|
ಸ್ವಾಮಿ ಸೃಜನಾನಂದ
ಪೂರ್ವಾಶ್ರಮದ ಹೆಸರು ರಾಮದಾಸ. ಊರು ಹಾಸನ ಜಿಲ್ಲೆಯ ಹಾರೋಹಳ್ಳಿ. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ೧೯೮೭ರಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ದೇಶಾಟನ ಕ್ರಿಯೆಯಲ್ಲಿ ನಿರತರಾಗಿದ್ದಾರೆ. ಹೃಷಿಕೇಶದ ಶಿವಾನಂದಾಶ್ರಮದಿಂದ ವರ್ಕಲದ ನಾರಾಯಣ ಗುರುಕುಲಂನ ತನಕದ ಅನೇಕ ಆಶ್ರಮಗಳ ಸಂಪರ್ಕವಿರುವ ಇವರು ಪೂರ್ವ ಮತ್ತು ಪಶ್ಚಿಮದ ದರ್ಶನಗಳ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಾರೆ. ಕೆಲಕಾಲ ‘ಉದಯವಾಣಿ’ಯ ಸಾಪ್ತಾಹಿಕ ಸಂಪದ ಪುರವಣಿಯಲ್ಲಿ ‘ಬೋಧಿವೃಕ್ಷ’ ಎಂಬ ಅಂಕಣ ಬರೆಯುತ್ತಿದ್ದರು. ವಿವಿಧ ವಿದ್ವತ್ಪತ್ರಿಕೆಗಳೂ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಲೇಖನ ಬರೆದಿದ್ದಾರಾದರೂ ಯಾವುದೇ ಪುಸ್ತಕ ಈ ತನಕ ಪ್ರಕಟವಾಗಿಲ್ಲ.
|