ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸಂಪಿಗೆ ಆಟದ ಬಯಲಲ್ಲಿ ಮೂವರು ಮುದ್ದು ಪ್ರತಿಭೆಗಳು    
ಸಂಪಾದಕ
ಶನಿವಾರ, 10 ಮೇ 2008 (06:43 IST)
ಸಂಜನ್ ಬಿಡಿಸಿದ ಚಿತ್ರ

ಪ್ರೀತಿಯ ಮಕ್ಕಳೇ, ಕಳೆದವಾರ ನೀವು ಮಕ್ಕಳ ಸಂಪಿಗೆಯಲ್ಲಿ ಅನೂಹಿತ ಬರೆದ ಚಿತ್ರವನ್ನು ನೋಡಿದ್ದೀರಿ. ಆಕೆಯ ದಿನಚರಿಯನ್ನು ಓದಿ ಆನಂದಿಸಿದ್ದೀರಿ. ಈ ವಾರ ಕಾರ್ಕಳದ ಹೆಬ್ರಿಯ ಎಸ್.ಆರ್ ಶಾಲೆಯ ಮೂವರು ಪುಟಾಣಿ ಮಕ್ಕಳ ಚಿಗುರು ಪ್ರತಿಭೆಯನ್ನು ಪರಿಚಯಿಸುತ್ತಿದ್ದೇವೆ.

ಈ ಮೇಲಿರುವ ಚಿತ್ರ ಇದೆಯಲ್ಲಾ ಅದು ಸಂಜನ್ ಕೆ.ಎಸ್. ಬರೆದದ್ದು. ಸಂಜನ್ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ. ಅವನ ಸಹಪಾಠಿ ಸುನೈನ ತುಂಬಾ ಚುರುಕು. ಆಕೆ ಚಿತ್ರಿಸಿರುವ ಸ್ವಿಮ್ಮಿಂಗ್ ಚಿತ್ರ ಹೇಗಿದೆ ನೋಡಿ. ಇನ್ನು ಈ ಕೆಳಗಿನ ಪುಟ್ಟ ಬರಹ ಇದೆಯಲ್ಲಾ ಅದನ್ನು ಅನನ್ಯ ಬರೆದಿದ್ದು. ಆರನೆಯ ಕ್ಲಾಸಿನಲ್ಲಿ ಓದುತ್ತಿರುವ ಅನನ್ಯ, ವಿಜಾಪೂರದಿಂದ ಬೇಸಿಗೆ ರಜೆಗೆ ತನ್ನೂರಿಗೆ ಬಂದ ಸೋದರತ್ತೆ ಸರಸ್ವತಿ, ಕಾಕಿ ಮಾಲಾ, ತಮ್ಮ ಮಿಲಿ೦ದ್ ಮತ್ತು ವಿಶಾಲ್ ಹಾಗೂ ತ೦ಗಿ ದಿವ್ಯಾಳನ್ನು ಅನನ್ಯವಾಗಿ ಪರಿಚಯಿಸಿದ್ದಾನೆ.

ಸಂಜನ್ ಕೆ.ಎಸ್ ಸುನೈನ ಮಕ್ಕಳೇ, ಕೆಂಡಸಂಪಿಗೆಯ ಮಕ್ಕಳ ಸಂಪಿಗೆ ನಿಮ್ಮ ಆಟದ ಬಯಲು. ನಿಮಗೆ ಆಟವಾಡಲು, ಚಿತ್ರ ಬಿಡಿಸಲು, ನಿಮ್ಮ ಕಲ್ಪನೆಗೆ ರಂಗು ತುಂಬಲು ಇರುವ ಸುಂದರ ತಾಣ.  ನೀವು ಬರೆದ ಕಥೆ, ಕವಿತೆ, ತುಂಟಾಟಗಳಿಗೆ ಈ ಪುಟ ಮೀಸಲು. ನಿಮ್ಮ ಮುದ್ದು ಪ್ರತಿಭೆಯ ಕುರಿತು ಬರೆದು ನಮಗೆ ಕಳುಹಿಸಿ. ನಿಮ್ಮ ಭಾವಚಿತ್ರದೊಂದಿಗೆ ಪ್ರಕಟಿಸುತ್ತೇವೆ. ಈ ವಾರದ ಮಕ್ಕಳ ಪುಟ ನೋಡಿ, ನಿಮಗೇನನಿಸಿತು ಬರೆಯುತ್ತೀರಿ ತಾನೇ?

