Advertisement

ಸುಮಾವೀಣಾ

ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿ

ಮಕ್ಕಳ ಮುಂದೆ ಇವನ್ನೆಲ್ಲಾ ಹೇಳಿದರೆ ಬರೀ ಕೇಳುತ್ತಾರಷ್ಟೇ ಆದರೆ ಈ ಕಷ್ಟದ ತೀವ್ರತೆ ಅವರಿಗೆ ಅರಿವಾಗುವುದಿಲ್ಲ. ಮೊದಲು ಅನ್ನಕ್ಕೆ ಭಾರಿ ಬೆಲೆಯಿತ್ತು. ನಮ್ಮ ಊರಲ್ಲಿ ಕೆಲ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಅನ್ನ ಮಾಡುತ್ತಿದ್ದರು. ಆದರೆ ಈಗ ಇಂತಹ ಪರಿಸ್ಥಿತಿ ಯಾರಿಗೂ ಇಲ್ಲ. ಮಕ್ಕಳಲ್ಲಿ ಮೊದಲು ಇದ್ದ ಕಮಿಟ್‌ಮೆಂಟ್, ಗುರು ಶಿಷ್ಯರ ಬಾಂಧವ್ಯ, ತಮ್ಮ ಹೆತ್ತವರ ಬಗ್ಗೆ ಇರುವ  ಪ್ರೀತಿಯ ಬಂಧ ತುಸು ಬಿರುಕು ಬಿಡುತ್ತಿದೆ! ಒಂದು ಹಂತದವರೆಗೂ ಬಾಂಧವ್ಯ ಇದ್ದರೂ ಅದು ಬರೀ ಮೆಟೀರಿಯಲಿಸ್ಟಿಕ್ ಆಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಬೋಳುಮಂಡೆಯವನಾಗಿ ನನ್ನ ಸ್ವಗತ: ಬಸವನಗೌಡ ಹೆಬ್ಬಳಗೆರೆ ಸರಣಿ

ಹಲವರು ದೇವರಿಗೆ ತಮ್ಮ ಹರಕೆ ತೀರಿಸಲು ದೇವರಿಗೆ ಮುಡಿ ಕೊಡುತ್ತಾರೆ. ಆದರೆ ತಲೆಯಲ್ಲಿ ಕೂದಲಿಲ್ಲದೇ ಬೋಳಾಗಿರುವ ನನಗೆ ಈ ರೀತಿ ಮುಡಿ ಕೊಡಲು ಸಾಧ್ಯವಿಲ್ಲ ಎಂದು ಬೇಸರವಾಗುವುದಿಲ್ಲ. ತುಂಬಾ ಆಶಾವಾದಿ ನಾನು. ಇದಕ್ಕೆ ಬದಲಾಗಿ ನನ್ನ ಕೂದಲನು ಮುಡಿ ತೆಗೆದುಕೊಳ್ಳುವ ವಿಷಯದಲ್ಲಿ ದೇವರಿಗೇ ಅದೃಷ್ಟ ಇಲ್ಲ ಎಂದೇ ನಾನು ಭಾವಿಸುತ್ತೇನೆ! ಏಕೆಂದರೆ ಅನೇಕರು ಮಡಿ ಕೊಟ್ಟು ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಮುಡಿ ಕೊಡುವಷ್ಟು ಕೂದಲನ್ನು ನಮ್ಮಿಂದ ಈಗಾಗಲೇ ಕಿತ್ತುಕೊಂಡಿರುವುದರಿಂದ ಮುಡಿ ಕೊಡುವ ಪ್ರಮೇಯವೇ ಬರುವುದಿಲ್ಲ! ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್‌ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಗ್ರಾಮದೇವತೆ ಮಾರಮ್ಮನ ಕೃಪೆಯಿಂದ…: ಬಸವನಗೌಡ ಹೆಬ್ಬಳಗೆರೆ ಸರಣಿ

ಬಿದ್ದ ಗಾಯ ವಾಸಿಯಾದರೂ ಗಾಯದ ನೋವು ಮಾತ್ರ ಕಡಿಮೆಯಾಗಲಿಲ್ಲ. ನಾನು ಹಲವು ವೈದ್ಯರ ಹತ್ತಿರ ತೋರಿಸಿದರೂ ಕೂಡ ಅವರು ‘ಏನೂ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದರು, ಆದರೆ ರಾತ್ರಿ ಮಲಗಿದಾಗ ಮಾತ್ರ ವಿಪರೀತ ಕಾಲು ಸೆಳೆತ, ಕಾಲು ನೋವು ಆಗುತ್ತಿತ್ತು. ಆಗ ನನಗೆ ಮನಸ್ಸಿನಲ್ಲಿ “ಇದು ದೇವರ ಶಾಪವಿರಬಹುದೋ ಏನೋ?” ಅಂದುಕೊಂಡು ದೇವರ ಕುರಿತು “ಅಮ್ಮಾ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಾನು ಊರಿಗೆ ಬಂದು ದರ್ಶನ ಮಾಡುತ್ತೇನೆ” ಎಂದು ಹೇಳಿಕೊಂಡೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ನಾಲ್ಕನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