ಭಾರತೀಯ ದರ್ಶನ ಮತ್ತು ಜಗತ್ತಿನ ಅನೇಕ ಸಂಸ್ಕೃತಿ, ಸಮಾಜದಲ್ಲಿ ಬಾಳನ್ನು ನೋಡಿ ಅರ್ಥೈಸಿಕೊಳ್ಳುವ ಕ್ರಮದಲ್ಲಿನ ‘ಪೂರ್ಣ ಬದುಕು’ ಎನ್ನುವ ದೃಷ್ಟಿಯೂ ಕೂಡಾ ಇಲ್ಲಿ ಕುರೋಸವಾ ಕ್ರಮದ ಮೂಲಕ ಅಭಿವ್ಯಕ್ತವಾಗಿದೆಯೇನೋ ಅನ್ನಿಸುತ್ತೆ. ಈ ಪೂರ್ಣತೆ ಬರುವುದು ನೂರಾರು ವರ್ಷ ಬದುಕುವುದರಿಂದಲ್ಲ, ಬದಲಿಗೆ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದು.ಪರಿಪೂರ್ಣತೆ, ಅರ್ಥಪೂರ್ಣತೆ ಕೈಗೂಡುವುದು ಮನುಷ್ಯ ತನ್ನನ್ನು ತಾನು ವಿಮರ್ಶಿಸಿ, ಪ್ರಶ್ನಿಸಿ, ತನ್ನ ಬದುಕನ್ನು ಪುನರಾವಲೋಕನ ಮಾಡುವುದರ ಮೂಲಕ ಸಾಧ್ಯವಾಗುತ್ತದೆ ಎನ್ನುವುದೂ ಕೂಡಾ ಮುಖ್ಯ. ಕುರಸೋವಾನ ಸಿನಿಮಾಗಳಲ್ಲೇ ಇಕಿರು ಈ ರೀತಿಯಲ್ಲಿ ಅಪೂರ್ವವಾದ ಚಿತ್ರ.
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಸಿನೆಮಾ ಪುಟ.
“We Human’ are so careless, We only realize how beautiful life when we chance upon death” – Akira Kurosawa
ಕುರಸೋವಾನ ಸಿನಿಮಾಗಳನ್ನು ಕಥಾವಸ್ತು ಮತ್ತು ತಾತ್ವಿಕತೆಗಳ ಮೇಲೆ ಹಲವು ಗುಂಪುಗಳಾಗಿ ಸಾಪೇಕ್ಷ ನೆಲೆಯಿಂದ ವಿಂಗಡಿಸಬಹುದು. ಒಂದು: ಸಮುರಾಯ್ ಸಿನಿಮಾಗಳು, ಎರಡು: ವಿಶ್ವಯುದ್ಧ, ಅದರ ರಾಜಕಾರಣ, ಅಣುಬಾಂಬ್, ನರಮೇಧಗಳ ಕಲ್ಪನೆಗಳನ್ನು ಆಧರಿಸಿದ ಸಿನಿಮಾಗಳು, ಮೂರು: ವಿಶ್ವಯುದ್ಧದ ನಂತರ ತಥಾಕಥಿತ ಆಧುನಿಕತೆಯ ನಂತರದ ಕಾಲಘಟ್ಟ ಎನ್ನಬಹುದಾದ Post-Modernistic Society ಮತ್ತು Post-Colonial ಎನ್ನಬಹುದಾದ ಅವಧಿಯ ಸಮಕಾಲೀನ ಜಪಾನಿನ ಸಮಾಜೋ-ರಾಜಿಕ-ಆರ್ಥಿಕ ಸಂಕೀರ್ಣತೆ, ಸಮಸ್ಯೆ, ವಿಪ್ಲವಗಳನ್ನು ಆಧರಿಸಿದ ಸಿನಿಮಾಗಳು ಮತ್ತು ಕೊನೆಯದ್ದಾಗಿ ನಾಲ್ಕು: ಅತಿಯಾದ ಆಧುನಿಕತೆ, ಯಂತ್ರ ಜಗತ್ತು, ಏಕತಾನತೆ, ಕ್ಷೀಣವಾಗುತ್ತಿರುವ ಮಾನವ ಸಂಬಂಧಗಳು, ಜಾಗತೀಕರಣ, ಕೊಳ್ಳುಬಾಕತನದ ಸಂದರ್ಭದಲ್ಲಿ ಕಲಾಕಾರ ಮತ್ತು ಪ್ರವಾದಿತ್ವವೆರಡನ್ನೂ ಸಮಪ್ರಮಾಣದಲ್ಲಿ ಮಿಶ್ರಿಸಿಕೊಂಡು ಕಾಣುವ ಕೆಲವು ಸಿನಿಮಾಗಳು. ಈ ನಾಲ್ಕು ಮಾದರಿಗಳೂ ಕೂಡಾ ಅದ್ಭುತವೇ.
ಕೆಲವು ಅನನ್ಯ, ಕೆಲವು ಸರಾಸರಿ ಮತ್ತು ಒಂದು, ಎರಡು ಸಿನಿಮಾಗಳು ಆಗಬಹುದು ಎನ್ನುವ ನೆಲೆಯಲ್ಲಿಯೂ ಕೂಡಾ ಇದ್ದಿರಬಹುದು. ಇಂತಹ ಒಂದು ಗುಂಪಾದ ವಸಾಹತ್ತೊತ್ತರ ಜಪಾನ್ ಸಮಾಜ-ಸಂಸ್ಕೃತಿ ಪ್ರತಿನಿಧಿತ್ವದ ಒಂದು ಮಹತ್ವದ ಸಿನಿಮಾವೇ ಇಕಿರು(Ikiru). ಇಂತಹ ಗುಂಪಿನ ಸಿನಿಮಾವಾದ ಇದು ಮುಖ್ಯವಾಗಿ ಜಪಾನೀ ಗುರುತನ್ನು ಮತ್ತು ಆ ಗುರುತಿನಲ್ಲಿರುವಂತಹ ಸಮಸ್ಯೆ-ಸಂಕೀರ್ಣತೆಯನ್ನು ನಮ್ಮ ಮುಂದಿಡುತ್ತದೆ.
