Advertisement

ಎಚ್. ಗೋಪಾಲಕೃಷ್ಣ

ಕಷ್ಟ ಸುಖದವರು ಬೇಕು: ಕೆ. ಸತ್ಯನಾರಾಯಣ ಕಥಾ ಸರಣಿ

ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್‌ ಸ್ಕೋರ್‌. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಪತ್ತೇದಾರಿ ಇಲಾಖೆಯೇ ಬೇಡವೆಂದ ಗೃಹಸಚಿವ: ಕೆ. ಸತ್ಯನಾರಾಯಣ ಕಥಾ ಸರಣಿ

ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಬಿಂದಿಗೆ-ಬಕೆಟ್‌ ಇಡಲು ಬಂದವರನ್ನು ಕಂಡು ಗೇಲಿ ಮಾಡುತ್ತಿದ್ದೆವು. ನಾಲ್ಕು ದಿನ ಸುಮ್ಮನೆ ಇರಲು ಬಂದಿದ್ದ ನಾವು ಕೂಡ ಈ ಗೇಲಿಯಲ್ಲಿ ದೊಡ್ಡಪ್ಪನ ಮಕ್ಕಳ ಜೊತೆ ಸೇರಿಕೊಳ್ಳುತ್ತಿದ್ದೆವು. ಇದಕ್ಕಾಗಿ ವಠಾರದ ಉಳಿದ ಮನೆಗಳವರಿಗೆ ಯಾವತ್ತೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಲ್ಲಿ ನೀರು ಬಂದಮೇಲೂ ನಿಲ್ಲುವ ತನಕವೂ ಜಗಳ, ಕಿತ್ತಾಟ. ಒಂದೊಂದು ಸಲ ದಿನ-ಎರಡು ದಿನಕ್ಕೊಮ್ಮೆ ನೀರು ಬರುವುದು ನಿಂತು ಹೋಗುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ:‌ ಕೆ. ಸತ್ಯನಾರಾಯಣ ಕಥಾ ಸರಣಿ

ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ‍ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್‌ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ” 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