ಮೇ ೨೦, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
‘ಸಾಲಾ’ದಿಂದ ‘ಮಸಾಲಾ’ವರೆಗೆ.:ಬಸು ಸಿನೆಮಾ ಬರಹ    
ಬಸವರಾಜು
ಶುಕ್ರವಾರ, 13 ಜುಲೈ 2012 (04:21 IST)
ಕಹಾನಿ ಚಿತ್ರದಲ್ಲಿ ವಿದ್ಯಾಬಾಲನ್

ಹಿಂದಿ ಚಿತ್ರೋದ್ಯಮದಲ್ಲೀಗ ಬಿಗ್ ಬಜೆಟ್‌ನ, ಭಾರೀ ಹೀರೋಗಳ, ಅನುಭವಿ ನಿರ್ಮಾಣ ಸಂಸ್ಥೆಗಳ, ಹೆಸರುವಾಸಿ ನಿರ್ದೇಶಕರ ಪ್ಲೇಯರ‍್ಸ್, ಏಜೆಂಟ್ ವಿನೋದ್, ತೇಜ್, ಡಿಪಾರ್ಟ್‌ಮೆಂಟ್, ತೇರಿ ಮೇರಿ ಕಹಾನಿ ಚಿತ್ರಗಳು ಮುಗ್ಗರಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಮಾಲ್ ಬಜೆಟ್‌ನ ಇಷ್ಕ್‌ಜಾದೆ, ಕಹಾನಿ, ವಿಕ್ಕಿ ಡೋನರ್, ಪಾನ್ ಸಿಂಗ್ ತೊಮಾರ್, ಶಾಂಘೈ, ಗ್ಯಾಂಗ್ಸ್ ಆಫ್ ವೆಸ್ಸಾಪುರ್, ಸೂಪರ್‌ಮ್ಯಾನ್ ಆಫ್ ಮಲೆಗಾಂವ್, ಮ್ಯಾಕ್ಸಿಮಮ್ ಚಿತ್ರಗಳು ಕ್ಲಿಕ್ಕಾಗುತ್ತಿವೆ.

ಇವೆರಡರ ನಡುವೆ, ಆಶ್ಚರ್ಯಕರ ರೀತಿಯಲ್ಲಿ ದಕ್ಷಿಣ ಭಾರತದ ಭಾಷೆಗಳಿಂದ ರೀಮೇಕ್ ಆದ ಮಸಾಲಾ ಚಿತ್ರಗಳು ಮಣಗಟ್ಟಲೆ ಹಣ ಮಾಡುತ್ತಿವೆ. ಹಾಗೆಯೇ ಎಲ್ಲಾ ಕಾಲಕ್ಕೂ ಸಲ್ಲುತ್ತಿದ್ದ, ಪ್ರೇಕ್ಷಕರನ್ನು ಸಂತೃಪ್ತರನ್ನಾಗಿಸುತ್ತಿದ್ದ, ನಿರ್ಮಾಪಕರನ್ನು ಸಲಹುತ್ತಿದ್ದ ರೊಮಾನ್ಸ್ ಚಿತ್ರಗಳು ಮುಗ್ಗರಿಸುತ್ತಿವೆ.

ಇದು ಹಿಂದಿ ಚಿತ್ರರಂಗದ ಬದಲಾದ ಟ್ರೆಂಡನ್ನು, ಮುಂಬೈವಾಲಗಳ ಮನಸ್ಥಿತಿಯನ್ನು ಮತ್ತು ಇವತ್ತಿನ ಪ್ರೇಕ್ಷಕರ ಅಭಿರುಚಿಯನ್ನು ಬಿಂಬಿಸುತ್ತಿದೆಯೇ? ಅಥವಾ ಹಣ, ಚಾಲ್ತಿ ಮತ್ತು ಜನಪ್ರಿಯತೆಯ ಬೆನ್ನು ಬಿದ್ದ ಉದ್ಯಮದವರ ‘ಬುದ್ಧಿ’ಯನ್ನು ಬಹಿರಂಗಗೊಳಿಸುತ್ತಿದೆಯೇ?

