Advertisement

Tag: ಮಲೆನಾಡು

“ಅಡಿಕೆ” ಎಂಬ ಮಲೆನಾಡಿನ ಜೀವನಾಡಿ: ಭವ್ಯ ಟಿ.ಎಸ್. ಸರಣಿ

ಸಂಜೆ ಆರಾಗುತ್ತಿದ್ದಂತೆ ಮನೆ ಎದುರಿನ ಅಥವಾ ಹಿಂದಿನ ಅಡಿಕೆ ಚಪ್ಪರದ ಕೆಳಗೆ ಅಡಿಕೆ ಸುಲಿಯುವ ಹೆಂಗಳೆಯರು ಮೇಳೈಸುತ್ತಿದ್ದರು. ಕಿಲಕಿಲ ನಗು, ಮಾತು, ಹರಟೆ, ಹಾಸ್ಯ, ವಿನೋದಗಳ ನಡುವೆ ಮೆಟ್ಟುಗತ್ತಿಯ ಮೇಲೆ ಕುಳಿತು ತಮ್ಮ ಚುರುಕು ಕೈಗಳಿಂದ ಅಡಿಕೆಗಳನ್ನು ಹೆಕ್ಕಿಕೊಂಡು ಕತ್ತಿಯಲ್ಲಿಟ್ಟು ಸಿಪ್ಪೆ ತೆಗೆದು, ಅಡಿಕೆಯನ್ನು ಹೋಳು ಮಾಡಿ ಕತ್ತರಿಸಿ ಬುಟ್ಟಿಗೆ ತುಂಬುತ್ತಾರೆ. ಮಧ್ಯರಾತ್ರಿಯವರೆಗೂ ಈ ಕೆಲಸ ನಡೆಯುವುದರಿಂದ ಊರಿನ ಪ್ರಚಲಿತ ವಿದ್ಯಮಾನಗಳು, ಸದ್ಯದಲ್ಲೇ ನಡೆಯಲಿರುವ ಮದುವೆಗಳು, ನಡೆದ ಜಗಳಗಳು, ಸಾವು-ನೋವು, ಕಷ್ಟಸುಖಗಳು ಅಲ್ಪಸ್ವಲ್ಪ ಬಣ್ಣ ಹಚ್ಚಿಕೊಂಡು, ಅತಿರಂಜಿತವಾಗಿ ಇಲ್ಲಿ ಚರ್ಚಿತವಾಗುತ್ತವೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಸುಂದರ, ಸಮೃದ್ಧ ಕಾಡಿನ ರೋಚಕ ಕಥೆಗಳು: ರೂಪಾ ರವೀಂದ್ರ ಜೋಶಿ ಸರಣಿ

ತುಂಬ ದಟ್ಟವಾದ ಎತ್ತರವಾದ ಮರಗಳಿಂದ ಕಂಗೊಳಿಸುವ ಕಾಡಿನಿಂದ ಆವೃತವಾದ ಆ ಗುಡ್ಡ ನೋಡುವುದೆಂದರೆ ಎಲ್ಲಿಲ್ಲದ ಖುಶಿ ನನಗೆ. ಅದರಲ್ಲಿ ಒಂದು ವಿಚಿತ್ರ ಆಕರ್ಷಣೆ ಇತ್ತು. ಹಗಲು ಅಷ್ಟು ಪ್ರೀತಿಯಿಂದ ನೋಡುವ ಗುಡ್ಡ, ರಾತ್ರಿ ಮಾತ್ರ ಭಯ ಹುಟ್ಟಿಸುತ್ತಿತ್ತು. ರಾತ್ರಿ ಊಟ ಮಾಡಿ ಕೈತೊಳೆಯಲು, ‘ವಂದ’ ಮಾಡಲು ಹೊರಗೆ ಬಂದಾಗಲೆಲ್ಲ ನಾವು ಅತ್ತ ದೃಷ್ಟಿ ಹರಿಸುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಆಕಸ್ಮಿಕವಾಗಿ ಕಣ್ಣು ಅತ್ತ ಹೋದರೆ ಸಾಕು, ಕಾರ್ಗತ್ತಲೆಯಲ್ಲಿ ಮಸಿ ಬಳಿದಷ್ಟು ಕರ್ರಗೆ ಬೃಹದಾಕಾರವಾಗಿ ಕುಳಿತ ಅದು, ಭಯಂಕರವಾದ ಕಲ್ಪನೆ ಮೂಡಿಸಿ, ಎದೆಯ ನಗಾರಿ ಬಡಿತ ಏರುತ್ತಿತ್ತು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಸವಿಯ ಬನ್ನಿ ಮಲೆನಾಡ ಊಟವ…: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮನೆಯ ಬೇಸಿಗೆಯ ಹಿತ್ತಲಲ್ಲಿ ಆಯಿ, ಹೂ ಕೋಸು, ಗಡ್ಡೆ ಕೋಸು ಮೂಲಂಗಿ, ಬೀಟ್ರೂಟ್‌ಗಳನ್ನು ಕೂಡಾ ಸಮೃದ್ಧವಾಗಿ ಬೆಳೆಸುತ್ತಿದ್ದಳು. ಮುಂದಿನ ಮೂರು ತಿಂಗಳು ನಾವೆಲ್ಲ ಯಥೇಚ್ಛವಾಗಿ ತರಕಾರಿಯನ್ನು ಉಪಯೋಗಿಸಬಹುದಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಮೊಗೇ ಕಾಯಿ ಬೆಳೆಸುವುದು ಬೇಸಿಗೆಯ ಹಿತ್ತಲಿನ ವಿಶೇಷ. ಈ ಮೊಗೆ ಕಾಯಿ (ಬಣ್ಣದ ಸೌತೆ ಕಾಯಿ) ಯೆಂಬುದು ಮಲೆನಾಡಿಗರ ಆಪದ್ಬಾಂಧವನಿದ್ದಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಒಂಭತ್ತನೆಯ ಕಂತು

Read More

ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