ಇಕಿರು ಕಥೆ ಅತ್ಯಂತ ಸರಳ. ತನ್ನ ಮೂವತ್ತು ವರ್ಷಗಳ ಅವಧಿಯಲ್ಲಿ ಒಮ್ಮೆ ಕೂಡಾ ಕೆಲಸಕ್ಕೆ ಗೈರುಹಾಜರಾಗದ ಮಧ್ಯ ಪ್ರಾಯದ ಸರಕಾರಿ ನೌಕರ ಕಂಜಿ ವತನಬೆ ಮಗ ಮತ್ತು ಸೊಸೆಯೊಂದಿಗೆ ಜೀವಿಸುತ್ತಾ ಇರುತ್ತಾನೆ. ಒಮ್ಮೆ ಆತನನ್ನು ತಪಾಸಣೆ ಮಾಡಿದ ವೈದ್ಯ ಆತನಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂತಲೂ, ಆತನ ಜೀವನ ಅವಧಿ ಬರೀ 6 ತಿಂಗಳೆಂತಲೂ ಹೇಳಿದಾಗ ಜಗತ್ತೇ ತಲೆಕೆಳಗಾಗಿ ಬಿಡುವ ಅನುಭವವಾದರೂ ಕೂಡಾ ಮುಂದಿನ 6 ತಿಂಗಳನ್ನು ಚೆನ್ನಾಗಿ ಕಳೆಯುವ ಸಲುವಾಗಿ, ಚಿಂತೆ ಮರೆಸುವ ಸಲುವಾಗಿ ಕುಡೀತಾನೆ. ನಂತರ ಒಬ್ಬ ಲೇಖಕನ ಸಹವಾಸದಿಂದ ಪಾರ್ಲರ್, ನೈಟ್ಕ್ಲಬ್, ಡ್ಯಾನ್ಸ್ ಹಾಲ್, Strip ಜೈಂಟ್ಗಳಲ್ಲಿ ಕಾಲ ಕಳೆಯುತ್ತಾನೆ. ನಂತರ ತನ್ನದೇ ಸಹೋದ್ಯೋಗಿಯಾಗಿದ್ದ ಖಿoಥಿo ಜತೆಯಲ್ಲಿ ಕಾಲ ಕಳೆಯುತ್ತಾ ಅವಳ ಸಾಂಗತ್ಯವನ್ನು ರೆಸ್ಟೋರೆಂಟ್ ಮತ್ತು ಸೋಡಾ ಶಾಪ್ಗಳಲ್ಲಿ ಪಡೆಯುತ್ತಾ ಅವಳ ಆತ್ಮೀಯತೆ ಗಳಿಸುವ ಹೊತ್ತಿಗೆ ವತನಬೆಗೆ cancer ಇದೆ ಎಂಬ ವಿಷಯ ತಿಳಿದು ಅವನಿಂದ ದೂರವಾಗ್ತಾಳೆ. ಈಗ ವತನಬೆಗೆ ಜೀವನ, ಜೀವನದಥರ, ಯಾಕೆ ಬದುಕಬೇಕು? ಎನ್ನುವ ಜಿಜ್ಞಾಸೆ ಆತನನ್ನು ಕಾಡುತ್ತದೆ. ಆತ ಪುನ: ಆಫೀಸ್ ಗೆ ಬಂದು ಆತನ ವ್ಯಾಪ್ತಿಯಲ್ಲಿ ಬರುವ, ಸೊಳ್ಳೆ-ಕೊಳೆ ಭರಿತ ಕೊಳ ಸಹಿತವಿರುವ ಉದ್ಯಾನ ಸೃಷ್ಠಿಸಿದ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುವ ಮತ್ತು ಅಂತಹ ಪಾರ್ಕ್ ಅನ್ನು ಪುನರ್ ನಿರ್ಮಿಸಿ, ಅಲ್ಲಿ ಪುನ: ಮಕ್ಕಳು ಆಟವಾಡುತ್ತಾ, ಮಂಜು ಬಿದ್ದರೆ, ಪುನ: ಮೈಕೊಡವಿಕೊಂಡರೆ ನಾನು ಬದುಕಿದಂತೆ ಎಂದು ತಿಳಿದು ಸಾಯುವ ಮುಂಚೆ ತಾನು ನಿಶ್ಚಯಿಸಿದ ಕೆಲಸವನ್ನು ಮಾಡಿ ಮುಗಿಸುತ್ತಾನೆ. ಅಲ್ಲಿವರೆಗೂ ಸತ್ತಂತಿದ್ದ ವತನಬೆ ಸಾವಿನೊಂದಿಗೆ ಬದುಕಿದನುಭವವನ್ನು ಪಡೆಯುತ್ತಾನೆ.
ಇಕಿರು ನಿರ್ಮಾಣ, ಅದರ ಯೋಚನೆ ಅತ್ಯಂತ ಸ್ವಾರಸ್ಯಕರವಾದುದು. ಒಂದು ದಿನ ಕುರೋಸವಾ ಇದ್ದಕ್ಕಿದ್ದ ಹಾಗೆ ಅವನ ಸಾವಿನ ಬಗ್ಗೆ ಯೋಚಿಸುತ್ತಾ, ಇದ್ದ “I think of ceasing to be and it is from these thoughts that Ikiru came”.. ಅಂತಹ ಸಂದರ್ಭದಲ್ಲಿ, Ikiru, ಬರೀ ಬದುಕು ಆಗಿರದೆ ವತನಬೆಯ ಪಾತ್ರದ ಮೂಲಕ ಪೂರ್ಣತೆಯ ಬದುಕನ್ನು ಕಾಣುವ ಸಲುವಾಗಿ ಹುಟ್ಟಿತು. ಇದಲ್ಲದೆ 1950ರ ದಶಕದಲ್ಲಿ ರಶೋಮನ್ ಸಿನಿಮಾಕ್ಕೆ Venice filmfest ನಲ್ಲಿ Award ಬಂದಾಗ ಮಾಡಿದ ಭಾಷಣ, “Everyone likes to recieve the prizes, but I’d be even happier if I were getting it for having shown something of contemporary Japan” ಎನ್ನುವ Problem of Identity problem of Living problem of Living ನ ಪ್ರಶ್ನೆಗಳೇ ಹೆಚ್ಚು ಕಾರಣವಾಯ್ತು.
ವತನಬೆ ಸಾವಿಗಿಂತ ಮುಂಚೇನೆ Ikiru ವಿನಲ್ಲಿ ಹೊಟ್ಟೆ ಕ್ಯಾನ್ಸರ್ ಎಂಬ ವಿಷಯ ತಿಳಿದು ಇಲ್ಲಿವರೆಗಿನ ಬದುಕು ಮತ್ತು ಅದರ ಮತ್ರ್ಯತೆ ಮತ್ತು ಖಾಲೀತನದ ಅರಿವಾಗುತ್ತದೆ. ಅಂದಿನಿಂದ ಆತ ಬದುಕಿನಲ್ಲಿ ನಿರ್ಧಾರ ಮಾಡುವ ಜೀವನದ ಅಗತ್ಯವನ್ನು ಮನಗಾಣುತ್ತಾನೆ ಮತ್ತು ತಕ್ಷಣವೇ ಉದ್ಯಾನದ ಕೊಳಕು ತುಂಬಿದ, ಸೊಳ್ಳೆಭರಿತ ಕೊಳವನ್ನು ಸ್ವಚ್ಛಗೊಳಿಸಿ ಬದುಕಿಗೆ ಅರ್ಥ ಕೊಡುವ ಮತ್ತು ಬದುಕುವುದೆಂದರೇನು? ಎನ್ನುವುದನ್ನು ವ್ಯಾಖ್ಯಾನಿಸುತ್ತಾ ಹೋಗುತ್ತಾನೆ. 1952ರಲ್ಲಿ ರೀಲೀಸ್ ಆದ ಸಿನಿಮಾವಿದು ಮುಖ್ಯವಾಗಿ ರಶೋಮನ್ ಮತ್ತು ಸೆವೆನ್ ಸಮುರಾಯ್ ನಂತರದ್ದು. ಇಕಿರು ಅಮೆರಿಕಾ ಮತ್ತು ಯುರೋಪ್ ಜಗತ್ತಿಗೆ ಶುದ್ಧ ಜಪಾನೀ ತನದ ಸಿನಿಮಾವೆಂಬ ಕಾರಣದಿಂದ ಮತ್ತು ಜಪಾನ್ ನ ಸಮುರಾಯ್ ಊಳಿಗಮಾನ್ಯ ನೆಲೆಯಲ್ಲಿ ಹುಟ್ಟಿದ್ದು ಎನ್ನೋ ನಂಬಿಕೆಯಿಂದ ಹೆನ್ರಿ ಫೋರ್ಡ್ ವರೆಗೂ ಕೂಡಾ ಆಕರ್ಷಿತವಾಗಿತ್ತು. ಆದರೆ ಇಕಿರು ಸಿನಿಮಾಕ್ಕೆ ಅಂತಹ ಅಪೀಲ್ ಇರಲಿಲ್ಲ. ಆದರೆ ಇಕಿರು ಬಿಡುಗಡೆಯಾಗುತ್ತಿದ್ದ ಹಾಗೆ ಜಪಾನಿನ ಸಿನಿಮಾ ಪತ್ರಿಕೆ ಕಿನಿಮಾ ಜಂಪೋ ವರ್ಷದ ಶ್ರೇಷ್ಠ ಚಿತ್ರವೆಂದೂ ಮತ್ತು ಇದು ಜಪಾನೀ ಜನಾಂಗದ ಪ್ರತಿನಿಧಿತ್ವಕ್ಕಿಂತ ಮನುಕುಲ ಅಥವಾ ಮಾನವ ಜನಾಂಗದ ಪ್ರತಿನಿಧಿ ಎಂದು ಹೊಗಳಿಸಿಕೊಂಡಿತು.
ಈಗ ವತನಬೆಗೆ ಜೀವನ, ಜೀವನದಥರ, ಯಾಕೆ ಬದುಕಬೇಕು? ಎನ್ನುವ ಜಿಜ್ಞಾಸೆ ಆತನನ್ನು ಕಾಡುತ್ತದೆ. ಆತ ಪುನ: ಆಫೀಸ್ ಗೆ ಬಂದು ಆತನ ವ್ಯಾಪ್ತಿಯಲ್ಲಿ ಬರುವ, ಸೊಳ್ಳೆ-ಕೊಳೆ ಭರಿತ ಕೊಳ ಸಹಿತವಿರುವ ಉದ್ಯಾನ ಸೃಷ್ಠಿಸಿದ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುವ ಮತ್ತು ಅಂತಹ ಪಾರ್ಕ್ ಅನ್ನು ಪುನರ್ ನಿರ್ಮಿಸಿ, ಅಲ್ಲಿ ಪುನ: ಮಕ್ಕಳು ಆಟವಾಡುತ್ತಾ, ಮಂಜು ಬಿದ್ದರೆ, ಪುನ: ಮೈಕೊಡವಿಕೊಂಡರೆ ನಾನು ಬದುಕಿದಂತೆ ಎಂದು ತಿಳಿದು ಸಾಯುವ ಮುಂಚೆ ತಾನು ನಿಶ್ಚಯಿಸಿದ ಕೆಲಸವನ್ನು ಮಾಡಿ ಮುಗಿಸುತ್ತಾನೆ.
1950ರ ನಂತರದ ಜಪಾನಿನ ಕಾರ್ಪೋರೇಟ್ ಜಗತ್ತು ಕುರಸೋವಾನನ್ನು ಅತ್ಯಂತ ಕಾಡಿತ್ತು. ಅದು ಸೃಷ್ಟಿಸಿದ ಸಮಸ್ಯೆ, ಸಂಕೀರ್ಣತೆಗಳು, ಭೃಷ್ಟಾಚಾರ, ರೆಡ್ ಟೇಪಿಸಂ, ಸ್ವಜನ ಪಕ್ಷಪಾತ, ಸಾರ್ವಜನಿಕ ಎನ್ನುವ ಅಂಶಗಳ ತಾತ್ಸಾರ ಮುಂತಾದವುಗಳು ಸಾಮಾಜಿಕ ಸಮಸ್ಯೆಯ ರೂಪವನ್ನು ಪಡೆದಂತಹ ಸಂಗತಿಗಳು ಕುರಸೋವಾನನ್ನು ದಿಗಿಲುಗೊಳಿಸುತ್ತಾ ಕಾಡಿದುವು. ದ್ವಿತೀಯ ವಿಶ್ವಯುದ್ಧದ ನಂತರದ ಅಥವಾ ಪೋಸ್ಟ್ ಕಲೋನಿಯಲ್ ಅವಧಿಯ ನಂತರ ಜಪಾನನ್ನು ದೊಡ್ಡ ಉದ್ಯಮಗಳು, ಕಾರ್ಪೋರೇಟ್ ಜಗತ್ತು, ವಿಶೇಷವಾಗಿ ಜೈಬಿತ್ಸು, ಇಡೀ ಸರ್ಕಾರ ಮತ್ತದರ ನೀಡಿ ನಿರೂಪಣೆಯನ್ನು ಪ್ರಭಾವಿಸಿ, ವಸ್ತುಶ: ತನ್ನ ಯಾಜಮಾನ್ಯವನ್ನು ಹೇರುತ್ತಾ ಅತ್ಯಂತ ವಿಚಿತ್ರವಾದ ವರ್ಗ ತಾರತಮ್ಯ, ಪ್ರತ್ಯೇಕತೆಗಳನ್ನೂ ಸೃಷ್ಟಿಸಿತು. ಇಂತಹ ಒಂದು ಸಮಕಾಲೀನ ಸಮಾಜೋ-ರಾಜಕೀಯ ವಾಸ್ತವವನ್ನು ಆತನ ಉಳಿದ ಸಿನಿಮಾಗಳಾದ The Bad Sleep well, High and Low ಗಳಲ್ಲಿ ವಿವಿಧ ಆಯಾಮಗಳನ್ನು ಚರ್ಚಿಸುತ್ತಾ ಕುರಸೋವಾ ಪ್ರಕಟಪಡಿಸಿದರೆ, ಇಕಿರುವನ್ನು ಇಡೀ ವ್ಯವಸ್ಥೆ ಅಥವಾ ವ್ಯವಸ್ಥೆಯ ಸಾರ್ವಜನಿಕ ರೋಗವನ್ನು ವ್ಯಕ್ತಪಡಿಸಲು ಬಳಸಿದ. ಆ ಕಾಲದ ಸಮಾಜದ ಕೆಟ್ಟ ಆಡಳಿತಶಾಹೀಯನ್ನು, ಅದರ ರೋಗ-ದೋಷವನ್ನು ವಿವರಿಸುತ್ತಾ ಅಂತಿಮವಾಗಿ ಈ ವ್ಯವಸ್ಥೆಯ ಪರ್ಯಾಯವನ್ನು ಕೂಡಾ ಕಂಜಿ ವತನಬೆಯ ಮೂಲಕ ವ್ಯವಸಾಯಿಸುವ ಕಾರ್ಯಕ್ಕೆ ಇಳಿಯುತ್ತಾನೆ. ಇಡೀ ನೌಕರಶಾಹೀಯ-ನೌಕರಶಾಹಿತ್ವದ ಮುಖವಾಡವನ್ನು ತೆಗೆಸಿ, ಅದರ ಹಿಂದಿನ ಮಾನವನನ್ನೂ, ಮಾನವತನವನ್ನು ಗುರುತಿಸುವ ನೆಲೆಯ ಕಾರ್ಯವನ್ನು ಆತ ಮಾಡುತ್ತಾನೆ. ಕಂಜಿ ವತನಬೆ ನೌಕರ ಶಾಹಿಯಾಗಿಯೂ ಕೂಡಾ ಮಮ್ಮಿ ಅಥವಾ ಹೆಣದ ಹಾಗಿದ್ದನೇ ಹೊರತು ಮಾನವ ಸಂವೇದನೆಯ ನೆಲೆಯಲ್ಲಿ ಕಾರ್ಯ ಮಾಡಿಲ್ಲವೆಂದು ತೋರಿಸುತ್ತಾನೆ. ಒಟ್ಟಾರೆ ಇಕಿರು ಮೂಲಕ ಮಾನವ ಜೀವನದ ವಿಶ್ಲೇಷಣೆಯ ಮತ್ತು ನೈತಿಕ ವಿಮರ್ಶಾತ್ಮಕ ನೆಲೆಯ ಶೋಧವನ್ನು ನಡೆಸುತ್ತಾನೆ.