ಒಂದು ಕಾಲವಿತ್ತು. ದಕ್ಷಿಣದಿಂದ ಬಂದವರನ್ನು ‘ಸಾಲಾ ಮದ್ರಾಸಿ’ ಎಂದು ಕರೆಯುವುದು, ಎಲ್ಲದರಲ್ಲೂ ನಮಗಿಂತ ಕೆಳಮಟ್ಟದವರು ಎಂದು ತೀರಾ ತುಚ್ಛವಾಗಿ ತೆಗಳುವುದು, ಬುದ್ದುಗಳೆಂದು ಭಾವಿಸಿ ಲೇವಡಿ ಮಾಡುವುದು ಹಿಂದಿ ಚಿತ್ರರಂಗದಲ್ಲಿ ಮಾಮೂಲಾಗಿತ್ತು.

೭೦ರ ದಶಕದಲ್ಲಿ ಹಾಸ್ಯನಟ ಮೆಹಮ್ಮೂದ್‌ರನ್ನು ಹಿಂದಿ ಚಿತ್ರೋದ್ಯಮದಲ್ಲಿ ಪರ್ಮನೆಂಟ್ ಮದ್ರಾಸಿಯನ್ನಾಗಿ ಮಾಡಲಾಗಿತ್ತು. ಮದ್ರಾಸಿ ಪಾತ್ರಗಳಿಗೆ ಹಾಸ್ಯ ಬೆರೆಸಿ ಹಾಸ್ಯಾಸ್ಪದಗೊಳಿಸಲಾಗಿತ್ತು. ಆ ಮೂಲಕ ಮೆಹಮ್ಮೂದ್ ಪಕ್ಕಾ ‘ಮದ್ರಾಸಿ’ಯೇ ಆಗಿಹೋಗಿದ್ದರು. ಇವರೊತ್ತಿದ ಮದ್ರಾಸಿ ಛಾಪು, ಇವರ ನಂತರದಲ್ಲೂ ಹಿಂದಿ ಚಿತ್ರೋದ್ಯಮದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿತ್ತು. ಅದು ತೀರಾ ಇತ್ತೀಚಿನವರೆಗೆ, ಶಾರೂಖ್ ಖಾನ್‌ರ ‘ಓಂ ಶಾಂತಿ ಓಂ’ ಚಿತ್ರದಲ್ಲಿ ರಜನೀಕಾಂತ್‌ರನ್ನು ಬಫೂನ್ ಥರ ಚಿತ್ರಿಸುವವರೆಗೂ ಚಾಲ್ತಿಯಲ್ಲಿತ್ತು. ಆಶ್ಚರ್ಯವೆಂದರೆ, ದಕ್ಷಿಣದ ಪ್ರಿಯದರ್ಶನ್, ರಾಂ ಗೋಪಾಲ್ ವರ್ಮಾ, ಮಣಿರತ್ನಂಗಳಂತಹ ನಿರ್ದೇಶಕರು, ಎ.ಆರ್. ರೆಹಮಾನ್‌ರಂತಹ ಸಂಗೀತ ನಿರ್ದೇಶಕರು, ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾರಂತಹ ನಟೀಮಣಿಯರು ಹಿಂದಿ ಮಂದಿಯೊಂದಿಗೇ ಬೆರೆತು, ಬೆರಗಿನಿಂದ ನೋಡುವಂತಹ ಚಿತ್ರಗಳನ್ನು ಕೊಟ್ಟಿದ್ದರೂ ಈ ಭೇದಭಾವ, ತಾರತಮ್ಯ ನೀತಿ ನಿಂತಿರಲಿಲ್ಲ.

ಕಾಲ ಬದಲಾದಂತೆ ಅಥವಾ ಬುದ್ಧಿ ಬೆಳೆದಂತೆ ಅಥವಾ ಕಾಸು ಕುಣಿಸಿದಂತೆ, ಈಗ ಉತ್ತರದ ಭೂಪರು ದಕ್ಷಿಣದತ್ತ ನೋಡುತ್ತಿದ್ದಾರೆ. ಗೇಲಿಯ ವಸ್ತುವಾಗಿದ್ದ, ಆನ್‌ಲೈನಿಗರ ಜೋಕುಗಳಿಗೆ ಆಹಾರವಾಗಿದ್ದ ರಜನೀಕಾಂತ್‌ರನ್ನು ಈಗ ಭಾರತೀಯ ಸಿನಿಮಾರಂಗದ ಐಕಾನ್ ಎಂಬಂತೆ ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಇತ್ತೀಚಿನ ‘ಔಟ್‌ಲುಕ್’ ವಾರಪತ್ರಿಕೆ, ‘ಇಂಡಿಯನ್ ಸಿನಿಮಾ ಸೆಂಚುರಿ’ ಬಗ್ಗೆ ಕವರ್ ಸ್ಟೋರಿ ಮಾಡಿ, ರಜನೀಕಾಂತ್ ಚಿತ್ರ ಹಾಕಿ ಬದಲಾದ ಟ್ರೆಂಡ್ ಅನ್ನು ಗುರುತಿಸಿದೆ. ರಾಷ್ಟ್ರೀಯ ವಾರಪತ್ರಿಕೆಯೊಂದು ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಯ ನಟನೊಬ್ಬನನ್ನು ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವ ನಟನನ್ನಾಗಿಸಿ ಕವರ್ ಪೇಜ್‌ನಲ್ಲಿ ಪ್ರಕಟಿಸುವುದು ಸಾಮಾನ್ಯ ಸಂಗತಿಯಲ್ಲ.

