ಮೇ ೨೪, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ರಂಗಾಯಣ ನಟರನ್ನ ದೂರ ಮಾಡದಿರಿ:ನಟರಾಜ ಹೊನ್ನವಳ್ಳಿ ಮೊರೆ    
ನಟರಾಜ ಹೊನ್ನವಳ್ಳಿ
ಬುಧವಾರ, 30 ಮೇ 2012 (05:33 IST)

೨೪ ವರ್ಷಗಳ ಮೈಸೂರು ರಂಗಾಯಣಕ್ಕೆ ದೀರ್ಘ ಕಾಲದ ಸ್ಮೃತಿ ಇದೆ. ಅಲ್ಲಿನ ಸಾಹಿತ್ಯ, ರಂಗಭೂಮಿ, ಅಲ್ಲಿನ ಪ್ರೇಕ್ಷಕರು ಮತ್ತು ಕಲಾವಿದರ ಜೊತೆ ಬೆರೆತು ಜಗಳ, ಪ್ರೀತಿ, ಸಂಭ್ರಮ, ಸಂಸಾರ ಮಾಡಿಕೊಂಡಿರುವ ಕಲಾವಿದರು ರಂಗಾಯಣದ ಜೊತೆ ೨೫ ವರ್ಷ ಹೆಜ್ಜೆ ಹಾಕಿದ್ದಾರೆ. ಕನ್ನಡದ ಕೆಲಸಗಳನ್ನು ರಂಗಭೂಮಿಯ ಮೂಲಕ ಸಮರ್ಥವಾಗಿ ಮಾಡಿದ್ದಾರೆ ಮತ್ತು ಮಾಡುತ್ತಲೂ ಇದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ರಂಗಕ್ಕೆ ತಂದ ಹೆಗ್ಗಳಿಕೆ ಇವರದ್ದು. ಮಹಾದೇವರ ’ಕುಸುಮಬಾಲೆ’, ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’, ಶಿವರಾಮ ಕಾರಂತರ ’ಸರಸಮ್ಮನ ಸಮಾಧಿ’ ಮುಂತಾದ  ರಂಗಕೃತಿಗಳು ಇನ್ನೂ ನಿನ್ನೆ ಮೊನ್ನೆಯ ನೆನಪುಗಳ ಹಾಗೆ ಇದೆ. ಅಂಥ ನಟ-ನಟಿಯರಿಗೆ ದಣಿವಾದಾಗ ಸಾಂತ್ವನ ಮತ್ತು ಚಿಕಿತ್ಸೆಯನ್ನ ರಂಗ ಸಮಾಜ ಸೃಜನಶೀಲವಾಗಿ ಮಾಡುವುದು ಕರ್ತವ್ಯ. ಅದನ್ನು ಬಿಟ್ಟು ಅವರೆಲ್ಲ ಅಭದ್ರತೆಯಿಂದ ನರಳುವ ಹಾಗೆ ಮಾಡುವುದು ಅವಿವೇಕದ ಕೆಲಸ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಮನೆ, ಭೂಮಿ, ನೆನಪು, ಸಂಬಂಧ, ನೆಲೆ ಕಳೆದುಕೊಳ್ಳುತ್ತಿರುವ ಅಪಾರ ಜನ ಸಮುದಾಯಗಳ ಜೊತೆಯೇ ಇದನ್ನೂ ಹೋಲಿಸಬಹುದು. 

ರಂಗಾಯಣದ ಕಲಾವಿದರನ್ನು ಆರಾರು ಜನರಾಗಿ ಒಡೆದು ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವ ಅಧಿಕಾರಶಾಹಿ ಮತ್ತು ರಂಗ ಸಮಾಜದ ನೀತಿ ಪ್ರಜ್ಞಾವಂತಿಕೆಯಿಂದ ಕೂಡಿಲ್ಲ. ಆ ಎಲ್ಲಾ ಕಲಾವಿದರಿಗೆ ರಜೆ ಕೊಟ್ಟು ಈ ರೀತಿ ಮಾಡುತ್ತಿರುವ ರಂಗ ಸಮಾಜದ ಆಡಳಿತದ ನೀತಿಯನ್ನು ಪ್ರಶ್ನಿಸಬೇಕಾಗಿದೆ. ರಂಗ ಸಮಾಜ ತನ್ನ ಕಾಲಾವಧಿಯನ್ನು ಮುಗಿಸಿ ಹೋಗುತ್ತಿರುವ ತುದಿಯಲ್ಲಿ ೬ ಜನ ಕಲಾವಿದರುಗಳನ್ನು ಶಿವಮೊಗ್ಗ, ಧಾರವಾಡದ ರಂಗಾಯಣಗಳಿಗೆ ಕಳುಹಿಸುತ್ತಿರುವುದು ಆತುರದ ನಿರ್ಧಾರ. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿದೆ. ಕಲಾವಿದರನ್ನು ಬೇರೆ ಕಡೆಗೆ ವರ್ಗಾಯಿಸುವಂತಹ ಮಹತ್ವದ ನಿರ್ಧಾರಗಳನ್ನು ಮುಂಬರುವ ಹೊಸ ರಂಗಸಮಾಜಕ್ಕೆ ಬಿಡುವುದು ಒಳಿತು ಮತ್ತು ಕರ್ನಾಟಕದ ಪ್ರಜ್ಞಾವಂತ ರಂಗಕರ್ಮಿಗಳನ್ನು ಗಮನದಲ್ಲಿರಿಸಿಕೊಂಡು ಮಾಡಬೇಕಾಗಿದೆ.

ರಂಗ ಸಮಾಜ ಕಾಲ-ಕಾಲಕ್ಕೆ ಕನಿಷ್ಠ ಇಷ್ಟಾದರೂ ಕೆಲಸ ಮಾಡಬೇಕಾಗಿತ್ತು.

ನಟ-ನಟಿಯರು ಕೆಲಸ ಮಾಡಲು ಸರಿಯಾದ ಫ್ಲೋರ್‌ಗಳು.
Actors Guildಗಳ ಮೂಲಕ ದೇಶ-ವಿದೇಶದ ನಟ-ನಟಿಯರ ಜೊತೆ ಸಂವಾದ ಮತ್ತು ವಿನಿಮಯ.
ಗ್ರಂಥಾಲಯದ ಸಮರ್ಥ ಬಳಕೆ.
ದೇಶದ ರಂಗ ಸಂಪನ್ಮೂಲ ವ್ಯಕ್ತಿಗಳ ಜೊತೆ ನಿರಂತರ ಒಡನಾಟ.
ಧ್ವನಿ, ದೇಹದ ಥೆರಪಿಗೆ ಬೇಕಾದ ಲ್ಯಾಬ್‌ಗಳು.
ನಾಟಕ ಪ್ರೇಕ್ಷಕರ ಜೊತೆಗಿನ ಸಂಬಂಧದ ನವೀಕರಣ.
ರಂಗಾಯಣ ನಡೆಸುತ್ತಿರುವ ರಂಗಶಾಲೆಗೆ ಸೌಲಭ್ಯಗಳು.
ತಾಲ್ಲೂಕು ಕಛೇರಿಗಳು ನಡೆಯುವ ಹಾಗೆ ನಡೆಯುತ್ತಿರುವ ನಡಾವಳಿಗಳ ಪರಾಮರ್ಶೆ.
ರಂಗಾಯಣದ ನಟ-ನಟಿಯರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬೇರೆ ಬೇರೆ ಕಡೆ ಕಳುಹಿಸಿ ಅವರ ಅನುಭವವನ್ನು ಬಳಸಿಕೊಳ್ಳುವುದು.

ರಂಗಾಯಣಕ್ಕೆ ೨೪ ವರ್ಷ ಮುಗಿದು ಇದು ೨೫ನೇ ’ರಜತ ವರ್ಷ’. ಈ ವರ್ಷದಲ್ಲಿ ಕಲಾವಿದರನ್ನು ಎತ್ತಂಗಡಿ ಮಾಡುತ್ತಿರುವುದನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾಗಿದೆ. ಈ ವರ್ಷ ಅವರು ತಮ್ಮ ಹಳೆಯ ರಂಗಕೃತಿಗಳನ್ನು ಪ್ರಸ್ತುತ ಪಡಿಸಬೇಕಾಗಿದೆ.

ಇಂಥ ಭಾವನಾತ್ಮಕ ವರ್ಷದಲ್ಲಿ ಅನುಸರಿಸುತ್ತಿರುವ ಈ ಕ್ರಮ ಸರ್ವಾಧಿಕಾರಿ ರೀತಿಯದ್ದಾಗಿದೆ. ’ರಂಗ ಸಮಾಜ’ ಮೂರ್ಖರ ಮತ್ತು ಸಮಯ ಸಾಧಕರ, ಪಕ್ಷ ಪುಢಾರಿಗಳ ಗುಂಪಾಗಿ ಪರಿವರ್ತಿತವಾಗಿರುವುದು ಬೇಸರದ ಸಂಗತಿ. ರಂಗ ಉತ್ಸವಗಳನ್ನು ನಡೆಸಿ ಪ್ರಭುತ್ವವನ್ನು ತೃಪ್ತಿಪಡಿಸುವ ಕೆಲಸಗಳಾಗಿದೆಯೇ ವಿನಃ ಯಾವುದೇ ಸೃಜನಶೀಲ ಕೆಲಸಗಳಾಗಿಲ್ಲ.

ಧಾರವಾಡದ ರಂಗಾಯಣ, ಶಿವಮೊಗ್ಗ ರಂಗಾಯಣ ಎಂದು ಪ್ರಾರಂಭಿಸಿರುವುದೇ ಸರಿಯಾದ ಕ್ರಮವಲ್ಲ. ಆಯಾಯ ಸ್ಥಳೀಯ ರುಚಿ, ಸಂಸ್ಕೃತಿಗಳ ಮೂಲಕ ಹೆಸರು ಮತ್ತು ಕೆಲಸದ ವಿಧಾನಗಳನ್ನು ರೂಪಿಸಬೇಕೇ ಹೊರತು, ಮೈಸೂರಿನ ರಂಗಾಯಣದ ಮಾಡಲ್‌ನ್ನು ವಿಸ್ತರಿಸುವುದಲ್ಲ. ಬೇರೆ ಬೇರೆ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ರಂಗ ಸಂಸ್ಕೃತಿ ರೂಪಿತವಾಗುವ ಹಾಗೆ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ರಂಗಾಯಣ-ಸರ್ಕಾರ ಮಾಡಬೇಕು. ಅದನ್ನು ಬಿಟ್ಟು ಸಂಸ್ಕೃತಿ ಮಳಿಗೆಗಳನ್ನು ತೆರೆಯುತ್ತಾ ಹೋಗುವುದಲ್ಲ.
 ನಾಲ್ಕು ಪೂರ್ಣಾವಧಿ ಶಾಲೆಗಳಿರುವ ಈ ಕರ್ನಾಟಕದಲ್ಲಿ ಹೆಗ್ಗೋಡಿನ ನೀನಾಸಮ್ ತಿರುಗಾಟ, ಸಾಣೇಹಳ್ಳಿಯ ಶಿವಸಂಚಾರ, ರಂಗಾಯಣ ಮುಂತಾದ ರೆಪರ್ಟರಿಗಳ ಸಹಾಯದಿಂದ ಹೊಸ ಹೊಸ ರೆಪರ್ಟರಿಗಳನ್ನು ಪ್ರಾರಂಭಿಸುವುದರ ಬಗ್ಗೆ ಮಾತುಕತೆ ನಡೆಸಬೇಕು. ಅಧಿಕಾರಿಗಳು ಮತ್ತು ಅಧಿಕಾರಶಾಹಿಗಳು ಸಾಂಸ್ಕೃತಿಕ ನೀತಿಗಳನ್ನು ರೂಪಿಸುವುದನ್ನು ಸರ್ಕಾರ ಬಿಡಬೇಕು. ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮ್ಮ ಸಂಪನ್ಮೂಲಗಳನ್ನು ಸ್ಥಳೀಯವಾಗಿ, ತಮ್ಮ ಸಂಸ್ಕೃತಿ, ಸಮುದಾಯಗಳಿಂದಲೇ ರೂಪಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಕಲಾವಿದರನ್ನು ನೇಮಿಸಿಕೊಳ್ಳಲು ’ಏಜನ್ಸಿ’ ಮೂಲಕ ಹೋಗಬಾರದು. ಸರ್ಕಾರ ಅಥವಾ ಸಂಸ್ಕೃತಿ ಇಲಾಖೆ ಏಜನ್ಸಿಗಳ ಮೂಲಕ ಕಲಾವಿದರ ನೇಮಕಾತಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು. ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮಗೆ ಬೇಕಾದ ಕಲಾವಿದರನ್ನು ತಾವೇ ನೇಮಿಸಿಕೊಳ್ಳಬೇಕು. ನಟರಾಜ ಹೊನ್ನವಳ್ಳಿ

ಹಾಗೆ ನೇಮಿಸಿಕೊಳ್ಳಲು ಹಲವಾರು ರಂಗ ಶಾಲೆಗಳಿಂದ ಬಂದ ರಂಗ ವಿದ್ಯಾರ್ಥಿಗಳು ಒಂದು ದೊಡ್ಡ ಗುಂಪೇ ಕರ್ನಾಟಕದಲ್ಲದೆ. ಪೂರ್ಣಾವಧಿ ರಂಗ ಶಾಲೆಯಲ್ಲಿ ಓದಿದ ಅನುಭವವಿರುವ ವಿದ್ಯಾರ್ಥಿಗಳಿಗೆ ಈ ಏಜನ್ಸಿಗಳು ಮಾರಕವಾಗಿ ಪರಿಣಮಿಸಲಿದೆ. ಸಂಸ್ಕೃತಿ ಸರ್ಕಾರಗಳು ಅಥವಾ ಹಣ ಹೇಳಿದ ಹಾಗೆ ರೂಪಗೊಳ್ಳುವುದಿಲ್ಲ. ಅದು ಜನಮಾನಸದ ’ಸಂಬಂಜ ಅನ್ನುವುದು ದೊಡ್ದು ಕನಾ’ ರೀತಿಯದು. ಸಂಸ್ಕೃತಿ ಇಲಾಖೆ ಸರ್ಕಾರ ಮತ್ತು ಸಂಸ್ಕೃತಿ ಸಚಿವರು ಈ ಕೂಡಲೇ ಗಮನಹರಿಸಬೇಕು.

ಪುಟದ ಮೊದಲಿಗೆ
 
Votes:  10     Rating: 4.1    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