ಸಿನಿಮಾದ ಮೊದಲ ದೃಶ್ಯದಲ್ಲಿಯೇ ವತನಬೆಗೆ ಹೊಟ್ಟೆ ಅಲ್ಸರ್ ಎನ್ನುವ ಸುಳ್ಳು ಹೇಳಿದರೂ ಕೂಡಾ ಆತನಿಗೆ ತನಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರ ತಿಳಿದು ತಾನಿನ್ನು ಬದುಕುವುದು 6 ತಿಂಗಳು ಮಾತ್ರವೆನ್ನುವ ವಿಚಾರ ತಿಳಿದು ಮನೆಗೆ ಬಂದು ತನ್ನ ವೈಯಕ್ತಿಕ ಸಂಬಂಧಗಳು, ವಿಶೇಷವಾಗಿ ಮಗ ಮತ್ತು ಆತನ ಹೆಂಡತಿಯ ಜತೆಗಿನ ಸಂಬಂಧಗಳು ಹಾಗೂ ಸಾಮಾಜಿಕ ಸಂಬಂಧಗಳ ಕುರಿತು ಮನೆಗೆ ಬಂದು ಬೆಡ್ ಮೇಲೆ ಒರಗಿ ಪುನರಾವಲೋಕನವನ್ನು ಮಾಡುತ್ತಾನೆ, ಅಳುತ್ತಾನೆ. ಕ್ಯಾಮೆರಾ ಕೂಡಾ City Hall ಆಫೀಸ್ನಿಂದ ಮನೆಗೆ ನಂತರದ Shoಣನಲ್ಲಿ ಹೊರಳುತ್ತಾ ಆತನ 25 ವರ್ಷ ಬದುಕಿನ ಇತಿಹಾಸವನ್ನು ಚಲಚಿತ್ರಿಸುತ್ತದೆ. ಕ್ರಮೇಣ ವತನಬೆ ತನ್ನ ಮಗ ಮತ್ತು ಸೊಸೆಯನ್ನು ಲೆಕ್ಕಿಸದೇ ಕೂಡಾ ತನ್ನ ಬದುಕು ಪುನ: ವ್ಯಕ್ತಿಗತ, ಸ್ವಾರ್ಥದ ಕಳೆಯುವಿಕೆಯ ಮೂಲಕ ಸಾಗುವುದನ್ನು ನಿಲ್ಲಿಸುವ ಮಾನಸಿಕತೆಯನ್ನು ತಾಳುತ್ತಾನೆ. ಕೈಯಲ್ಲಿರುವ 50,000 ಯೆನ್ ಹಣವನ್ನು ತನ್ನ ಕಿರು ಜೀವಿತದ ಅವಧಿಯಲ್ಲಿ ಕಳೆಯಲು ಒಬ್ಬ ಬರಹಗಾರನ ಜತೆಯಲ್ಲಿ ದಿನ ಕಳೆದು ಕುಡಿದು, ತರಿದು ತಿರುಗಿದರೂ ಕೂಡಾ ನಿರ್ವಾತವನ್ನು ಅನುಭವಿಸುತ್ತಾನೆ. ಆದರೂ ಕೂಡಾ ಆತ ಅದ್ಭುತವಾದ ‘Life is Brief’ ಎನ್ನುವ ಜೀವನೋತ್ಸಾಹದ ಪದ್ಯವನ್ನು ತಿಳೀತಾನೆ. ಒಮ್ಮೆ ಲೇಖಕ ಮತ್ತು ವತನಬೆ ಪೇಟೆಯಲ್ಲಿ ಸಾಗುತ್ತಿರುವಾಗ ವತನಬೆ ಟೋಪಿ ಬಿದ್ದು ಹೋದರೂ ಕೂಡಾ, ಲೇಖಕ, ಆ ಟೋಪಿ ಹಳೇತು ಹೋಗ್ಲಿ, ಅದೇ ಇದ್ರೆ ಹೊಸತ್ ಯಾವಾಗ ಬರುತ್ತೆ ಅಂತ ಇನ್ನೊಂದು ಹೊಸ ಟೋಪಿಯನ್ನು ಕೊಡಿಸ್ತಾನೆ.
ಹೀಗೆ ವತನಬೆ ಪುನ: ಆಫೀಸ್ ಗೆ ಹೋಗದಿದ್ದಾಗ ಸಹೋದ್ಯೋಗಿಗಳು ಮತ್ತು ಆತನ ಮಗ, ಸೊಸೆ ಸಾಕಷ್ಟು ವ್ಯಾಕುಲರಾಗುತ್ತಾರೆ. ವತನಬೆ ಸಹೋದ್ಯೋಗಿಯಾದ ತರುಣಿ ಟೋಯೋ, ಆ ಯಾಂತ್ರಿಕ ಆಫೀಸ್ ಕೆಲಸದಿಂದ ಬೇಸತ್ತು ರಾಜೀನಾಮೆ ನೀಡಬೇಕಾಗಿ ಬಂದರೂ ಕೂಡಾ ರಾಜೀನಾಮೆ ಪತ್ರಕ್ಕೆ ವತನಬೆಯ ಕಛೇರಿ Stamp ನ ಅಗತ್ಯವಿರುತ್ತದಾದ್ದರಿಂದ ವತನಬೆಯನ್ನು ಭೇಟಿ ಮಾಡಿದಾಗ ಆತ ಆಶ್ಚರ್ಯ, ಖುಷಿ ಎರಡನ್ನೂ ಕೂಡಾ ಒಟ್ಟಿಗೇನೇ ಅನುಭವಿಸುತ್ತಾನೆ. ಆಕೆಯ ಜತೆಗೆ ಕೆಲದಿನಗಳನ್ನು ವತನಬೆ ಕಳೆದರೂ ಕೂಡಾ ಕ್ರಮೇಣ ಆಕೆಗೆ ಈ ಸಹವಾಸ ಬೋರ್ ಅನಿಸುತ್ತದೆ. ಇತ್ತ ವತನಬೆ ಕೂಡಾ ಆಕೆಯ ಶಿಶು ಸಹಜ ಮನೋಭಾವಕ್ಕೆ ಒಗ್ಗಿಕೊಳ್ಳದೇ ಹೋಗುತ್ತಾನೆ. ಕೊನೆಗೂ ಟೋಯೋ, ಆಟಿಕೆ ತಯಾರಿಕೆಯ ಫ್ಯಾಕ್ಟರಿಯಲ್ಲಿ ಕೆಲಸ ಪಡೆಯುತ್ತಾಳೆ. ಆಕೆಯ ಹೊಸ ವೃತ್ತಿಯು ಆಕೆಗೆ ಖುಷಿ ಕೊಟ್ಟಿದೆಯೆಂದೂ, ಆಕೆಯೂ ಇಡೀ ಜಪಾನಿನ ಮಕ್ಕಳ ಜತೆ ಆಕೆ ಆಟವಾಡುತ್ತಿರುವ ಹಾಗೆ ಅನಿಸುತ್ತದೆ ಎನ್ನುವ ಅವಳ ಮಾತಿನಿಂದ ವತನಬೆ ಕೂಡಾ ಜಗತ್ತಿಗೆ ಏನಾದರೂ ನೀಡಬೇಕೆಂದು ಮನಸ್ಸಿನಲ್ಲಿಯೇ ಎಣಿಸುತ್ತಾನೆ. ಈ ನೆಲೆಯಲ್ಲಿಯೇ ಸಿನಿಮಾದ Ikiru, ಬದುಕು ಎನ್ನುವುದನ್ನು ಸೂಚಿಸುತ್ತದೆ. ಅದು ಬರಿಯ ಅಸ್ತಿತ್ವದ ಕುರಿತು ಮಾತನಾಡುವುದಿಲ್ಲ, ಬದುಕುವ ವಿಶ್ವಾಸವನ್ನೂ, ಬದುಕಿನ ವಿಲಾಸವನ್ನೂ ಕೂಡಾ ಮನಗಾಣಿಸುತ್ತವೆ.
ಕುರಸೋವಾನಿಗೆ ಕೂಡಾ ಬದುಕೆಂದರೆ, ಬದುಕುವುದೆಂದರೆ ಪರಿಪೂರ್ಣ ಎನ್ನುವ ನೆಲೆಯಲ್ಲಿ ಬದುಕುವುದು, ಬರೀ ಜೀವಂತವಾಗಿರುವ ಕ್ರಿಯೆಯೂ ಅಲ್ಲವದು. ಅಂತೆಯೇ ಸಿನಿಮಾದ ಮೊದಲರ್ಧದಲ್ಲಿನ City Hall ನಲ್ಲಿ ಬದುಕುವ ಕಂಜಿ ವತನಬೆ ಎಲ್ಲಾ ಕನಸುಗಳನ್ನು ಸಾಯಿಸಿ, ಬರೀ ಉದ್ಯೋಗಿಯಾಗಿ ಬದುಕಿದ್ದು ಮತ್ತು ಮಾನವನಾಗಿ ಸತ್ತಿದ್ದು, ಈ ನೆಲೆಯಲ್ಲಿಯೇ ಕುರಸೋವಾ ಆತನಿಗೆ Mummy ಎಂಬ ವಿಶೇಷಣವನ್ನು ನೀಡುವುದು, ವತನಬೆಗೆ ತಾನು ಬದುಕಿದ ಬದುಕಿನಾರ್ಧವು ಬೆದಕದೇ ಸಾಗಿರುವಂತದ್ದು ಎಂಬ ಅರಿವುಂಟಾಗುತ್ತಲೇ ಆತ ತಾತ್ವಿಕವಾಗಿ ಮತ್ತು ಮಾನಸಿಕವಾಗಿ ಒಂದು ಹೊಸ ಬದುಕನ್ನು ಬದುಕಬೇಕಾದ ಸ್ಥಿತ್ಯಂತರವನ್ನು ಅನುಭವಿಸುತ್ತಾನೆ. ವತನಬೆ ಕೊನೆಗೂ ಕೂಡಾ ಕೊಳಕು ಪಾರ್ಕ್ ಅನ್ನ ಸರಿಪಡಿಸಿ ಅಲ್ಲಿನ ತೂಗುಯ್ಯಾಲೆಯಲ್ಲಿ ಕೂತು, ಸುರಿಯುತ್ತಿರುವ ಮಂಜಿನ್ನೂ ಕೂಡಾ ಲೆಕ್ಕಿಸದೇ ತೂಗುತ್ತಾ, ‘Life is Brief’ ಎನ್ನುತ್ತಾ ವಿಜಯ ಚಿಹ್ನೆಯನ್ನು ಹಾಡಿನ ಮೂಲಕ ಬೀರುತ್ತಾ ಸಾಗುವುದು ವಸ್ತುಶ: ಕುರಸೋವಾನು, ಬದುಕು ಮಾನವ ಸಂಬಂಧ, ಸೃಷ್ಟಿ-ಸಮಷ್ಟಿಯೊಂದಿಗಿನ ಸಮರಸದ, ಧನ್ಯತೆಯ ಬದುಕಿನ ಭಾಗವನ್ನು ನಿರ್ವಚಿಸುವ ಕ್ರಮದ ಸಂಕೇತವೂ ಹೌದು.
ತನ್ನ ಅನೇಕ ಸಿನಿಮಾಗಳಲ್ಲಿ ಕುರಸೋವಾ ಒಂದು ಸಂಗತಿ, ವಸ್ತು, ವಿಷಯ, ವ್ಯಕ್ತಿ, ವಿದ್ಯಮಾನವನ್ನು ಹಲವು ಕೋನ, ದೃಷ್ಟಿಗಳಲ್ಲಿ ನೋಡುವಂತಹ ಕ್ರಮವನ್ನು ಇಲ್ಲಿ ಕೂಡಾ ಬಳಸಿದ್ದಾನೆ. Robert Altman, Rashoman ಸಿನಿಮಾ ಸಂದರ್ಭದಲ್ಲಿ ಇದನ್ನು ಸಾಂದರ್ಭಿಕವಾಗಿ Cubism ಅಥವಾ Cubistic Notion ಎಂಬುದಾಗಿ ಹೇಳುತ್ತಾನೆ. ಅದು ಕುರಸೋವಾ ಕಥನ ಕ್ರಮದಲ್ಲಿನ ಅತ್ಯಂತ ಪ್ರಮುಖ ಕಥನಕ್ರಮದ ವೈಶಿಷ್ಟ್ಯವೆಂಬುದು ಸ್ಟೀಫನ್ Prince ಅಭಿಪ್ರಾಯ. ಇಲ್ಲಿ ಕೂಡಾ ವತನಬೆ ದೃಷ್ಟಿಯಿಂದ ಸಿನಿಮಾ ಮತ್ತು ವತನಬೆಯನ್ನು ವೀಕ್ಷಿಸುವ, ಗ್ರಹಿಸುವ Third ಪಾರ್ಟಿ ಅವಲೋಕನದ ದೃಷ್ಟಿಯಿಂದಲೂ ಕುರಸೋವಾ ಸಿನಿಮಾವನ್ನು ನೋಡಿರುವುದು ಅರಿವಾಗುತ್ತಿದೆ. ಕುರಸೋವಾ ಈ ಕಥನತಂತ್ರದ ರಚನಾವಿನ್ಯಾಸ ಅತ್ಯಂತ ಮಹತ್ವದ್ದು. ಅತ್ಯಂತ ಕೆಲವೇ ವಿಶಿಷ್ಠ ನಿರ್ದೇಶಕರಿಗೆ ಇದು ಸಾಧ್ಯವಾಗಿದೆ. ಮುಖ್ಯವಾಗಿ ಇಲ್ಲಿನ ಕಥನಕ್ರಮ ಆತನ ರಶೋಮನ್ ಗಿಂತಲೂ ಭಿನ್ನವಾಗಿದ್ದು ಬಹುತೇಕ ಆತನ Drunken Angel ಮತ್ತು High and Low ಕಥನಕ್ರಮವನ್ನು ಹೋಲುತ್ತದೆ. ಇಲ್ಲಿ ಕುರಸೋವಾ ಉದ್ದೇಶಪೂರ್ವಕವಾಗಿ ಖಾಲಿಯಾಗಿರುವಂತಹ ಒಂದು ಬದುಕನ್ನು ಕಥಿಸುತ್ತಾ, ಅದೇ ಇನ್ನೊಂದು ಕಡೆ ಬೇರೆಯವರ ದೃಷ್ಠಿಯಿಂದ ದರ್ಶಿಸುತ್ತಾ ಹೋಗುವ ವಿಶಿಷ್ಠ ಕಥನತಂತ್ರವನ್ನು ಆಶ್ರಯಿಸಿರುವುದನ್ನು ನೋಡಬಹುದು. ಇದಲ್ಲದೇ ಕುರಸೋವಾ ಸಿನಿಮಾಗಳಲ್ಲಿನ ಒಂದು ಅನನ್ಯ ಕಥನ ಮಾದರಿ, ಅದು ವಾಸ್ತವ ಮತ್ತು ಆದರ್ಶದ ಸಮೀಕರಣ ಅದೂ ಕೂಡಾ ಇಲ್ಲಿ ಅತ್ಯಂತ ಪ್ರಜ್ಞೀಯವಾಗಿ ಬಳಕೆಯಾಗಿದೆ.
