ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ    
ಸಂಪಾದಕ
ಶನಿವಾರ, 21 ಜೂನ್ 2008 (09:04 IST)
ಪ್ರೀತಿಯ ಮಕ್ಕಳೇ, ಹಾಗೂ ಮಕ್ಕಳನ್ನು ಪ್ರೀತಿಸುವ ದೊಡ್ಡವರೇ,

ಈಗಾಗಲೇ ಮಕ್ಕಳ ಸಂಪಿಗೆಯಲ್ಲಿ ನೀವು ಚಿಣ್ಣರು ಬಿಡಿಸಿದ ಹಲವು ಚಿತ್ರಗಳನ್ನು ನೋಡಿದ್ದೀರಿ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವರ ಗ್ರಹಿಕೆ ಹಾಗೂ ಅಭಿವ್ಯಕ್ತಿ ಒಮ್ಮೊಮ್ಮೆ ಬೆರಗಿಗೆ ತಳ್ಳುತ್ತದೆ. ನಾವು ಮಕ್ಕಳೆಂದು ಉಪೇಕ್ಷೆ ಮಾಡುವ ಪುಟಾಣಿಗಳು ಒಮ್ಮೊಮ್ಮೆ ನಮಗಿಂತಲೂ ಪ್ರಬುದ್ಧರಾಗಿ ಚಿಂತಿಸಿರುತ್ತಾರೆ. ಕುಂಚ ಕೈಯಲ್ಲಿಡಿದ ಮಗುವಿನ ಮನಸ್ಸಿನಲ್ಲಿ ಸಾವಿರ ಬಣ್ಣಗಳ ಕಾಮನಬಿಲ್ಲು ಮೂಡಿರುತ್ತದೆ. ಅಪ್ಪನ ಕನ್ನಡಕ ಸಿಕ್ಕಿಸಿ ಕವಿತೆ ಬರೆಯಲೊರಟ ತುಂಟ ಹುಡುಗಿಯಲ್ಲಿ ಅವರಮ್ಮನ ಕೈಬಳೆಗಳ ಶಬ್ದವೂ ಕಾವ್ಯವಾಗಿ ಕರಗುತ್ತದೆ. ಮಕ್ಕಳಿಗೆ ಅವರದೇ ಆದ ಕಲ್ಪನಾ ಪ್ರಪಂಚವಿದೆ, ಅದನ್ನು ಸಹಜವಾಗಿ ಅರಳಲು ದೊಡ್ಡವರು ಬಿಡಬೇಕು. ನಿಮ್ಮ ಮಗು ಚಿತ್ರ ಬಿಡಿಸಿದರೆ, ಹನಿಗವನ ಬರೆದರೆ ಅದನ್ನು ಪ್ರೋತ್ಸಾಹಿಸಿ. ಅವರಿಗೆ ಸಂಪಿಗೆ ಆಟದ ಬಯಲು ಪರಿಚಯಿಸಿ. ಎಲ್ಲ ಮಕ್ಕಳಿಗೆ ಶುಭಕೋರುತ್ತಾ, ಈ ವಾರ ಹಾಸನದ ಇನ್ನೊಬ್ಬ ಪ್ರತಿಭೆ ಅಪ್ರಮೇಯನನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.

ಅಪ್ರಮೇಯನ ಹೆಸರಿನಲ್ಲಿ ರೇಖಾಗಣಿತದ ಸಾಧನೀಯ ತತ್ವ ನಿಯಮವಿದೆ. ಆದರೆ ಸಂಖ್ಯೆಗಳೊಂದಿಗಿನ ಆಟಕ್ಕಿಂತ ಆತನಿಗೆ ಇಷ್ಟವಾಗಿರುವುದು ಕುಂಚದ ಗೆಳೆತನ. ಹಾಸನದ ವಿಜಯಾ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಒಂಭತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಈ ಪುಟಾಣಿ ಕಲಾವಿದ ಲ್ಯಾಂಡ್‌ಸ್ಕೇಪ್ ಚಿತ್ರಗಳಿಗೆ ಬಣ್ಣ ತುಂಬುತ್ತಾನೆ. ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾನೆ. ನಿನಗೆ ಯಾರ ಚಿತ್ರ ಇಷ್ಟ ಎಂದು ಕೇಳಿದರೆ, ನನಗೆ ದೇಸಾಯಿ ಸರ್ ಅವರ ಚಿತ್ರ ಇಷ್ಟ, ಬಿ.ಕೆ.ಎಸ್ ವರ್ಮ ಅವರ ಚಿತ್ರ ಇಷ್ಟ, ಕನ್ನಡದ ಎಲ್ಲ ಚಿತ್ರಕಲಾವಿದರ ಚಿತ್ರ ಇಷ್ಟ ಎನ್ನುತ್ತಾನೆ. ಮತ್ತೆ ವರ್ಲ್ಡ್ ಫೇಮಸ್ ಕಲಾವಿದರು ಯಾರೂ ಇಷ್ಟ ಇಲ್ಲವಾ ಎಂದರೆ, ಅವರು ಯಾರೂ ಇಷ್ಟ ಇಲ್ಲ, ನನಗೆ ಕನ್ನಡದ ಕಲಾವಿದರೇ ಇಷ್ಟ ಎಂದು ಉತ್ತರಿಸುತ್ತಾನೆ.


ಅದೆಲ್ಲಾ ಸರಿ ಅಪ್ರಮೇಯ, ಮುಂದೆ ಏನಾಗ್ತೀಯ ಎಂದರೆ ಸಾಪ್ಟ್‌ವೇರ್ ಎಂಜಿನೀಯರ್ ಆಗುತ್ತೀನಿ ಎನ್ನುವ ಸಿದ್ಧ ಉತ್ತರ ಕೊಡುತ್ತಾನೆ. ಸಾಪ್ಟ್‌ವೇರ್ ಎಂಜಿನೀಯರ್ ಆದರೆ ನಿನಗೆ ಚಿತ್ರ ಬಿಡಿಸಲು ಸಮಯ ಎಲ್ಲಿ ಸಿಗುತ್ತದೆ ಎಂದರೆ, ಅದೆಲ್ಲಾ ಏನೇ ಬಂದರೂ ನಾನು ಚಿತ್ರ ಬಿಡಿಸುವುದು ಮಾತ್ರ ನಿಲ್ಲಿಸುವುದಿಲ್ಲ ಎನ್ನುತ್ತಾನೆ. ಅರಣ್ಯ ಇಲಾಖೆಯಲ್ಲಿ ವೃತ್ತಿಯಲ್ಲಿರುವ ಪ್ರಭಂಜನ್ ಹಾಗೂ ಸುಷ್ಮಾ ಅವರ ಮಗ ಅಪ್ರಮೇಯ. ಈ ಪುಟ್ಟ ಕಲಾವಿದನ ಚಿತ್ರ ನಿಮಗೂ ಇಷ್ಟವಾಗಿರಬೇಕಲ್ಲಾ?

 



ನಿಮಗೆ ಪರಿಚಯವಿರುವ ಇಂತಹ ಪುಟಾಣಿಗಳ ಕುರಿತು ನಮಗೆ ಬರೆದು ಕಳುಹಿಸಿ. ಅವರ ಮುದ್ದು ಪ್ರತಿಭೆಯನ್ನು ನಾವು ಪ್ರಕಟಿಸುತ್ತೇವೆ. ಈ ವಾರದ ಮಕ್ಕಳ ಸಂಪಿಗೆ ನೋಡಿ ನಿಮಗೇನನಿಸಿತು, ನಮಗೆ ಬರೆಯಿರಿ.

 

ಪುಟದ ಮೊದಲಿಗೆ
 
Votes:  5     Rating: 2.6    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು