ಸೆಪ್ಟೆಂಬರ್ ೧೬, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಕತೆ `ಮ್ಯೂಸಿಕ್ vs ಪೋರ್ನೋ'    
ಸಿಡ್ನಿ ಶ್ರೀನಿವಾಸ್
ಶನಿವಾರ, 9 ಏಪ್ರಿಲ್ 2011 (09:02 IST)

ನಾನು ಕ್ರಿಸ್, ಇಲಾಖೆಯ ಮುಖ್ಯಸ್ಥನೆಂಬ ಅಭಿದಾನ ಎನಗೆ, ವಿಶ್ವವಿದ್ಯಾಲಯದ ಬೈಯೋ ಕೆಮಿಸ್ಟ್ರಿ ವಿಭಾಗಕ್ಕೆ. ನನ್ನ ಕೆಳಗೆ ಮುನ್ನೂರು ವಿದ್ಯಾರ್ಥಿಗಳು, ಕೆಲವರು ಕೋರ್ಸ್ ವರ್ಕ್ ಮಾಡಿ ಡಿಗ್ರಿ ಗಳಿಸಿದರೆ, ಕೆಲವರು ಸಂಶೋಧನೆಯಲ್ಲಿ ತೊಡಗಿದವರು. ಇವರು ಪಿಹೆಚ್‌ಡಿಗಾಗಿ ಶ್ರಮಿಸುವವರು. ಅಲ್ಲದೆ ನಾನೂ ಸೇರಿ, ಹದಿನೈದು ಮಂದಿ ಉಪಾಧ್ಯಾಯರು, ಇವರಲ್ಲಿ ಕೆಲವರು ಪ್ರೊಫ಼ೆಸರುಗಳು, ಕೆಲವರು ಉಪನ್ಯಾಸಕರು. ಯಾರಿಗೂ ಬೇಡದ ಹೆಡ್ ಹುದ್ದೆ ನನ್ನದು, ಎರಡು ವರ್ಷಗಳ ಅವಧಿಗಾಗಿ.

ಸುಸೂತ್ರವಾಗಿಯೆ ನಡೆಯುವ ಕೆಲಸ. ಆದರೆ ಆಗಾಗ್ಗೆ ತಕರಾರುಗಳು ಬರುತ್ತಲೇ ಇರುತ್ತವೆ. ಮೊನ್ನೆ ನನ್ನ ಕಂಪ್ಯೂಟರ್ ಮುಂದೆ ಕುಳಿತು ನನ್ನ ಸಂಶೋಧನೆಗೆ ಸಂಬಂಧ ಪಟ್ಟ ಪೇಪರುಗಳನ್ನು ಇಂಟರ‍್ನೆಟ್‌ನಲ್ಲಿ ನೋಡುತ್ತಿದ್ದೆ. ಒಂದು ಈ ಮೈಲ್ ಬಂದು ಬಿತ್ತು. ನನಗೋ ಈಮೈಲ್ ಎಂದರೆ ಬಹಳ ಕುತೂಹಲ, ಯಾರು ಕಳಿಸಿದ್ದಾರೋ ಏನೋ! ಏನು ಸಮಾಚಾರವೋ! ತಕ್ಷಣ ತೆರೆದು ನೋಡಿದೆ. ನಮ್ಮ ಐಟಿ ಡೈರೆಕ್ಟರ್ ಕಳಿಸಿದ್ದ,

"ಹೆಡ್, ನಿಮ್ಮ ಗಮನಕ್ಕೆ. ವಾಲ್ಟರ್ ವಾಂಗ್ ಎಂಬ ಪದವೀಧರ ವಿದ್ಯಾರ್ಥಿ ಕಳೆದ ವಾರ ವಿಪರೀತ ಸಂಗೀತದ ಫ಼ೈಲುಗಳನ್ನು ಡೌನ್‌ಲೋಡ್ ಮಾಡಿದ್ದಾನೆ, ಹದಿನೈದು ಗಿಗಾ ಬೈಟುಗಳು! ಇದನ್ನು ಹೀಗೆಯೇ ಬಿಡುವಂತಿಲ್ಲ."

