ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು    
ಚೇತನಾ ತೀರ್ಥಹಳ್ಳಿ
ಶನಿವಾರ, 31 ಮೇ 2008 (05:47 IST)

ಪ್ರೀತಿಯ ಮಕ್ಕಳೇ, ಬೇಸಿಗೆ ರಜೆ ಮುಗಿಯಿತು. ಹಾಗಂತ ನೀವು ಬೇಸರ ಪಡಬೇಕಾಗಿಲ್ಲ. ಸಂಪಿಗೆ ಬಯಲಲ್ಲಿ ನೀವು ಯಾವಾಗ ಬೇಕಾದರೂ ಆಟವಾಡಬಹುದು. ಈ ವಾರ ನಾವು ನಿಮಗೆ ಪುಟಾಣಿ ಕವಯತ್ರಿಯೊಬ್ಬಳನ್ನು ಪರಿಚಯಿಸುತ್ತಿದ್ದೇವೆ. ಚುಪ್ರಿ ಎಂಬ ಸುಪ್ರೀತಾಳನ್ನು ಪರಿಚಯಿಸಿದ್ದಾರೆ ಅವರ ಪಕ್ಕದ ಮನೆಯ ಅಕ್ಕ, ಲೇಖಕಿ, ಚೇತನಾ ತೀರ್ಥಹಳ್ಳಿ.

ಸುಪ್ರೀತಾ ಹನ್ನೆರಡು ವರ್ಷದ ಪುಟಾಣಿ. ಪುಟಾಣಿ ಅಂದರೆ ತಪ್ಪಾದೀತೇನೋ? ಅವಳ ಮಾತುಗಳನ್ನ ಕೇಳಿದವರು ಹಾಗನ್ನುವ ಸಾಹಸವನ್ನೆಂದೂ ಮಾಡಲಾರರು. ಸುಪ್ರೀತಾಗೆ ಬರೆಯೋದು ಅಂದ್ರೆ ವಿಪರೀತ ಆಸಕ್ತಿ. ಇವಳಿನ್ನೂ ನಮ್ಮ ನೆರೆಗೆ ಬಂದು ಎರಡು ತಿಂಗಳೂ ಆಗಿಲ್ಲ. ಏಪ್ರಿಲ್ ಎಕ್ಸಾಮ್ ಮುಗಿಸಿ ಶಿವಮೊಗ್ಗದಿಂದ ಬೆಂಗಳೂರಿಗೆ ಟ್ರಾನ್ಸ್‌ಫರ್ ಅದ ಅಪ್ಪನೊಂದಿಗೆ ಬಂದಿಳಿದ ಈ ಹುಡುಗಿ ಅವರಮ್ಮನಿಗಿಂತ ಮೊದಲೇ ನಮ್ಮೆಲ್ಲರಿಗೆ ಅತ್ಯಂತ ಆಪ್ತಳಾಗಿಬಿಟ್ಟಳು.

