|
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕುರಿತು ಬಸು ಮೇಗಲಕೇರಿ ಬರೆದದ್ದು
|
| ಬಸವರಾಜು |
 |
ರಾಜ್ಯದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯನವರು, ಸಮಾಜವಾದಿ ಹಿನ್ನೆಲೆಯಿಂದ ಬಂದ ರಾಜಕಾರಣಿ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಹೋರಾಟಗಳನ್ನು ಬಹಳ ಹತ್ತಿರದಿಂದ ಕಂಡುಂಡವರು. ಸಾಹಿತಿಗಳಾದ ದೇವನೂರ ಮಹಾದೇವ, ಶ್ರೀಕೃಷ್ಣ ಆಲನಹಳ್ಳಿ, ಪ್ರೊ. ಕೆ. ರಾಮದಾಸ್, ಕೆ.ನ. ಶಿವತೀರ್ಥನ್ ರವರೊಂದಿಗೆ ಒಡನಾಡಿದವರು. ರಾಮಕೃಷ್ಣ ಹೆಗಡೆ,... |
|
ಸಿತಾರ್ ಸರದಾರನ ಕುರಿತು ಸರೋದ್ ಮಾಂತ್ರಿಕನ ಮಾತುಗಳು
|
| ಪಂಡಿತ್ ರಾಜೀವ್ ತಾರಾನಾಥ್ |
 |
ಪಂಡಿತ್ ರವಿಶಂಕರರ ಕುರಿತ ರಾಗಮಾಲ ಪುಸ್ತಕದಲ್ಲಿ ಪ್ರಕಟವಾಗಿರುವ ಪಂಡಿತ್ ರಾಜೀವ್ ತಾರಾನಾಥರ ಮಾತುಗಳು ಸಿತಾರ್ಗೆ ಸಂಬಂಧಿಸಿದಂತೆ ರವಿಶಂಕರರ ಕೊಡುಗೆ ಎರಡು ರೀತಿಯದು. ಮೊದಲನೆಯದಾಗಿ ವಾದ್ಯದ ರಚನೆಯಲ್ಲೇ ಮಾಡಿದ ಬದಲಾವಣೆ. ಈ ಬದಲಾವಣೆಯನ್ನು ಇವರ ಗುರುಗಳಾದ ಅಲ್ಲಾವುದ್ದೀನ್ ಖಾನ್ ಸಾಹೇಬ್ರು ಪ್ರಾರಂಭಿಸಿದ್ದರು. ಅವರಿಗೆ ಇದರಲ್ಲಿ ತುಂಬಾ ಆಸಕ್ತಿ. ಒಂದು ನಿರ್ದಿಷ್ಟವಾದ ವಾದ್ಯ ತೆಗೆದುಕೊಂಡು... |
|
ಹಾರಿ ಹೋದ ಹಾಡುಹಕ್ಕಿಯ ಕುರಿತು ವಿದ್ಯಾಶಂಕರ್ ಹರಪನಹಳ್ಳಿ
|
| ವಿದ್ಯಾಶಂಕರ್ ಹರಪನಹಳ್ಳಿ |
 |
ಮರದ ಮರೆಯಲ್ಲಿ ಹಾಡುತಿದ್ದ ಹಕ್ಕಿ ತಟ್ಟನೆ ಹಾರಿ ಹೋದಾಗ ಕೇಳುಗರ ಮನದಲ್ಲಿ ಉಳಿಯುವುದೇನು? ಹಾಡಿನ ಗುಂಗು ಮತ್ತು ಇನ್ನೊಂದಷ್ಟು ಹೊತ್ತು ಹಾಡಿದ್ದರೆ ಚೆನ್ನಾಗಿತ್ತು ಎಂಬ ಕೇಳುಗರ ಆಸೆಬುರುಕುತನ. ಆದರೆ ಹಾಡೊ ಹಕ್ಕಿಗೆ ಏನು ಧಾವಂತವಿತ್ತೋ ಏನೋ. ಎಂಬತ್ತೆರಡು ವರುಷದ ತುಂಬು ಜೀವನ ನಡೆಸಿದ ಪಿ. ಬಿ. ಶ್ರೀನಿವಾಸ್ ಏಪ್ರಿಲ್ ೧೪ ರಂದು ತೀರಿಕೊಂಡರು. ಪಿ. ಬಿ. ಎಂಬ ಇನಿಷಿಯಲ್ ಏನೆಂದು ನೋಡಿದರೆ 'ಪ್ರತಿವಾದಿ ಭಯಂಕರ'! ಅಂತಹ ಸಜ್ಜನ, ಸುಸಂಸ್ಕೃತ, ಸುಮಧುರ... |
|
ದನಿ ನಡುಗುತ್ತಿದ್ದ ಹಾಡುಹಕ್ಕಿಯ ಕಂಡಿದ್ದ ಭಾರತಿ ನೆನಪುಗಳು
|
| ಭಾರತಿ ಬಿ.ವಿ. |
 |
ನಾವು ಸ್ಕೂಲಿನಲ್ಲಿರುವಾಗ ಮೂವರು ಗೆಳತಿಯರಿದ್ದೆವು. ಅವತ್ತು ಫಿಸಿಕ್ಸ್ ಕ್ಲಾಸ್ ನಡೆಯುತ್ತಿತ್ತು. ನಮ್ಮ ಪಾಪದ ಫಿಸಿಕ್ಸ್ ಮೇಷ್ಟ್ರು ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದಷ್ಟು ಒಳ್ಳೆಯವರು. ನಮಗೆ ವಿಜ್ಞಾನದ ವಿಷಯವನ್ನು ಕೇಳಿಸಿಕೊಂಡರೂ ತಲೆಗೆ ಏನೇನೂ ಹತ್ತುತ್ತಿರಲಿಲ್ಲವಾದ್ದರಿಂದ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿ ಒಂದು ಗಹನ ಮಾತುಕತೆಯಲ್ಲಿ ತಲ್ಲೀನರಾಗುವುದು ನಮ್ಮ ಎಂದಿನ ಅಭ್ಯಾಸ. ಅವತ್ತಿನ ದಿನ ಕನ್ನಡದ ಹಾಡುಗಳಲ್ಲಿ... |
|
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳ ಕುರಿತ ಅಪ್ಪಾಜಿರಾಯರ ನೆನಪುಗಳು
|
| ಎಚ್. ಶೇಷಗಿರಿರಾವ್ |
 |
ಸುಮಾರು ಒಂದ ದಶಕದ ಹಿಂದೆ ನಿವೃತ್ತನಾಗಿ ಚಿತ್ರದುರ್ಗದಲ್ಲಿ ಮಗನ ಜೊತೆ ಇದ್ದೆ. ಒಂದು ದಿನ ಬೆಳಗ್ಗೆ ಬಿಳಿ ಜುಬ್ಬತೊಟ್ಟ ಬಿಳಿ ಧೋತರ ಉಟ್ಟ, ತಲೆಗೆ ಬಿಳಿ ಟವೆಲ್ ಸುತ್ತಿಕೊಂಡ ಗಾಂಧೀಜಿಯಂತೆ ಮುಖವೆಲ್ಲ ಮುಗುಳು ನಗೆಯಾದ ಹಲ್ಲಿಲ್ಲದ ಬಾಯಿಯ ,ಕೋಲು ಮುಖದ ಹಿರಿಯರೊಬ್ಬರು ಆಕಾಶವಾಣಿಯ ಬೇಂದ್ರೆ ಮಂಜುನಾಥರ ಜೊತೆಗೆ ಮನೆಗೆ ಬಂದರು. ಕುಳಿತಿದ್ದ ಮಗ ಧಡಕ್ಕನೆ ಎದ್ದು ಅವರಿಗೆ ಕೈ ಮುಗಿದ.,"ಬೆಳೆಗೆರ ಶಾಸ್ತ್ರಿಗಳು ಬರಬೇಕು, ಬರಬೇಕು “ ಎಂದು ಸ್ವಾಗತಿಸಿದ,... |
|