ಮಾಡುತ್ತಿದ್ದ ಕೆಲಸವನ್ನು ಬದಿಗಿಟ್ಟು ನನ್ನ ಸೆಕ್ರೆಟರಿ ಹೆಲೆನಳನ್ನು ಕರೆದು "ಯಾರು ಈ ವಾಲ್ಟರ್ ವಾಂಗ್ ನೋಡಿ ಹೇಳು" ಎಂದೆ. ಐದು ನಿಮಿಷದಲ್ಲಿ ಅವನ ಪೂರ್ವಾಪರವೆಲ್ಲಾ ನನ್ನ ಟೇಬಲ್ ಮೇಲಿತ್ತು. ಅವನು ಯಾಂಗ್ ಲೀ ಎಂಬ ಪ್ರೊಫ಼ೆಸರ್ ಬಳಿ ಕೆಲಸ ಮಾಡುವ ವಿದ್ಯಾರ್ಥಿ, ಈಗ ತಾನೇ ಚೀನಾದಿಂದ ಬಂದಿದ್ದ. ಏನು ಮಾಡುವುದೋ ಹೊಳೆಯಲಿಲ್ಲ. ಹೇಗಿದ್ದರೂ ಮುಂದಿನ ವಾರ ಸ್ಟಾಫ಼್ ಮೀಟಿಂಗ್ ನಡೆಯುವುದಿತ್ತು. ಆಲ್ಲಿ ಈ ವಿಷಯವನ್ನು ತಂದು ಚರ್ಚಿಸಬಹುದು ಎನಿಸಿತು. ಕೂಡಲೆ ಇಂಟರ್‌ನೆಟ್  "ದುರುಪಯೋಗ"  ಎಂಬ ಐಟಮ್ ಒಂದನ್ನು ಮೀಟಿಂಗ್ ಅಜೆಂಡಾದಲ್ಲಿ ಸೇರಿಸುವಂತೆ ಹೆಲೆನ್‌ಗೆ ಹೇಳಿದೆ.

ಏನೋ ಹುಡುಗ ಕೆಲಸದ ಮಧ್ಯೆ ಸಂಗೀತ ಕೇಳಿಕೊಂಡ. ಇದನ್ನು ಸೀರಿಯಸ್ಸಾಗಿ ತೊಗೋಬೇಕೇ, ಬೇಡವೆ? ಹೊಳೆಯಲಿಲ್ಲ. ಮೂರುದಿನಗಳ ನಂತರ ಮತ್ತೊಂದು ಈ ಮೈಲ್ ನನಗೆ, ಅದೇ ಐಟಿ ಡೈರೆಕ್ಟರ್‌ನಿಂದ-

"ಹೆಡ್, ನಿಮ್ಮ ಗಮನಕ್ಕೆ. ಡಾ|| ಮೆಕೈವರ್ ಹಲವಾರು ಪೋರ್ನ್ (ಪೋರ್ನೋಗ್ರಾಫ಼ಿ)  ಸೈಟುಗಳನ್ನು ಡೌನ್‌ಲೋಡ್ ಮಾಡುತ್ತಾ ಇದ್ದಾನೆ. ಇದನ್ನು ಹೀಗೆಯೇ ಬಿಡುವಂತಿಲ್ಲ."

ಇದೇನು ಬಂತಪ್ಪ ಅನ್ನಿಸಿತು ನನಗೆ. ಮೆಕೈವರ್ ನನಗೆ ಚನ್ನಾಗಿ ಗೊತ್ತಿದ್ದ ವ್ಯಕ್ತಿ. ನಮ್ಮ ಇಲಾಖೆಯಲ್ಲಿರುವ ಪ್ರೊಫ಼ೆಸರ್ ಜಾನ್ ಟರ್ನರ್ ಅವರ ಸಹಾಯಕ ಫ಼ೆಲೋ. ಇಲ್ಲೇ ಪಿಹೆಚ್‌ಡಿ ಪಡೆದಿದ್ದ. ಟರ್ನರ್ ವಿಶ್ವವಿಖ್ಯಾತ, ರಾಯಲ್ ಸೊಸೈಟಿಯ ಫ಼ೆಲೋ ಬೇರೆ. ತನ್ನ ಸಂಶೋಧನೆಯಲ್ಲಿ ನೆರವಾಗಲಿ ಎಂದು ಮೆಕೈವರಿಗೆ ಸಾಕಷ್ಟು ಸಂಬಳಕೊಟ್ಟು ನಮ್ಮ  ಇಲಾಖೆಯಲ್ಲೇ ಇರುವಂತೆ ಮಾಡಿದ್ದ.

ಇದೆಂತ ಕಚಡಾ ಸನ್ನಿವೇಶ! ಇದರಲ್ಲಿ ನಾನು ಸಿಕ್ಕಿಹಾಕಿಕೊಂಡೆನಲ್ಲಾ! ಯಾರಾದರೂ ಮುಖ್ಯಸ್ಥನ ಖುರ್ಚಿಯಲ್ಲಿ ಕುಳಿತಾ ಅಂದರೆ ದಿನವೆಲ್ಲಾ ತಕರಾರೇ! ಬಜೆಟ್ ಗೊಂದಲ,  ಹೊಸ ನೇಮಕಾತಿ ಪೈಪೋಟಿ, ಕುಳಿತು ಕೆಲಸ ಮಾಡಲು ಜಾಗಕ್ಕಾಗಿ ಪರದಾಟ, ಒಂದಲ್ಲ ಎರಡಲ್ಲ. ಇವಲ್ಲದೆ ಡೀನ್ ಮತ್ತು ಉಪಕುಲಪತಿ ಅವರುಗಳಿಂದ ದಿನಕ್ಕೊಂದು ತರಹ ಆದೇಶ! ಹೇಗಿದ್ದರೂ ಸ್ಟಾಫ಼್ ಮೀಟಿಂಗಿನಲ್ಲಿ ಇಂಟರ್‌ನೆಟ್ ದುರುಪಯೋಗದ ಚರ್ಚೆ ಆಗುವುದಿತ್ತು. ಸುಮ್ಮನಿರಲೆತ್ನಿಸಿದೆ.

ಮುಂದಿನ ವಾರ. ಮೀಟಿಂಗ್ ಪ್ರಾರಂಭವಾಯಿತು. ಚರ್ಚೆಗೆ ಬಹಳ ಮುಖ್ಯ ವಿಷಯಗಳಿದ್ದವು. ಆದ್ದರಿಂದ ಈ ಕಚಡಾ ಮ್ಯೂಸಿಕ್, ಪೋರ್ನೋ ಇವುಗಳನ್ನು ಬೇಗ ಎತ್ತಿಹಾಕುವ ಉದ್ದೇಶ ನನ್ನದು. ಇಂಟರ್‌ನೆಟ್ ದುರುಪಯೋಗದ ಐಟಮ್ ಮೊದಲಿರಲಿ ಎಂದು ಹೇಳಿದೆ. ಎಲ್ಲರೂ ಒಪ್ಪಿಕೊಂಡರು. ಐಟಿ ಡೈರೆಕ್ಟರ್ ತನ್ನ ವರದಿ ಶುರು ಮಾಡಿದ.

"ಇತ್ತೀಚೆಗೆ ಇಲಾಖೆಯಲ್ಲಿ ಇಂಟೆರ್‌ನೆಟ್ಟಿನ ದುರುಪಯೋಗ ಹೆಚ್ಚಾಗುತ್ತಿದೆ. ಹಿಂದೆ ಸಾಮಾನ್ಯವಾಗಿ ಬಹಳ ಮಂದಿ ಕೇವಲ ವರ್ತಮಾನ ಪತ್ರಿಕೆ, ಸ್ಟಾಕು ಷೇರು ವಿಚಾರ, ಕ್ರೀಡೆ, ಭವಿಷ್ಯ ಮುಂತಾದುವನ್ನು ಇಂಟೆರ್‌ನೆಟ್ಟ್‌ನಲ್ಲಿ ನೋಡುತ್ತಿದ್ದರು. ಡೌನ್‌ಲೋಡ್ ಪ್ರಮಾಣ ಬಹಳ ಕಡಿಮೆ ಇತ್ತು. ನನ್ನದೇನೂ ಆಕ್ಷೇಪಣೆ ಇರಲಿಲ್ಲ. ಆದರೆ ಈಗ ವಾಲ್ಟರ್ ವಾಂಗ್ ಎಂಬ ವಿದ್ಯಾರ್ಥಿ ಹೇರಳ ಮ್ಯುಸಿಕ್ ಡೌನ್‌ಲೋಡ್ ಮಾಡಿದ್ದಾನೆ, ಹದಿನೈದು ಗಿಗಾಬೈಟ್. ಅಲ್ಲದೆ ಡಾ|| ಮೆಕೈವರ್ ಸಾಕಷ್ಟು ಪೋರ್ನ್ ಸೈಟುಗಳನ್ನು ತನ್ನ ಕಂಪ್ಯೂಟರ್‌ನಲ್ಲಿ ತೆರೆದಿದ್ದಾನೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಿಕ್ಕ ಇಲಾಖೆಗಳಲ್ಲಿ ಮಾಡುವಂತೆ ನಾವೂ ಫ಼ೈರ್ ವಾಲ್ ಹಾಕಬೇಕಾಗುತ್ತದೆ ಅಥವಾ ಇಂತಹ ಜನಕ್ಕೆ ಇಂಟರ್‌ನೆಟ್ ಕಟ್ ಮಾಡಬೇಕಾಗುತ್ತದೆ. ನಿರ್ಧಾರ ನಿಮ್ಮೆಲ್ಲರದು."

ಎಲ್ಲರಿಗೂ ಮೈ ಜುಮ್ ಎಂದಿರಬೇಕು. ನನಗಂತೂ ಆಯಿತು. ಕಾರಣ ನನಗೂ ಪ್ರತಿದಿನ ನಾಲ್ಕೈದು ಪೇಪರ್ ಓದುವ ವಾಡಿಕೆ! ಸ್ಟಾಕು, ಷೇರು ಚಲನೆಯನ್ನು ನೋಡಿದ್ದೇ ನೋಡಿದ್ದು, ಕೆಲವೊಮ್ಮೆ ದಿನವಿಡೀ!

ತಕ್ಷಣ ಒಂದು ಆಸ್ಪೋಟನೆಯಂತೆ, ಚೈನ್ ರಿಯಾಕ್ಷನ್ ತರಹ ಮಾತಿನ ಚಕಾಮುಕಿ ಪ್ರಾರಂಭವಾಯಿತು.

"ಇಬ್ಬರೂ ತಪ್ಪಿತಸ್ಥರು, ಇಬ್ಬರಿಗೂ ಶಿಕ್ಷೆ ವಿಧಿಸಿ" ಎಂದ ಐಟಿ ಡೈರೆಕ್ಟರ್.

"ಸಂಗೀತ ಹೆಚ್ಚಿಗೆ ಕೇಳಿದ್ದು ಅಕ್ಷಮ್ಯ ಅಪರಾಧವಲ್ಲ. ಅವನಿಗೆ ಎಚ್ಚರಿಕೆ ಕೊಟ್ಟರೆ ಸಾಕು. ನಾನೂ ಬುದ್ಧಿ ಹೇಳುತ್ತೇನೆ", ಎಂದ ಯಾಂಗ್ ಲೀ. ಇನ್ನೇನು ಮಾಡುತ್ತಾನೆ? ಎಷ್ಟಾದರೂ ವಾಂಗ್ ಅವನ ವಿದ್ಯಾರ್ಥಿಯಲ್ಲವೇ?

"ಮ್ಯೂಸಿಕ್ ಕೇಳಿದರೆ ಪರವಾಗಿಲ್ಲ. ಆದರೆ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವ ಬದಲು ಪೋರ್ನೋ ನೋಡೋದು ಅಸಹ್ಯದ ಕೆಲಸ. ಅದನ್ನು ಕ್ಷಮಿಸುವುದು ಸಾಧ್ಯವೇ ಇಲ್ಲ."
"ಕ್ಷಮಿಸಿದರೆ, ಡಿಪಾರ್ಟ್‌ಮೆಂಟಿನ ಗೌರವವನ್ನು ಹರಾಜು ಮಾಡಿಕೊಂಡಂತೆ"
"ನಾವೆಲ್ಲಾ ಕಾಲೇಜಿಗೆ ಓದು ಬರೆಯಲು ಬರುತ್ತಿದ್ದೆವು. ಇದೇನು ಈಗ ನೈಟ್ ಕ್ಲಬ್ ಆಗ್ತಾ ಇದೆ ಯೂನಿವರ್ಸಿಟಿ!"
"ಹುಡುಗರು ಏನೋ ತಪ್ಪು ಮಾಡಿದ್ದಾರೆ, ಇದೇನು ಮಹಾ! ನಮ್ಮ ರಾಜಕಾರಣಿಗಳೇ ಪೋರ್ನೋ ಸೈಟ್ ನೋಡಿ ಸಿಕ್ಕಿ ಹಾಕಿಕೊಂಡಿಲ್ಲವೇ? ಬುದ್ಧಿ ಹೇಳಿ, ಸಾಕು".
"ತಪ್ಪಿನಲ್ಲಿ ದೊಡ್ಡ ತಪ್ಪು, ಚಿಕ್ಕ ತಪ್ಪು ಇಲ್ಲ. ಎಲ್ಲಾ ಒಂದೇ, ಇಬ್ಬರಿಗೂ ಶಿಕ್ಷೆ ಆಗಲಿ."

ಐದು ನಿಮಿಷದಲ್ಲಿ ಚರ್ಚೆ ಮುಗಿಯಬಹುದು ಎಂದು ಭಾವಿಸಿದ್ದೆ. ಆದರೆ ಐವತ್ತು ನಿಮಿಷಗಳಾದರೂ ಮಾತುಕತೆ ಮುಂದುವರೆಯುತ್ತಲೇ ಇತ್ತು. ಆಗ ಟರ್ನರ್ರಿಗೆ ಏನೋ ಹೊಳೆಯಿತು. "ನಾವು ಇಂತಹ ವಿಷಯಗಳನ್ನು ಇಲ್ಲಿ ಚರ್ಚಿಸಬಾರದು. ಕ್ರಿಸ್ಸ್‌ಗೆ ಬಿಟ್ಟು ಬಿಡೋಣ. ಆತ ಎಷ್ಟಾದರೂ ಹೆಡ್. ಅವರ ನಿರ್ಧಾರ ಅಂತಿಮವಾಗಲಿ." ಎಲ್ಲರೂ ಚಪ್ಪಾಳೆ ಹೊಡೆದು ಒಪ್ಪಿಕೊಂಡರು. ನಾನು ಕೊಡವಲು ಹೋದ ಧೂಳು ಮತ್ತೆ ನನ್ನ ಮೇಲೇ ಬಿದ್ದಿತ್ತು! 

"ಸರಿ, ನಾನು ಅವರಿಬ್ಬರನ್ನೂ ಕರೆದು ಮಾತಾಡಿ ನಿರ್ಧರಿಸುತ್ತೇನೆ" ಎಂದೆ. ಎಲ್ಲರೂ ಒಪ್ಪಿದರು. ಮುಂದಿನ ಐಟಮ್- ಹೊಸ ನೇಮಕಾತಿ.

ಮೀಟಿಂಗ್ ಮುಗಿಯಿತು, ಮನೆಯ ಕಡೆ ಹೊರಟೆ. ಎಷ್ಟು ಮರೆಯಬೇಕೂ ಅಂದರೂ ಮತ್ತೆ ಅದೇ ಮನಸ್ಸಿಗೆ ಬರುತ್ತಿತ್ತು- ಒಬ್ಬ ಸಂಗೀತ ಕೇಳಿದ, ಮತ್ತೊಬ್ಬ ಪೋಲಿ ಚಿತ್ರ ನೊಡಿದ. ಇಬ್ಬರದೂ ತಪ್ಪೆ. ಆದರೆ ವಾಂಗ್ ಮಾಡಿದ ತಪ್ಪು ಪರವಾಗಿಲ್ಲ, ಮೆಕೈವರ್ ಮಾಡಿದ ತಪ್ಪು ಅಕ್ಷಮ್ಯ ಎನ್ನಲು ನಾನಾರು? ಇವನು ಸಂಗೀತ ಕೇಳಿ ಆನಂದ ಪಟ್ಟ. ಅವನು ಪೋಲಿ ಚಿತ್ರಗಳನ್ನು ನೋಡಿ ಮೈಮರೆತ, ಅವನು ಮಾಡಿದ್ದೂ ಆನಂದಕ್ಕಾಗಿಯೇ! ನಿಜವಾಗಿ ಹೇಳಬೇಕಾದರೆ ಮೆಕೈವರ್ ಸಿಕ್ಕಾಪಟ್ಟೆ ಪ್ರಮಾಣದ ಡೌನ್‌ಲೊಡ್ ಮಾಡಿಲ್ಲ. ವಾಂಗ್ ಆದರೋ ಹದಿನೈದು ಗಿಗ್ ಮಾಡಿದ್ದಾನೆ. ಅವನಿಗೆ ಕ್ಷಮೆಯೇ, ಇದಾವ ನ್ಯಾಯ? ಸೆಕ್ಸ್, ಸಂಗೀತ ಇವುಗಳಲ್ಲಿ ಯಾವುದು ದೊಡ್ಡ ತಪ್ಪು? ನಿಜ ಹೇಳಬೇಕಾದರೆ ಇಂದು ಯುವಜನ ಡೌನ್‌ಲೋಡ್ ಮಾಡಿ ಕೇಳುವ ಸಂಗೀತದಲ್ಲಿ  ಕೂಡ ಬರೀ ಸೆಕ್ಸೇ ಇರೋದು!  ಇಂತಹ ಯೋಚನೆಗಳೇ ತಲೆತುಂಬ. ಎಲ್ಲಕ್ಕಿಂತ ಹೆಚ್ಚಾಗಿ ನಾನೇನು ತೀರ ಪ್ರಾಮಾಣಿಕನಲ್ಲ, ನಾನೂ ಇಂಟರ್‌ನೆಟ್ಟಿನ ದುರುಪಯೋಗ ಮಾಡಿಕೊಳ್ಳುತ್ತೇನೆ. ನನಗೆ ಈ ವಿಷಯದಲ್ಲಿ ತೀರ್ಪು ಕೊಡುವ ಅಧಿಕಾರ ಎಲ್ಲಿದೆ?Judge not that thee be not judged ಮನಸ್ಸನ್ನು ಚುಚ್ಚಲಾರಂಭಿಸಿತು. ಮನೆಯಲ್ಲಿ ಊಟಕ್ಕೆ ಕುಳಿತೆ. ಹೆಂಡತಿ ಲೀಸಾ ಸೆಲೆರಿ ಸೂಪ್ ಮತ್ತು ಮೀನು ತಯಾರಿಸಿದ್ದಳು. ಎರಡರಲ್ಲೂ ರುಚಿ ಕಾಣಲಿಲ್ಲ.

"ಏಕೆ, ಹನಿ, ಹೀಗೆ ಕೂತಿದ್ದೀಯಾ? ನಿನ್ನ ದೇಹ ಇಲ್ಲಿದೆ, ಮನಸ್ಸು ಇನ್ನೆಲ್ಲೋ ಇದೆ. ಆ ಡಿಪಾರ್ಟ್‌ಮೆಂಟ್ ವಿಚಾರಾನ ಅಲ್ಲೇ ಬಿಟ್ಟು ಬರಬಾರದಾ?"
"ಆಯ್ಯೋ ಇದೊಂದು ಸ್ಪೆಷಲ್" ಎಂದವನೇ ಆದದ್ದನ್ನೆಲ್ಲಾ ವಿವರಿಸಿದೆ. ನನ್ನ ಸಂದಿಗ್ಧವನ್ನು ಹೇಳಿಕೊಂಡೆ.
"ನೀನು ಯೂನಿವರ್ಸಿಟಿಗೆ ಹೋಗೋದು ಇದಕ್ಕೇನಾ? ಇದಾವುದೋ ಜುಜುಬಿ ವಿಚಾರ. ನೀವೆಲ್ಲಾ ರಿಸರ್ಚ್ ಮಾಡಿ ನೊಬೆಲ್ ಪ್ರೈಸ್ ತೊಗೋತೀರಿ ಅಂತ ತಿಳಕೊಂಡಿದ್ದೆ. ಸಾಕಪ್ಪಾ ಸಾಕು. ಅವರಿಬ್ಬರನ್ನೂ ಕಾಲೇಜಿನಿಂದ ಒದ್ದೋಡಿಸಿ, ನಿನ್ನ ಕೆಲಸ ನೋಡ್ಕೋ."
ನನಗೆ ಮನಸ್ಸಿನಲಿ ಅನ್ನಿಸಿತು ನೊಬೆಲ್ ಪ್ರೈಸ್ ಪಡೆಯೋದೂ ಸುಲಭ ಅಲ್ಲ, ಈ ಜುಜುಬಿ ಸಮಾಚಾರಾನ ಪರಿಹರಿಸೋದೂ ಸುಲಭ ಅಲ್ಲ!

ಮಾರನೆಯ ದಿನ ವಿಚಾರಣೆ. ವಾಲ್ಟರ್ ವಾಂಗನನ್ನು ಮೊದಲು ಕರೆಸಿದೆ. ಅತ್ತುಕೊಂಡೇ ಬಂದ ಅವನು. ನಾನು ಅವನು ಮಾಡಿರುವ "ಘೋರ ಕೃತ್ಯ"ವನ್ನು ವಿವರಿಸಿದೆ.
"ಸಾರಿ, ನಾನು ಇಲ್ಲಿ ಇಂಟರ್‌ನೆಟ್ ಫ಼್ಲೀ (ಫ಼್ರೀ) ಎಂದುಕೊಂಡಿದ್ದೆ."
"ಯಾವುದೂ ಬಿಟ್ಟಿ ಸಿಗುವುದಿಲ್ಲ, ನೀನು ಇಲ್ಲಿ ಬಂದಿರೋದು ನಿನ್ನ ವಿದ್ಯಾಭ್ಯಾಸ, ಸಂಶೋಧನೆಗೆ. ತಿರುಗ ಈ ತರಹ ಮಾಡಿದರೆ.."
ಅವನು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.
"ಇಲ್ಲ, ಇಲ್ಲ ಏನಾದರೂ ಮ್ಯೂಸಿಕ್ ಡೌನ್‌ಲೋಡ್ ಮಾಡೋದಿಲ್ಲ."
"ಹಾಗಂತ ನನಗೆ ಒಂದು ಈ ಮೈಲ್ ಕಳಿಸು, ನೀನಿನ್ನು ಹೋಗಬಹುದು" ಎಂದೆ. ಹೊರಟ.

ನನಗೆ ಅನ್ನಿಸಿತು "ಯಾವ ದೊಡ್ಡ ತಪ್ಪು ಮಾಡಿದ ಅಂತ ಇವನ ಹತ್ತಿರ ಹೀಗೆ ಮಾತನಾಡಿದೆ? ಅವನು ಎದುರುತ್ತರ ಕೊಡೋದಿಲ್ಲ ಅಂತ ತಾನೇ?"

ನಂತರ ಬಂದ, ಮೆಕೈವರ್ ಜರ್ಬಾಗಿಯೇ ಬಂದ. ನನಗೆ ಗೊತ್ತಿದ್ದ ವ್ಯಕ್ತಿ ಬೇರೆ. ಅವನಿಗೆ ಅವನು ಮಾಡಿದ "ಹೇಯ ಕೃತ್ಯ"ವನ್ನು ವಿವರಿಸಿದೆ.

"ಇದಕ್ಕೆ ಕರೆಸಿದಿರಾ, ಕ್ರಿಸ್?"
"ಹೌದು, ಯೂನಿವರ್ಸಿಟಿ ಸಮಯದಲ್ಲಿ, ಯೂನಿವರ್ಸಿಟಿ ಕಂಪ್ಯೂಟರ್‌ನಲ್ಲಿ ಹೀಗೆ ಮಾಡಬಾರದು, ಅಲ್ಲವೇ?’
"ಹೌದು ಮತ್ತು ಇಲ್ಲ. ನನ್ನ ಪರಿಸ್ಥಿತಿ ಗೊತ್ತಿರೋರು ನಿಮ್ಮ ಹಾಗೆ ಮಾತಾಡೋದಿಲ್ಲ. ನಾನು ಇಲ್ಲಿ ಹತ್ತು ವರ್ಷದಿಂದ ಇದ್ದೀನಿ. ಪಿಹೆಚ್‌ಡಿ ಬಂದೇ ಐದು ವರ್ಷ ಆಯಿತು. ಜಾನ್ (ಜಾನ್ ಟರ್ನರ್) ಹೇಳೋ ಪ್ರಯೋಗ ಎಲ್ಲಾ ಮಾಡೋದು ನಾನೇ, ಕೆಲವು ನಾನೊಬ್ಬನೇ, ಕೆಲವು ಅವನ ವಿದ್ಯಾರ್ಥಿಗಳ ಜತೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಬೆಳಿಗ್ಗೆ ಬಂದರೆ ನಾನು ಮನೇಗೆ ಹೋಗುವುದು ರಾತ್ರಿ ಎರಡು ಗಂಟೆಗೆ. ರಾತ್ರಿ ಪ್ರಯೋಗ ನಡೆಸುವಾಗ ಕಂಪ್ಯೂಟರ್‌ನಲ್ಲಿ ಅದೂ ಇದೂ ನೋಡ್ತೀನಿ. ತಪ್ಪೇನಿದೆ ಇದರಲ್ಲಿ?"
"ಹಾಗಂತ ಪೋರ್ನೋ ನೋಡೋದೇ?"
"ಪೋರ್ನೋ ನೋಡ್ತೀನಿ, ಅಥವಾ ಮತ್ತೇನೋ ನೋಡ್ತೀನಿ. ಅದು ಮುಖ್ಯ ಅಲ್ಲ. ಇಲ್ಲಿ ರಿಸರ್ಚ್‌ಗೋಸ್ಕರ ನಾನು ಎಷ್ಟು ತ್ಯಾಗ ಮಾಡಿದ್ದೀನಿ ನಿಮಗೆ ಗೊತ್ತಾ? ನನ್ನ ಎರಡನೆ ಗರ್ಲ್ ಫ಼್ರೆಂಡ್ ಹೋದವಾರ ಬೇರೆ ಹೋದಳು. ಅಲ್ಲದೆ ಎಷ್ಟೋ ಕಡೆ ಕೆಲಸಕ್ಕೆ ಹಾಕ್ತಾ ಇರ್ತೀನಿ, ಈ ಮುದುಕ ಎಲ್ಲಾ ಕಡೆ ಕಲ್ಲು ಹಾಕಿ ನನ್ನನ್ನ ಇಲ್ಲೇ ಇರೋ ಹಾಗೆ ಮಾಡಿದ್ದಾನೆ. ಹಾರ್ವರ್ಡ್‌ನಲ್ಲಿ ಸಿಕ್ಕೇಹೋಗಿತ್ತು. ಈ ಮುದುಕ ಮೊನ್ನೆ ಅಲ್ಲೀಗೂ ಫ಼ೋನ್ ಮಾಡಿ ಹೋಗೋದನ್ನ ತಪ್ಪಿಸಿದಾನೆ."
"ಕಾರಣ?"
"ನಿಮಗೊತ್ತಿಲ್ಲವೇ ಕಾರಣ, ನಾನು ಏನಿಲ್ಲಾ ಅಂದರೂ ವರ್ಷಕ್ಕೆ ಮೂರು ಪೇಪರ್ ಬರೀತೀನಿ, ಮುದುಕನ ಜತೆ. ಅಲ್ಲದೆ ಮತ್ತು ಹದಿನೈದು ಪೇಪರ್‌ಗಳಿಗೆ ಅವನ ವಿದ್ಯಾರ್ಥಿಗಳಿಗೆ ಸಹಾಯ ಮಾಡ್ತೀನಿ."
ನಾನೂ ಲೆಕ್ಕ ಹಾಕಿಕೊಂಡೆ, ಇವನು ಬರೆಯುವ ಪೇಪರ್‌ಗಳಿಂದಲೇ ಇಲಾಖೆಗೆ ವರ್ಷಕ್ಕೆ  ಐವತ್ತು ಸಾವಿರ ಡಾಲರ್ ವರಮಾನ ಇದೆ.
"ಸರೀನಪ್ಪ ನೀನು ಹೇಳೋದು, ಮ್ಯೂಸಿಕ್ ಕೇಳಿದ್ರೆ ಸುಮ್ಮನಾಗ್ತಿದ್ದೆ, ಈ ಪೋರ್ನ್ ನೋಡು ಕಚಡಾ."
"ನೀವು ಈ ತರಹ ನನ್ನ ಮೇಲೆ ಕಂಡಿಷನ್ ಹಾಕೋದಾದ್ರೆ ತೊಗೋಳಿ, ನಾನು ನಾಳೇನೇ ಬಿಟ್ಟು ಹೋಗ್ತೀನಿ. ನನಗೇನು ಅಮೆರಿಕಾನಲ್ಲಿ ಎರಡು ಕಡೆ, ಸಿಡ್ನೀಲೇ ಮೂರು ಕಡೆ ಬೇಕಾದರೆ ದಮ್ಮಯ್ಯ ಅಂತ ಸೇರಿಸ್ಕೋತಾರೆ. ಈ ಮುದುಕನ ಕಣ್ಣು ತಪ್ಪಿಸಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೀನಿ. ಈ ಯೂನಿವರ್ಸಿಟಿ ಹೆಸರಿಗೋಸ್ಕರ ಇಲ್ಲಿ ಇಧೀನಿ ಅಷ್ಟೆ. ನೀವೇ ನಿರ್ಧಾರ ತೊಗೋಳಿ. ಒಂದು ಮರೀಬೇಡಿ, ನಿಮ್ಮ ಜತೆ ಕೆಲಸ ಮಾಡೋ ಪ್ರೊಫ಼ೆಸರ್‌ಗಳೆಲ್ಲಾ ಸಾಚಾ ಅಂತ ತಿಳ್ಕೋಬೇಡಿ." ಅಂದವನೇ ಅಲ್ಲಿ ನಿಲ್ಲಲೇ ಇಲ್ಲ.

