ಪ್ರೀತಿಯ ಮಕ್ಕಳೇ,
ಪ್ರತಿ ವಾರವೂ ಮಕ್ಕಳ ಸಂಪಿಗೆಯಲ್ಲಿ ಹೊಸ ಹೊಸ ಮೊಗ್ಗು ಅರಳಿ ಹೂವಾಗುತ್ತಿದೆ. ತಮ್ಮ ಕೌಶಲ್ಯ, ಕ್ರಿಯಾಶೀಲತೆ ಹಾಗೂ ಅಭಿವ್ಯಕ್ತಿಯಿಂದ ಹಲವು ಪುಟಾಣಿಗಳು ಸಂಪಿಗೆ ವನದ ಕಂಪು ಹೆಚ್ಚಿಸಿದ್ದಾರೆ. ಈಗಾಗಲೇ ನಾವು ಹಾಸನದ ನಾಲ್ವರು ಪುಟಾಣಿ ಚಿತ್ರಕಲಾವಿದರನ್ನು ನಿಮಗೆ ಪರಿಚಯಿಸಿದ್ದೇವೆ. ಇವರೆಲ್ಲಾ ಅಲ್ಲಿನ ಚಿತ್ಕಲಾ ಫೌಂಡೇಶನ್‌ನಲ್ಲಿ ಬಿ.ಎಸ್.ದೇಸಾಯಿ ಗುರುಗಳ ಬಳಿ ಚಿತ್ರಕಲೆಯನ್ನು ಕಲಿಯುತ್ತಿರುವವರು.
ರೇಖೆ-ಬಣ್ಣ- ದೃಶ್ಯಗಳಲ್ಲಿ ಸಮತೋಲನವನ್ನೂ, ವಿಶೇಷತೆಯನ್ನೂ ಸೃಷ್ಟಿಸಿರುವ ಈ ಮಕ್ಕಳಲ್ಲಿ ಯಾರ ಚಿತ್ರ ಚೆನ್ನಾಗಿದೆ, ಯಾರದು ಹೆಚ್ಚು ಸುಂದರ ಎಂದು ಹೇಳಲಿಕ್ಕೇ ಆಗದಷ್ಟು ಸುಂದರವಾಗಿದೆ. ಈ ವಾರ ಬಣ್ಣದೊಂದಿಗೆ ಬಂದಿರುವ ಉಲ್ಲಾಸ್ ಜಿ. ಕೂಡ ಇದೇ ಪ್ರಶ್ನೆಯನ್ನು ನಿಮ್ಮ ಮುಂದಿಡುತ್ತಾನೆ. ಉಲ್ಲಾಸ್ ಬಿಡಿಸಿರುವ ಚಿತ್ರ ನಿಮ್ಮ ಮೊದಲ ನೋಟಕ್ಕಾಗಿ.
ಹಾಸನದ ವಿಜಯಾ ಕಾನ್ವೆಂಟ್‌ನಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಉಲ್ಲಾಸ್, ಕಾಫಿ ಪ್ಲಾಂಟರ್ ಬಾಳ್ಲು ಗೋಪಾಲ್ ಮತ್ತು ಗೋಮತಿಯವರ ಮಗ. ಚೆಸ್ ಇಷ್ಟಪಡುವ ಖೋಖೋವನ್ನೂ ಪ್ರೀತಿಸುವ ಉಲ್ಲಾಸ್, ನಾನು ಬಿಡಿಸಿದ ಚಿತ್ರ ನಿಮಗೆ ಇಷ್ಟವಾಯಿತೇ ಎಂದು ಕೇಳುತ್ತಿದ್ದಾನೆ.