ಪಿಸುಮಾತಿನ ಪಲ್ಲವಿಗೆ ಮರಗಿಡಗಳ ತನನ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ
ಅಲ್ಲಕ್ಕಾ, ಮರಗಿಡಗಳು ಕೇಳಿಸಿಕೊಳ್ಳೋದು ಹೇಗೆ ಅಂತ ಒಂದು ಚೂರು ಅರ್ಥಾ ಆಯ್ತು. ಇದೇ ಒಂದು ಅಚ್ಚರಿ ಅಂದ್ರೆ, ಈ ಮೂಕಮರಗಳು ಮಾತು ಹೇಗಪ್ಪಾ ಆಡತ್ವೇ? ಅದು ಕೂಡ ತುಂಬಾ ಆಶ್ಚರ್ಯವೇ” ಎಂದಳು. ಆಗ ಕಾವ್ಯ, “ಹೂಂ, ಅದಕ್ಕೆ ನಮ್ ಮರಗಳ ‘ನೆಟ್ವರ್ಕ್’ ಬೇಕಪ್ಪಾ! ಹೌದೂ.. ಫಂಗಸ್ ಗೊತ್ತಲ್ವಾ ನಿಂಗೆ? ಎಂದು ಕೇಳಿದಳು. ಆಗ ವಿಭಾ, “ಹೂಂ, ಮಳೆ ಬಂದಾಗ ಒದ್ದೆ ಬಟ್ಟೆ ಮೇಲೋ, ಒದ್ದೆ ಗೋಡೆ ಮೇಲೋ ಕಪ್ಪು ಚುಕ್ಕಿಗಳು ಕಾಣಿಸತ್ತಲ್ವಾ? ಅದೇ ತಾನೆ ಫಂಗಸ್?” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹತ್ತನೆಯ ಕತೆ
