ಮೇ ೧೮, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದಯಾನಂದ ಗ್ಲೋಬಲ್‌ಟೆಂಟಿನಲ್ಲಿ ನೋ ಮ್ಯಾನ್ಸ್ ಲ್ಯಾಂಡ್ ಸಿನೆಮಾ    
ಟಿ.ಕೆ. ದಯಾನಂದ
ಬುಧವಾರ, 23 ಮೇ 2012 (02:42 IST)

ನಮಗೆ ಇರಾಕಿನಲ್ಲಿ ಅಮೆರಿಕನ್ ಸೈನಿಕರಿಂದ ಬಳಕೆಯಾದ ಲ್ಯಾಂಡ್ ಮೈನ್‌ ಗೊತ್ತು, ಭಯೋತ್ಪಾದಕರು ಬಳಸುವ ಹ್ಯಾಂಡ್ ಗ್ರೇನೇಡ್ ಗೊತ್ತು, ರಾಯಲಸೀಮೆಯ ಪ್ರಾಂತದಂತಹ ಫ್ಯಾಕ್ಷನಿಸ್ಟುಗಳು ತಯಾರಿಸುವ ದೇಸೀಬಗೆಯ ನಾಟಿಗ್ರೇನೇಡುಗಳೂ ಗೊತ್ತು, ಇತ್ತೀಚೆಗಿನ ಆವೃತ್ತಿಗಳಾದ ಪ್ಲಾಸ್ಟಿಕ್ ಎಕ್ಸ್ ಪ್ಲೋಸಿವ್ಸ್, ಲಂಡನ್‌ನಲ್ಲಿ ಪ್ರಯೋಗವಾದ ಅನಿಲಸ್ಫೋಟಕಗಳೂ ಗೊತ್ತು, ಆದರೆ ಇಲ್ಲೊಂದು ಬಗೆಯ ಸ್ಫೋಟಕವಿದೆ. ಬೌನ್ಸಿಂಗ್ ಬಾಂಬ್ ಅಂತ ಅದರ ಹೆಸರು. ಯುದ್ಧಗಳಲ್ಲಿ, ಗಡಿರಕ್ಷಣೆಯ ತಂತ್ರವಾಗಿ ದೇಶಗಳ ಗಡಿಬೇಲಿಗಳ ಸಾಲುಗಳಲ್ಲಿ ಹೂತಿಡಲಾಗುವ ಒಂದು ಬಗೆಯ ಸ್ಫೋಟಕವಿದು. ಉಳಿದೆಲ್ಲ ಬಗೆಯ ಸ್ಫೋಟಕಗಳಲ್ಲೂ ಟೈಮಿಂಗ್ ಮತ್ತು ಚಾಕಚಕ್ಯತೆಯ ನೆರವಿನಿಂದ ಯಾರಾದರೂ ಜೀವ ಉಳಿಸಿಕೊಳ್ಳಬಹುದೇನೋ ಆದರೆ ಬೌನ್ಸಿಂಗ್ ಬಾಂಬ್ ವಿಚಾರದಲ್ಲಿ ಅದು ಗಿಟ್ಟದ ಸಾಹಸ. ಸ್ಫೋಟಕ ಮತ್ತು ಸ್ಪ್ರಿಂಗ್ ನ ಜೋಡಣೆಯ ಮೂಲಕ ಪ್ರೆಸ್ ಆದ ಕೂಲೆ ಆಕ್ಟೀವ್ ಆಗುವ ಮತ್ತು ಹೇರಲ್ಪಟ್ಟ ಭಾರದ ಪ್ರೆಶರ್ ಒಂದು ಔನ್ಸಿನಷ್ಟು ಕಡಿಮೆಯಾದರೂ ತಂತಾನೇ ಸ್ಪೋಟಗೊಳ್ಳುವ ತಂತ್ರದ ಸ್ಫೋಟಕವಿದು. ಈ ಬಗೆಯ ಸ್ಫೋಟಕಗಳನ್ನು ಗಡಿಬೇಲಿಯ ಸಾಲುಗಳಲ್ಲಿ ಅಂತರ್‌ದೇಶೀಯ ನುಸುಳುಕೋರರನ್ನು ನಿಯಂತ್ರಿಸಲು ಹೂತಿಡಲಾಗುತ್ತದೆ. ಮಣ್ಣೊಳಗೆ ಹುಗಿದ ಈ ಸ್ಫೋಟಕದ ಮೇಲೆ ನುಸುಳುಕೋರರ ದೇಹದ ಇಷ್ಟೇ ಇಷ್ಟು ಭಾರ ಬಿದ್ದರೂ ಆಕ್ಟೀವ್ ಆಗುವ ಈ ಸ್ಫೋಟಕ, ಭಾರ ಕಡಿಮೆಯಾಗುತ್ತಿದ್ದಂತೆ ಸುತ್ತಮುತ್ತಲ ಹತ್ತಾರು ಮೀಟರಿನ ವ್ಯಾಪ್ತಿಯೊಳಗೆ ಇನ್ ಸ್ಟಂಟ್ ಸ್ಮಶಾನವೊಂದನ್ನು ಸ್ಥಾಪಿಸುತ್ತದೆ.     

