ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಸಮಕಾಲೀನ ಕನ್ನಡನಾಡಿನ ಅತ್ಯುತ್ತಮ ಕಟ್ಟಡ ವಿನ್ಯಾಸಗಾರ,ಬರಹಗಾರರಲ್ಲೊಬ್ಬರಾದ ನಾಗರಾಜ ವಸ್ತಾರೆ ಬಿಜಾಪುರ ಗೋಲಗುಮ್ಮಟದ ಕುರಿತು ಬರೆದದ್ದರ ಮೊದಲ ಕಂತು.

ಖಿಲ್ಜಿಗಳು, ತುಘಲಕರು ಮತ್ತು ಮುಘಲರು ಇಡೀ ಇಂಡಿಯಾವನ್ನು ಒಂದೇ ಹುಕುಮ್ಮತಿನಡಿಯಲ್ಲಿ ತರಲು ಹೆಣಗಿದರಾದರೂ ಈ ಜಂಬೂದ್ವೀಪವೆಂದೂ ಏಕಸ್ವಾಮ್ಯಕ್ಕೀಡಾಗಲಿಲ್ಲ. ದೆಹಲಿಯಲ್ಲಿ ಇಸ್ಲಾಮ್ ರಿಯಾಸತಿರುವ ಕಾಲಕ್ಕೇ ಗುಜರಾತ್, ಬಂಗಾಳ, ಮಾಳವ, ಪಂಜಾಬ್, ಕಾಶ್ಮೀರ ಮತ್ತು ದಖನಿನಲ್ಲಿ ಸ್ವತಂತ್ರ ಮುಸ್ಲಿಮ್ ಪ್ರಾಂತ್ಯಗಳಿದ್ದವೆಂದು ಚರಿತ್ರೆಯ ಉಲ್ಲೇಖ. ದಕ್ಷಿಣದ ಬಿಜಾಪುರ, ಗುಲ್ಬರ್ಗ, ಬೀದರ್ ಮತ್ತು ಗೋಲ್ಕೊಂಡಗಳ ಸುಲ್ತಾನತುಗಳನ್ನು ಹೊರತುಪಡಿಸಿದರೆ, ಈ ಮುಸ್ಲಿಂ ಪ್ರಾಂತ್ಯಗಳಲ್ಲಿ ದೆಹಲಿಗೆ ಸೇರಿಯೂ ಸೇರದ ವಿಭಿನ್ನ ಕಟ್ಟಡಗಾರಿಕೆ ಕಾಣಸಿಗುತ್ತದೆ. ಇಲ್ಲಿನ ಬನಾವಟುಗಳಲ್ಲಿ ಸ್ಥಳೀಯವಾದ ಮೂರ್ತಾಮೂರ್ತತೆಯನ್ನೂ, ಮನುಷ್ಯಕೌಶಲವನ್ನೂ ಒಳಗೊಂಡಿರುವ ತಂತಮ್ಮದೇ ಪ್ರಾದೇಶಿಕತೆಯಿದೆ. ಅಹ್ಮದಾಬಾದ್, ಮಾಂಡು, ಲಾಹೋರ್, ಬಾಂಗ್ಲಾದೇಶಗಳಲ್ಲೊಂದು ಸುತ್ತುಬಂದರೆ ಈ ‘ಆಬಾದು'ಗಳ ಸ್ಥಳೀಯತೆಗೆ ಸಾಕಷ್ಟು ಸಬೂತಾದೀತು. ಈ ಪ್ರಸ್ತಾಪದಲ್ಲಿ ದಖನನ್ನು ಹೊರತುಗೊಳಿಸಿದ್ದಕ್ಕೆ ಇನ್ನೊಂದೇ ಕಾರಣವಿದೆ. ಬಹುಮನಿ ಎನ್ನಲಾಗುತ್ತಿದ್ದ ದೊಡ್ಡ ಸಾಮ್ರಾಜ್ಯ ಮತ್ತು ಆದಿಲ್ ಶಾಹಿ ಎನ್ನಲಾಗುತ್ತಿದ್ದ ದಕ್ಷಿಣದ ಸುಲ್ತಾನತು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪೂರ್ತಿಯಾಗಿ ದೆಹಲಿಯ ಜತೆಗಿನ ಲೇವಾದೇವಿಯಿಲ್ಲದೆ ಆಗಿದ್ದಂತೆ. ಯಾಕೆಂದರೆ ಇಲ್ಲಿನ...

 ತರೀಕೆರೆ ಹೊಸ ತಲೆಮಾರಿನ ಲೇಖಕರು: ವಿಕ್ರಮ ವಿಸಾಜಿ

ಬೀದರ್ ಜಿಲ್ಲೆಯು ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ದಿಟವಾಗಿದೆ. ಆದರೆ ಈ ಹಿಂದುಳಿಯುವಿಕೆ, ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೂ ಇದ್ದಂತಿದೆ. ‘ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೆ' ಎಂಬ ಮಾತನ್ನು ಯಾಕೆ ಹೇಳಬೇಕಿದೆ ಎಂದರೆ, ಈ ಭಾಗದಲ್ಲಿ ಅಖಿಲ ಭಾರತ ಖ್ಯಾತಿಯ ಉರ್ದು ಲೇಖಕರಿದ್ದಾರೆ ಹಾಗೂ ದೊಡ್ಡ ಸಂಖ್ಯೆಯ ಜನಪದ ಕವಿಗಳಿದ್ದಾರೆ. ತತ್ವಪದಕಾರರಿದ್ದಾರೆ. ಜತೆಗೆ ೧೨ನೇ ಶತಮಾನದಲ್ಲಿ ನೂರಾರು ಶರಣರು ಸಾಹಿತ್ಯ ರಚನೆ ಮಾಡಿದ ಸೀಮೆಯಿದು. ಹೀಗಿದ್ದೂ ಆಧುನಿಕ ಕನ್ನಡ ಸಾಹಿತ್ಯದ ವಿಷಯದಲ್ಲಿ ಒಂದು ಬಗೆಯ ಬಡತನವಿರಲು ಏನು ಕಾರಣವಿರಬಹುದು? ಬಹುಶಃ ಈ ಸೀಮೆ ವಸಾಹತುಶಾಹಿ ಆಧುನಿಕತೆಗೆ ಬಹಳ ತಡವಾಗಿ ತೆರೆದುಕೊಂಡಿದ್ದು; ಆಧುನಿಕ ಸಾಹಿತ್ಯದ ಚಟುವಟಿಕೆಗೆ ತಳಹದಿಯಂತಿರುವ ಮಧ್ಯಮವರ್ಗವೊಂದು ದೊಡ್ಡ ಪ್ರಮಾಣದಲ್ಲಿ ರೂಪುಗೊಂಡಿಲ್ಲದೆ ಇರುವುದು; ಒಂದೆಡೆ ಮಹಾರಾಷ್ಟ್ರವೂ ಮತ್ತೊಂದೆಡೆ ಆಂಧ್ರಪ್ರದೇಶವೂ ತಮ್ಮ ಬಗಲಲ್ಲಿ ಹಿಡಿದುಕೊಂಡಂತಿರುವ ಭಾಷಿಕ ಮತ್ತು ಭೌಗೋಳಿಕ ಸನ್ನಿವೇಶವಿರುವುದು; ನಿಜಾಮರ ಆಳ್ವಿಕೆ ಕಾಲದಲ್ಲಿ ಉರ್ದು ಭಾಷೆ ಹೇರಿಕೆಯಾಗಿದ್ದು- ಇವೆಲ್ಲವೂ ಕಾರಣವಿರಬಹುದು. ಆದರೆ ಇಂತಹದೇ ಚಾರಿತ್ರಿಕ ಹಿನ್ನೆಲೆಯುಳ್ಳ ಗುಲಬರ್ಗಾ-ರಾಯಚೂರು...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ...

ಭಾಗವತ ೨೮:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ

ಕಂಸನಿಗೆ ನಿನ್ನನ್ನು ತೋರಿಸಿಕೊಳ್ಳಬೇಡ; ದಯವಿಟ್ಟು ಎಂದು ತಾಯಿ ದೇವಕಿ ಭಗವಂತ ಕೃಷ್ಣನಿಗೆ ಹೇಳಿದಳಲ್ಲ; ಕೃಷ್ಣನಿಗೆ ಇದೇ ಬೇಕಿತ್ತು. ಸಂಸಾರಿಯ ಈ ಭಯ; ಈ ಭಾವ: ಈ ತಾಯ್ನುಡಿ- ಇದೇ ಬೇಕಿತ್ತು. ಈ ಜಾಡನ್ನೇ ಮುಂದುವರಿಸಿ ದೇವರು ಹೇಳಿದನಂತೆ: `ನನ್ನನ್ನು ಗೋಕುಲಕ್ಕೆ ಒಯ್ಯಿರಿ. ಅಲ್ಲಿ ಯಶೋದೆಗೆ ಒಂದು ಮಗು ಜನಿಸಿದೆ. ಅದನ್ನು ತಂದು ಇಲ್ಲಿ ನಿಮ್ಮ ಪಕ್ಕದಲ್ಲಿ...

ಗೂಬೆ ಹಿಡಿದ ಹುಡುಗ, ಬೆಕ್ಕು ತಂದ ಹುಡುಗಿ

ಮಕ್ಕಳು ಯಾವತ್ತೂ ಕುತೂಹಲಿಗಳೇ. ಸಾಹಸ ಪ್ರಿಯರಂತೂ ಹೌದೇ ಹೌದು. ಜೇನು ಕೀಳಬಲ್ಲರು, ರಜೆಯಲ್ಲಿ ಹಿರಿಯರೊಡನೆ ಕೂಡು ಬೇಟೆಗೆ ಹೋಗಬಲ್ಲರು. ಕೂಡು ಬೇಟೆ ಒಂದು ಕಾಲದಲ್ಲಿತ್ತು. ಈಗಿಲ್ಲ. ಬೇಟೆಗೆ ಹೋದ ಮಕ್ಕಳು ತರಗತಿಯಲ್ಲಿ ಗುಸು ಗುಸು, ಪಿಸಿಪಿಸಿ ಅಂತ ಬೇಟೆಯ ತಮ್ಮ ಅನುಭವವನ್ನು ಹೇಳಿಕೊಳ್ಳದೆ ಇರುತ್ತಿರಲಿಲ್ಲ. ತಾವು ಗುಂಡು ಹೊಡೆಯದಿದ್ದರೂ ಹಿರಿಯರೊಡನೆ...

 
 ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು

ಯಾಕೋ ಡಲ್ಲಾದಂತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಬೀದರಿಗೆ ಬಂದಿದ್ದರು. '

ಹಳ್ಳಿಯೆಡೆಗೆ ಮುಖ್ಯಮಂತ್ರಿಗಳ ನಡಿಗೆ', 'ಸಾವಯವ ಕೃಷಿಕ ಅಂಗಳದಲ್ಲಿ ಸಂವಾದ' ಕೇಳಲು ಎಷ್ಟೊಂದು ಚೆನ್ನಾಗಿವೆ. ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಇದನ್ನು ಬರೆದುಕೊಟ್ಟ ಮಹಾನ್ 'ಸಾಹಿತಿ'ಗಳ ವದನಾರವಿಂದ ನೋಡಬೇಕು ಅನ್ನಿಸುತ್ತದೆ.

ಮಹಾರಾಷ್ಟ್ರದ ಬ್ಯಾರೇಜುಗಳಿಂದ ಮನಸೋ ಇಚ್ಛೆ ನೀರು ಬಿಟ್ಟದ್ದರಿಂದ ಹತ್ತಾರು ಸಾವಿರ ಎಕರೆ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹಳಹಳಿಸುತ್ತಿರುವ ದಿನಗಳಲ್ಲಿ ಮುಖ್ಯಮಂತ್ರಿಗಳ ಭೇಟಿ ಸಹಜವಾಗಿಯೇ ಆಸೆ ಹುಟ್ಟಿಸಿತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಈ ಬಾರಿಯಷ್ಟು ಸಕಾಲಿಕ ಮಳೆ ಆಗಿರಲಿಲ್ಲ. ಜೂನ್ ಮಧ್ಯದಿಂದ ಮಳೆ ಸುರಿಯ ತೊಡಗಿದ್ದರಿಂದ ಹೊಲದಲ್ಲಿ ಹೆಸರು, ಉದ್ದು, ತೊಗರಿ ಬೆಳೆಗಳು ಹಸಿರಾಗಿ ಕಣ್ಮನ ತಣಿಸುವಂತೆ ಬೆಳೆದಿದ್ದವು. ರೈತರ ಮನದಲ್ಲಿ ಆಸೆ ಮೂಡಿಸಿದ್ದವು. ಇದ್ದಕ್ಕಿದ್ದಂತೆ ಸುರಿದ ಮಳೆ ರೈತರಿಗೆ ಶನಿಯಾಯಿತು. ಹಾಗೆ ಮಳೆ ಸುರಿದದ್ದು ಕರ್ನಾಟಕದಲ್ಲಿ ಅಲ್ಲ, ಮಹಾರಾಷ್ಟ್ರದಲ್ಲಿ. ಬ್ಯಾರೆಜ್ ತುಂಬುವವರೆಗೂ ನೀರು ಸಂಗ್ರಹಿಸಿಟ್ಟುಕೊಳ್ಳುವ ಮಹಾರಾಷ್ಟ್ರಿಗರು ಇದ್ದಕ್ಕಿದ್ದಂತೆ ಅಂದರೆ ಯಾವುದೇ ಮುನ್ಸೂಚನೆ ಇಲ್ಲದೇ ನೀರು ಬಿಟ್ಟರು. ಗೋದಾವರಿ ನದಿಯ ಉಪನದಿ ಮಾಂಜ್ರಾ ತುಂಬಿ ಹರಿದದ್ದರಿಂದ ಸಾವಿರಾರು ಎಕರೆ ಕೃಷಿ ಜಮೀನು ಬೆಳೆದು ನಿಂತ ಬೆಳೆಯೊಂದಿಗೇ ನೀರು ಪಾಲಾಯಿತು. ಅದರ ನಷ್ಟ ಲೆಕ್ಕಾಚಾರ ಮಾಡುವ ಮುನ್ನವೇ ಮಾಂಜ್ರಾ ನದಿಯ ಉಪನದಿ 'ದೇವನಾಲಾ'ದಿಂದ ನೀರು ಹರಿದದ್ದರಿಂದ ಜನ ಸಂಕಷ್ಟಕ್ಕೆ ಸಿಲುಕಿದರು. ಸಮಸ್ಯೆಯನ್ನು ಕೇಳಿ ಅರಿಯುವುದಕ್ಕೂ ಪುರುಸೊತ್ತಿಲ್ಲದ ಮುಖ್ಯಮಂತ್ರಿಗಳು 'ಪರಿಹಾರ ನೀಡುವ ಸಮಯ ಇದಲ್ಲ' ಎಂದು ಪ್ರಕಟಿಸಿಬಿಟ್ಟರು. ಕಳೆದ ಸಾಲಿನಲ್ಲಿ 'ಬರ' ಬಂದಾಗ ಬಂದಿದ್ದ ಸಿಎಂ ಸಾಹೇಬರು ಎಕರೆ ಎರಡು ಸಾವಿರ ಪರಿಹಾರ...

Font Help
Site Web
ಜನಮತ
ನಾನು ಇರುವುದು ಹೀಗೆ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige