ಕೊರೋನಾ ಕೊರೋನಾ: ರಂಜಾನ್ ದರ್ಗಾ ಸರಣಿ
ರಾತ್ರಿ ಮಾತ್ರ ಮಲಗುವುದು ಸಮಸ್ಯೆಯಾಗುತ್ತಿತ್ತು. ವೈದ್ಯಕೀಯ ಯಂತ್ರಗಳು ಹಗಲು ಹೊತ್ತು ಕೊಂಯ ಕೊಂಯ ಮಾಡುವುದನ್ನು ಸಹಿಸಿದರೂ ರಾತ್ರಿಯ ನೀರವ ವಾತಾವರಣದಲ್ಲಿ ಕಿರಿಕಿರಿ ಎನಿಸುತ್ತಿತ್ತು. ಅಂಥ ಪ್ರಸಂಗಗಳಲ್ಲಿ ರೋಗಿಗಳು ಅಸಹಾಯಕರಾಗಿ ಸಹನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಆಗ ನಾನೊಂದು ಉಪಾಯ ಹುಡುಕಿದೆ. ಫ್ಯಾನಿನ ತಂಗಾಳಿಯ ಕಡೆಗೆ ಮಾತ್ರ ಲಕ್ಷ್ಯಕೊಟ್ಟು ಬೇರೆ ಏನನ್ನೂ ಯೋಚಿಸದೆ ಅದನ್ನೇ ಆನಂದಿಸುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 99ನೇ ಕಂತು ನಿಮ್ಮ ಓದಿಗೆ
