Advertisement

Tag: Ramjan Darga

ಪತ್ರಿಕಾ ರಂಗದ ನಾಡೋಜ ಪಾಟೀಲ ಪುಟ್ಟಪ್ಪ: ರಂಜಾನ್‌ ದರ್ಗಾ ಸರಣಿ

ಬಡವರ ಬಗ್ಗೆ, ಹದಗೆಟ್ಟ ರಾಜಕೀಯ ಸ್ಥಿತಿಯ ಬಗ್ಗೆ ಮತ್ತು ಸಾಮಾಜಿಕ ನಿಷ್ಕ್ರಿಯತೆಯ ಬಗ್ಗೆ ಪಾಪು ಮರಗುತ್ತಿದ್ದರು. ಸಾಹಿತ್ಯ, ರಾಜಕಾರಣ, ಸಿನಿಮಾರಂಗ ಮುಂತಾದ ಕ್ಷೇತ್ರಗಳಲ್ಲಿನ ದೊಡ್ಡವರ ಸಣ್ಣತನದ ಬಗ್ಗೆ ಮತ್ತು ಸಣ್ಣವರ ದೊಡ್ಡತನದ ಬಗ್ಗೆ ವಿವರಿಸುತ್ತಿದ್ದರು. ಅವರ ಮಾತುಗಳು ರಂಜಕತೆಯಿಂದ ಮತ್ತು ಕೆಲವು ಸಲ ವಿಷಾದದಿಂದ ಕೂಡಿರುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 83ನೇ ಕಂತು ನಿಮ್ಮ ಓದಿಗೆ

Read More

ಮರೆಯಲಾಗದ ಮಾತೆ: ರಂಜಾನ್‌ ದರ್ಗಾ ಸರಣಿ

ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ?
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 82ನೇ ಕಂತು ನಿಮ್ಮ ಓದಿಗೆ

Read More

ಬದುಕಲು ಕಲಿತೆವು: ರಂಜಾನ್‌ ದರ್ಗಾ ಸರಣಿ

ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಅವರು ನನ್ನ ಕಣ್ಣಲ್ಲಿ ಹನಿಯಾದರು: ರಂಜಾನ್ ದರ್ಗಾ ಸರಣಿ

ಒಂದು ಸಲ ಒಬ್ಬ ಗಿರಾಕಿ ಬಂದ. ಆಗ ನಾವು ಬಾಗಿಲ ಬಳಿ ನಿಂತಿದ್ದೆವು. ಅವನು ಏನೋ ಮಾತನಾಡುತ್ತ ‘ನಿಮ್ಮ ಚಪ್ಪಲಿ ಚೆಂದ ಅದಾವು’ ಎಂದು ಹೇಳಿದ. ಆಗ ಅವರು ‘ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ವಿಚಿತ್ರ ಎನಿಸಿತು. ಅವನಿಗೆ ಇನ್ನೂ ವಿಚಿತ್ರ ಎನಿಸಿ ಗಾಬರಿಯಾದ. ‘ನಿಮಂಥ ಗಿರಾಕಿಗಳು ನಮ್ಮ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಿದಾಗ. ಇದೆಲ್ಲ ದಕ್ಕಿದ್ದು’ ಎಂದು ಮಾಮಾ ಹೇಳಿದಾಗ ಅವನಲ್ಲಿ ಹೆಮ್ಮೆ ಮೂಡುವ ಬದಲು ಕೃತಜ್ಞತಾ ಭಾವ ಮೂಡಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