ಸೆಪ್ಟೆಂಬರ್ ೨೨, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಲಕ್ಷ್ಮಿ ಜೋಶಿ ಬರೆಯುವ ಸಂಗೀತ ಕಾಲಂ ಇನ್ನು ಶುರುವಾಯಿತು    
ಲಕ್ಷ್ಮೀಶಂಕರ ಜೋಶಿ
ಗುರುವಾರ, 1 ಮಾರ್ಚ್ 2012 (01:23 IST)
ಲಕ್ಷ್ಮಿ ಜೋಶಿ

ನಾನೊಬ್ಬ ಅಪ್ಪಟ ಗೃಹಿಣಿ. ಎರಡು ಮಕ್ಕಳ ತಾಯಿ ನಂತರ ಹೆಂಡತಿ, ಪ್ರಾಧ್ಯಾಪಕಿ, ಹಾಡುಗಾರ್ತಿ ಬರಹಗಾರ್ತಿ ಏನೆಲ್ಲ. ’ಮನೆ ಗೆದ್ದು ಮಾರು ಗೆಲ್ಲು’ ಎನ್ನುವಂತೆ ಮೊದಲು ಮನೆವಾರ್ತೆ ಸರಿ ಇದ್ದರೆ ಎಲ್ಲವೂ ಸರಿ. ಇಂಥದರಲ್ಲಿ ನಾದಲೋಕದ ಬೆನ್ಹತ್ತಿ ತಿರುಗಿದ ಊರುಗಳೆಷ್ಟು, ಸಂಗೀತದಿಂದ ಕಲಿತದ್ದೆಷ್ಟು, ಅನಿಸಿಕೊಂಡದ್ದೆಷ್ಟು, ಬೈಸಿಕೊಂಡದ್ದೆಷ್ಟು, ಮುನಿಸಿಕೊಂಡದ್ದೆಷ್ಟು ನಂತರ ಗಳಿಸಿಕೊಂಡದ್ದು ನೋಡಿದರೆ ಶೂನ್ಯ. ಅಬ್ಬಾ ಎಲ್ಲ ಶೂನ್ಯ. ಇನ್ನೂ ಕಲಿಯಬೇಕು. ಏನು ಕಲಿತೇ ಇಲ್ಲ. ನಾನು ಬಂದ ದಾರಿಯನ್ನು ಸಿಂಹಾವಲೋಕನ ಮಾಡಿದಾಗ ಇನ್ನೂ ಹಸಿ ಹಸಿ ಆರದ ನೆನಪುಗಳು. ಏನಿದು ಸಂಗೀತ, ಏನು ಸ್ವರಗಳ ಮೋಡಿ. ಒಂದು ಹಾಡಿಗಾಗಿ ಜೋಶಿ ಮನೆ ಮುಂದೆ ಸಂಜೆತನಕ ಕುಳಿತಿದ್ದೆ.

ಅವತ್ತು ಗೆಳತಿ ಜೋಶಿ ಮನೆಯಲ್ಲಿ ಶ್ರಾದ್ಧ. ಮನೆತುಂಬ ಜನ. ನಾನು ಹಾಡು ಹೇಳಿಸಿಕೊಳ್ಳಲು ಬಂದಿದೆ ಅವಳಿಗೆ ಒಳಗೆ ಪುರುಸೊತ್ತಿಲ್ಲದಷ್ಟು ಕೆಲಸ. ಸಿಡುಕು ಮೋರೆಯ ಅಪ್ಪನಿಗೆ ಹೆದರಿ ಅವಳು ಹೊರಬಂದಾಗ. ಸಂಜೆ ನಾಲ್ಕು ಗಂಟೆ. ಬೆಳಿಗ್ಗೆ ೧೦ ರಿಂದ ಸಂಜೆ ನಾಲ್ಕರತನಕ ಅವರ ಮನೆ ಎದುರಿನ ಕನ್ನಡ ಶಾಲೆಯಲ್ಲಿ ಕೂತಿದೆ. ನನಗೇನು ಬೇಸರವಾಗಲಿಲ್ಲ. ಅಲ್ಲೇ ಬುತ್ತಿ ಬಿಚ್ಚಿ ಉಂಡೆ. ಹೇಗೂ ಶಾಲೆ ಬಿಟ್ಟಿದ್ದೆ. ಸಂಜೆಯೊಳಗಾಗಿ ಒಟ್ಟು ಹೇಳಿಸಿಕೊಳ್ಳಬೇಕು. ಭೂಪ ರಾಗದಲ್ಲಿದ್ದ ಎಸ್.ಡಿ. ಇಂಚಲ್ ಅವರ ಭಾವಗೀತೆ ಅದು.