ಕುರಸೋವಾ ಆದರ್ಶ-ವಾಸ್ತವ ವಿಶ್ಲೇಷಣೆಯ ತಂತ್ರದ ಮೂಲಕ ವತನಬೆ ಪರ್ವತಸದೃಶ ಪ್ರಯತ್ನಗಳಿಂದ ಪಾರ್ಕ್ ಅನ್ನು ನಿರ್ಮಿಸಿದ್ದನ್ನು ಕುರೋಸವಾ ಒಂದು ಭ್ರಮೆ, ಅವಾಸ್ತವವೆಂದೇ ಪರಿಗಣಿಸುತ್ತಾನೆ. ಅದೊಂದು ಅನೈಜ ವಿದ್ಯಾಮಾನವೆಂಬುದು ಆತನ ಯೋಚನೆ. ವತನಬೆ ಸತ್ತಾಗ, ಉಂಟಾಗುವ ಶೋಕ ಸಮಾರಂಭ ಮತ್ತು ವತನಬೆಯ ನಂತರ ಹೊಸದಾಗಿ ನೇಮಕವಾಗುವ ಅಧಿಕಾರಿ ಪುನ: ಯಾವುದೋ ಒಬ್ಬ ಮಹಿಳೆಯ ಅರ್ಜಿಯನ್ನು ವಾಪಾಸು ಕಳಿಸುವ ಪ್ರಸಂಗ ಇತ್ಯಾದಿಗಳು ನಿಶ್ಚಿತವಾಗಿ ಈ ಪ್ರಮೇಯವನ್ನು ಮನ್ನಿಸುತ್ತವೆ. ಇದು ನಿಶ್ಚಿತವಾಗಿಯೂ ಕೂಡಾ ಒಂದು ಮೆಲೊಡ್ರಾಮದ ಮಾದರಿ, ಅತ್ಯಂತ ಸುಂದರವಾಗಿ ಭಾವನಾತ್ಮಕವಾದ ನಾಟಕೀಯತೆ ಅಭಿವ್ಯಕ್ತವಾಗಿದೆ. ಆದರೆ ಪ್ರೇಕ್ಷಕ ಸಂಪೂರ್ಣ ಮುಳುಗದಂತೆ ತಡೆಹಿಡಿಯುವ ಕೆಲಸವನ್ನು ಕೂಡಾ ಕುರೋಸವಾ ಇಲ್ಲಿ ಮಾಡಿದ್ದಾನೆ. ವತನಬೆ ದೃಷ್ಟಿ ಮತ್ತು Third Party ದೃಷ್ಟಿ ಮತ್ತು ಅವಲೋಕನದ ಮೂಲಕ. ಆದರೂ ಕೂಡಾ ಈ ಸಿನಿಮಾ ಕೊನೆಯ ದೃಶ್ಯದಲ್ಲಿ ವತನಬೆಯ ಸಹೋದ್ಯೋಗಿ, ಆ ಪಾರ್ಕ್ ನ ಹತ್ತಿರ ನಡೆಯುತ್ತಿರುವ ಸಂದರ್ಭದಲ್ಲಿ , ವತನಬೆಯನ್ನು ನೆನೆದು ಆತನ ಬದುಕು ಪ್ರೇರಣಾದಾಯಿ, ಆತನ ಬದುಕು ಧನ್ಯ ಎಂದು ಪರಿಗಣಿಸುವ ರೀತಿ-ಕ್ರಮ ಅತ್ಯಂತ ಮುಖ್ಯವಾದುದು. ಆತನ ಬದುಕು ಇನ್ನೊಬ್ಬರನ್ನು ಪ್ರಭಾವಿಸುತ್ತೆ, ಪ್ರಭಾವಿಸಬೇಕು ಎನ್ನುವ ಸಂಗತಿ ಅತ್ಯಂತ ಪ್ರಮುಖ, ಅದು ಸಿನಿಮಾದ ಕೊನೆಯಲ್ಲಿ ವ್ಯಕ್ತವಾಗಿದೆ. ಬದುಕು, ಬದುಕಿನ ಅರ್ಥ, ಬದುಕುವ ರೀತಿ, ಬದುಕಿನ ವ್ಯಾಖ್ಯೆ, ಎಂಬ ಬದುಕಿನ ಸಾವಯವ ಜಿಜ್ಞಾಸೆ ಮತ್ತು ವ್ಯಾಖ್ಯೆ ಕೂಡಾ ನಿರ್ವಚನಕ್ಕೊಳಪಟ್ಟ ಆತ್ಯಂತಿಕೆಯನ್ನು ಕಾಣುವುದರೊಂದಿಗೆ ಕುರಸೋವಾನ ಆಶಯದ ದರ್ಶನವೂ ನಮಗಿಲ್ಲಿ ಕಾಣುತ್ತದೆ.
ವತನಬೆ ಕೊನೆಗೂ ಕೂಡಾ ಕೊಳಕು ಪಾರ್ಕ್ ಅನ್ನ ಸರಿಪಡಿಸಿ ಅಲ್ಲಿನ ತೂಗುಯ್ಯಾಲೆಯಲ್ಲಿ ಕೂತು, ಸುರಿಯುತ್ತಿರುವ ಮಂಜಿನ್ನೂ ಕೂಡಾ ಲೆಕ್ಕಿಸದೇ ತೂಗುತ್ತಾ, ‘Life is Brief’ ಎನ್ನುತ್ತಾ ವಿಜಯ ಚಿಹ್ನೆಯನ್ನು ಹಾಡಿನ ಮೂಲಕ ಬೀರುತ್ತಾ ಸಾಗುವುದು ವಸ್ತುಶ: ಕುರಸೋವಾನು, ಬದುಕು ಮಾನವ ಸಂಬಂಧ, ಸೃಷ್ಟಿ-ಸಮಷ್ಟಿಯೊಂದಿಗಿನ ಸಮರಸದ, ಧನ್ಯತೆಯ ಬದುಕಿನ ಭಾಗವನ್ನು ನಿರ್ವಚಿಸುವ ಕ್ರಮದ ಸಂಕೇತವೂ ಹೌದು.
ಸಿನಿಮಾ ನೋಡುವ ಪ್ರತೀ ನೋಡುಗನಿಗೂ ಅನಿಸಬಹುದು, ಇದು ಅರ್ಥಪೂರ್ಣ ಬದುಕಿನ ಕ್ರಮವೆಂಬುದಾಗಿ. ಇಕಿರು ಉದ್ದೇಶವೂ ಕೂಡಾ ‘ದೃಷ್ಟಿ’ ದಾನದ್ದಾಗಿದೆ. ಈ ದೃಷ್ಟಿ ವತನಬೆ ತನ್ನ ಜೀವನವನ್ನು ಅರ್ಥೈಸಿ ವ್ಯಾಖ್ಯಾನಿಸಿ, ತೃಪ್ತಿಗೊಳ್ಳದೇ ಮರುಕಗೊಂಡು ದೃಷ್ಟಿ ಪ್ರೇರಿತ ಕಾರ್ಯಕ್ಕಾಗಿ, ಚಟುವಟಿಕೆಯಲ್ಲಿ ನಿರತನಾಗುವುದರ ಮೂಲಕ ವ್ಯಕ್ತವಾಗಿದೆ. ಬದುಕಿನ ಅರ್ಥವೂ ಕೂಡಾ ತಮ್ಮ ಚಟುವಟಿಕೆ, ಜೀವನ ಕುರಿತು ಮಿತ್ರರು, ಬಂಧುಗಳು, ಸಹೋದ್ಯೋಗಿಗಳು ಕೊಡುವ ಟೀಕೆ, ಪ್ರತಿಕ್ರಿಯೆ, ವಿಮರ್ಶೆಯಿಂದಲ್ಲ ಬದಲಿಗೆ ತನ್ನ ಬದುಕನ್ನು ತಾನೇ ವಿಮರ್ಶೆ ಮಾಡಿಕೊಳ್ಳುವುದರ ಮೂಲಕ ಆಗಬೇಕು ಎನ್ನುವುದೂ ಕೂಡಾ ಸಹಜವಾದ ಕುರೋಸವಾ ದರ್ಶನದ ಕಾಣ್ಕೆ. ಭಾರತೀಯ ದರ್ಶನ ಮತ್ತು ಜಗತ್ತಿನ ಅನೇಕ ಸಂಸ್ಕೃತಿ, ಸಮಾಜದಲ್ಲಿ ಬಾಳನ್ನು ನೋಡಿ ಅರ್ಥೈಸಿಕೊಳ್ಳುವ ಕ್ರಮದಲ್ಲಿನ ‘ಪೂರ್ಣ ಬದುಕು’ ಎನ್ನುವ ದೃಷ್ಟಿಯೂ ಕೂಡಾ ಇಲ್ಲಿ ಕುರೋಸವಾ ಕ್ರಮದ ಮೂಲಕ ಅಭಿವ್ಯಕ್ತವಾಗಿದೆಯೇನೋ ಅನ್ನಿಸುತ್ತೆ. ಈ ಪೂರ್ಣತೆ ಬರುವುದು 100 ವರ್ಷ ಬದುಕುವುದರಿಂದಲ್ಲ, ಬದಲಿಗೆ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದು. ಇಕಿರು ಸಿನಿಮಾದ ಮೂಲಕ ಕುರೋಸವಾ ಅದನ್ನು ಟೀಕಿಸಿದ್ದ ಪರಿಪೂರ್ಣತೆ, ಅರ್ಥಪೂರ್ಣತೆ ಕೈಗೂಡುವುದು ಮನುಷ್ಯ ತನ್ನನ್ನು ತಾನು ವಿಮರ್ಶಿಸಿ, ಪ್ರಶ್ನಿಸಿ, ತನ್ನ ಬದುಕನ್ನು ಪುನರಾವಲೋಕನ ಮಾಡುವುದರ ಮೂಲಕ ಸಾಧ್ಯವಾಗುತ್ತದೆ ಎನ್ನುವುದೂ ಕೂಡಾ ಮುಖ್ಯ. ಕುರಸೋವಾನ ಸಿನಿಮಾಗಳಲ್ಲೇ ಇಕಿರು ಈ ರೀತಿಯಲ್ಲಿ ಅಪೂರ್ವವಾದ ಭಾವನಾತ್ಮಕ ಮತ್ತು ಅಸ್ತಿತ್ವವಾದೀ ಶೃಂಗವನ್ನು ಏರುತ್ತದೆ. ‘ಇಕಿರು’ವನ್ನು ನಾವು ಒಂದೇ ಗೆರೆಯಲ್ಲಿ ರೂಪಕೀಕರಣಕ್ಕೊಳಪಡಿಸಬಹುದು. ಹೀಗೆ “ ಒಳ್ಳೆಯ ಬದುಕನ್ನು ಬದುಕುವುದೆಂದರೆ ಜನ ತಿಳಿಯಬೇಕು ಎಷ್ಟು ಕಡಿಮೆ ಅವಧಿಯದಾಯ್ತಲ್ಲ ‘ನಮ್ಮ ಬದುಕು’ ಎನ್ನುವುದರ ಮೂಲಕ” ಎನ್ನುವ ಪ್ರಖ್ಯಾತ ಕುರೋಸವಾ ಸಿನಿಮಾಗಳ ವಿಮರ್ಶಕ ಡೊನಾಲ್ಡ್ ರಿಚಿಯ ಮಾತು ಅಕ್ಷರಶ: ಕುರೋಸವಾನನ್ನು ಹರಳುಗಟ್ಟಿಸುವ ಕ್ರಮವೆಂದೇ ನನ್ನ ಅಂಬೋಣ.
ಇಕಿರು ಮೂಲಕ ಒಂದು ಹೊಸ ಮಾದರಿಯನ್ನು ನೀಡಲು ಕುರಸೋವಾ ಪ್ರಯತ್ನಿಸುತ್ತಾನೆ. ಆತನ ನಂಬಿಕೆ “ಒಂದು ಗುಂಪು, ಸಮಾಜ ನಿರ್ಧರಿತವಾಗಿರುವುದು ಅದು ಉಂಟಾಗಲು ಕಾರಣವಾದಂತಹ ಪ್ರತಿ ಒಬ್ಬ ವ್ಯಕ್ತಿಯೆನ್ನುವ ವೈಯಕ್ತಿಕ ಘಟಕದಿಂದ. ವತನಬೆ ಮೂಲಕ, ವತನಬೆ ಬದುಕಿನ ಮೂಲಕ, ವತನಬೆಯಂತವರು ಬೇಕು ಮತ್ತು ವತನಬೆಯ ಬದುಕಿನಂತಹ ಬದುಕು ಬೇಕು. ಮತ್ತದು ಪ್ರೇರಣಾದಾಯೀ ಎನ್ನುವ, ಅಹೋ! ಎಂತಹ ಬದುಕು ಎನ್ನುವ ಧನ್ಯತೆಯ ಪ್ರತಿಬಿಂಬವನ್ನು ಸೂಚಿಸುವ ನೆಲೆಯ ಬದುಕಿನ ಮಾದರಿಯ ಅನ್ವೇಷಣೆಯನ್ನು ಕುರೋಸವಾ ಅನ್ವೇಷಿಸುವ ಬಗೆಯೆಂದು ನನ್ನ ಅಭಿಪ್ರಾಯ. Galbraith Stuart ಕೂಡಾ ತನ್ನ The Emperor and the wolf; The lives and Films of Akira Kurosawa and Toshiro Mifune ಕೃತಿಯಲ್ಲಿ ಇದೇ ರೀತಿ ಅಭಿಪ್ರಾಯ ಪಡುತ್ತಾನೆ. ಅಂತೆಯೇ ಸಿನಿಮಾದಲ್ಲಿ ಕುರಸೋವಾನಿಗೆ ವತನಬೆಯ ಸಾವಿನ ಬಗೆಗೆ ಆಸಕ್ತಿ ಕಡಿಮೆ, ವಸ್ತುಶ: ಶಾಟ್ಗಳೂ ಕೂಡಾ ಕಡಿಮೆ, ಆದರೆ ಸಿನಿಮಾದ ಸಿಂಹಪಾಲು ಓಡುವುದು ವತನಬೆ ಬದುಕಿದ ಬದುಕಿನ ಸುತ್ತ. ಅಷ್ಟು ತಾಹತಹ್ಯ, ಘನ ತರಾತುರಿಯ ಹಿಂದೆ ಇರುವುದು ಈ ಮಾದರಿಯ ಕೆತ್ತನೆಯ ಜರೂರು. Dreams ನಲ್ಲಿನ Watermill ನ ಜಪಾನೀ ಮುದುಕ ಮತ್ತು ಸಾವಯವ ಗ್ರಾಮ, Dersu Uzalazದಲ್ಲಿನ ಡೆರ್ಸು, Dodesukaಡೆನ್ನಲ್ಲಿಯ ಮಾಲಿನ್ಯದ ಡಿಸ್ಕೋರ್ಸ್ ಹೀಗೆ ಹಲವು ಸಿನಿಮಾಗಳಲ್ಲಿ ನಾವು ನೋಡುವ ಹಾಗಿನ ಈ ಪರಂಪರೆ ಆರಂಭವಾಗಿದ್ದು ಇಂತಹ ಸಿನಿಮಾಗಳಿಂದಲೇನೇ ಎನ್ನುವುದನ್ನು ಕೂಡಾ ಗಮನಿಸಬಹುದು. ಅದರರ್ಥ ಕುರೋಸವಾ ಒಬ್ಬ ಅನುಭಾವಿ ಪ್ರವಾದಿಯಲ್ಲ, ಬದಲಿಗೆ ಸಮಕಾಲೀನ ಜಾಗತಿಕ ಮತ್ತು ಜಪಾನಿನ ಸಮಾಜೋ-ರಾಜಕೀಯ ಸಂಕೀರ್ಣತೆಗಳಿಗೆ ಒಬ್ಬ ಕಲಾಕಾರನಾಗಿ, ಸಿನಿಮಾ ನಿರ್ದೇಶಕನಾಗಿ ಸ್ಪಂದಿಸುವ ಕ್ರಮದ ಪ್ರಯತ್ನಿಗನಷ್ಟೇ.
ಆತ ತನ್ನ ಚಿತ್ರಗಳಿಂದ ಸಂದೇಶ ಕೊಡುವ ಸಾಮಾಜಿಕ ಸುಧಾರಣೆಯ ಹರಿಕಾರನಾಗಲು ಬಯಸುವುದಿಲ್ಲ, ಬದಲಿಗೆ ಕಲೆ ಮತ್ತು ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ತನ್ನ ಸಿನಿಮಾಗಳಲ್ಲಿ ಆ ಪ್ರಸ್ತುತ ಸಮಾಜದ ಬಯಕೆ-ಬೇಡಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಒಂದು ಮೂಲ ಜಿಜ್ಞಾಸಿಕವಾದ, ಚರ್ಚಾಯೋಗ್ಯವಾದ ವಾಗ್ವಾದಗಳನ್ನು ನಡೆಸುತ್ತಾ ಸಾಗುವ ಕ್ರಮದಲ್ಲಿ ಮುಂದುವರಿಯುವುದನ್ನು ನಾವು ಗಮನಿಸಬಹುದು. ಇಕಿರು ಕುರಸೋವಾನ ಸಿನಿಮಾಗಳಲ್ಲೇನೇ ಅತ್ಯಂತ ಭಾವನಾತ್ಮಕ ಸಿನಿಮಾ, ಆದರೂ ಕುರೋಸವಾ ಭಾವನಾತ್ಮಕತೆ- ಮೂಲ ಜಿಜ್ಞಾಸಿಕ ಚರ್ಚೆಗೆ ಹಚ್ಚಿಸುವ ಗುಣಗಳೆರಡರ ನಡುವೆ ಒಂದು ಸಮತೋಲಿತ ಕ್ರಿಯೆ, ‘ಮಧ್ಯಮಮಾರ್ಗ’ದ ಮನೋಸ್ಥಿತಿಗೆ ಹೆಚ್ಚು ಒತ್ತುಕೊಟ್ಟಿದ್ದಾನೆ. ಇಕಿರುವಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಟಿಕ್ ಅನುಭವವೇ ಮುಖ್ಯ ಹೊರತು, ಸೋಶಿಯೋಲಾಜಿಕಲ್ ಅಲ್ಲ. ಇನ್ನೂ ಮುಂದುವರಿಯುತ್ತಾ ವ್ಯಕ್ತಿಗತ ಆತ್ಮವಿಮರ್ಶೆಯ, ವಿಶ್ಲೇಷಣೆ ಮತ್ತು ನೆಲೆಯಿದೆ. ಈ ನೆಲೆಯಲ್ಲಿಯೇ ಇಕಿರು ಆತನ ಉಳಿದ ಸಿನಿಮಾಗಳಿಗಿಂತ ವಿಶಿಷ್ಠವಾದುದು. ಜತೆಗೆ ಇಕಿರು ಕಾಲ-ದೇಶಗಳನ್ನು ಹೊರತುಪಡಿಸಿ ಸ್ವೀಕೃತ ಆಗಿದ್ದು ಕೂಡಾ ಈ ನೆಲೆಯಿಂದಲೇ.
ವತನಬೆ ಬದುಕಿನ ಅರ್ಥವನ್ನು ಕಂಡುಕೊಂಡಿದ್ದು ಕ್ರಿಯೆಯ ಮುಖಾಂತರ ಆತನಿಗೆ ಸಾವಿನ ಅರಿವಿತ್ತು. ರ್ಸಾತ್ರೆಯ Roquent, ಕಾಮುವಿನ forieghner ಹಾಗೆ, ಕಾಫ್ತಾನ ಗ್ರೆಗೊರ್ ಹಾಗೆ ಮತ್ತು ದಸ್ತೋವಸ್ಕಿಯ Prince Myushkin ಹಾಗೆ ಅಸ್ತಿತ್ವದ ಅರ್ಥವನ್ನು ವತನಬೆ ಕ್ರಿಯೆಯ ಮೂಲಕ ಅರ್ಥೈಸಿಕೊಂಡ. ಆತ ಕಳಾಹೀನವಾಗಿದ್ದ ಪಾರ್ಕ್ ಗೆ ಕೂಡಾ ಜೀವ ತುಂಬಿದ್ದು ಈ ಕಾರಣದಿಂದಲೇನೇ. ಪಾರ್ಕ್ನ್ನು ಇರುವಿಕೆ (Being) ಮತ್ತು ಕ್ರಿಯೆಯ ಜತೆ ಬೆಸೆದ ಆತ ತನ್ನ ಇಕಿರುವಿನಲ್ಲಿ ತಾನು ಅಸ್ತಿತ್ವವಾದಿ ಎನ್ನುವ ಹಣೆಪಟ್ಟಿಯನ್ನು ಒಪ್ಪದಿದ್ದರೂ ಕೂಡಾ ಅಸ್ತಿತ್ವವಾದದ ಮುಖ್ಯ ತಿರುಳಾದ Moral Assumption (ನೈತಿಕ ಗ್ರಹಿಕೆ)ಯನ್ನು ಚಿತ್ರದ ಬಿಂಬವಾಗಿಸಿದ. ಇದಲ್ಲದೇ ತನ್ನ favourite ಆದ ದೊಸ್ತೋವಸ್ಕಿಯ, “ಮಾನವನನ್ನು ಪದರ, ಪದರ ತೆಗೆದರೂ ಕೂಡಾ ಆತ ಒಂಟಿಯಾಗಿ ಉಳಿಯುತ್ತಾನೆ. ಆತ ಆತನಿಗಷ್ಟೇ, ಆತನ ಅಂತರ್ಯಕಷ್ಟೇ ಜವಾಬ್ದಾರ” ಎನ್ನುವ ಪ್ರಣಾಳಿಕೆಯನ್ನು ಅಕ್ಷರಶ: ಪಾಲಿಸಿದ. ಆದರೆ ಇಕಿರುವಿನ ಸತ್ಯ, ಸೌಂದರ್ಯ ಬರೀ ಇಷ್ಟಕ್ಕೆ ಮಾತ್ರ ಹೊರತಾಗದೇ ಬಹುಮುಖೀ, ವೈವಿಧ್ಯದ ನೆಲೆಗಳನ್ನು ತಂದಿಡುತ್ತವೆ. ಅಂತಹ ವ್ಯಾಖ್ಯೆಗಳಲ್ಲಿ ಒಂದು ಅದ್ಭುತ ವ್ಯಾಖ್ಯೆಯಾಗಿ ನಾನು ಪ್ರಸಿದ್ಧ ವಿಮರ್ಶಕ Richard Brown ಮಾತನ್ನು ಮುಂದಿಡುತ್ತಾ ಇಕಿರು ಮೇಲಿನ ಚರ್ಚೆಯನ್ನು ಮುಗಿಸುತ್ತೇನೆ.
“Ikiru is a Cinematic expression of Modern existentialist thought. It consists of a restrained affirmation within the context of a giant negation. What is says in starkly lucid terms is that ‘Life’ is meaningless when everything is said and done: at the same time one man’s life can acquire meaning when he undertakes to perform some task which to him is meaningfull. What everyone else thinks about that man’s life is utterly beside the point, even ludicrous. The meaning of his life is what he commits the meaning of his life to be. There is nothing else”.
ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ,ಚಿತ್ರಕತೆ ರಚನೆ ಮತ್ತು ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮೂಲಕ ಶಿಕ್ಷಣವನ್ನು ಪಡೆದಿರುತ್ತಾರೆ.ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿ ಚರಿತ್ರೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.