ಮೇ ೨೦, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸಂಧ್ಯಾ
ವರ‍್ಕಿ೦ಗ್ ವುಮನ್. ಓದಿದ್ದು ಇತಿಹಾಸ ಎ೦ಎ. ಇಷ್ಟಪಟ್ಟು ಓದೋದು ಸಾಹಿತ್ಯ. ಹಳೆ ಹಾಡುಗಳು, ಗಜಲ್ ಗಳು, ಭಾವಗೀತೆಗಳು ಇಷ್ಟ. ವಾಸ ಜಯನಗರ, ಬೆ೦ಗಳೂರು.
 
ಚನ್ನಕೇಶವ

ಚನ್ನಕೇಶವ ಹುಟ್ಟಿದ್ದು ಮಂಡ್ಯದಲ್ಲಿ, ಓದಿದ್ದು ಮಂಡ್ಯ-ಬೆಂಗಳೂರಿನಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಐದು ವರ್ಷಗಳ ಕಾಲ ಚಿತ್ರಕಲೆಯ ತರಬೇತಿ ಮತ್ತು ಪದವಿ. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಥಿಯೇಟರ್ ಡಿಪ್ಲೊಮಾ.ಅಮೆರಿಕೆಯ ವರ್ಮಾಟ್‌ನಲ್ಲಿರುವ ‘ಬ್ರೆಡ್ ಅಂಡ್ ಪಪೆಟ್ ’ ಕಂಪನಿಯಲ್ಲಿ ಎರಡು ತಿಂಗಳ ರಂಗ ತರಬೇತಿ. ಎನ್.ಎಸ್.ಡಿ.ಯ ಎರಡು...

ಚನ್ಬಸವ, ಬೀದರ್
ಯುವ ಪತ್ರಕರ್ತ, ಸಂಶೋಧಕ
 
ಚರಿತಾ
ಚಿತ್ರಕಲೆಯಲ್ಲಿ ಮೈಸೂರಿನ ಕೃಷ್ಣರಾಜೇಂದ್ರ ದೃಶ್ಯಕಲಾ ಅಕಾಡೆಮಿಯಿಂದ ಪದವಿಯನ್ನು, ಶಾಂತಿನಿಕೇತನದ ಕಲಾ ಭವನದಿಂದ ಸ್ನಾತಕೋತ್ತರ ಪದವಿಯನ್ನೂ ಪದೆದಿದ್ದಾರೆ, ಸದ್ಯ ಮೈಸೂರಿನಲ್ಲಿ ಚಿತ್ರಕಲೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಚರಿತಾ. ಎಂ.ಆರ್
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಪ್ರಥಮ ವರ್ಷದ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿನಿ.
 
ಚಿದಾನಂದ ಸಾಲಿ

ರಾಯಚೂರು ಜಿಲ್ಲೆಯ ಸಿರಿವಾರದವರು. ಪತ್ರಿಕೋದ್ಯಮ ಎಂಎ ಒಳಗೊಂಡಂತೆ ಹಲವಾರು ಪದವಿಗಳನ್ನು ಪಡೆದು ಕೆಲಕಾಲ ಪತ್ರಕರ್ತರಾಗಿದ್ದವರು; ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದವರು; ಆಕಾಶವಾಣಿಯಲ್ಲಿ ಅನೌನ್ಸರ್ ಆಗಿದ್ದವರು; ಸದ್ಯ ಪ್ರೌಢಶಾಲೆಯಲ್ಲಿ ಗಣಿತ ಕಲಿಸುವ ಶಿಕ್ಷಕರಾಗಿದ್ದಾರೆ. ಕತೆ, ಕವಿತೆ, ಅನುವಾದ, ವ್ಯಕ್ತಿಚಿತ್ರ, ಅಂಕಣ ಬರೆಹಗಳನ್ನು ಬರೆದಿರುವ ಹೊಸ...

ಚಿದಂಬರ ಬೈಕಂಪಾಡಿ
ಚಿದಂಬರ ಬೈಕಂಪಾಡಿ
 
ಚಿನ್ಮಯ ಭಟ್
ಚಿನ್ಮಯ ಭಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಮುಂಬೈ, ಬೆಂಗಳೂರಿನಲ್ಲಿ ಅನೇಕ ವರ್ಷ ಕಾಲ ಕೆಲಸ ಮಾಡಿದ್ದಾರೆ.  ಕಳೆದ ನಾಲ್ಕು ವರ್ಷಗಳಿಂದ ಬ್ರಿಟನ್ ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಿನ್ಮಯ್. ಎಂ.
ಊರು ಉತ್ತರ ಕನ್ನಡದ ಕುಮಟಾ.ಮೊದಲು ಬರೆಯುವುದು ಕೇವಲ ಹವ್ಯಾಸವಾಗಿತ್ತು. ಆದರೆ ಕ್ರೈಸ್ಟ್ ಕಾಲೇಜಿನವರು ನಡೆಸುವ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಎರಡು ಬಾರಿ ನನ್ನ ಕವನಗಳು ಆಯ್ಕೆಯಾದ ಮೇಲೆ 'ನಾನೂ ಬರೆಯಬಲ್ಲೆ' ಅನ್ನಿಸಿತು. ನನ್ನ ಮೊದಲ ಕವನ ಸಂಕಲನ 'ತೀರದ ರಚನೆಗಳು' ಕಳೆದವರ್ಷವಷ್ಟೇ ಬಿಡುಗಡೆಯಾಗಿದೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್...
 
ಚಂದಮಾಮ್
ಚಂದಮಾಮ್ ಒಂದು ಕಾಲದಲ್ಲಿ ಬರುತ್ತಿದ್ದ ಭಾವನಾ ಮಾಸಿಕದ ಕೊನೆಯ ಪುಟದಲ್ಲಿ ಬರೆಯುತ್ತಿದ್ದವರು. ಉದ್ಯೋಗದ ನಿಮಿತ್ತ ಬಹಳ ವರ್ಷಗಳನ್ನು ದೇಶಾಂತರದಲ್ಲಿ ಕಳೆದ ಇವರು ಈಗ ಗೃಹಸ್ಥರಾಗಿದ್ದಾರೆ. ಆಗಾಗ ಕೆಂಡಸಂಪಿಗೆಯಲ್ಲಿ ಬೆಳದಿಂಗಳಿನಂತೆ ಕಾಣಿಸಿಕೊಳ್ಳಲಿದ್ದಾರೆ.
ಚಂದ್ರಶೇಖರ ಮಂಡೆಕೋಲು
ಸುಳ್ಯ ತಾಲೂಕಿನ ಮಂಡೆಕೋಲು ಊರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಉದಯವಾಣಿಯ ಮಣಿಪಾಲ ಕಚೇರಿಯಲ್ಲಿ ಉದ್ಯೋಗ. ಮನೋವಿಜ್ಞಾನಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ವಿ.ವಿ.ಯಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಎಲ್ಲಿಂದಲೋ ತೇಲಿ ಬಂದ ಕೃಷ್ಣ ತುಳಸಿಯ ಘಮ’ ಕೃತಿ ಪ್ರಕಟಣೆಯ ಹಂತದಲ್ಲಿದೆ.
 
ಚೇತನಾ ತೀರ್ಥಹಳ್ಳಿ
ಓ ನನ್ನ ಚೇತನಾ ಎಂಬ ಬ್ಲಾಗ್ ಒಡತಿ, ಅಂಕಣಕಾರ್ತಿ.
ಚೇತನಾ ಭಟ್
ಹುಟ್ಟಿ ಬೆಳೆದಿದ್ದು ಸಿರಸಿ. ಈಗ ಲಂಡನ್ ನಲ್ಲಿ ವಾಸ. ಓದು, ಬರವಣಿಗೆ, ಸಿನೆಮಾಗಳು ಇಷ್ಟ. ಬದುಕನ್ನು, ಮೂರನೇ ದೃಷ್ಟಿಕೋನದಿಂದ ತೆರೆದಿಡುವಂತಹ ಬರಹಗಳು ಇಷ್ಟ.
 
ಟಿ. ಪದ್ಮ
ಆನೇಕಲ್ ನ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿ. 2002ರಲ್ಲಿ ಕವನ ಸಂಕಲನ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ವಾಸ.
ಟಿ.ಎಸ್. ಗೊರವರ
ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಪುಟ್ಟ ಗ್ರಾಮ ರಾಜೂರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ೨೦೦೭-೦೮ರಲ್ಲಿ ಸ್ನಾತಕೋತ್ತರ ಪದವಿ. ೨೦೦೭ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆ ಅಡಿಯ ಮೂಲಕ ’ಭ್ರಮೆ’ ಕಥಾ ಸಂಕಲನ ಪ್ರಕಟ. ೨೦೦೭ರಲ್ಲಿ ಪ್ರಜಾವಾಣಿ ‘ದೀಪಾವಳಿ ಕಥಾ ಸ್ಪರ್ಧೆ’ಯಲ್ಲಿ...
 