ಅಷ್ಟೇ ಅಲ್ಲ, ಯಾವ ಶಾರುಖ್‌ಖಾನ್ ರಜನೀಕಾಂತ್‌ರನ್ನು ಬಫೂನ್‌ನಂತೆ ಬಳಸಿಕೊಂಡಿದ್ದರೋ ಅವರೇ ಅವರ ಸ್ವಂತ ನಿರ್ಮಾಣದ ‘ರಾ ವನ್’ ಚಿತ್ರದಲ್ಲಿ ರಜನಿಯನ್ನು ಮಿಂಚಿನಂತೆ ಬಂದುಹೋಗುವ ಪುಟ್ಟ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಬೇಡಿಕೊಂಡಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಜನಿ ನಕ್ಕು ನಟಿಸಿ ಬಂದಿದ್ದರು. ಆಶ್ಚರ್ಯವೆಂದರೆ, ಇಡೀ ಚಿತ್ರವನ್ನಾಕ್ರಮಿಸಿಕೊಂಡ ಹೀರೋ ಶಾರುಖ್‌ಗೆ ಸಿಗದಷ್ಟು ಸ್ಕೋಪ್ ಮತ್ತು ಚಪ್ಪಾಳೆ ಕ್ಷಣಮಾತ್ರದಲ್ಲಿ ಬಂದುಹೋಗುವ ರಜನಿಗೆ ಸಿಕ್ಕಿತ್ತು.
ಈಗ ರಜನಿಯ ಜನಪ್ರಿಯತೆಯ ತಾಖತ್ತನ್ನು ಅರ್ಥ ಮಾಡಿಕೊಂಡಿರುವ ಹಿಂದಿ ಚಿತ್ರರಂಗದ ಅತಿರಥ ಮಹಾರಥರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ರಜನಿಯನ್ನು ತಮ್ಮ ಚಿತ್ರಗಳಲ್ಲಿ ನಟಿಸಲು ಕೇಳಿಕೊಳ್ಳುತ್ತಿರುವ, ಮನವೊಲಿಸುವ ಮಾರ್ಗಗಳನ್ನು ಹುಡುಕುತ್ತಿರುವ ಸುದ್ದಿಗಳು ಹೊರಬರುತ್ತಿವೆ. ಅದಕ್ಕೆ ಪೂರಕವಾಗಿ, ಅಮೀರ್ ಖಾನ್‌ರ ಭಾರೀ ನಿರೀಕ್ಷೆಯ ‘ತಲಾಶ್’ ಚಿತ್ರದಲ್ಲಿ ರಜನಿ ನಟಿಸುತ್ತಿರುವ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ರಜನಿಗಾಗಿಯೇ ವಿಶೇಷವಾಗಿ ಐಟಂ ಸಾಂಗ್‌ವೊಂದನ್ನು ಸೃಷ್ಟಿಸಲಾಗಿದೆಯಂತೆ. ಆ ಹಾಡಿನ ಚಿತ್ರೀಕರಣಕ್ಕಾಗಿ ೫೦ ಕೋಟಿ ಖರ್ಚು ಮಾಡಲು ನಿರ್ಮಾಪಕರು ಸಿದ್ಧರಾಗಿದ್ದಾರಂತೆ. ಒಂದು ಹಾಡಿಗೆ ೫೦ ಕೋಟಿಯೇ ಎಂದು ಹುಬ್ಬೇರಿಸಬೇಡಿ. ರಜನಿ ಕಾಲು ಕುಣಿಸುತ್ತಾರೆಂದರೆ ಅದು ತಮಾಷೆಯ ಮಾತಲ್ಲ. ಅದಕ್ಕಾಗಿ ದೇಶ ವಿದೇಶದ ೫೦ ಅತ್ಯದ್ಭುತ ಲೊಕೇಷನ್ನುಗಳನ್ನು ಆಯ್ಕೆ ಮಾಡಲಾಗಿದೆಯಂತೆ. ರಜನಿಗೆ, ಈ ಒಂದು ಹಾಡಿಗೆ ೧೫ ಕೋಟಿ ರೂಪಾಯಿಗಳ ಸಂಭಾವನೆಯನ್ನೂ ನೀಡಲಾಗುತ್ತಿದೆಯಂತೆ. ಆದರೆ ಇದು ಇಲ್ಲಿಯವರೆಗೂ ಅಂತೆ ಕಂತೆಯಾಗಿಯೇ ಇದೆ.  

ಘಜನಿ ಚಿತ್ರದಲ್ಲಿ ಅಮೀರ್ ಖಾನ್ಇದು ಗೇಲಿಗೊಳಗಾಗಿದ್ದ ರಜನಿಯ ಕತೆಯಾದರೆ, ಕಡೆಗಣಿಸಲ್ಪಟ್ಟಿದ್ದ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಚಿತ್ರಗಳ ಕತೆ ಇನ್ನೂ ಕುತೂಹಲಕರವಾಗಿದೆ. ಹಿಂದಿಯ ಅತಿರಥರೆಲ್ಲ ಈಗ ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಚಿತ್ರಗಳನ್ನು ಕೀಳಾಗಿ ಕಾಣುತ್ತಿದ್ದ ಹಿಂದಿ ಚಿತ್ರೋದ್ಯಮದವರು, ಈಗ ಇಲ್ಲಿನ ಬಾಕ್ಸಾಫೀಸ್ ಹಿಟ್ ಚಿತ್ರಗಳನ್ನು ಯಾವ ಅಂಜಿಕೆ ಅಳುಕು ಇಲ್ಲದೆ ಹಿಂದಿಗೆ ರೀಮೇಕ್ ಮಾಡುತ್ತಿದ್ದಾರೆ. 

ಇತ್ತೀಚಿನ ಕೆಲವೊಂದು ಉದಾಹರಣೆಗಳನ್ನಷ್ಟೇ ನೋಡುವುದಾದರೆ...

೨೦೦೮ರಲ್ಲಿ ತಮಿಳಿನಲ್ಲಿ ಎ.ಆರ್. ಮುರುಗದಾಸ್ ನಿರ್ದೇಶಿಸಿದ ‘ಘಜನಿ’ ಚಿತ್ರ ಬಾಕ್ಸಾಫೀಸ್‌ನಲ್ಲಿ ಹಣ ಬಾಚಿತು. ಆ ತಕ್ಷ್ಷಣ, ಚಾಕಲೇಟ್ ಹೀರೋ ಅಮೀರ್ ಖಾನ್ ಬಟ್ಟೆ ಬಿಚ್ಚಿ, ತಲೆ ಬೋಳಿಸಿಕೊಂಡು, ಮೈ ಉರಿಗಟ್ಟಿಸಿಕೊಂಡು ಹಿಂದಿಯ ‘ಘಜನಿ’ ಚಿತ್ರದಲ್ಲಿ ಹೀರೋ ಆಗಿಯೇಬಿಟ್ಟರು. ಟ್ಯಾಗೋರ್, ಮಧು ಅವರ ೬೫ ಕೋಟಿ ಬಜೆಟ್ಟಿನಲ್ಲಿ ನಿರ್ಮಾಣವಾದ, ತಮಿಳಿನ ಮುರುಗದಾಸ್ ನಿರ್ದೇಶನದಲ್ಲಿಯೇ ತಯಾರಾದ ಹಿಂದಿಯ ‘ಘಜನಿ’ ೧೯೦ ಕೋಟಿ ರೂಪಾಯಿಗಳನ್ನು ಸಂಪಾದಿಸಿತು. ಇದು ಸಹಜವಾಗಿಯೇ ಉತ್ತರದವರು ದಕ್ಷಿಣದತ್ತ ಮುಖ ಮಾಡಲು ಕಾರಣವಾದ ಬಹುಮುಖ್ಯವಾದ ತಿರುವಾಯಿತು. 

‘ಘಜನಿ’ ಹಿಟ್ ಆಗುತ್ತಿದ್ದಂತೆ, ೨೦೧೦ರಲ್ಲಿ, ಮೊದಲು ಮಲಯಾಳಂನಲ್ಲಿ ಬಂದು ಯಶಸ್ವಿಯಾಗಿ, ನಂತರ ತಮಿಳಿಗೆ ರೀಮೇಕ್ ಆದ ‘ಕಾವಲನ್’ ಚಿತ್ರವನ್ನು, ಮೂಲ ಮಲಯಾಳಂ ಚಿತ್ರವನ್ನು ನಿರ್ದೇಶಿಸಿದ ಸಿದ್ದಿಕಿಯವರನ್ನಿಟ್ಟುಕೊಂಡೆ ಹಿಂದಿಯಲ್ಲಿ, ಸಲ್ಮಾನ್ ಖಾನ್‌ರನ್ನು ಹೀರೋ ಮಾಡಿ, ೬೪ ಕೋಟಿ ಸುರಿದು ೨೦೧೧ರಲ್ಲಿ ನಿರ್ಮಿಸಿದ ‘ಬಾಡಿಗಾರ್ಡ್’ ಚಿತ್ರ, ಅದರ ನಿರ್ಮಾಪಕರಾದ ಅತುಲ್ ಅಗ್ನಿಹೋತ್ರಿಗೆ ಬರೋಬ್ಬರಿ ೨೩೩ ಕೋಟಿ ರೂಪಾಯಿಗಳನ್ನು ತಂದುಕೊಟ್ಟಿತ್ತು.   ಬಾಡಿಗಾರ್ಡ್ ಚಿತ್ರದಲ್ಲಿ ಸಲ್ಮಾನ್ ಖಾನ್

ಹೀಗೆ ಚಿತ್ರದಿಂದ ಚಿತ್ರಕ್ಕೆ ದಕ್ಷಿಣದ ಚಿತ್ರಗಳು ಉತ್ತರದಲ್ಲಿ ಯಶಸ್ಸಿನ ಹಾದಿ ಹಿಡಿಯುತ್ತಿದ್ದಂತೆ, ‘ಮದ್ರಾಸಿ’ಗಳ ಬಗೆಗಿನ ಅವರ ನಿಲುವು, ಧೋರಣೆಗಳೂ ಬದಲಾಗತೊಡಗಿದವು. ಅದಕ್ಕೆ ಪೂರಕವಾಗಿ ೨೦೧೦ರಲ್ಲಿ ತಮಿಳಿನಲ್ಲಿ ಬಂದು ಹೋದ ಹರಿ ನಿರ್ದೇಶನದ, ಸೂರ್ಯ ನಟಿಸಿದ್ದ ‘ಸಿಂಗಂ’ ಹಿಟ್ ಚಿತ್ರವನ್ನು, ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಹಿಂದಿಯಲ್ಲಿ, ಅಜಯ್ ದೇವಗನ್‌ರನ್ನು ಹೀರೋ ಮಾಡಿ, ೨೦ ಕೋಟಿ ಬಂಡವಾಳ ಸುರಿದು ನಿರ್ಮಿಸಲಾಯಿತು. ಅದೀಗ ಆಲ್ ಟೈಮ್ ಹಿಟ್ ಚಿತ್ರಗಳ ಲಿಸ್ಟ್ ಸೇರಿ ೧೪೦ ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ.

ಹಾಗೆಯೇ ಇತ್ತೀಚಿಗೆ ಬಿಡುಗಡೆಯಾಗಿ ಸುದ್ದಿ ಮಾಡುತ್ತಿರುವ ‘ರೌಡಿ ರಾಥೋಡ್’ ಚಿತ್ರ ಕೂಡ ದಕ್ಷಿಣದ ಪ್ರಸಾದವೇ. ಮೊದಲು ತೆಲುಗಿನಲ್ಲಿ, ರಾಜಮೌಳಿ ನಿರ್ದೇಶನದಲ್ಲಿ, ರವಿತೇಜ ನಟಿಸಿರುವ ‘ವಿಕ್ರಮಾರ್ಕುಡು’ ಚಿತ್ರ ಬಾಕ್ಸಾಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ನಂತರ ತಮಿಳು, ಕನ್ನಡಗಳಿಗೆ ರೀಮೇಕ್ ಆಗಿ ಅಲ್ಲಿಯೂ ಹಿಟ್ ಆಗಿತ್ತು. ಅದೀಗ ಹಿಂದಿಯಲ್ಲಿ, ಪ್ರಭುದೇವ ಅವರ ನಿರ್ದೇಶನದಲ್ಲಿ ‘ರೌಡಿ ರಾಥೋಡ್’ ಆಗಿ ತೆರೆಗೆ ಬಂದಿದೆ. ಬಂದು ಕೇವಲ ಹದಿನೈದು ದಿನಕ್ಕೆ ೧೧೧ ಕೋಟಿ ಕಲೆಕ್ಷನ್ ಕಂಡಿದೆ.

ಆಶ್ಚರ್ಯಕರ ಸಂಗತಿ ಎಂದರೆ, ಕಾಮೋಶಿ, ಹಮ್ ದಿಲ್ ದೆ ಚುಕೆ ಸನಮ್, ದೇವದಾಸ್, ಬ್ಲಾಕ್, ಸಾವರಿಯಾ, ಗುಜಾರಿಶ್... ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಕೊಟ್ಟ ಸಂಜಯ್ ಲೀಲಾ ಭನ್ಸಾಲಿಯವರೇ ಈ ಡಬ್ಬಾ ಚಿತ್ರದ ನಿರ್ಮಾಪಕರು. ಆದರೀಗ ಈ ಚಿತ್ರ ಅವರ ಪಾಲಿಗೆ ಭಾಗ್ಯದ ಬಾಗಿಲು ತೆರೆದಿದೆ. ಹಣದ ಹೊಳೆಯನ್ನೇ ಹರಿಸುತ್ತಿದೆ. ಹಾಗೆಯೇ ಪತ್ರಕರ್ತರ ಮೂದಲಿಕೆಗೂ ಕಾರಣವಾಗುತ್ತಿದೆ.

ಅದಕ್ಕೆ ಭನ್ಸಾಲಿ, ‘ಹೌದು, ನೀವು ನನ್ನ ಮೇಲಿಟ್ಟ ವಿಶ್ವಾಸಕ್ಕೆ, ಟೀಕೆಗಳಿಗೆ ಥ್ಯಾಂಕ್ಸ್. ಇದು ನನ್ನ ಚಿತ್ರವಲ್ಲ, ಸಂಪೂರ್ಣವಾಗಿ ಪ್ರಭುದೇವ ಅವರ ಚಿತ್ರ, ನಾನು ಈ ಚಿತ್ರದ ನಿರ್ಮಾಪಕ ಮಾತ್ರ’ ಎಂದಿದ್ದಾರೆ. ಭನ್ಸಾಲಿಯ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಶಸ್ಸನ್ನೂ ಹಿಂದಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆಯೇ ಸ್ವೀಕರಿಸಿದ್ದಾರೆ ಎಂದೆನ್ನಿಸದೇ ಇರದು. ಇವರ ಜೊತೆಗೆ ಸುಭಾಷ್ ಘಾಯ್, ಸಂಜಯ್ ಘಾಯ್, ಅನಿಲ್ ಶರ್ಮಾಗಳು ಕೂಡ ದನಿಗೂಡಿಸಿ, ಲೇವಡಿ ಮಾತುಗಳನ್ನೇ ಆಡಿರುವುದು ಅವರ ಅನುಕೂಲಸಿಂಧು ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ, ಇರಲಿ.

‘ಸಾಲಾ ಮದ್ರಾಸಿ’ಯನ್ನು ಇವತ್ತಿಗೆ ತಕ್ಕಂತೆ ‘ಮಸಾಲಾ ಮದ್ರಾಸಿ’ ಅಂತ ಕರೆದರೂ, ಹಿಂದಿಯವರು ದಕ್ಷಿಣದತ್ತ ನೋಡುತ್ತಿರುವುದಂತೂ ನಿಜ. ರಜನಿಯನ್ನು ಎಷ್ಟೇ ಗೇಲಿ ಮಾಡಿದರೂ, ಈಗ ಅವರೆ ಸೂಪರ್ ಸ್ಟಾರ್ ಎಂದು ಒಪ್ಪಿಕೊಳ್ಳಬೇಕಾಗಿ ಬಂದಿರುವುದೂ ಸತ್ಯ.

ಪುಟದ ಮೊದಲಿಗೆ
 
Votes:  10     Rating: 3    
 
 
ಸಂಬಂಧಿಸಿದ ಲೇಖನಗಳು
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ
  ವಿಶ್ವರೂಪಂ ವಿರೋಧದ ಹಿಂದಿನ ಕೆಟ್ಟರೂಪಗಳು:ಸಬೀಹಾ ಬರಹ
  ಎಸ್.ಮಂಜುನಾಥ್ ಕಂಡುಕೊಂಡ ಸಂಕ್ರಾಂತಿಯ ಸತ್ಯಗಳು