ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ
ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
