Advertisement

Category: ವಾರದ ಕಥೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ರಾತ್ರಿ ಕಳೆದು ಬೆಳಗಾಯಿತು. ಸುದ್ದಿ ಇಲ್ಲ. ಶಾಲೆಗೆ ಮಾಲೀಕರು ಬಂದರು. ಸಿ ಈ ಓ, ಡ್ರೈವರ್, ಆಯಾಗಳ ಮೀಟಿಂಗ್ ನಡೆಯಿತು. ಹೆಚ್ಚಿನ ವಿಷಯ ತಿಳಿಯಲಿಲ್ಲ. ಆದರೆ ಎಲ್ಲರೂ “ಅವರಿಬ್ಬರ ನಡುವೆ ಏನೋ ನಡೆಯುತ್ತಿತ್ತು. ಅವಳು ಬಲೆ ಪಾಕಡ…” ಎಂದು, ಕೆಲವರು ‘ಮಹದೇವ ಗುಮ್ಮನ ಗುಸಕ.. ಸೈಲೆಂಟಾಗಿ ಇದ್ದು ಹಿಂಗ್ ಮಾಡ್ಬಿಟ್ಟ’ ಹೀಗೆ… ತರಹೇವಾರಿ ಮಾತುಗಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಇದು ಎಂಥಾ ಲೋಕವಯ್ಯ..” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಸಹಜೀವನ”

Read More

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ”

Read More

ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು.
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು.…

Read More

ಬರಹ ಭಂಡಾರ