ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ
ಆವಾಗಾವಾಗ ರಾತ್ರಿಗಳಲ್ಲಿ ತಾವಿಬ್ಬರೂ ಮೈಗೆ ಮೈ ಬೆಸೆದುಕೊಂಡು ತಾನು ಎಡದಿಂದ ಅವಳು ಬಲದಿಂದ ಎಷ್ಟೊತ್ತಿನವರೆಗೆ ಚುಕ್ಕೆಗಳೆಣಿಸಿದರೂ ಇಬ್ಬರೂ ಬಂದು ಒಂದುಕಡೆ ಸೇರದ ಆಟಕ್ಕೆ ಈಗ ಬೇರೆಯದೇ ಅರ್ಥ ಕಾಣಿಸಿ ಇದೆಲ್ಲ ಎಲ್ಲಿಹೋಗಿ ಮುಟ್ಟುವುದೋ ಎಂದು ಅಯೋಮಯಗೊಳ್ಳುವನು. ಹೀಗೆ ಇಲ್ಲಸಲ್ಲದ ಯೋಚನೆಗೀಡಾದವನು ದಾರಿತಪ್ಪಿದವನಂತೆ ಎಡವುತ್ತ ಮತ್ತೊಂದು ರಾತ್ರಿಯನ್ನು ತುಳಿಯುತ್ತ ತಳ್ಳುವನು. ಬಗ್ಗಡದ ಬದುಕು ಟಿಸಿಲೊಡೆವ ಸೂಚನೆ ಕಂಡು ಮಲಗಿದಲ್ಲೇ ಬಿರುಕು ಬಿಡುವನು.
ಲಕ್ಷ್ಮಣ ಶರೆಗಾರ ಕಥಾ ಸಂಕಲನ “ತಿದಿಯ ತುದಿಗೆ ಬೆಂಕಿಯ ಉಗುಳು” ಕೃತಿಯ “ಉಧೋ ಉಧೋ” ಕತೆ