ಸುಪ್ರೀತಾ ಸುಪ್ರೀತಾ ಬಲು ತುಂಟ ಹುಡುಗಿ. ಅವರಮ್ಮ ಪಲ್ಲೆ ಮಾಡಲು ಹೆಚ್ಚಿಟ್ಟ ಬೆಂಡೆಕಾಯಿಯನ್ನು ಯಾವುದೋ ಮಾಯದಲ್ಲಿ ನೀರಿಗೆ ಹಾಕಿರುತ್ತಾಳೆ. ಚಪಾತಿ ಹಿಟ್ಟಲ್ಲಿ ಬಾತುಕೋಳಿ ಮಾಡಿ ಅದಕ್ಕೆ ಕಣ್ಣು ಅಂಟಿಸಲು ಸಾಸಿವೆ ಡಬ್ಬ ಹುಡುಕುತ್ತಾಳೆ. ಹುಡುಕಿ, ಮನೆ ತುಂಬ ಚೆಲ್ಲಿ, ಅವರಮ್ಮನ ಕೈಲಿ ಬೈಸಿಕೊಳ್ತಾಳೆ. ರಂಗೋಲಿ ಇಡಲಿಕ್ಕೆ ಹೋಗಿ, ಅದನ್ನು ಮತ್ತೆ ಮತ್ತೆ ನೀರು ಹಾಕಿ ತೊಳೆದು ಗೇಟಿನ ಎದುರು ಕೊಚ್ಚೆ ರಾಡಿ ಮಾಡಿ ಅದರೊಳಗೆ ಪಚಪಚನೆ ಕುಣಿಯುತ್ತಾಳೆ! ಇಷ್ಟೆಲ್ಲಾ ಇದ್ದರೂ. ಪೆನ್ನು ಪುಸ್ತಕ ಹಿಡಿದ ಕೂಡಲೆ ಈ ಹುಡುಗಿಯ ಗಾಂಭೀರ್ಯ ನೋಡಬೇಕು ನೀವು! ಆ ಸುಪ್ರೀತಾಳೇ ಬೇರೆ, ಈ ಇವಳೇ ಬೇರೆ!!

ನನಗೆ ಈ ಹುಡುಗಿ ತುಂಬ ಇಷ್ಟವಾಗಿದ್ದೇ ಈ ಕಾರಣಕ್ಕೆ. ನನಗೆ ಮಾತ್ರವಲ್ಲ, ಮನೆಯ ಸುತ್ತಮುತ್ತಲಿನವರೆಲ್ಲ ಇವಳನ್ನು ಇಷ್ಟ ಪಡುತ್ತಾರೆ. ಸದಾ ಒಬ್ಬರಲ್ಲ ಒಬ್ಬರು ‘ಚುಪ್ರಿ... ಚುಪ್ರಿ...' ಅಂತ ಕರೆಯೋದು ಕೇಳಿಸುತ್ತಲೇ ಇರುತ್ತದೆ.

ಈ ನಮ್ಮ ಚುಪ್ರಿ ಬರೆದ ಒಂದೆರಡು ಕವಿತೆಗಳು ಇಲ್ಲಿವೆ...

ಮೀನಿಗೆ ನೀರು ಹೆಗೋ
ನಮಗೆ ಭೂಮಿ ಹಾಗೆ.
ನೀರಿಂದ ಹೊರತೆಗೆದ ಮೀನು,
ಭೂಮಿಯಿಂದ ಹೊರಬಿದ್ದ ನಾನು...
ಹೇಗೋ ಹಾಗೇ
ಲೋಕದಾಚೆ ಇರುವ ಪ್ರಾಣಿಗಳೂನು!

ನಿಜ್ಜ ಹೇಳ್ತೀನಿ... ಮೊದ್ಲು ನನ್ಗೆ ಈ ಕವಿತೆ ಅರ್ಥವಾಗಿರಲಿಲ್ಲ! ಅವಳ್ನ ಕೇಳಿದ್ದಕ್ಕೆ ಏನಂದ್ಲು ಗೊತ್ತಾ? "ಅಕ್ಕಾ, ಈಗ ನಾವು ನೀರಲ್ಲೇ ಇದ್ರೆ ಸಾಯ್ತೀವಲ್ವ? ಯಾಕಂದ್ರೆ ಅಲ್ಲಿ ಆಕ್ಸಿಜನ್ನಿರಲ್ಲ. ಅದ್ಕೆ ನಾವು ಆಕ್ಸಿಜನ್ನಿಲ್ದೆ ಬದ್ಕಕ್ಕಾಗಲ್ಲ ಅಂದ್ಕೊಳ್ತೀವಿ. ಮೀನುಗಳು ನೀರಿಲ್ದೆ ಬದ್ಕಕ್ಕಾಗಲ್ಲ ಅಂದ್ಕೊಳ್ತಾವೆ. ಹಾಗೇ ಬೇರೆ ಲೋಕದ ಜೀವಿಗಳು ಎನೋ ಮಾಡ್ಕೊಂಡು ಬದ್ಕಿರ್ತಾವೆ. ನಾವು ಅಲ್ಲಿ ಆಕ್ಸಿಜನ್ನಿಲ್ದೆ ಪ್ರಾಣಿಗಳೇ ಇರಲ್ಲ ಅಂದ್ಕೊಳ್ತೀವಿ!"