ಟಿ.ಎಂ.ಕೃಷ್ಣ

ಕೋಲಾರ (ಈಗಿನ ಚಿಕ್ಕಬಳ್ಳಾಪುರ) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲದುಮ್ಮನಹಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ಕೃಷಿಯ ಜೊತೆಗೆ ಬರವಣಿಗೆಯನ್ನೂ ರೂಢಿಸಿಕೊಂಡವರು. ಸಾಹಿತ್ಯ, ಸಸ್ಯ ಪೋಷಣೆ, ಕಂಪ್ಯೂಟರ್ ಮತ್ತು ಕಲಿಯುವುದು ಇವರ ಆಸಕ್ತಿಯ ವಿಷಯಗಳು.
   
 

ಟಿ.ತಿಮ್ಮಪ್ಪ

ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಆಯ್ಕೆ ಶ್ರೇಣಿ ಉಪನ್ಯಾಸಕನಾಗಿ ಕೆಲಸ . ಜಂಬೂಕ' ಎಂಬ ಕಾದಂಬರಿ ಪ್ರಕಟಗೊಂಡಿದೆ. ಸಣ್ಣಕತೆಗಳನ್ನೂ ಬರೆಯುತ್ತಾರೆ.

 
ಟಿ.ಪಿ. ವ್ಯಾಸಮುದ್ರಿ
ವಿಜಾಪುರ ಜಿಲ್ಲೆ ಜನ್ಮಭೂಮಿ ಆದರೆ ಧಾರವಾಡ ಕರ್ಮ ಭೂಮಿ. ಆದಾಯ-ತೆರಿಗೆ ಅಧಿಕಾರಿಯಾಗಿ ನಿವೃತ್ತಿ. ನಿವೃತ್ತಿ ನಂತರ ಬೆಂಗಳೂರಿನಲ್ಲಿ ವಾಸ.ಒಬ್ಬ ಮಗ ಅಮೆರಿಕಾದಲ್ಲಿ ಇರುವದರಿಂದ ಆಗಾಗ ಅಮೆರಿಕಾಕ್ಕೂ ಬರ್ತಾ ಇರುತ್ತೇನೆ.
ಟಿ.ಆರ್. ಚಂದ್ರಶೇಖರ್
ಟಿ.ಆರ್. ಚಂದ್ರಶೇಖರ್ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು. ಹೊಸಪೇಟೆಯ ಪದವಿ ಕಾಲೇಜಿನಲ್ಲಿ ಎರಡು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು, ಬಳಿಕ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಹತ್ತಾರು ವಿಷಯಗಳ ಕುರಿತು ಅಧ್ಯಯನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ರ...
 
ಟಿ.ಕೆ. ದಯಾನಂದ
ಹುಟ್ಟಿದ್ದು ತುಮಕೂರಿನ ದೊಡ್ಡಹಟ್ಟಿ ಸ್ಲಂ. ಬಿಎ ವರೆಗೆ ತುಮಕೂರಿನಲ್ಲಿ ವ್ಯಾಸಂಗ. ಬೆಂಗಳೂರಿನಲ್ಲಿ ಸಮೂಹ ಸಂವಹನ ಸ್ನಾತಕೋತ್ತರ ಪದವಿ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ ನಂತರ ನಗರ ಸಂಶೋಧಕನಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ. ಓದುವುದು, ಸಿನೆಮಾ ಸಂಗ್ರಹಣೆ, ಬರವಣಿಗೆ ಮತ್ತು ಕಾಡು ತಿರುಗುವುದು ಹವ್ಯಾಸ.
ಟಿ.ಅವಿನಾಶ್
ಹೊಸ ತಲೆಮಾರಿನ ಲೇಖಕರು
 
ಟೀನಾ
ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಅಧ್ಯಯನ  ಮಾಡಿದ್ದಾರೆ.  ಕವಯತ್ರಿ. ಅಂಕಣ ಬರಹ, ಬ್ಲಾಗ್ ಬರಹಗಳಿಂದ ಪರಿಚಿತರಾಗಿದ್ದಾರೆ.
ಎ ಪಿ ಮಾಲತಿ
ಎ ಪಿ ಮಾಲತಿ
 
ಎ.ಎನ್. ಪ್ರಸನ್ನ
ಹುಟ್ಟಿದ್ದು ೧೯೪೩ರಲ್ಲಿ. ಕೆ.ಪಿ.ಟಿ.ಸಿ.ಎಲ್. ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತ. ಬೆಂಗಳೂರು ವಾಸಿ.

‘ಉಳಿದವರು’, ‘ಆ ಊರಿನಲ್ಲಿ’ , ‘ಪಾರಿವಾಳಗಳು’ , ‘ರಥಸಪ್ತಮಿ’, ‘ಮೂರನೇ ದಡ’ ಇವರ ಕಥಾ ಸಂಕಲನಗಳು. ‘ಉಳಿದವರು’ ಕಥಾ ಸಂಕಲನಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ನೊಬೆಲ್...
ಎ.ಪಿ. ರಾಧಾಕೃಷ್ಣ