ಕೃಪಾಕರ್ ಸೇನಾನಿ
ಕೃಪಾಕರ್-ಸೇನಾನಿ ನಮ್ಮ ನಡುವಿನ ಯಶಸ್ವಿ ವನ್ಯ ಛಾಯಾಚಿತ್ರಗ್ರಾಹಕ ಜೋಡಿ. ಬಂಡೀಪುರದ ಕಾಡಿನೊಳಗೆ ಬದುಕುತ್ತ, ಬೆಳೆಯುತ್ತ ಬಂದ ಇವರಿಬ್ಬರದು ಈಗ ಅಂತಾರಾಷ್ಟ್ರೀಯ ಹೆಸರು. ಕಾಡುನಾಯಿಗಳ ಕುರಿತ ಇವರ ಸಾಕ್ಷ್ಯಚಿತ್ರ ಜಪಾನಿನಲ್ಲಿ ನಡೆದ ವನ್ಯಜೀವಿ ಚಿತ್ರೋತ್ಸವದಲ್ಲಿ 2007ರ ಅತ್ಯುತ್ತಮ ಚಿತ್ರಪ್ರಶಸ್ತಿ ಪಡೆದಿದೆ. ಈ ಚಿತ್ರೋತ್ಸವದ ಇತಿಹಾಸದಲ್ಲೇ ಮೊದಲ ಬಾರಿ ಈ ಹೆಗ್ಗಳಿಕೆ ಪಡೆದ ಭಾರತೀಯ ಚಿತ್ರ ಇದು. ಈ ಚಿತ್ರಕ್ಕೆ 2007ರ ಅತ್ಯುತ್ತಮ ಏಷ್ಯಾ ಟಿವಿ ಪ್ರಶಸ್ತಿಯೂ ಸಿಕ್ಕಿದೆ.