ಸುನೈನ ಬರೆದ ಚಿತ್ರ

ಅನನ್ಯ ಬರೆದ ಪುಟ್ಟ ಬರಹ

ಅನನ್ಯ ಒ೦ದು ದಿನ ನನ್ನ ಮನೆಗೆ ವಿಜಾಪುರದಲ್ಲಿರುವ ನನ್ನ ಸೋದರ ಅತ್ತೆ ಸರಸ್ವತಿ, ಕಾಕಿ ಮಾಲಾ, ತಮ್ಮ ಮಿಲಿ೦ದ್ ಮತ್ತು ವಿಶಾಲ್ ಹಾಗು ತ೦ಗಿ ದಿವ್ಯಾ ಬ೦ದರು ಅವರು ಮಾತಾಡುವ ರೀತಿಯೇ ಬೇರೆಯಾಗಿತ್ತು. ಬ೦ದಿದೆಯಾಗೆ ಬ೦ದಾದ ಎನ್ನುತ್ತಿದ್ದರು ಹೀಗೆ ತು೦ಬಾ ಶಬ್ದಗಳನ್ನು ಹೇಳುತ್ತಿದ್ದರು. ಚೀಕ್ಕ ಮಿಲಿ೦ದ್ ಉಚ್ಚೆ ಬರುತ್ತಾ ಇದೆ ಹೇಳಲು ಫಾಸ್ಟ್ ಬ೦ದಾದ ಅ೦ತ ಹೇಳ್ತಿದ್ದ.ಮತ್ತೆ ನಾವು ಎನಾದರು ಮಾಡುತ್ತಿದ್ದರೆ ಎನ್ ಐತ್ತಿ ಅ೦ತ ಕೇಳ್ತಿದ್ದ.ವಿಶಾಲ್ ಯಾರ ಜೊತೆವು ಮಾತನಾಡುತ್ತಿರಲಿಲ್ಲ.ದಿವ್ಯಾ ತು೦ಬಾ ಜ೦ಬ.ಯಾವಾಗಲೂ ನನ್ನ ಜೊತೆ ಜಗಳಾಡುತ್ತಿದ್ದಳು. ಸೋದರ ಅತ್ತೆ ಸರಸ್ವತಿ ನನ್ನನ್ನು ಬೆಟಾ ಅ೦ತನೇ ಕರೆಯುತ್ತಿದ್ದರು.ಮಾಲಾ ಕಾಕಿ ರೊಟ್ಟಿ ಠಪಾ ಠಪಾ ಬಡಿಯುವಾಗ ನಾವು ಅವರ ಹತ್ತಿರ ನೋಡುತ್ತಾ ಕೂರುತ್ತಿದ್ದೆವು. ಬಿಸಿ ಬಿಸಿ ರೊಟ್ಟಿ ತಿನ್ನಲು ತು೦ಬಾ ಚ೦ದ.

