‘ಸ್ಟಾರ್ಟ್ ಸ್ಟಾಪ್’ ಆಟ ಮತ್ತು ವಡಬಾನಲ: ಕ್ಷಮಾ ವಿ ಭಾನುಪ್ರಕಾಶ್
ಕಾವ್ಯ “ಅಷ್ಟು ಸರಳವೇ ನಮ್ಮ ದೇಹದ ಕೆಲ್ಸ? ಬಾಯಲ್ಲಿ ಫಿಸಿಕಲೀ ಆಹಾರ ನಜ್ಜುಗುಜ್ಜಾಗಿರತ್ತೆ. ಆದ್ರೆ ಕೆಮಿಕಲೀ ಅದ್ರಲ್ಲಿರೋ ಶಕ್ತಿಯನ್ನ ನಾವಿನ್ನೂ ಹೀರಿಕೊಂಡಿರಲ್ಲ. ನಮ್ಮ ಬಾಯಲ್ಲಿ ಭೌತಿಕವಾಗಿ ಅಂದ್ರೆ ಫಿಸಿಕಲಿ ಮುರಿದುಕೊಂಡ ಆಹಾರ, ಜೊಲ್ಲಿನಲ್ಲಿರೋ ‘ಎಂಝೈಮ್’ಗಳ ಸಹಾಯದಿಂದ ಕೊಂಚಕೊಂಚವಾಗಿ ರಾಸಾಯನಿಕವಾಗಿ ಡೈಜೆಸ್ಟ್ ಆಗೋಕೆ ಪ್ರಾರಂಭಿಸಿರತ್ತೆ. ಆಮೇಲೆ ಮೆಲ್ಲನೇ ನಮ್ಮ ಅನ್ನನಾಳದಲ್ಲಿ ‘ಸ್ಟಾಪ್, ಸ್ಟಾರ್ಟ್, ಸ್ಟಾಪ್, ಸ್ಟಾರ್ಟ್’ ಅಂತ ಆಟ ಆಡತ್ತೆ” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೈದನೆಯ ಕತೆ
ಇಂಧನಾಂತರಂಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾಲ್ಕನೆಯ ಕತೆ
ಇದು ಕಲ್ಲು ಕರಗುವ ಸಮಯ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ನಮ್ಮ ಯಾಣದ ಈ ಕಪ್ಪುಶಿಖರ ಒಂದಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ ೨೭೦ ಕೋಟಿ ವರ್ಷಗಳಷ್ಟು ಹಳೇದು. ಅಂದ್ರೇ, ಭೂಮಿ ಮೇಲೆ ಮನುಷ್ಯರೇ ಇರ್ಲಿಲ್ಲ; ನಮಗೆ ಗೊತ್ತಿರೋ ಯಾವ ಪ್ರಾಣಿ ಪಕ್ಷಿಗಳೂ ಇರ್ಲಿಲ್ಲ; ನಿನ್ ಫೇವರೆಟ್ ಡೈನೋಸಾರ್ ಕೂಡ ಇರ್ಲಿಲ್ಲ; ಈ ಯಾಣದ ಕಪ್ಪುಶಿಲೆಗಳು ಮೊದಲ ಬಾರಿಗೆ ಹೀಗೆ ಎದ್ದುನಿಂತಾಗ ಕೆಲವೇ ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳು ಇದ್ವು ಅಷ್ಟೇ. ಅಂದಿನಿಂದ ಇಂದಿನವರೆಗೆ ಇಲ್ಲೇ ನಿಂತು, ಇಡೀ ಭೂಮಿ ಬದಲಾಗೋದನ್ನ ಕೋಟ್ಯಾನುಕೋಟಿ ವರ್ಷಗಳಿಂದ ನೋಡ್ತಾ ಇದೆ ನಮ್ಮ ಈ ಯಾಣದ ಶಿಲೆಗಳು! ಎಂಥಾ ಅದ್ಭುತ ಅಲ್ವಾ?” ಎಂದ ಮತ್ತೊಮ್ಮೆ ಆ ಬೃಹತ್ ಶಿಲಾಗುಹೆಗಳನ್ನು ಕಣ್ಣರಳಿಸಿ ನೋಡುತ್ತಾ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿಮೂರನೆಯ ಕತೆ
