Advertisement

Category: ದಿನದ ಅಗ್ರ ಬರಹ

ಹೆಣ್ಣು ನೋಡಲೆಂದು ಬಂದವರು!: ಸುಕನ್ಯಾ ಕನಾರಳ್ಳಿ ಅಂಕಣ

ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ಮೂರನೆಯ ಬರಹ

Read More

ಯಶಸ್ವಿ ಕಾರ್ಯಕ್ರಮದ ವರದಿ…: ಎಚ್. ಗೋಪಾಲಕೃಷ್ಣ ಸರಣಿ

ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಸ್‌ಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೪ನೇ ಬರಹ ನಿಮ್ಮ ಓದಿಗೆ

Read More

ಒಳಬಾರದು ಆ ವಸಂತ…:  ವಿನಾಯಕ ಅರಳಸುರಳಿ ಅಂಕಣ

ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ.‌ ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ವಾಸುಕಿ ಸಿ.ಜಿ. ಬರೆದ ಈ ಭಾನುವಾರದ ಕತೆ “ಕನಸಿನ ಕಾಗೆ”

ಕೊನೆಗೂ ನಾನು ನೀರಿಗೆ ಇಳಿದೆ. ನೆನ್ನೆ ಆ ಮನುಷ್ಯ ಮಾಡಿದ್ದನ್ನೇ ನಾನೂ ಮಾಡಿದೆ. ಎರಡು ಅಂಗೈಗಳಲ್ಲಿ ನೀರನ್ನು ತುಂಬಿಸಿಕೊಂಡು ತಲೆಯ ಮೇಲೆ ಸುರಿದುಕೊಂಡೆ. ಮೈಗೆ ನೀರು ತಾಗಿದ್ದೇ ತಡ, ಹೊಸ ಹುಮ್ಮಸ್ಸು ಬಂದಂತಾಯಿತು. ಆ ಕ್ಷಣದಲ್ಲಿ ನನ್ನೊಳಗೆ ಏನೋ ಒಂದು ಬದಲಾವಣೆ ಆಯಿತು; ಇಂತಹ ಸುಖವನ್ನು ನಾನು ಅದಕ್ಕೂ ಮುಂಚೆ ಯಾವತ್ತೂ ಕಂಡವನಲ್ಲ. ತಲೆಯಲ್ಲಿ ಓಡುತ್ತಿದ್ದ ನೂರಾರು ಯೋಚನೆಗಳು ಇದಕ್ಕೆ ಕಾರಣ ಇರಬಹುದು. ಯಾವುದೋ ಸಿಂಹದ ತೂಕದ ಹೊರೆ ಮೈಮೇಲಿಂದ ಇಳಿದು ಹೋದಂತೆ ಹಗುರ ಎನಿಸಿತು.
ವಾಸುಕಿ ಸಿ.ಜಿ. ಬರೆದ ಕತೆ “ಕನಸಿನ ಕಾಗೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