ಉಮಾರಾವ್
ಉಮಾ ರಾವ್ ಬಿ ಎಸ್ಸಿ, ಬಿಎಲ್ ಪದವೀಧರೆ. ೧೯೯೭ರ ವರೆಗೆ ಮುಂಬೈ ವಾಸ. ಜಾಹೀರಾತು ಕಂಪನಿಗಳಲ್ಲಿ ಫ್ರೀಲಾನ್ಸ್ ಕಾಪಿರೈಟರ್ ಆಗಿ ಕೆಲಸ. ಇವರ ಅನೇಕ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ. ಈಟಿವಿ ಗಾಗಿ ಟಾಕ್ ಶೋಗಳು, ಸಂದರ್ಶನ-ಹೋಸ್ಟಿಂಗ್ ಮತ್ತು ನಿರ್ದೇಶನ. ಧಾರಾವಾಹಿಗಳಿಗಾಗಿ ಸ್ಕ್ರಿಪ್ಟ್ ರಚನೆ. ಮುಂಬೈ ರಂಗಭೂಮಿಯಲ್ಲಿ ಸಕ್ರಿಯ ಪಾತ್ರ - ಅನುವಾದ, ಅಭಿನಯ, ನಿರ್ದೇಶನ. ಇವರು ಬರೆದಿರುವ ‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ (ಕಥಾ ಸಂಕಲನಗಳು) , ನೂರು ಸ್ವರ (ಕಾದಂಬರಿ, ಮುಂಬೈ ಡೈರಿ (ಅಂಕಣ ಸಂಗ್ರಹ), ರಾಕೀ ಪರ್ವತಗಳ ನಡುವೆ ಕ್ಯಾಬರೆ (ಪ್ರವಾಸ ಕಥನ)' ಮುಂತಾದ ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನಾಲ್ಕಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.