’ನವಜೀವನ ಗಗನಾಂಗಣದಲಿ ಶುಭ ಶಕುನದ ಹಕ್ಕಿಯು ಹಾರುತಿದೆ ಭವ ಮನ್ವಂತರ ದಾಂತರ‍್ಯದ ಹೊಸ ಹೊಂಗನಸುಗಳನು ಹೊಸೆಯುತಿದೆ’ ಅಂತೂ ಹೇಳಿದಳು. ಪರಫೆಕ್ಟ ಆಗಿತ್ತು. ಇಡೀ ದಿನ ಗುನುಗಿ ಗುನುಗಿ ಹಾಡು ತಯಾರಾಗಿತ್ತು. ಮತ್ತೆ ಆ ನಾದದ ಹುಚ್ಚಿಗೆ ಇವತ್ತಿಗೂ ಕೊನೆಯಿಲ್ಲ. ಮತ್ತೆ ಕಲೀಬೇಕು, ಮತ್ತೆ ಹೊಸ ಬೇಜ ಹೇಳಿಸಿಕೊಳ್ಳಬೇಕು. ತಂಬೂರಿ ಹಿಡಿದು ಹೇಳಿಸಿಕೊಳ್ಳುವಾಗ ಅದೇ ಆ ಎಳೆ ಶಿಷ್ಯರ ಮಧುರ ಕಲ್ಪನೆ ಮನದಲ್ಲಿ ಬಂದು, ಮತ್ತೆ ಮಕ್ಕಳಾಗಿ ಬಿಡುತ್ತೇವೆ.

ಕೊನೆಗಾಣದ ಈ ನಾದಲೋಕ ಏನು ಎತ್ತ. ಏನು ಬರೆಯಲಿ? ಸಂಗೀತದ ಬಗ್ಗೆ ಒಂದೇ ಎರಡೇ ಹಲವು ಅನುಭವಗಳ ರಾಶಿಯಲ್ಲಿ ಮುಳು ಮುಳುಗಿ ಏಳುತ್ತಿದ್ದೇನೆ. ಏನೇ ಬರೆದರೂ ಕರಾರುವಾಕ್ಕಾಗಿ, ಪ್ರಖರವಾಗಿ, ನಿಖರವಾಗಿ ಬರೆಯಬೇಕೆನ್ನುವಳು. ಯಾವುದೇ ಒಂದು ವಿಷಯ ಒಳ ಒಳಗೆ ಕುದಿದು ಹಣ್ಣಾಗಿ ಕೆನೆ ಪದರು ಬಂದಾಗ ಮಾತ್ರ ಬರೆಯಲು ಸಾಧ್ಯ. ಹಾಗಾಗಿ ಎಂಟ್ಹತ್ತು ದಿನಗಳಿಂದ ಪೆನ್ನು ಹಿಡಿಯುವುದು, ಕೆಳಗಿಡುವುದು ನಡೆದಿತ್ತು.ಕೆಂಡಸಂಪಿಗೆ’ಯಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಒಳ್ಳೆಯ ಅನುಭವ, ಕೆಟ್ಟ ಅನುಭವ, ಕಾಲೆಳೆಯುವ ಅನುಭವ ಒಂದೇ ಎರಡೇ ಯಾವುದು ಬರೆಯಲಿ? ಮಿತ್ರ ಸಮ್ಮಿತ ಕೇಳಿದೆ. ಆದಷ್ಟು ಒಳ್ಳೆಯದೆ ಬರೆ, ಕೆಟ್ಟದ್ದು ಎಲ್ಲಾ ಕ್ಷೇತ್ರದಲ್ಲಿದ್ದದ್ದೇ ಎಂದರು. ಹೀಗಾಗಿ ನನ್ನ ಹರವಿಗೆ ನಿಲುಕಿದ್ದು, ಮಿತಿಗೆ ತೋರಿದ್ದು, ಗತಿಗೆ ಸಿಕ್ಕದ್ದನ್ನು ಬರೆಯಬಲ್ಲೆ ಹೌದು ಬರೆಯುವುದು ಕೂಡ ಒಂದು ಅದ್ಭುತ ರಿಲ್ಯಾಕ್ಷೇಶನ್. ಬರೆಯುವ ಮೂಲಕವಾದರೂ ನನ್ನೊಳಗೆ ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೇನೊ.

’ಕೆಂಡಸಂಪಿಗೆ’ಯಲ್ಲಿ ಬರುವ ವಿಮರ್ಶೆಗಳು ಬಲೆರೋಚಕ. ಆ ಮೂಲಕ ನನ್ನ ಒಳಬೇಗುದಿ ಶಾಂತವಾದೀತು. ಕೆಲವೊಮ್ಮೆಯಂತೂ ನಿದ್ದೆ ಸಹಿತ ಬರದೇ ಯಾಕೆ ಹೀಗಾಯ್ತು ಎಂದು ಹೊರಳಾಡಿದ್ದಿದೆ. ಅದರಲ್ಲಿ ನನ್ನ ತಪ್ಪು ಇರಬಹುದು ಇಂಥವೇ ಹತ್ತು ಹಲವು ಅನುಭವಗಳ ಸುತ್ತ ಬರೆಯುತ್ತ ಹೋಗುತ್ತೇನೆ.

ಸಂಗೀತ ಇರದೆ ಬದುಕಲಾರೆವೆ ನಾವು? ಅದರಲ್ಲಿ ಏನೊ ಇದೆ. ಅಥಕ್ಕೆ ನಿಲುಕಲಾರದ್ದು ಅವ್ಯಕ್ತ, ಅನಿರ್ವಚನೀಯ ಆನಂದ ಕೊಡುವಂಥದ್ದು ಅದಕ್ಕೆ ಗುರಿಯಿಲ್ಲ ಅದರೆಡೆಗಿನ ಸವಾರಿಯೇ ಅದ್ಭುತ. ಅದೊಂಥರಾ ಡ್ರಗ್ಸ್ ಇದ್ದ ಹಾಗೆ ಚಟ, ಹುಚ್ಚು ಚಟ, ಚಟಕ್ಕಾಗಿ ಮನುಷ್ಯ ಏನೆಲ್ಲಾ ಕೆಲಸ ಮಾಡಲು ಸಿದ್ಧ, ಏನೆಲ್ಲಾ ಬಿಡಲೂ ಸಿದ್ಧ ಹಾಗಾಗೊದಿಲ್ಲವೇ ಕೊನೆಗೆ ಕಾಂಪ್ರೊಮೈಸ್ ಹಿರಿಯರಿಂದ ಕೌನ್ಸಲಿಂಗ್ ಏನೆಲ್ಲಾ ರಗಳೆ. ಗಂಡೆಂಬ ಪ್ರಾಣಿ ಆ ಸ್ವರಗಳನ್ನು ಸಾಯಿಸುತ್ತದೆ. ಉಸಿರುಗಟ್ಟಿಸುತ್ತದೆ. ಹಾಡಲು ಬರದಂತೆ ಕುತ್ತಿಗೆ ಅಮಕುತ್ತದೇ ಹತ್ತು ಹಲವು ಪ್ರಕರಣಗಳು ಇದೇ ರೀತಿ.

ದಕ್ಷ ಹೆಂಗಸರಿಗಷ್ಟೇ ಈ ಕಲೆ ಒಲಿಯಲು ಸಾಧ್ಯ ಮನೆ ಮತ್ತು ಸಂಗೀತ ಎರಡನ್ನು ತೂಗಿಸುವುದು ಸಾಮಾನ್ಯದ್ದಲ್ಲ ಊಟವಿರದೆ ಬದುಕಲಾರೆವು ಆದರೆ ಸಂಗೀತವಿರದೆ ಬದುಕಬಲ್ಲೆವು ಅಲ್ಲವೇ? ಗಂಡನ ಹೃದಯಕ್ಕೆ ಪ್ರವೇಶ ದೊರೆಯುವುದು ಆತನ ಹೊಟ್ಟೆ ಮೂಲಕ. ಅವರೆಲ್ಲರ ಹೊಟ್ಟೆ ತುಂಬಿದರೆ ಸ್ವರಗಳಿಂದ ನಮ್ಮ ಮನಸ್ಸು ತುಂಬಲು ಬಿಡುತ್ತಾರೆ. ಇಲ್ಲದೆ ಹೋದಲ್ಲಿ ರಗಳೆ, ಕಿರಿ ಕಿರಿ, ಕೊಂಕು ನೋಟ, ಕೊಕ್ಕೆ ಮಾತು ಕೇಳಲು ತಯಾರಿರಬೇಕು.

