ಮೀರಾ ಪಿ.ಆರ್
ಕನ್ನಡದಲ್ಲಿ ಕವನ, ಕಥೆ ಬರೆಯುತ್ತ, ಕೆಂಡಸಂಪಿಗೆಗಾಗಿ ಮೊದಲ ಬಾರಿಗೆ ಅಂಕಣ ಬರಹ ಬರೆಯಲು ಪ್ರಾರಂಭಿಸಿರುವ ಮೀರ, ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಶಿಕ್ಷಕಿಯಾಗಿ ಮತ್ತು ಮೈಸೂರು ಆಕಾಶವಾಣಿಯಲ್ಲಿ ಅರೆಕಾಲಿಕ ಉದ್ಘೋಷಕಿಯಾಗಿ ಕೆಲ ವರ್ಷ ಕೆಲಸ. ವೆಬ್ ಡಿಸೈನಿಂಗ್ ನಲ್ಲೂ ತರಬೇತಿ ಪಡೆದಿರುವ ಇವರು `ನಿಶುಮನೆ' ಬ್ಲಾಗಿನ ಒಡತಿ. ಅಮೆರಿಕಾದಲ್ಲಿ ಹಿಂದುಸ್ತಾನಿ ಸಂಗೀತ ಕಲಿಯುತ್ತಾ , ಆಸಕ್ತರಿಗೆ ಕರ್ನಾಟಕ ಸಂಗೀತ ಕಲಿಸುತ್ತಾ ಸಂಗೀತ, ನೃತ್ಯ, ಬರಹಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಮೀರ, ಚಿತ್ರ ಕಲಾವಿದೆ ಕೂಡ.