Advertisement

Tag: ಕಾಫಿ

ಭಾರತಕ್ಕೆ ಬಂದ ಕಾಫಿ: ದರ್ಶನ್‌ ಜಯಣ್ಣ ಸರಣಿ

ಮೊದಮೊದಲು ಇದನ್ನು ಶೈತಾನನ ಪೇಯವೆಂದು ನಿರ್ಬಂಧಿಸಿದ್ದ ಒಟ್ಟೋಮನ್ ಸುಲ್ತಾನ ನಂತರದ ದಿನಗಳಲ್ಲಿ ಇದು ಮದ್ಯ ಅಥವಾ ಮದಿರೆಯಂತಲ್ಲ ಎಂದು ಮನಗಂಡು ಸ್ವತಃ ತಾನೇ ಅದನ್ನು ಕುಡಿದು ಪರೀಕ್ಷಿಸಿ ಆ ನಿರ್ಬಂಧವನ್ನು ಸಡಿಲಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲಕಾಲಕ್ಕೂ ಇದು ಸಿಗುವಂತಿರಲಿಲ್ಲ. ಸೂಫಿಗಳು, ಸೈನಿಕರು, ಸಮಾಜದ ಗಣ್ಯರು, ಆಸ್ಥಾನ ವಿದ್ವಾಂಸರು, ಅಧಿಕಾರಿಗಳಿಗೆ ಮತ್ತು ಸಮರಕ್ಕೆ ಹೊರಟವರಿಗೆ ಮಾತ್ರ ಇದು ಸೀಮಿತವಾಗಿತ್ತು ಎಂದರೆ ಇವತ್ತಿಗೆ ನಂಬಲು ಕಷ್ಟವಾಗಬಹುದೇನೋ! ಇದರ ಕಾರಣವೇ ಇಂದು ನಾವು “ಟರ್ಕಿಶ್ ಕಾಫಿಯ” ಬಗ್ಗೆ ಆಗಾಗ ಕೇಳುತ್ತಿರುತ್ತೇವೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹದಿಮೂರನೆಯ ಕಂತು

Read More

ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್‌ ಜಯಣ್ಣ ಸರಣಿ

ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹನ್ನೆರಡನೆಯ ಕಂತು

Read More

ಮಳೆಯಲಿ…ಚಳಿಯಲಿ…ಕಾಫಿ ಜೊತೆಯಲಿ: ಸುಮಾವೀಣಾ ಸರಣಿ

ಮಲೆನಾಡಲ್ಲಿ ಇರುವವರೆಗೂ ನಮಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ. ಮಗ್‌ಗಳಲ್ಲಿ ಕುಡಿದು ಅಭ್ಯಾಸ. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈ ತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಮನುಷ್ಯನ ಆಲೋಚನಾ ರೀತಿಯನ್ನು, ಅನುಭವಿಸುವ ತಳಮಳವನ್ನು, ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