿ
  ಖೇಣಿ ಪುರಾಣ- 19: ಕಲ್ಯಾಣದ ಆರಂಭ; ಮಂಟೇಸ್ವಾಮಿಯ ಅಂತ್ಯ
  ತರೀಕೆರೆ ಬರೆವ ಹೊಸಲೇಖಕರು:ಮಹಾಂತೇಶ ನವಲಕಲ್
  ವಡ್ಡರ್ಸೆ ಸರಣಿ-೫: ಬೆಂಬಲಕ್ಕೆ ಬಂದ ಇಂದೂಧರ
  ಭುವಿಯ ತಳದಲ್ಲಿರುವುದು ಹರಿವನೀರೂ,ಕುದಿವ ಲಾವಾರಸವೂ
  ವಿ.ಕೆ.ಮೂರ್ತಿ ಚರಿತೆ:ಬಿಸಿಲು ಕೋಲಿನ ಮಾಯೆ
  ಖೇಣಿ ಪುರಾಣ-18:ರೇಷ್ಮೆ ಕುಟುಂಬದ ಚೇತನ ಕಲ್ಲಪ್ಪ
  ಚೆನ್ನಿ ಕಥಾಕಾಲ:ಟೋನಿ ಮಾರಿಸನ್ ಬರೆದ ಗುಲಾಮ ಕಥನ
  ಚೆನ್ನಿ ಕಥಾಕಾಲ:ಅರೆ ಇರುಳಿನ ಮಕ್ಕಳು
  ವಡ್ಡರ್ಸೆ ಸರಣಿ-೪: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ
  ಹೊಸ ತಲೆಮಾರಿನ ಲೇಖಕರು- ಸರ್ಜಾಶಂಕರ್ ಹರಳಿಮಠ