ಮೇ ೨೧, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನಕ್ಷತ್ರ ಬರೆದ ಒಂದೇ ಒಂದು ಕವಿತೆ    
ನಕ್ಷತ್ರ
ಗುರುವಾರ, 17 ಮೇ 2012 (02:22 IST)

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ಕವಿತೆ.

ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು

ಮತ್ತೆ ಕೂಡಿಟ್ಟಿರುವೆ, ತುಂಬಿಕೊಂಡಿರುವೆ
ಎಂದಿನಂತೆ ಇಂದೂ ಮರೆತಿರುವೆ ಕೂಡಾ
ಇಲ್ಲೊಂದು ಎಲೆ ಗಾಳಿಯಲ್ಲಿ ಬಳುಕಿಕೊಂಡು,
ಏನೋ ಬೇಕೆಂಬಂತೆ ನಾಚುತ್ತಿದೆ
ಒಂದೇ ಒಂದು ಧೀರ್ಘ ಉಸಿರು
ಈ ಚಲಿಸುವ ರಸ್ತೆ, ಮರ, ಬೆಳಗಿನ
ಮುದ್ದು ಆಕಾಶ, ಓಡಿ ಓಡಿ
ನನ್ನನ್ನು ಅಲ್ಲಿಗೆ ತಲುಪಿಸುತ್ತದೆ
ಮುಂದೆ.. ಏನೆಂದು ಗೊತ್ತಿಲ್ಲದಂತೆ
ನೀನು ಬೀಗಿಕೊಂಡು ತಣ್ಣಗೆ ನಗುತ್ತಿರುವೆ
ಇರು, ಈಗಷ್ಟೇ ಬಂದಿರುವೆನೆಂದೇ?
ಮೊದಲು ಎಲ್ಲಿ ಮುತ್ತಿಡಲಿ ಮೆತ್ತಗೆ?

ಹೇ ಪರಮಾತ್ಮ! ಎಲ್ಲಿಂದ ಹೇಗೆ ನುಸುಳಿದೆ
ಮೈಯ್ಯಲ್ಲಿ ಬಚ್ಚಿಟ್ಟ ಚಿಟ್ಟೆಗಳನ್ನು ಹಾರಿಸಿ
ಕಣ್ಣು ಹೇಗೆ ತೆರೆಯಲಿ, ಕಿವಿಯ ಆಳದಲ್ಲಿ
ಮೂಗು, ಕುತ್ತಿಗೆ ಕಚ್ಚಿ ನಿನ್ನ ನಾಲಗೆ, ಎಂಜಲು
ಸಣ್ಣಗೆ ಬೆವರಿ, ಬೆಚ್ಚಗಾಗಿ ಏದುಸಿರು ಬಿಡುತ್ತಿರುವ ನನ್ನ ಎದೆ
ಅಷ್ಟೇ ಗೊತ್ತು ನನಗೆ
ಎಣಿಸಿದ ಬೆರಳುಗಳನ್ನು ಅಮುಕಿ ಮುರಿದು ಬಿಡು
ಕಾಣುವ ಹೂಗಳೇ  ಮುಷ್ಟಿ ಹಿಡಿದುಹಾಗೇ ನಗುತ್ತಿರಿ,
ಹರಿಯುವ ಹಾವಾಗಿರುವೆ, ಹಾ.. ಸುಖಿಸುತ್ತಿರುವೆ
ಹೇ ಪರಮಾತ್ಮ! ಇನ್ನು ತಡೆಯಬೇಡ

ಕಿಬ್ಬೊಟ್ಟೆಗೆ ಸರಿಯಾಗಿ ತಲೆಯಿಡು
ಕೈತುಂಬಾ ಹಿಡಿದು ಒತ್ತಿಕೋ
ತೊಟ್ಟಿಗೆ ತೊಟ್ಟು ತಾಗಿಸಿ
ಮೆತ್ತಗೆ ಆಡುವಷ್ಟು ಕಾಲವಿದೆ ನಮಗೆ
ನನ್ನ ಸಂಧಿ ಸಂಧಿಗಳಲ್ಲಿ ನಿನ್ನನ್ನು ಹಡೆದೇ ತೀರುವೆ
ತೊಡಿಸಿ ಬಿಡು ನಿನ್ನ ಆಭರಣ
ಒಳಗೆ ಏನಾದರು ಪರಿಮಳದ ಮಾತಾಡು
ನನಗೆ ಅವಸರಿಲ್ಲ.. ನಿನಗೂ?
ನಮ್ಮ ಉಸಿರು ಇನ್ನಷ್ಟು ದೂರ ಓಡುವುದಿದೆ
ಮತ್ತೆ ನಾ ಅಳುವುದೇಕೆ?
ಬಿಡಿಸಿಕೊಳ್ಳಲು ಹೆಣಗಾಡುವುದೇಕೆ?

ಮುಂದೆ,
ಒಂದು ಊರು, ಒಂದೇ ಮನೆ
ಮತ್ತು ಅಲ್ಲಿ ನಿಗೂಢವಾಗಿ
ಕಳೆದುಹೋಗಿರುವ ನಾನು
ಅದೊಂದು ಮಗುವೋ, ನೀನೋ
ಗಾಢ ನಿದ್ದೆಯಲ್ಲಿ ಮುಖ ಹುದುಗಿಸಿ
ಸವರುತ್ತಿದೆ
ಇಷ್ಟೇ ತೆರೆದ ದುಂಡು ಬಾಯಿಗೆ
ದುಂಡು ಮೊಲೆಯಿಟ್ಟು ಬಿಡುವೆ
ಬದುಕುವುದಾದರೆ ಇದೊಂದು ಘಳಿಗೆ

ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು

ಪುಟದ ಮೊದಲಿಗೆ
 
Votes:  15     Rating: 3    
 
 
ಸಂಬಂಧಿಸಿದ ಲೇಖನಗಳು
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’