ಈಗ ಅಂಥದೊಂದು ಬೌನ್ಸಿಂಗ್ ಬಾಂಬ್ ಅನ್ನು ಯಾರದ್ದೂ ಅಲ್ಲದ ನೆಲವೊಂದರಲ್ಲಿ ಹೂತಿಡಲಾಗಿದೆ ಎಂದುಕೊಳ್ಳೋಣ. ತಿಳಿದೋ ತಿಳಿಯದೆಯೋ ನಮ್ಮ ದೇಹ ಆ ಸ್ಫೋಟಕದ ಮೇಲೆ ಅಂಗಾತ ಬಿತ್ತು. ನಾವು ಮಕಾಡೆ ಬಿದ್ದಿರುವುದು ಬೌನ್ಸಿಂಗ್ ಬಾಂಬ್ ಒಂದರ ಮೇಲೆ. ಸಾವು ನಮ್ಮ ಕಣ್ಣೆದುರಲ್ಲೇ ಅಂದರ್ ಬಾಹರ್ ಇಸ್ಪೀಟೆಲೆಗಳನ್ನು ಹಾಕಿಕೊಂಡು ಕುಳಿತ ಅಂಥ ಅಪಾಯಕಾರಿ ಟೈಮಿನಲ್ಲಿ ಏನೇನು ಹುಟ್ಟಬಹುದು ನಮ್ಮೊಳಗೆ? ಜೀವಭಯ? ಆಂತ್ಯಿಕ ಆಲೋಚನೆ? ನರಳಿಕೆಯಿಲ್ಲದ ಸಾವಾದರೂ ಬರಬಾರದೆ ಎನ್ನುವ ಗಟ್ಟಿಗ ತೆವಲು? ಬದುಕಿದ ಬದುಕಿನ ನಿರರ್ಥಕತೆಯ ಬಗೆಗಿನ ಈಸ್ಟ್ ಮನ್ ಬಣ್ಣದ ಫ್ಲಾಶ್ ಬ್ಯಾಕು? ಇದು ನಮ್ಮ ಕಥೆಯಾಯಿತು. ಇಂಥಹದೊಂದು ಆಲೋಚನೆ ಬೋಸ್ನಿಯಾ ಎಂಬ ಪುಟಾಣಿದೇಶದ ಡ್ಯಾನಿಶ್ ತನೋವಿಕ್ ಎಂಬ ಚಿತ್ರ ನಿರ್ದೇಶಕನ ತಲೆಯೊಳಗೆ ಮೊಟ್ಟೆಯಿಟ್ಟರೆ ಅಲ್ಲೊಂದು ಅದ್ಭುತ ಚಿತ್ರರೂಪಕ ಕೈಕಾಲು ಚಿಗುರುತ್ತದೆ. ಹಾಗೆ ಹುಟ್ಟಿದ ಬೋಸ್ನಿಯನ್ ಭಾಷೆಯ ಯುದ್ದಾಧಾರಿತ ಚಿತ್ರದ ಹೆಸರು ಯಾರದ್ದೂ ಅಲ್ಲದ ನೆಲ ಅಥವ ನೋ ಮ್ಯಾನ್ಸ್ ಲ್ಯಾಂಡ್.

