ನೆದರ್ಲ್ಯಾಂಡ್ಸ್ ಬಾಣಂತನ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನಮ್ಮ ಮೊದಲ ಆತಂಕ, ನಾವು ಹೆರಿಗೆ ಸಮಯದಲ್ಲಿ ಹೋಗಲು ಸಾಧ್ಯವಾಗುವುದೋ ಇಲ್ಲವೋ ಎಂಬುದು. ಆವತ್ತಿನ ಪರಿಸ್ಥಿತಿಯಲ್ಲಿ ಅದು ಕನಸಿನಲ್ಲೂ ಕೂಡ ಸಾಧ್ಯವಿರಲಿಲ್ಲ. ಮಗಳು ಉದ್ಯೋಗಿಯಾಗಿದ್ದರಿಂದ ಇಲ್ಲಿಗೆ ಬಂದು ಬಾಣಂತನ ಮುಗಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಮಗಳಿಗೆ ಕೂಡ ಪ್ರಾರಂಭದ ಸಂಭ್ರಮ ಮುಗಿದ ಮೇಲೆ, ನಾನಾ ರೀತಿಯ ಆತಂಕ, ಅನುಮಾನಗಳು. ಕೆಲಸ, ಸಂಸಾರ, ಸ್ಕೂಲಿಗೆ ಹೋಗುತ್ತಿರುವ ಏಳು ವರ್ಷದ ಮಗ, ತನ್ನ ಆರೋಗ್ಯ, ಹೆರಿಗೆಗೆ ತಯಾರಿ, ಹೀಗೆ. ಎಲ್ಲವನ್ನೂ ಹೇಗೆ ವ್ಯವಸ್ಥಿತಗೊಳಿಸಬೇಕೆಂಬ ಗೊಂದಲ, ಸವಾಲು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಮೂರನೆಯ ಬರಹ