ಅವರಮ್ಮನ ಮುಖ ನೋಡಿದೆ. ಕಾರ್ಟೂನಲ್ಲಿ ಬಂದ ಏಲಿಯನ್ನುಗಳನ್ನ ನೋಡಿ ಚುಪ್ರಿ ಕೇಳಿದ ಪ್ರಶ್ನೆಗೆ ಅವಳಪ್ಪ ಅಲ್ಲೆಲ್ಲ ಜೀವಿಗಳು ಬದುಕೋಕೆ ಸಾಧ್ಯವಿಲ್ಲ ಅಂದಿದ್ರಂತೆ. ಅದನ್ನ ಒಪ್ಪೋದಕ್ಕೆ ಅವಳಿಗೆ ಕಷ್ಟವಾಯ್ತಂತೆ. ಅಮೇಲೆ ಅವಳ ಡ್ರಾಯಿಂಗ್ ಬುಕ್ಕಲ್ಲಿ ಈ ಪೊಯಮ್ ಸಿಕ್ತು ಅಂದ್ರು ಅವಳಮ್ಮ ಶಾಮಲಾ.

ಮಕ್ಕಳು ಅಂದ್ಕೊಂಡು ಉಪೇಕ್ಷೆ ಮಾಡಿಬಿಡ್ತೀವಿ... ಅವು ಎಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುತ್ತವೆ ನೋಡಿ!

ಈಗ, ಸುಪ್ರೀತಾಳ ಮತ್ತೊಂದು ಕವಿತೆ-

ಕಡೆದು ಕಡೆದು ನೋಯಿಸಿದರೂ
ಚಿಗುರುವುದು ಮರ
ಪೊಟ್ಟಣದ ಬಟಾಣಿಗೂ
ಉದ್ದುದ್ದ ಮೊಳಕೆ.
ಹಣ್ಣು ತಿಂದು
ಎಸೆದ ಬೀಜದಿಂದ ಮತ್ತೆ ಗಿಡ.
ಮನಸಿದ್ದರೆ ಮಾಡಬಹುದು
ಕಸದಿಂದ ರಸ

"ಇದನ್ಯಾಕೆ ಬರೆದೆ?" ನಾನು ಕೇಳಿದೆ. "ನಮ್ ಕೈ ಕಟ್ ಮಾಡಿದ್ರೆ ಮತ್ತೆ ಬರಲ್ವಲ್ಲ?" ಅಂತು ಹುಡುಗಿ. ಅವಳಜ್ಜನ ಗ್ಯಾಂಗರಿನ್ ಪಾದ ಕತ್ತರಿಸಿ ತೆಗೆದಾಗ ಪುಟ್ಟಿಗೆ ಅದು ಮತ್ತೆ ಬೆಳೆಯತ್ತೆ ಅಂತ ಹೇಳಿ ಸಮಾಧಾನ ಪಡ್ಸಿದ್ರಂತೆ. ಅದು ಸುಳ್ಳು ಅಂತ ಗೊತ್ತಾದಾಗ ಅವಳು ವಿಪರೀತ ಗಲಾಟೆ ಮಾಡಿಬಿಟ್ಲಂತೆ.

ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ! ಅವರ ಗ್ರಹಿಕೆಯ, ಅಭಿವ್ಯಕ್ತಿಯ ವ್ಯಾಪ್ತಿ ಬೆರಗಿಗೆ ತಳ್ಳುತ್ತದೆಯಲ್ಲವೇ?

 

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು