|
ಎನ್. ಎ. ಎಂ. ಇಸ್ಮಾಯಿಲ್
ಇಸ್ಮಾಯಿಲ್ ಕನ್ನಡದ ಹೊಸ ತಲೆಮಾರಿನ ಪ್ರತಿಭಾವಂತ ಪತ್ರಕರ್ತರು. ಸದ್ಯಕ್ಕೆ ಬೆಂಗಳೂರಿನಲ್ಲಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನಲ್ಲೂರಿನವರಾದ ಇಸ್ಮಾಯಿಲ್ ಕನ್ನಡದಲ್ಲಿ ಅಂತರ್ಜಾಲ ಸಾಹಸಗಳಿಗೆ ಮುನ್ನುಗ್ಗಿದ ಮೊದಲಿಗರಲ್ಲಿ ಒಬ್ಬರು. ಕಂಪ್ಯೂಟರ್, ಅರ್ಥಶಾಸ್ತ್ರ, ಕೃಷಿಸಾಲ ಹಾಗೂ ಸಾಹಿತ್ಯ ಇವರ ಇಷ್ಟದ ವಿಷಯಗಳು.
|