ನಾನಂತೂ ಸಂಜೆ ಕಾರ್ಯಕ್ರಮ ಇದ್ದಾಗ ಟೇಬಲ್ ತುಂಬಾ ಅಡಿಗೆ ತುಂಬಿಸಿಯೇ ಕಾಲ್ಕೀಳುತ್ತೇನೆ. ಚಪಾತಿ ಪಲ್ಯ, ಪಾಯಸ, ಹಪ್ಪಳ, ಉಪ್ಪಿನಕಾಯಿ, ಕೋಸಂಬರಿ, ಒಗ್ಗರಣೆ ಮಜ್ಜಿಗೆ.... ಆಹಾ! ಉಂಡವನೂ ಖುಷ್ ಹಾಡುವವಳು ಖುಷ್ ಎಂದಾದರೂ ಸಂಜೆ ಭಾರಿ ಅಡಿಗೆ ಮಾಡಿದರೆ ಮಗ ಕೇಳ್ತಾನೆ ಅಮ್ಮಾ ಪ್ರೊಗ್ರಾಮ್ ಕ್ಯಾನ್ಸಲ್ ಆಯಿತಾ ಎಂದು.

ಹೀಗೆ ಖುಷಿ ಖುಷಿಯಿಂದಲೆ ಬದುಕಬೇಕು. ಬರಿ ಮನೆ ಸದಸ್ಯರನಷ್ಟೇ ಅಲ್ಲ ಹೊರಗಿನ ಅಭಿಮಾನಿಗಳನ್ನ ಸಾಥಿದಾರರನ್ನ, ಶಿಷ್ಯಂದಿರನ್ನು, ಸಹೋದ್ಯೋಗಿಗಳನ್ನು ಸಂಬಾಳಿಸಬೇಕಾದ ಪರಿಸ್ಥಿತಿ ಕಲಾವಿದೆಗೆ ಇರುತ್ತದೆ. ಒಟ್ಟಿನಲ್ಲಿ ಈ ಸಂಗೀತ ಬಹಳಷ್ಟು ತಾಳ್ಮೆ ಕಲಿಸುತ್ತದೆ, ಶಿಸ್ತು ಕಲಿಸುತ್ತದೆ ಹೊಂದಿಕೊಂಡು ಹೋಗುವ ಗುಣ ಕಲಿಸುತ್ತದೆ. ಅಂತು ನನ್ನ ಅನುಭವದ ಮೂಸೆಯಲ್ಲಿ ಏನೇನೂ ಮೂಡಿ ಬರುತ್ತದೆಯೋ ನೋಡೊಣ.

ಪುಟದ ಮೊದಲಿಗೆ
 
Votes:  5     Rating: 4.6    
 
 
ಸಂಬಂಧಿಸಿದ ಲೇಖನಗಳು
  ಗಾಂಧಿಗಿರಿ ಮತ್ತು ಸಾಬರ್ಮತಿ:ಸುಧಾ ಚಿದಾನಂದಗೌಡ ಅಂಕಣ
  ಬಿದರಕುಂದಿಯಲ್ಲೊಂದು ಕಾರ್ಯಕ್ರಮ:ತರೀಕೆರೆ ವಾರದ ಬರಹ
  ಗೋರೂಂಗೋರೊ ಸೆರೆಂಗೆಟಿ:ಪ್ರಶಾಂತ್ ತಾಂಜಾನಿಯಾ ಡೈರಿ
  ಇಂತಿಪ್ಪ ಭಾರತ ಮಾಲ್ಡೀವ್ಸ್ ಬಾಂಧವ್ಯ:ಪ್ರವೀಣ ದಿನಚರಿ
  ಅದೃಶ್ಯ ಜನಾಂಗ ಕೊರಗರ ಕುರಿತು:ತಿರುಮಲೇಶರ ವಾರದ ಬರಹ
  ಸಂತಿಗೆ ಹೋಗಿ ಹೆಂಡ್ತಿ ಮರತ ಬಂದರಂತ:ಪ್ರಶಾಂತ ಆಡೂರ ಬರಹ
  ಮಾತಿನ ಅಸೂಕ್ಷ್ಮತೆ:ತರೀಕೆರೆ ವಾರದ ಬರಹ
  ಎಲ್ಲಿ ಹೋದವು ಹೋಮ್ ಲೈಬ್ರರಿಗಳು?:ನಾ.ಡಿಸೋಜಾ ಅಂಕಣ
  ದಾವತ್ತಿಲ್ಲದ ರಂಜಾನ್ ಪ್ರವೀಣ ಮಾಲ್ಡೀವ್ಸ್ ದಿನಚರಿ
  ಆತ್ಮವಿಮರ್ಶೆಯ ಎರಡು ಮಜಲುಗಳು:ತರೀಕೆರೆ ವಾರದ ಬರಹ
  ದ್ವೀಪದ ಮೊದಲ ರಾಜ:ಪ್ರವೀಣ ಮಾಲ್ಡೀವ್ಸ್ ದಿನಚರಿ
  ಹೂವಿನ ಕೊಲ್ಲಿಯ ಮಾಯಾಕಂಬಳಿ:ತಿರುಮಲೇಶರ ವಾರದ ಬರಹ
  ಹಳೇಹುಬ್ಬಳ್ಳಿ ಹಸಬಂಡ್ಸ್:ಪ್ರಶಾಂತ್ ಆಡೂರ ಪ್ರಹಸನ
  ಹಕ್ಕಿದನಿಗೆ ಯಾವ ಅರ್ಥ?:ರಹಮತ್ ತರೀಕೆರೆ ವಾರದ ಬರಹ
  ಪಾವ್ಲು ಮೊರಾಸರ ಕೊಂಕಣಿ ಸಾಹಸ: ನಾ ಡಿಸೋಜ ಅಂಕಣ
  ದ್ವೀಪದಲ್ಲಿ ಉಪವಾಸದ ದಿನಗಳು:ಪ್ರವೀಣ ಮಾಲ್ಡೀವ್ಸ್ ದಿನಚರಿ
  ಹಾನಾ ಎಂಬ ಗೆಳತಿಯ ಯುದ್ಧ ಭಯ:ನಿಹಾರಿಕಾ ಡೈರಿ
  ಮೈಸೂರು ನಗರಿಯ ಉಳಿದೆರಡು ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಮಹಾಲೇಖಕ ಹರ್ಮನ್ ಮೆಲ್ವಿಲ್: ತಿರುಮಲೇಶರ ವಾರದ ಬರಹ
  ಇಂಗ್ಲಿಷ್ ಕನ್ನಡ ಜೋಕಾಲಿ:ಸುಧಾ ಚಿದಾನಂದಗೌಡ ಕಾಲಂ
  ಬಯಲಾಟದ ಅನುಭವ:ತರೀಕೆರೆ ವಾರದ ಬರಹ
  ಗೋರೊಂಗೋರೊ:ಪ್ರಶಾಂತ್ ಬೀಚಿ ತಾಂಜಾನಿಯಾ ಡೈರಿ
  ಕಡಲ ನಡುವಿನ ಮಳೆ:ಪ್ರವೀಣ ಬರೆಯುವ ಮಾಲ್ಡೀವ್ಸ್ ದಿನಚರಿ
  ಹೆಣ್ಣು ಹೇಂಟೆಯ ವೃದ್ದಾಪ್ಯದ ದಿನಗಳು;ಅಬ್ದುಲ್ ರಶೀದ್ ಅಂಕಣ
  ಗೀತೆಯ ಜತೆಗಿನ ಒಡನಾಟ:ತಿರುಮಲೇಶರ ವಾರದ ಬರಹ
  ಕೂಸ ಬಂತ ಕೂಸ:ಪ್ರಶಾಂತ್ ಆಡೂರ ಬರೆದ ರಾಯಲ್ ಸ್ತುತಿ
  ನನ್ನ ಮೊದಲ ಲೇಖನ:ನಾ.ಡಿಸೋಜಾ ಅಂಕಣ
  ದ್ವೀಪದ ದಿವ್ಯ ಆರಾಮ ಜೀವನ:ಪ್ರವೀಣ ಮಾಲ್ಡೀವ್ಸ್ ದಿನಚರಿ
  ಬೈಕು ಪಾಲಿಸುವ ಮರುಳು ಗೋಪಾಲ;ಅಬ್ದುಲ್ ರಶೀದ್ ಅಂಕಣ
  ರೋಗರುಜಿನುಗಳ ಭವಾವಳಿ:ತಿರುಮಲೇಶರ ವಾರದ ಬರಹ
  ಕೋತಿ ಬೇಟೆ ಕಥಾನಕ:ಸುಧಾ ಚಿದಾನಂದ ಗೌಡ ಅಂಕಣ
  ಪುಣೆ ಕುರಿತ ಟಿಪ್ಪಣಿಗಳು:ರಹಮತ್ ತರೀಕೆರೆ ವಾರದ ಬರಹ
  ಸುನಾಮಿಗೆ ಸಿಲುಕಿದ್ದ ಮಾಯಾದ್ವೀಪ:ಪ್ರವೀಣ ದಿನಚರಿ
  ಬಾಲ್ಯಕಾಲದ ವಿಸ್ಮಯಗಳು:ತಿರುಮಲೇಶರ ವಾರದ ಬರಹ
  ಸಿರಿಯಾದಲ್ಲಿ ಹತ್ತು ವರ್ಷಗಳ ಹಿಂದೆ:ಅಬ್ದುಲ್ ರಶೀದ್ ಅಂಕಣ
  ಯಾರದೊ ರೊಕ್ಕಾ ಎಲ್ಲಮ್ಮನ ಜಾತ್ರೆ:ಪ್ರಶಾಂತ್ ಆಡೂರ ಪ್ರಹಸನ
  ಗಣಕಗಳಾಗಿರುವ ಎಳೆ ತಲೆಮಾರು:ತರೀಕೆರೆ ವಾರದ ಬರಹ
  ನಾಡಗೀತೆ ಸುಸ್ತು ಹೊಡೆಸಬಾರದು:ನಾ.ಡಿಸೋಜಾ ಅಂಕಣ
  ಮಾಲೆಯ ಪಾಪದ ಪೋಲೀಸರು:ಪ್ರವೀಣ ಬರೆಯುವ ಮಾಲ್ಡೀವ್ಸ್ ದಿನಚರಿ
  ಜಲಾಲುದ್ದೀನ್ ರೂಮಿ ಮತ್ತು ಮಿಠಾಯಿಪಾಪಾ:ರಶೀದ್ ಅಂಕಣ
  ಲೆಂಗಾಯಿ ಬೆಂಕಿ ಪರ್ವತ:ಪ್ರಶಾಂತ್ ಬೀಚಿ ತಾಂಜಾನಿಯಾ ಡೈರಿ
  ಬಾಲ್ಯಕಾಲದ ಮೋಹದ ಮಾವು:ಸುಧಾ ಚಿದಾನಂದ ಗೌಡ ಅಂಕಣ
  ನೆಲಜೇರಿ ಉರುಸಿನ ಕಣ್ಣು ಮತ್ತು ಕಣ್ಕಟ್ಟು:ತರೀಕೆರೆ ಬರಹ
  ಪಾದಚಾರಿಗಳು ಇಲ್ಲಿ ದೇವರು:ಪ್ರವೀಣ ಮಾಲ್ಡೀವ್ಸ್ ದಿನಚರಿ
  ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ:ಅಬ್ದುಲ್ ರಶೀದ್ ಅಂಕಣ
  ಹುಡುಗೀರ ಎರಡಗಾಲಿ ಮಜಾ:ಪ್ರಶಾಂತ್ ಆಡೂರ ಪ್ರಹಸನ
  ಪ್ರತಿಭಾನಾಶದ ಒಂದು ಪರಿ:ತರೀಕೆರೆ ವಾರದ ಬರಹ
  ದೇವರಿಗಿಂತ ದೊಡ್ಡ ಸರಕಾರಿ ಕೆಲಸ:ನಾ.ಡಿಸೋಜಾ ಅಂಕಣ
  ತಿರುಮಲೇಶರ ಅಮೇರಿಕಾ ಭಾಷಣದ ಆಯ್ದ ಭಾಗಗಳು
  ತಾಯಿಮಾತು ಧಿವೇಹಿ ಮರೆಯಾಗದು:ಪ್ರವೀಣ ಮಾಲ್ಡೀವ್ಸ್ ದಿನಚರಿ
  ಅಲೆಮಾರಿ ಪಾಷ್ತೂನ್ ಹೆಣ್ಣಿನ ಹಾಡು:ವಿಜಯರಾಘವನ್ ಅಂಕಣ
  ಅವಮಾನ ಅಂದ್ರೆ ಆಕಾಶ:ಸುಧಾ ಚಿದಾನಂದಗೌಡ ಕಾಲಂ
  ಭಾಷೆಯಲ್ಲಿ ‘ನೈಸು’ ಮತ್ತು ‘ಬಿರುಸು’:ತರೀಕೆರೆ ವಾರದ ಬರಹ
  ಲಕ್ಷ್ಮೀಶಂಕರ ಜೋಶಿ ಬರೆದ ಬೇಳೆ ಪುರಾಣ
  ಮಾಂದಲ್ ಪಟ್ಟಿ ಪರ್ವತಧ್ಯಾನ:ಅಬ್ದುಲ್ ರಶೀದ್ ಅಂಕಣ