ಸುಯ್ಯೆಂದು ಹಾಡುವ ಸೊಳ್ಳೆಯ ಸುದ್ದಿ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ಪ್ರಕಾಶ್, ತನ್ನ ಪುಟ್ಟ ನಾದಿನಿಯರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ “ನಿಮಗೆ ಗೊತ್ತೇನ್ರೋ? ಎಲ್ಲಾ ಬಗೆಯ ಜೀವಿಗಳಲ್ಲೂ ಗಂಡುಗಳು ತುಂಬಾ ಪಾಪದವು. ಸೇಮ್ ನನ್ನ ಥರಾನೇ! ಸೊಳ್ಳೆಗಳಲ್ಲೂ ಅಷ್ಟೇ!” ಅಂತ ನಾಟಕ ಮಾಡಿ ನಗಿಸಿದ. ಆಮೇಲೆ ಸೊಳ್ಳೆಗಳ ಬಗ್ಗೆ ವಿವರಿಸುತ್ತಾ “ಆದ್ರೆ ಇದು ತಮಾಷೆಯಲ್ಲ! ಗಂಡು ಸೊಳ್ಳೆಗಳು ನಮ್ಮನ್ನು ಕಚ್ಚಲ್ಲ; ಅವು ಹೂವುಗಳ ಮಕರಂದದಂತಹ ಆಹಾರದ ಮೇಲೆ ಡಿಪೆಂಡ್ ಆಗಿರತ್ವೆ; ಹೆಣ್ಣು ಸೊಳ್ಳೆಗಳು ಪಾಪ, ಮೊಟ್ಟೆ ಇಡೋಕೆ, ಮರಿಗಳಿಗೆ ಶಕ್ತಿ ನೀಡೋಕೆ ನಮ್ಮ ರಕ್ತದಲ್ಲಿರುವ ಪ್ರೋಟೀನ್ ಮೇಲೆ ಅವಲಂಬಿತ. ಅದಕ್ಕಾಗಿ ಅವು ಕಚ್ಚಲೇಬೇಕು, ರಕ್ತ ಹೀರಲೇಬೇಕು, ನಮ್ಮ ಕೈಯಲ್ಲಿ ಸಿಕ್ಕಿ ಸಾಯಲೂ ಬೇಕು”
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹನ್ನೆರಡನೆಯ ಕತೆ
ನೀ ನನಗಾದರೆ ನಾ ನಿನಗೆ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
“ನಾವು ಒಂದೊಂದೇ ಮರದ ಜೊತೆ ಸಂಬಂಧ ಬೆಸೆಯೋದಿಲ್ಲ; ಅನೇಕ ಮರಗಳ ಜೊತೆಗೆ ಸಂಬಂಧ ಬೆಸೆಯುತ್ತಾ, ಮರಗಳನ್ನೂ ಹತ್ತಿರ ತರ್ತೇವೆ. ಈ ಜಾಲದ ಮೂಲಕ ನಾವೂ ಮತ್ತು ಮರಗಳೂ ಮಾತಾಡೋದು ಮಾತ್ರವಲ್ಲ, ಮರಗಳೂ ತಮ್ಮೊಳಗೇ ಮಾತಾಡಿಕೊಳ್ಳೋದೂ ಸಾಧ್ಯ. ನಮ್ಮ ಈ ಜಾಲದ ಸಹಾಯದಿಂದ, ತಾಯಿ ಮರಗಳೂ ತಮ್ಮ ಮಕ್ಕಳೊಂದಿಗೆ ಸದಾ ಬೆಸೆದುಕೊಂಡಿರಬಹುದು; ಒಂದು ಸಮುದಾಯದ ಎಲ್ಲಾ ಮರಗಳೂ ಒಂದಕ್ಕೊಂದು ಸದಾ ಸಂಪರ್ಕದಲ್ಲಿರಬಹುದು. ಅದಕ್ಕೆ ಬೇಕಾದ ಸಂದೇಶಗಳನ್ನು ನಾವು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ರವಾನೆ ಮಾಡ್ತೇವೆ” ಎಂದು ಹೇಳಿದಳಂತೆ;
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹನ್ನೊಂದನೆಯ ಕತೆ
ಪಿಸುಮಾತಿನ ಪಲ್ಲವಿಗೆ ಮರಗಿಡಗಳ ತನನ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ
ಅಲ್ಲಕ್ಕಾ, ಮರಗಿಡಗಳು ಕೇಳಿಸಿಕೊಳ್ಳೋದು ಹೇಗೆ ಅಂತ ಒಂದು ಚೂರು ಅರ್ಥಾ ಆಯ್ತು. ಇದೇ ಒಂದು ಅಚ್ಚರಿ ಅಂದ್ರೆ, ಈ ಮೂಕಮರಗಳು ಮಾತು ಹೇಗಪ್ಪಾ ಆಡತ್ವೇ? ಅದು ಕೂಡ ತುಂಬಾ ಆಶ್ಚರ್ಯವೇ” ಎಂದಳು. ಆಗ ಕಾವ್ಯ, “ಹೂಂ, ಅದಕ್ಕೆ ನಮ್ ಮರಗಳ ‘ನೆಟ್ವರ್ಕ್’ ಬೇಕಪ್ಪಾ! ಹೌದೂ.. ಫಂಗಸ್ ಗೊತ್ತಲ್ವಾ ನಿಂಗೆ? ಎಂದು ಕೇಳಿದಳು. ಆಗ ವಿಭಾ, “ಹೂಂ, ಮಳೆ ಬಂದಾಗ ಒದ್ದೆ ಬಟ್ಟೆ ಮೇಲೋ, ಒದ್ದೆ ಗೋಡೆ ಮೇಲೋ ಕಪ್ಪು ಚುಕ್ಕಿಗಳು ಕಾಣಿಸತ್ತಲ್ವಾ? ಅದೇ ತಾನೆ ಫಂಗಸ್?” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹತ್ತನೆಯ ಕತೆ
ಮರಗಳೂ ಮಾತಾಡುತ್ವೆ ಗೊತ್ತಾ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ
“ಈ ವೀವಿಲ್ ಆಗ್ಲೀ, ಅಥವಾ ಯಾವುದೇ ಪ್ರಭೇದದ ಕೀಟವಾಗ್ಲೀ, ಅದರ ಬಾಯನ್ನು ಎಲೆಗಳಿಗೋ, ಹಣ್ಣು-ಕಾಯಿಗಳಿಗೋ ಹಾಕಿದ ಕ್ಷಣವೇ, ಅದರ ಜೊಲ್ಲು ಅಥವಾ ಎಂಜಿಲಿರತ್ತಲ್ಲಾ? ಅದರ ರುಚಿಯನ್ನ ಗುರುತಿಸಿದ ಮರಗಳು, ಕರೆಕ್ಟಾಗಿ ಅದು ಯಾವ ಪ್ರಭೇದದ ಕೀಟ ಅಂತ ಕಂಡುಹಿಡಿದು ಬಿಡತ್ವೆ. ಪ್ರತೀ ಜೀವಿಯ ಜೊಲ್ಲೂ ಜೀವರಾಸಾಯನಿಕವಾಗಿ ವಿಶಿಷ್ಟವೇ. ಈ ಜೊಲ್ಲಿನ ರುಚಿಯನ್ನು ಗುರುತಿಸಿದ ಮರಗಳು, ಆ ಕೀಟವನ್ನ ಓಡಿಸಿ, ತಮ್ಮ ಎಲೆಗಳನ್ನ, ಕಾಯಿಗಳನ್ನ ಕಾಪಾಡಿಕೊಳ್ಳೊಕೆ ಒಂದು ಪ್ಲಾನ್ ಮಾಡತ್ವೆ. ಏನು ಪ್ಲಾನ್ ಇರ್ಬಹುದು ಹೇಳಿ ನೋಡೋಣ?” ಎಂದು ಪ್ರಶ್ನಿಸಿದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಒಂಭತ್ತನೆಯ ಕತೆ
ಬಿಸಿಬೆಳಕು -ತಂಪುಬೆಳಕಿನ ಸಂಗಮ, ಸಂಭ್ರಮ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ಝಗ್ಗನೆ ‘ಸೀರಿಯಲ್ ಸೆಟ್’ ಹತ್ತಿಕೊಂಡಂತೆ ಹತ್ತಿಕೊಂಡು, ಮತ್ತೆ ರಪ್ಪನೆ ಆಫ್ ಆಗಿ, ಮಿಂಚುಹುಳುಗಳ ಈ ಮಾಯಕ ಮೋಡಿಯಲ್ಲಿ ಸಮಯ ಉರುಳುತ್ತಿದ್ದುದೇ ತಿಳಿಯಲಿಲ್ಲ; ಅದರಲ್ಲೂ ಲಕ್ಷಾಂತರ ಮಿಂಚುಹುಳುಗಳ ಈ ನರ್ತನವನ್ನು ಮೊದಲಬಾರಿಗೆ ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಕುಟುಂಬ, ಬಿಟ್ಟ ಬಾಯಿ ಬಿಟ್ಟಂತೆಯೇ ಈ ಅಮೋಘ ಅನುಭವದಲ್ಲಿ ಕಳೆದುಹೋಗಿದ್ದರು. ನಡುನಡುವೆ ವಿಜ್ಞಾನದ, ಪರಿಸರದ ಬಗ್ಗೆ ಮಾತುಕತೆ, ಮತ್ತೆ ಅಚಾನಕ್ಕಾಗಿ ಮೌನ ಮತ್ತು ಮಾಯೆ! ಹೀಗೇ ಸಾಗಿತ್ತು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಎಂಟನೆಯ ಕತೆ
ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ಗೆಳತಿಯ ಜಾಣ ಪ್ರಶ್ನೆಗೆ ಉತ್ತರಿಸುತ್ತಾ “ಅದು ಹೇಗೆ ಗೊತ್ತಾ? ಈ ನಿಂಬೆ, ಹುಣಸೆಯಂತಹ ಹುಳಿ ಅಂಶ ಇರೋ ಆಹಾರಗಳಲ್ಲಿ ‘ಆಸಿಡ್’ ಅಂದ್ರೆ ‘ಆಮ್ಲ’ಗಳಿರತ್ವೆ ಅಲ್ವಾ? ಅಂತಹ ಹುಳಿಯಾದ ಆಹಾರ, ನಾಲಗೆಗೆ ತಗುಲಿದಾಗ, ನಾಲಗೆಯ ಆಮ್ಲೀಯತೆ ಹೆಚ್ಚುತ್ತೆ; ಈ ಬದಲಾದ ಸ್ಥಿತಿಯಲ್ಲಿ, ನಮ್ಮ ‘ಮಿರಾಕ್ಯುಲಿನ್’ ಇದ್ಯಲ್ಲ? ಅದು ರಾಸಾಯನಿಕವಾಗಿ ಪ್ರತಿಕ್ರಯಿಸಿ, ಸಿಹಿಯನ್ನು ಗುರುತಿಸುವ ರುಚಿಸಂವೇದಕಗಳನ್ನು ಆಕ್ಟಿವೇಟ್ ಮಾಡತ್ತೆ. ಹಾಗಾಗಿ, ಹುಳಿಯಂಶದ್ದೆಲ್ಲಾ ಸಿಹಿಯೆನಿಸೋಕೆ ಶುರುವಾಗತ್ತೆ. ಆದ್ರೆ ಈ ಎಫೆಕ್ಟ್ ಒಂದು ಅರ್ಧ ಘಂಟೆ, ೧ ಘಂಟೆ ಇರ್ಬಹುದಷ್ಟೇ. ನಮ್ಮ ಬಾಯಲ್ಲಿನ ಜೊಲ್ಲು ನಾಲಗೆಯ ಮೇಲಿದ್ದ ಈ ‘ಮಿರಾಕ್ಯುಲಿನ್’ ಅನ್ನೋ ‘ಗ್ಲೈಕೋಪ್ರೋಟೀನ್’ನ್ನ ತೊಳೆದು ಹಾಕಿ, ನಮ್ಮ ನಾಲಗೆ ಮೊದಲಿನ ಸ್ಥಿತಿಗೆ ಬರೋ ಹಾಗೆ ಮಾಡತ್ತೆ. ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಏಳನೆಯ ಕತೆ










