Advertisement

Tag: ಕಾಡ ಕಕ್ಕೆ

ಶರ್ಮಾ ಡಾಕ್ಟರ್, ಯೆಝ್ಡಿ ಬೈಕ್ ಮತ್ತು ಕೊಂಬಿನ ರಾಮಣ್ಣ: ಎಸ್. ಗಂಗಾಧರಯ್ಯ ಅನುಭವ ಕಥನ

ಅವರು ತಂದಿದ್ದ ಮೂಟೆಗಳ ಪೈಕಿ ಒಂದರಲ್ಲಿ ತೆಂಗಿನ ಕಾಯಿ ಉಳಿದವುಗಳಲ್ಲಿ ಧವಸ ಧಾನ್ಯಗಳನ್ನು ತುಂಬಿರುವುದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಬಸ್ಸಿನಲ್ಲಿ ಅಷ್ಟು ಜನವಿರದ ಕಾರಣ ಆ ವ್ಯಕ್ತಿ ಅಷ್ಟೂ ಮೂಟೆಗಳನ್ನು ಹತ್ತುವ ಮತ್ತು ಇಳಿಯುವ ಜನರಿಗೆ ತೊಂದರೆಯಾಗದಂತೆ ಅಲ್ಲಲ್ಲೇ ಸೀಟುಗಳ ಅಡಿಗೆ ತುರುಕಿ ನಂತರ ಕೈಯ್ಯಲ್ಲೊಂದು ಬ್ಯಾಗನ್ನು ಹಿಡಿದು ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತರು. ಹಂಗೇ ಆ ಬ್ಯಾಗಿನತ್ತ ಕಣ್ಣು ಹಾಕಿದ ನನಗೆ ಅದರೊಳಗಿಂದ ಮರದ ಹಿಡಿಯಿದ್ದ ಒಂದೆರಡು ಸಣ್ಣ ಕುಡುಗೋಲಿನಂಥವು, ಕಬ್ಬಿಣವನ್ನು ಕತ್ತರಿಸಲು ಉಪಯೋಗಿಸುವ ಒಂದೆರಡು ಬ್ಲೇಡುಗಳು ಕಂಡವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ಮೂರನೆಯ ಕಂತು

Read More

ಕಪ್ಪೆಂಚಿನ ಕಲ್ಡಿ ಮನೆ, ಕೆಂದೆತ್ತು ಮತ್ತು ಲಾಳ ಕಟ್ಟೋ ರೆಹಮಾನ್ ಸಾಬರು: ಎಸ್. ಗಂಗಾಧರಯ್ಯ ಅನುಭವ ಕಥನ

ಕೆಳಕ್ಕೆ ಬೀಳುತ್ತಲೇ ಎತ್ತೂ ತನ್ನ ಪ್ರತಿರೋಧವನ್ನು ಕಡಿಮೆ ಮಾಡಿತು. ಎತ್ತಿನ ಕಾಲುಗಳನ್ನು ಕಟ್ಟುತ್ತಲೇ ನಾನು ಮತ್ತೆ ಅದರ ಕೊಂಬು ಮತ್ತು ಮೂಗುದಾರಗಳ ಸಹಾಯದಿಂದ ಅದರ ಮೂತಿಯನ್ನು ಅಮುಕಿಕೊಂಡೆ. ಸಾಬರು ತಮ್ಮ ಕೆಲಸವನ್ನು ಶುರು ಮಾಡುತ್ತಲೇ ಮತ್ತೆ ಕೊಸರಾಡತೊಡಗಿತು. ನಾನು ಮೂತಿಯನ್ನು ಎಷ್ಟೇ ಅಮುಕಿಕಂಡರೂ ಅದರ ಅಲುಗಾಟವನ್ನು ಪೂರಾ ನಿಲ್ಲಿಸಲಾಗಲಿಲ್ಲ. ನನಗೂ ಕೈಗಳು ಸೋಲ ಹತ್ತಿದ್ದವು. ಕುಕ್ಕುರುಗಾಲಲ್ಲಿ ಕೂತಿದ್ದರಿಂದ ಕಾಲುಗಳೂ ಪದ ಹೇಳತೊಡಗಿದ್ದವು. ಸಾಬರು ನನ್ನನ್ನು ಎತ್ತಿನ ಮೂತಿನ ಮೇಲೆ ಕೂತು ಅಲುಗಾಡದಂತೆ ಹಿಡುಕೊಳ್ಳುವಂತೆ ಹೇಳಿದರು. ನಾನು ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಚಕ್ಕನೆ ಎತ್ತಿನ ಮೂತಿಯ ಮೇಲೆ ಅತ್ಲಾಗೊಂದು ಇತ್ಲಾಗೊಂದು ಕಾಲುಗಳನ್ನು ಹಾಕಿ ಕೂತೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತೆರಡನೆಯ ಕಂತು

Read More

ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ

ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತನೆಯ ಕಂತು

Read More

ಅಜ್ಜನ ಕೆರೆಯ ಹಾಲುವಾಣದ ತೆಪ್ಪ ಮತ್ತು ಮಲ್ಲಾಘಟ್ಟ ಕೆರೆಯ ನಾಡದೋಣಿ: ಎಸ್.ಗಂಗಾಧರಯ್ಯ ಅನುಭವ ಕಥನ

ಅದೇನು ಅನಿಸಿತೋ ಏನೋ ಕೃಷ್ಣಮೂರ್ತಿ ನಮ್ಮ ಕಾಲುಗಳ ನಡುವೆ ಬಿದ್ದಿದ್ದ ಹುಟ್ಟುಗೋಲನ್ನು ಕೈಗೆತ್ತಿಕೊಂಡು ದೋಣಿಯ ಪಕ್ಕದ ನೀರಿನಲ್ಲಿ ಕೊಂಚ ಮುಳುಗಿಸಿ ಅದರಿಂದ ಮೆಲ್ಲಗೆ ನೀರನ್ನು ಹಿಂದೆ ಮುಂದೆ ತಳ್ಳಿದ. ಆಗ ದೋಣಿಯ ಮುಮ್ಮುಖ ಚಲನೆ ನಿಂತು ಅದು ಇದ್ದಲ್ಲಿಯೇ ಮೆಲ್ಲನೆ ಸುತ್ತ ಹತ್ತಿತು. ಇದನ್ನು ಕಂಡು ಜೀವ ಬಂದವನಂತೆ ಅವನು ಆ ಹುಟ್ಟಿನಿಂದ ವಿರುದ್ಧ ದಿಕ್ಕಿನಲ್ಲಿ ನೀರನ್ನು ತಳ್ಳಿದ. ದೋಣಿಯ ಗತಿ ಮತ್ತೆ ಬದಲಾಯ್ತು. ಮತ್ತೇನೋ ಹೊಳೆದವನಂತೆ ಹಂಗೆಯೇ ದೋಣಿಯ ಇಕ್ಕೆಲಗಳಲ್ಲೂ ಹುಟ್ಟು ಹಾಕತೊಡಗಿದ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತೊಂಭತ್ತನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