ಒ೦ದು ದಿನ  ನಾವು ನದಿಗೆ ಹೋದೆವು. ಅಲ್ಲಿ ನಾವೆಲ್ಲರೂ ಆಡ್ತಿದ್ವಿ. ವಿಶಾಲ್ ಗೆ ಮೀನು ಹಿಡಿಬೇಕೆ೦ದು ತು೦ಬಾ ಆಸೆ . ಅವನು ಮೀನು ಹಿಡಿಬೇಕೆ೦ದು ಅಳುತ್ತಿದ್ದ ಮತ್ತು ಮಿಲಿ೦ದ್ ಯಾವಾಗಲೂ ತನ್ನ ಮುಖ ತೊಳಿಯುತ್ತಿದ್ದ. ದಿವ್ಯಾ ನಗಾಡುತ್ತಾ ಕೂರುತ್ತಿದ್ದಳು. ನಾನು ಆಚೆ ಈಚೆ ಈಜುತ್ತಿದ್ದೆ. ನನ್ನ ತ೦ಗಿ ಸುನೈನಾ ಮಿಲಿ೦ದ್ ಜೊತೆ ಆಡುತ್ತಿದ್ದಳು. ಒ೦ದು ದಿನ ನಾವು ಬ್ಯಾಡ್ಮಿಟನ್ ಆಡುವಾಗ ನನ್ನ ಜೊತೆ ಮಿಲಿ೦ದ್ ಬ೦ದ . ಆಟ ಆಡುವಾಗ ಅವನು ತನ್ನ ಚಡ್ಡಿಯನ್ನು ಮುಟ್ಟುತ್ತಾ ನನ್ನ ಬಳಿಗೆ ಬ೦ದು ಚಡ್ಡಿಯಾಗ್ ಮಾಡ್ಬಿಟ್ಟೆ ಅ೦ತ ಮೊರು ನಾಲ್ಕು ಸಾರಿ ಹೇಳಿದ್ದ. ನನಗೆ ಏನು ಅರ್ಥಾಗಲಿಲ್ಲ.ಏನೋ ವಾಸನೆ ಬ೦ದಾಗ  ನನಗೆ ಗೊತ್ತಯಿತು.ಅವನು ಚಡ್ಡಿಯಲ್ಲಿ ಕಕ್ಕ ಮಾಡ್ಬಿಟ್ಟಿದ್ದ. ಅವನ ಅಮ್ಮನ ಕರೆದು ಹೇಳಿದೆ.

ವಿಶಾಲ್ ದಿವ್ಯ ಹೋಗುವುದು ಶಾಲೆಗೆ ಅಲ್ಲವ೦ತೆ. ಕೋಚಿ೦ಗ್ ಕ್ಲಾಸಿಗ೦ತೆ. ಅದು  ಏನೋ ನನಗೆ ಸರಿ ಗೊತ್ತಾಗಲ್ಲಿಲ್ಲ. ಚಿಕ್ಕ ಮಿಲಿನ್ದ್ ಊಟ ಚೆನ್ನಾಗಿದ್ದರೆ ಭಾರಿ ಅದ ಅ೦ತ ಹೇಳ್ತಿದ್ದ. ವಿಶಾಲ್ ಯಾವಾಗಲೂ ನಾನು ಊರಿಗೆ ಬರಲ್ಲಾ ನಾನು ಇಲ್ಲೆ ಇರ್ತಿನಿ ಅ೦ತ ಹೇಳತ್ತಿದ್ದ. ಅವನಿಗೆ ನನ್ನ ಅಮ್ಮ ಬಹಳ ಇಷ್ಟ. ಅವನ ಹಠದಿ೦ದ ನಾವು ಅವನಿಗೆ ತಮಾಷೆ ಮಾಡ್ತಿದ್ವಿ.ಹಾಗಾದರೆ ನಿನು ಬೆಳಿಗ್ಗೆ ಗ೦ಟೆಗೆ ಎದ್ದು ಮನೆಯ ನೆಲ ಗುಡಿಸಬೇಕು ಮತ್ತು ಬಟ್ಟೆ ತೊಳೆಯಬೇಕು . ಅವನಿಗೆ ಬೇಸರವೆನಿಸಿ ನಾನು ಇಲ್ಲಿ ಇರುವುದಿಲ್ಲ. ನನ್ನ ಊರಿಗೆ ಹೋಗುತ್ತೇನೆ ಹೇಳಿದ. ನಮಗೆ ನಕ್ಕಿ ನಕ್ಕಿ ಸಾಕಾಯಿತು. ಹಲವಾರು ದಿನಗಳ ನ೦ತರ ಅವರು ವಿಜಾಪುರಕ್ಕೆ ಮತ್ತೆ ಹೊರಟರು.ನನಗೆ ಮಿಲಿ೦ದ್ ಹೋದನಲ್ಲಾ ಅ೦ತ ತು೦ಬಾ ಬೇಜಾರು ಆಯಿತು.   

ಪುಟದ ಮೊದಲಿಗೆ
 
Votes:  10     Rating: 4.9    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು