Advertisement

Category: ಪ್ರವಾಸ

ಮೋಹಕ ಕುದುರೆಮುಖ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಶಿಖರದ ತಲುಪಿದೆವೆನ್ನುವಾಗ ಸಣ್ಣದೊಂದು ಝರಿ ಅಡ್ಡ ಹಾಯುವುದು. ಅದನ್ನು ದಾಟಿ ಕಟ್ಟಿ ತಂದ ತಿಂಡಿ ತಿಂದು ಶಿಖರಾಗ್ರ ತಲುಪಿದೆವು. ಅಲ್ಲಿನ ಮಂಜಿನಲ್ಲಿ ಕುಣಿದು ಕುಪ್ಪಳಿಸಿದೆವು. ಶಿಖರಾಗ್ರದಿಂದ ಕಾಣುವ ಮೋಹನ ಮೋಹಕ ನೋಟಕೆ ಕಾದು ಕುಳಿತೆವು. ಒಂದೆರಡು ಬಾರಿ ಕಣಿವೆಯ ರುದ್ರ ಸೌಂದರ್ಯವನ್ನು ವೀಕ್ಷಿಸಿದೆವು. ಕುದುರೆ ಮುಖದಿಂದ ಮುಳ್ಳಯ್ಯನಗಿರಿಯ ವಿಹಂಗಮ ನೋಟ ನೋಡಬಹುದು. ಯಾವುದಕ್ಕೂ ಮಂಜು ನಮಗೆ ಅವಕಾಶವೀಯಲೇ ಇಲ್ಲ. ಮುಳ್ಳಯ್ಯನ ಗಿರಿ ಏರಿ ಕುದುರೆ ಮುಖ ಪರ್ವತ ನೋಡಿ ಪರವಶನಾದುದು ನೆನಪಿದೆ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುದುರೆಮುಖ ಕುರಿತ ಬರಹ

Read More

ಅಟ್ಲಾಂಟಾದಲ್ಲಿ ಅಲೆಅಲೆಯುತ್ತಾ….: ದೇವಿಕಾ ನಾಗೇಶ್‌ ಬರಹ

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಆಧುನಿಕತೆಗೆ ಸಮಾನತೆಗೆ ತಕ್ಷಣ ತೆರೆದುಕೊಳ್ಳುವ ಅಮೆರಿಕವನ್ನು ಕಟ್ಟಿ ಬೆಳೆಸಿದವರು ಅನಾದಿಯಿಂದಲೂ ವಲಸಿಗರು ಎನ್ನುವುದನ್ನು ಮರೆಯುವಂತಿಲ್ಲ. ಈಗ ಇವರಲ್ಲಿ ನಾನು ಮುಂದು ತಾನು ಮುಂದು ಎನ್ನುವ ಪೈಪೋಟಿ ಶುರುವಾಗಿದೆ. ಆ ಕಾರಣಕ್ಕಾಗಿ ಒಬ್ಬರನ್ನು ಒಬ್ಬರು ಹಣೆಯುವ ಸ್ಪರ್ಧೆ. ಈ ಸ್ಪರ್ಧೆಯ ಕಾರಣದಿಂದಾಗಿಯೇ ಅಮೇರಿಕಾದ ಇತಿಹಾಸ ರಕ್ತದ ಕಲೆಯನ್ನು ಹೊತ್ತು ವಿಜೃಂಬಿಸುತ್ತಿದೆ. ಹೊಟ್ಟೆ ಪಾಡಿಗಾಗಿ ವಲಸೆ ಬಂದ ಪ್ರತಿಯೊಬ್ಬರದ್ದು ಇವತ್ತು ಈ ಊರು ನಾಳೆ ಇನ್ನೊಂದು ಊರು ಎನ್ನುವಂತಹ ಅತಂತ್ರ ಪರಿಸ್ಥಿತಿ.
ಅಮೇರಿಕದ ಅಟ್ಲಾಂಟಾದಲ್ಲಿ ಓಡಾಡಿದ ನೆನಪುಗಳ ಕುರಿತ ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

Read More

ಅಲೆಮಾರಿಯ ಆಗುಂಬೆ ಹಾಗೂ ಟ್ರೋಜನ್‌: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಆಗುಂಬೆಯ ಕುರಿತ ಬರಹ

Read More

ಹಿಂಡ್ಲು ಮನೆಯ ಹಾದಿಯಲ್ಲಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾಧಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದ್ದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು. ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ ಕಿರುಚಿದರು. ಅದು ಇಂಬಳ ಎಂಬ ಜೀವಿಯ ಕೆಲಸ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

Read More

ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು!
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ರಾಜಸ್ಥಾನದಲ್ಲಿ ಓಡಾಡಿದ ಅನುಭವಗಳ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