ಸ್ಲೊವೇನಿಯಾ, ಕ್ರೋಷಿಯ, ಸೆರ್ಬಿಯ, ಬೋಸ್ನಿಯಾ, ಹರ್ಟ್ಸ್ ಗೋವಿಯ, ಮೆಸಿಡೋನಿಯ, ಮತ್ತು ಮಾಂಟೆನೆಗ್ರೊ ಎಂಬ ಆರು ಬಿಡಿ ದೇಶಗಳ ಸಂಯುಕ್ತ ಸಂಸ್ಥಾನವಾದ ಯುಗೋಸ್ಲೋವಿಯಾ ೧೮ನೇ ಶತಮಾನದಿಂದಲೂ ಜನಾಂಗೀಯ ದ್ವೇಷ, ಪರಸ್ಪರ ಜನಾಂಗದವರನ್ನು ಕೊಂದು ಕೊಲ್ಲಲ್ಪಟ್ಟು ನರಳುತ್ತಿರುವ ಸಂಸ್ಥಾನ. ಈ ಸಂಸ್ಥಾನದೊಳಗಿನ ಎರಡು ಪುಟ್ಟ ದೇಶಗಳಾದ ಸೆರ್ಬಿಯ ಮತ್ತು ಬೋಸ್ನಿಯಗಳ ನಡುವಿನ ಅಂತರ್ಯುದ್ಧದ್ದೇ ಬೇರೆಯ ಕಥೆ. ಗಡಿ ನುಸುಳುಕೋರರು, ಜನಾಂಗೀಯ ಶ್ರೇಷ್ಟತೆ, ಇಬ್ಬದಿಯ ದೇಶಗಳ ಸರ್ಕಾರ ನಡೆಸುವವರ ನಡುವಿನ ಮುಸುಕಿನ ಗುದ್ದಾಟಗಳ ಕಾರಣಕ್ಕೆ ಎರಡು ಶತಮಾನಗಳೇ ಕಳೆದರೂ ಇನ್ನಾದರೂ ಆರದ ಅಲ್ಲಿನ ತ್ವೇಷಮಯ ಯುದ್ಧದ ಪರಿಸ್ಥಿತಿಗಳನ್ನು ಶಮನಗೊಳಿಸಲು ವಿಶ್ವಸಂಸ್ಥೆಗೇ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ವಿಶ್ವಸಂಸ್ಥೆಯ ಒಂದು ಶಾಂತಿಪಾಲನ ತುಕಡಿಯೇ ಅಲ್ಲಿ ಜನಸಾಮಾನ್ಯರ ಪ್ರಾಣವನ್ನಾದರೂ ಉಳಿಸುವ ಸಲುವಾಗಿ ಶಾಶ್ವತವಾಗಿ ಬೀಡುಬಿಟ್ಟಿದೆ.

ಇಂತಹ ಪರಿಸ್ಥಿತಿಯ ಎರಡು ದೇಶಗಳ ಗಡಿಗಳ ನಡುವೆ ಉಭಯದೇಶದ ಸೈನಿಕರ ಪ್ರವೇಶವನ್ನೂ ನಿಷೇಧಿಸಿದ ಸ್ವಲ್ಪ ಪ್ರದೇಶವುಂಟು. ಇದನ್ನು ಯಾರದ್ದೂ ಅಲ್ಲದ ನೆಲ ಎಂದು ಕರೆಯುತ್ತಾರೆ. ಇಂತಿರುವಲ್ಲಿ ನಿರ್ದೇಶಕ ಡ್ಯಾನಿಶ್ ತನೋವಿಕ್ ಬೋಸ್ನಿಯಾ ದೇಶದಿಂದ ಸೆರ್ಬಿಯ ದೇಶಕ್ಕೆ ಗಡಿಯಲ್ಲಿ ಕದ್ದು ನುಸುಳುವ ಸೆರ್ಬಿಯನ್ ವಾಸಿ ಸಾಮಾನ್ಯ ಜನರಿಂದ ಚಿತ್ರವನ್ನು ಆರಂಭಿಸುತ್ತಾರೆ. ಹೀಗೆ ಗಡಿ ನುಸುಳುವ ಜನರಲ್ಲಿ ಸೇರಾ ಚೀಕಿ ಎಂಬಿಬ್ಬರೂ ಇದ್ದಾರೆ. ಬೋಸ್ನಿಯನ್ನರ ಮೇಲೆ ಸೆರ್ಬಿಯ ದೇಶದ ಸೈನಿಕರು ನುಸುಳುವಿಕೆಯನ್ನು ತಡೆಯಲು ಗುಂಡಿನ ಧಾಳಿ ಆರಂಭಿಸಿದ್ದಾರೆ, ಗುಂಡೇಟು ತಿಂದ ಸೇರಾ ಕುಸಿದು ಬಿದ್ದರೆ, ಚೀಕಿ ಅಲ್ಲೇ ಕಂದಕವೊಂದಕ್ಕೆ ಎತ್ತೆಸೆಯಲ್ಪಟ್ಟಿದ್ದಾನೆ, ಏನು ನಡೆಯಿತೆಂದು ಗೊಂದಲಕ್ಕೆ ಬೀಳುವ ಬೋಸ್ನಿಯನ್ ಸೈನ್ಯಾಧಿಕಾರಿಯು ಸತ್ತವರು ಯಾರೆಂದು ತಿಳಿಯುವ ಕುತೂಹಲಕ್ಕೆ ಸೈನಿಕರಿಗೆ ನಿಷಿದ್ಧವಾದ ಯಾರದ್ದೂ ಅಲ್ಲದ ನೆಲಕ್ಕೆ ನೀನೋ ಎಂಬ ಅನನುಭವಿ ಯುದ್ದ ವಾಲಂಟೀರ್ ನನ್ನು ಮತ್ತೊಬ್ಬ ಅನುಭವಿ ವಾಲಂಟೀರ್ ಜೊತೆಮಾಡಿ ಕಳಿಸಲಾಗುತ್ತದೆ.

ಈ ಹಿಂದೆ ಫಿರಂಗಿಗುಂಡಿನ ಧಾಳಿಗೆ ಕುಸಿದು ಬಿದ್ದ ಸೆರ್ಬಿಯನ್ ಸೇರಾ ಮತ್ತು ಗಾಯಗೊಂಡಿದ್ದ ಮತ್ತೊಬ್ಬ ಸೆರ್ಬಿಯನ್ ಚೀಕಿ ಇಬ್ಬರೂ ಬದುಕಿಯೇ ಇದ್ದಾರೆ. ಅಲ್ಲಿ ಗುಂಡೇಟು ತಿಂದು ಸತ್ತವರ ಹೆಣಗಳ ನಡುವೆ ನಡೆಯುತ್ತ ಬರುವ ಇಬ್ಬರೂ ವಾಲಂಟೀರ್ ಗಳಲ್ಲಿ ಅನುಭವಿಯು ಒಂದು ತಮಾಷೆ ಮಾಡ್ತೇನೆ ನೋಡು ಎಂದು ಮೂರ್ಛೆ ಹೋಗಿದ್ದ ಸೇರಾನ ದೇಹವನ್ನು ಒಂದು ಕಡೆ ಎಳೆದು ಅವನ ಕೆಳಗೆ ಬೌನ್ಸಿಂಗ್ ಬಾಂಬ್ ಒಂದನ್ನು ಫಿಕ್ಸ್ ಮಾಡಿ ಅದರ ಮೇಲೆ ಸೇರಾನನ್ನು ಮಲಗಿಸಿ ಬಾಂಬ್ ಆಕ್ಟಿವೇಟ್ ಆಗುವಂತೆ ಮಾಡುತ್ತಾನೆ. ಜೀವಂತವಿರುವ ಸೇರಾನ ದೇಹ ಚೂರೇ ಚೂರು ಮಿಸುಕಿದರೂ ಬೌನ್ಸಿಂಗ್ ಬಾಂಬ್ ಸ್ಫೋಟಗೊಳ್ಳಲಿದೆ.. ಅದೇ ಸಮಯಕ್ಕೆ ಗಾಯಗೊಂಡಿದ್ದ ಸೆರ್ಬಿಯನ್ ಚೀಕಿ ಇವರಿಬ್ಬರತ್ತ ಗುಂಡು ಹಾರಿಸಿ ಸೇರಾನ ಕೆಳಗೆ ಬೌನ್ಸಿಂಗ್ ಬಾಂಬ್ ಅಳವಡಿಸಿದ್ದ ಹಳೆಯ ವಾಲಂಟೀರ್ ನನ್ನು ಕೊಲ್ಲುತ್ತಾನೆ, ಬೋಸ್ನಿಯನ್ ವಾಲಂಟೀರ್ ನೀನೋ ಮಾತ್ರ ಬದುಕುಳಿಯುತ್ತಾನೆ..

ಈಗ ನಿಜವಾದ ಸಂದಿಗ್ದತೆ ಶುರುವಾಗುತ್ತದೆ, ಯಾರದ್ದೂ ಅಲ್ಲದ ನೆಲದಲ್ಲಿರುವ ಈ ಇಬ್ಬರಿಗೂ ಯಾವ ದೇಶದ ಸೈನಿಕರ ಕಡೆಯಿಂದ ಬೇಕಾದರೂ ಗುಂಡೇಟು ಬೀಳುವ ಅಪಾಯದಲ್ಲಿದ್ದಾರೆ. ಬೋಸ್ನಿಯನ್ ನೀನೋ ಮತ್ತು ಸೆರ್ಬಿಯನ್ ಚೀಕಿ ನಡುವೆ ಈಗ ಶತ್ರುತ್ವವೂ ಅಲ್ಲದ ಗೆಳೆತನವೂ ಹುಟ್ಟದ ಒಂದು ವಿಚಿತ್ರ ಸಂಬಂಧದೊಳಗೆ ಎದುರುಬದುರಾಗಿದ್ದಾರೆ. ಇಬ್ಬರೂ ಅವರವರ ದೇಶಗಳ ಪರವಾಗಿ ವಾದ ಮಂಡಿಸಿಕೊಂಡು ಜನಾಂಗಶ್ರೇಷ್ಟತೆಯನ್ನು ಎತ್ತಿ ಹಿಡಿಯುತ್ತ ಬಿಕ್ಕಟ್ಟಿನ ಮಡುವಿನೊಳಗೂ ವೈರುಧ್ಯಗಳನ್ನು ಮಸೆಯುತಿದ್ದಾರೆ. ಇಷ್ಟರೊಳಗೆ ಬೌನ್ಸಿಂಗ್ ಬಾಂಬ್ ಮೇಲೆ ಮಲಗಿಸಲ್ಪಟ್ಟ ಸೇರಾನ ದೇಹ ಅಲುಗುತ್ತಿದೆ. ಅವನನ್ನು ಅಲುಗಾಡದಂತೆ ಹಾಗೆ ಇರಲು ಹೇಳಿ ಇಬ್ಬರೂ ಅವನ ಜೀವರಕ್ಷಣೆಗೆ ಇಲ್ಲದ ತಂತ್ರೋಪಾಯಗಳ ತಲಾಶೆಗೆ ಬಿದ್ದಿದ್ದಾರೆ. ಈ ತಲಾಶೆಯಲ್ಲಿ ಜನಾಂಗೀಯ ವೈರುಧ್ಯವು ಮನುಷ್ಯತ್ವದ ದ್ರವರೂಪಿ ಚಲನೆಯೊಳಗೆ ಏಕವಾಗಿವೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯವರೆಗೂ ಆಕ್ಟೀವ್ ಆಗಿರುವ ಬೌನ್ಸಿಂಗ್ ಬಾಂಬಿನ ಮೇಲೆ ಇರಿಸಲ್ಪಟ್ಟ ಸೇರಾನ  ಜೀವಂತದೇಹದ ವಿಚಾರ ತಲುಪಿದೆ. ಬಾಂಬನ್ನು ನಿಷ್ಕ್ರಿಯಗೊಳಿಸಲು ವಿಶ್ವಸಂಸ್ಥೆಯ ಬಾಂಬ್ ನಿಷ್ಕ್ರಿಯ ತಜ್ಞನೊಬ್ಬ ಯು.ಎನ್. ಕಮ್ಯಾಂಡರನೊಟ್ಟಿಗೆ ಯಾರದ್ದೂ ಅಲ್ಲದ ನೆಲದೊಳಗೆ ಬಂದಿದ್ದಾನೆ, ಅವನ ಹಿಂದೆ ಬಿದ್ದ ಟಿವಿ ಚಾನೆಲ್ಲೊಂದರ ವರದಿಗಾರ್ತಿಯ ಮೂಲಕ ಸೇರಾನ ಪರಿಸ್ಥಿತಿಯು ಜಗತ್ತಿನೆದುರು ಬಟ್ಟೆ ಬಿಚ್ಚಿ ನಿಂತಿದೆ. ಬೌನ್ಸಿಂಗ್ ಬಾಂಬ್ ಮೇಲೆ ಬಿದ್ದ ಸೇರಾನ ಕೆಳಗಿರುವುದು ಬೌನ್ಸಿಂಗ್ ಬಾಂಬ್ ಎಂದು ಆತನಿಗೆ ಅರಿವಾಗುತ್ತಿದ್ದಂತೆ ಜಗತ್ತಿನ ಯಾವ ತಂತ್ರಜ್ಞಾನವೂ ಒಮ್ಮೆ ಆಕ್ಟೀವ್ ಆದ ಈ ಬಗೆಯ ಬಾಂಬ್ ಅನ್ನು ನಿಷ್ಟ್ಕ್ರಿಯಗೊಳಿಸಲು ಸಾಧ್ಯವೇ ಇಲ್ಲವೆಂದು ಕೈಚೆಲ್ಲುತ್ತಾನೆ. ಮೀಡಿಯಾಗಳ ಮೈಕುಗಳ ಬಂದೂಕಿಗೇ ಗಾಬರಿಬಿದ್ದ ವಿಶ್ವಸಂಸ್ಥೆಯ ಶಾಂತಿಪಡೆಯ ಕಮ್ಯಾಂಡರ್ ಬಾಂಬ್ ತಜ್ಞನಿಗೆ ಸುಮ್ಮನೆ ಸೇರಾನ ದೇಹದ ಬಳಿ ಕುಳಿತು ಬಾಂಬ್ ಡಿಆಕ್ಟಿವೇಟ್ ಮಾಡುವಂತೆ ನಟಿಸುತ್ತ ಕೂರಲು ಆರ್ಡರ್ ಮಾಡುತ್ತಾನೆ. ಈಗ ಸೇರಾನನ್ನು ಉಳಿಸುವ ಡ್ರಾಮಾ ಟಿವಿ ಕೆಮೆರಾಗಳೆದುರು ಶುರುವಾಗಿದೆ. ಒಂದು ಜೀವ ರಕ್ಷಣೆಯನ್ನು ಕೂಡ ಮಾಡಲಾಗದ ವಿಶ್ವಸಂಸ್ಥೆಯೆಂಬ ಅಪವಾದ ಕೇಳಲು ಕಮ್ಯಾಂಡರ್ ಸಿದ್ದನಿಲ್ಲ, ಸೇರಾನಿಗೇನಾಗುತ್ತದೆಂದು ಟಿವಿ ಮುಂದೆ ಕುಳಿತ ಜಗತ್ತಿನೆದುರು ಕಮ್ಯಾಂಡರ್ ಕೆಮೆರಾ ಎದುರಿಗೆ ನಿಂತು ನೇರಪ್ರಸಾರದಲ್ಲಿಯೇ ಸುಳ್ಳುಗಳನ್ನು ಪೋಣಿಸತೊಡಗಿದ್ದಾನೆ. ನೋಡಿ ನೋಡಿ, ಒಬ್ಬ ಸೆರ್ಬಿಯನ್ ನಾಗರೀಕನ ಜೀವ ನಮಗೆಷ್ಟು ಮುಖ್ಯ, ಅದಕ್ಕಾಗಿ ಎಷ್ಟೊಂದು ಕಷ್ಟಪಡುತ್ತಿದ್ದೇವೆ

ನಮ್ಮ ದೇಸೀಚಿತ್ರ ಪೀಪ್ಲಿ ಲೈವ್ನಂತೆಯೇ ಎಕ್ಸ್ ಕ್ಲುಸೀವ್ ಸುದ್ದಿಗಾಗಿ ಹಪಹಪಿಸುವ ಅಂತರರಾಷ್ಟ್ರೀಯ ಟಿವಿ ಚಾನೆಲ್ಲೊಂದರ ಮುಖ್ಯಸ್ಥನು ಸ್ಥಳದಲ್ಲಿದ್ದ ತನ್ನ ವರದಿಗಾರ್ತಿಗೆ ಬಾಂಬಿನ ಮೇಲೆ ಜೀವಹಿಡಿದು ಉಸಿರಾಡುತ್ತಿರುವ ಸೇರಾನನ್ನು ಮಾತನಾಡಿಸಿ ಆತನ ಬೈಟ್ (ತುಣುಕು ಸಂದರ್ಶನ) ತೆಗೆದುಕೊಳ್ಳಲು ಆರ್ಡರು ಪಾಸು ಮಾಡಿದ್ದಾನೆ. ಇವೆಲ್ಲವನ್ನೂ ಮೊದಲಿನಿಂದ ನೋಡಿದ್ದ ಸೆರ್ಬಿಯನ್ ಚೀಕಿಯು ಕಾಪಾಡಲು ಸಾಧ್ಯವೇ ಆಗದ ಸೇರಾನ ಜೀವದ ಸುತ್ತಲೂ ರಣಹದ್ದಿನಂತೆ ಮುತ್ತಿರುವ ವಿಶ್ವಸಂಸ್ಥೆಯ ಅಧಿಕಾರಿಗಳು, ಮೀಡಿಯಾಗಳು, ನಟಿಸುತ್ತ ಕುಳಿತ ಬಾಂಬ್ ನಿಷ್ಕ್ರಿಯ ತಜ್ಞ ಎಲ್ಲವೂ ನಾಟಕವೆಂದು ಮನವರಿಕೆಯಾಗಿದೆ, ಯಾರಿಗೂ ಸೇರಾನ ಜೀವದ ಕುರಿತು ಕನಿಷ್ಟಪ್ರೀತಿಯೂ ಇಲ್ಲದೆ ಯಾರನ್ನೋ ಮೆಚ್ಚಿಸಲು, ತಮ್ಮ ಮುಖವುಳಿಸಿಕೊಳ್ಳಲು ಜೀವರಕ್ಷಣೆಯ ನಾಟಕವಾಡುತ್ತ ಕುಳಿತವರ ಮೇಲೆ ಸಿಟ್ಟಿಗೆದ್ದು ಆ ಸಿಟ್ಟಿನಲ್ಲಿ ಬೋಸ್ನಿಯನ್ ವಾಲಂಟೀರ್ ನೀನೋನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಶಾಂತಿಪಡೆಯ ಬಂದೂಕು ಸೆರ್ಬಿಯನ್ ಚೀಕಿಯನ್ನು ಸೀಳಿಹಾಕಿದೆ. ಅತ್ತ ವಿಶ್ವಸಂಸ್ಥೆಯ ಕಮ್ಯಾಂಡರ್ ಕೆಮೆರಾ ಎದುರು ಜಗತ್ತಿಗೆ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತ ತನ್ನ ಮಾನವೀಯತೆಯ ನಟನೆಯನ್ನೂ ಮುಂದುವರೆಸಿದ್ದಾನೆ. ಹಾಗೆಯೇ ಕತ್ತಲಾಗತೊಡಗಿದೆ.

ಬೌನ್ಸಿಂಗ್ ಬಾಂಬಿನ ಮೇಲೆ ಕಣ್ಣು ಪಿಳುಕಿಸುತ್ತ ಮಲಗಿದ ಸೇರಾನ ಮಿಸುಕಲೂ ಆಗದ ದೇಹವು, ಹೊಸ ಬದುಕಿಗಾಗಿ ತನ್ನದಲ್ಲದ ಬೋಸ್ನಿಯಾ ದೇಶವನ್ನು ತೊರೆದು ಸೆರ್ಬಿಯಾ ದೇಶದ ಗಡಿ ನುಸುಳುವ ಹಂಬಲ ಅವನನ್ನು ಸಾವಿನ ಮೇಲೆ ಮಲಗಿಸಿದ್ದಕ್ಕೆ ಕೊರಗುತ್ತಿದೆ. ನಟನೆಯಲ್ಲಿ ತೊಡಗಿದ್ದ ಬಾಂಬ್ ತಜ್ಞನೊಟ್ಟಿಗೆಯೇ ಮೀಡಿಯಾಗಳೂ, ವಿಶ್ವಸಂಸ್ಥೆಯ ಅಧಿಕಾರಿಗಳು, ಶಾಂತಿಪಾಲನ ಪಡೆಯವ ಯೋಧರು ಎಲ್ಲರೂ ಅವರವರ ಜಗತ್ತಿನೊಳಗೆ ತೆರಳುತ್ತಿದ್ದಾರೆ. ಇತ್ತ ಸಾವಿನ ಮೇಲೆ ದೇಹವಿರಿಸಿಕೊಂಡ ಸೇರಾನತ್ತ ಅವರ‍್ಯಾರ ಗಮನವೂ ಹೋಗುವುದೂ ಇಲ್ಲ. ಬದುಕಿರುವ ತನಕ ಯಾರದ್ದೂ ಅಲ್ಲದ ನೆಲದಲ್ಲಿ ಯಾರೂ ಹೆಜ್ಜೆಯಿಡದ ಕಂದಕವೊಂದರಲ್ಲಿ ಬದುಕಿರುವವರೆಗೆ ಮಿಸುಕಾಡದೆಯೇ ಜೀವ ಬಿಡುವ ಸಂದಿಗ್ದತೆಯಲ್ಲಿ ಸೇರಾ ಹಾಗೆಯೇ ಇದ್ದಾನೆ.. ಚಿತ್ರದ ಕೊನೆಯಲ್ಲಿ ಆತ ಸಾಯುವುದೂ ಇಲ್ಲ, ಹಾಗೆಯೇ ಬದುಕುವುದೂ ಇಲ್ಲ..

ಯಾರೋ ತಮಾಷೆಗೆಂದು ಇಟ್ಟ ಬೌನ್ಸಿಂಗ್ ಬಾಂಬು, ಅದಕ್ಕೆ ಮೂಲವಾದ ಜನಾಂಗೀಯ ಕಲಹ, ಜನಾಂಗೀಯಾಧಾರಿತ ಪ್ರಭುತ್ವಗಳು, ಪ್ರಭುತ್ವಗಳ ಜುಟ್ಟು ಹಿಡಿದ ವಿಶ್ವಸಂಸ್ಥೆ.. ಇವೆಲ್ಲವುದರ ನಡುವೆ ಕೇವಲ ಬದುಕಬೇಕೆನ್ನುವ ಒಂಟಿ ಉದ್ದೇಶದ ಸೀದಾಸಾದಾ ಪ್ರಜೆ ಸೇರಾ ಸಾಯಲೂ ಆಗದ ಬದುಕಲೂ ಆಗದ ಸ್ಥಿತಿಯೊಳಗೆ ನಾಜೂಕಾಗಿ ಇಡಲ್ಪಡುವ ರೂಪಕವನ್ನು ಯಾವ ಕಾಲಘಟ್ಟದ ಸಮಕಾಲೀನತೆಗೂ ಅಚ್ಚುಕಟ್ಟಾಗಿ ಆರೋಪಿಸಬಹುದು. ಡ್ಯಾನಿಶ್ ತನೋವಿಕ್ ಎಂಬ ಬೋಸ್ನಿಯನ್ ಚಿತ್ರ ನಿರ್ದೇಶಕನ ಉದ್ದೇಶವೂ ಇದೇ ಆಗಿತ್ತೇನೋ. ಸೇರಾನ ಜಾಗದಲ್ಲಿ ಜಗತ್ತಿನ ಯಾವ ದೇಶದ ಯಾವ ಪ್ರಜೆಯನ್ನಾದರೂ ಇಡಬಹುದು. ಬೋಸ್ನಿಯಾ ಸೆರ್ಬಿಯಾ ದೇಶ ಯಾರದ್ದಾದರೂ ಆಗಬಹುದು, ಪ್ರಭುತ್ವಗಳು ಎಲ್ಲರದ್ದೂ ಆಗಬಹುದು. ಇವೆಲ್ಲವನ್ನೂ ನಿಯಂತ್ರಿಸುವ ಅಮೆರಿಕನ್ ಸಂಜಾತ ಯುಎನ್ ಅಧಿಕಾರಿಗಳ ಮತ್ತು ರೋಚಕತೆಯ ಬೆಳಕಲ್ಲಿ ಕಡುವಾಸ್ತವ ಮರೆತ ಅಂತರರಾಷ್ಟ್ರೀಯ ಪ್ರಿಜುಡೈಸ್ಡ್ ಮೀಡಿಯಾಗಳು ಇಲ್ಲಿಯವೂ ಆಗಬಹುದು. ಇಡೀ ಚಿತ್ರದ ಅಂತಸತ್ವವಾದ ಜನಾಂಗೀಯವಾದ ನಮ್ಮದೇ ನೆಲದ ಜಾತಿವಾದವೂ ಆಗಬಹುದು. ಚಿತ್ರಕ್ಕೆ ನಿರ್ದೇಶನದೊಟ್ಟಿಗೆ ಸಂಗೀತವನ್ನೂ ಒದಗಿಸಿರುವ ತ್ಯಾನೋವಿಕ್ ಅಲ್ಲಿಯೂ ಗೆದ್ದಿದ್ದಾರೆ. ಇಡೀ ಚಿತ್ರವನ್ನು ಯಾವ ದೇಶದ ಪ್ರಜೆಯೂ ರೂಪಕಗಳ ಪಲ್ಲಟದೊಂದಿಗೆ ತನ್ನದಾಗಿ ಪರಿಭಾವಿಸಬಹುದಾದ ಕಥನಕ್ರಮದೊಳಗೆ ಜಗತ್ತಿನೆಲ್ಲ ಪ್ರಜೆಗಳನ್ನು ಅಂತರರಾಷ್ಟ್ರೀಯ ಪ್ರಭುತ್ವಗಳು ಮತ್ತು ಮೀಡಿಯಾಗಳು ಆಕ್ಟಿವೇಟ್ ಮಾಡಿರುವ ಬೌನ್ಸಿಂಗ್ ಬಾಂಬ್ ಒಂದರ ಮೇಲೆ ಮಲಗಿಸಿದ ಬೋಸ್ನಿಯನ್ ನಿರ್ದೇಶಕ ತ್ಯಾನೋವಿಕ್ ಪ್ರತಿಭೆಗೆ ಮುಲಾಜಿಲ್ಲದೆಯೇ ಉದ್ದುದ್ದ ಸಲಾಮು ಹೊಡೆಯಬೇಕು. ಅಂತರರಾಷ್ಟ್ರೀಯ ರಾಜಕೀಯ ಮತ್ತು ಸಾಮಾಜಿಕ ನೆಲೆಯಲ್ಲಿ ಯಾರದ್ದೂ ಅಲ್ಲದ ನೆಲವೊಂದು ಎಲ್ಲರ ನೆಲವೂ ಆಗುವುದು ಚಲನಚಿತ್ರವೊಂದರಲ್ಲಿ ಸಾಧ್ಯವಾಗಿದ್ದು ಬಹುಶಃ ಇದೇ ಕಡೆಯದ್ದಲ್ಲದಿರಬಹುದು ಆದರೆ ಮೊದಲನೆಯದಂತೂ ನಿಚ್ಚಳವಾಗಿ ಹೌದು.                                                                                               

ಪುಟದ ಮೊದಲಿಗೆ
 
Votes:  10     Rating: 3    
 
 
ಸಂಬಂಧಿಸಿದ ಲೇಖನಗಳು
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ
  ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ:ಪ್ರಶಾಂತ್ ಆಡೂರ ಕಥನ
  ಬ್ಯಾಂಗಲೋರ್ ಮತ್ತು ಬಾಲ್ಸೆವಿಕ್ ಸಿಂಗರ್:ಶ್ರೀರಾಮ್ ಬರಹ
  ಪುಟ್ಟಹಕ್ಕಿಯ ನಿದ್ದೆಪುರಾಣ: ಸಿಂಧು ಬರೆಯುವ ಅಮ್ಮನ ಕಾಲಂ