ನನಗೆ ಆಗ ಜ್ಞಾಪಕಕ್ಕೆ ಬಂತು. ಹಿಂದೆ ಮುದುಕ ಪ್ರೊಫ಼ೆಸರ್ ರಾಸ್ ಎಂಬಾತ ಹೀಗೇ ಸಿಕ್ಕಿಬಿದ್ದಿದ್ದ. ಆಗ ನಾನು ಹಂಗಾಮಿ ಹೆಡ್ ಆಗಿದ್ದೆ. ನಾನೇ ಹೋಗಿ ಅತನ ಹತ್ತಿರ ವಿಷಯದ ಪ್ರಸ್ತಾಪ ಮಾಡಿದ್ದೆ. ಅವನು ಕೂಡಲೇ ಒಂದು ಪೋಲಿ ಜೋಕ್ ಹೇಳಿ ಗಹಗಹಿಸಿ ನಕ್ಕಿದ್ದ. "ಇದೇನು ಮಹಾ" ಎಂದಿದ್ದ. 

ಮೆಕೈವರ್ ಹೊರಟ ಹತ್ತೇ ನಿಮಿಷಕ್ಕೆ ಪ್ರೊಫ಼ೆಸರ್ ಟರ್ನರ್ ಫ಼ೋನ್ ಮಾಡಿದ.
"ಮೆಕೈವರ್ ಜತೆ ಮಾತುಕತೆ ನಡಿಸಿದ ವಿಷಯ ತಿಳೀತು. ಅವನು ಮ್ಯೂಸಿಕ್ ಡೌನ್‌ಲೋಡ್ ಮಾಡಿದನೋ, ಪೊರ್ನೋ ನೋಡಿದನೋ ಬೇಕಾಗಿಲ್ಲ. ಅವನಿಲ್ಲದೆ ನನ್ನ ರಿಸರ್ಚ್ ನಡೆಯೋ ಹಾಗಿಲ್ಲ. ಅವನು ಮಾಡಿರುವ ಡೌನ್‌ಲೋಡಿಗೆ ಆಗುವ ಖರ್ಚೆಷ್ಟು ವಿಚಾರಿಸಿ. ಆ ಹಣವನ್ನು ನಾನು ನನ್ನ ಕೈಯಿಂದ ಕೊಡುತ್ತೇನೆ. ಅವನು ಮುಂದೆ ಕಂಪ್ಯೂಟರ್ ಮತ್ತು ಇಂಟೆರ್‌ನೆಟ್ ಇವನ್ನು ಯಾವುದಕ್ಕಾದರೂ ಉಪಯೋಗಿಸಲಿ, ಅದರ ಖರ್ಚೆಲ್ಲಾ ನನ್ನದು. ಈಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಬಹುದು."

ತಲೆಕೆಟ್ಟು ಹೋಯಿತು ನನಗೆ. ಕೂಡಲೆ ಐಟಿ ಡೈರೆಕ್ಟರಿಗೆ ಈ ಮೈಲ್ ಕಳಿಸಿದೆ.
"ವಾಲ್ಟರ್ ವಾಂಗ್ ಮತ್ತು ಮೆಕೈವರ್ ಇವರ ವಿಚಾರಣೆ ನಡೆಸಿ ಅವರಿಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದೀನಿ. ಇನ್ನು ಮುಂದೆ ಈ ತರಹ ಘಟನೆಗಳಾದರೆ ವಿಶ್ವವಿದ್ಯಾಲಯದ ನಿಯಮಾನುಸಾರ ನೀವೇ ಕ್ರಮ ಕೈಗೊಳ್ಳುವುದು. ಅದನ್ನು ನನ್ನ ಗಮನಕ್ಕೆ ತರುವ ಅವಶ್ಯಕತೆ ಇಲ್ಲ."

ಪುಟದ ಮೊದಲಿಗೆ
 
Votes:  6     Rating: 4.33    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು