Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

 ಕಾ.ತ.ಚಿಕ್ಕಣ್ಣ ಎಂಬ ಕನ್ನಡ ಪರಿಚಾರಕ: ಡಾ. ಎಲ್.ಜಿ.ಮೀರಾ ಅಂಕಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಯಾಗಿ, ಸೃಜನಶೀಲ ಲೇಖಕರಾಗಿದ್ದುಕೊಂಡು ವಿವಿಧ ಪ್ರಕಾರಗಳ ಸುಮಾರು ಹದಿನಾರು ಸಾಹಿತ್ಯಕೃತಿಗಳನ್ನು ರಚಿಸಿ, ಅಷ್ಟೇ ಸಂಖ್ಯೆಯ ಮೌಲಿಕ ಕೃತಿಗಳನ್ನು ಸಂಪಾದಿಸಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಚುಕ್ಕಾಣಿ ಹಿಡಿದವರಾಗಿ, ಸಂಘಟಕರಾಗಿ ಇವರು ನಾಡಿಗೆ ನೀಡಿದ ಕೊಡುಗೆ ಸ್ಮರಣೀಯ. ಜೊತೆಗೆ ತಮ್ಮ ಗ್ರಾಮೀಣ ಮೂಲವನ್ನು ಮರೆಯದೆ ಅದರ ಮೂಲಕವೇ ತಮ್ಮೊಳಗಿನ ಪ್ರೀತಿ ವಿಶ್ವಾಸಗಳ ಸೆಲೆಯನ್ನು ಬತ್ತದಂತೆ ಉಳಿಸಿಕೊಂಡು ನಮ್ಮಂತಹ ಕಿರಿಯರಿಗೆ ಸಾಹಿತ್ಯ-ಸಂಸ್ಕೃತಿಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟದ್ದಷ್ಟದ್ದೇ ಅಲ್ಲದೆ, ಹೇಗೆ ಕೆಲಸ ಮಾಡಬೇಕು, ಹೇಗೆ ಮುಂಚೂಣಿ ವಹಿಸಬೇಕು ಎಂಬುದಕ್ಕೂ ಒಂದು ಮಾದರಿ ಆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಇಂದಿನ ಮಹಿಳೆಗೆ ಸ್ತ್ರೀವಾದ ಕಲಿಸುವ ಪಾಠಗಳು ಅಪ್ರಸ್ತುತವೇ?: ಡಾ. ಎಲ್.ಜಿ. ಮೀರಾ ಅಂಕಣ

ಹೆಣ್ಣುಮಕ್ಕಳ ವಿದ್ಯೆ, ಉದ್ಯೋಗ, ಸ್ವತಂತ್ರ ಅಸ್ತಿತ್ವ, ಜೀವನದ ಸಾರ್ಥಕತೆಯ ಮುಕ್ತ ಹುಡುಕಾಟಕ್ಕೆ ಬೆಲೆ ಕೊಡದ ಸ್ತ್ರೀದಮನಿಕೆಯ ಮೌಲ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಉಸಿರಾಡುತ್ತಿವೆ ಎಂಬ ವಿಷಯಕ್ಕಿಂತ ಹೆಚ್ಚಾಗಿ ನನ್ನಲ್ಲಿ ಆತಂಕ ಮೂಡಿಸುವ ವಿಷಯ ಅಂದರೆ, ಸ್ವತಃ ಅದಕ್ಕೆ ಒಳಗಾಗಿರುವ ನವಪೀಳಿಗೆಗಳ ಯುವತಿಯರಿಗೆ ಈ ಬಗ್ಗೆ ಅರಿವು ಇಲ್ಲದಿರುವುದು. ತಮಗೆ ಸಿಕ್ಕಿರುವ ಒಂದಿಷ್ಟು ಆಸರೆ, ಚಿನ್ನಬೆಳ್ಳಿ, ರೇಷ್ಮೆಸೀರೆಗಳ ಸಮಾಧಾನದಲ್ಲಿ ಅವರು ತಮ್ಮ ಸ್ವಂತಿಕೆಯ ಬಗ್ಗೆ ಆಲೋಚಿಸುವುದನ್ನು ಮರೆತಿದ್ದಾರೆಯೇ ಎಂಬ ಸಂಕಟಕರ ಪ್ರಶ್ನೆಯು ನನಗೆ ಆಗಾಗ ಎದುರಾಗುತ್ತದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

 ಇಂದಿಗೂ ಬಂಧಿತಳಾದ ಹೆಣ್ಣು ಹಾಗೂ ನೇಮಿಚಂದ್ರರ ಕಥೆಗಳ ನೆನಪು…..: ಡಾ. ಎಲ್.ಜಿ. ಮೀರಾ ಅಂಕಣ

“…..ಮಹಿಳೆ ತನ್ನ ಕೆಲಸವನ್ನು ಮಾಡುವುದು ತನ್ನ ಖುಷಿಗೆ, ತನ್ನ ವಿದ್ಯೆ ಓದಿನ ಸದುಪಯೋಗಕ್ಕೆ, ತನ್ನದಾದ ಪ್ರತ್ಯೇಕ ವ್ಯಕ್ತಿತ್ವ ವಿಕಾಸಕ್ಕೆ, ತನ್ನ ಸಾಮರ್ಥ್ಯ, ಯೋಗ್ಯತೆಗಳ ಪೂರ್ಣ ಉಪಯೋಗಕ್ಕೆ ಎಂಬುದು ನಮ್ಮಲ್ಲಿ ಅಪರಿಚಿತ ವಿಷಯ… ಮಹಿಳೆಯ ಬಾಲ್ಯದಿಂದ ಯೌವನದವರೆಗೆ ಅಕೆಯ ಪ್ರತಿ ತಯಾರಿ ಎಂದೋ ಬರುವ ಗಂಡನ ಬೇಡಿಕೆ, ಬಯಕೆಗಳಿಗೆ ಅನುಕೂಲಕರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ನಾನು ಚಿತ್ರಿಸಿದ ಸ್ತ್ರೀಪಾತ್ರವು ಇಂಥ ಎರಡನೆ ಅಸ್ತಿತ್ವವನ್ನೊಮ್ಮೆ ಝಾಡಿಸಿ, ಗಂಡ ಮಕ್ಕಳ ಬೆಳಕಲ್ಲೆ ಬೆಳಗಬೇಕಾದ ಗ್ರಹವಾಗಿ ತಾನೇನೂ ಉಳಿಯಬೇಕಿಲ್ಲ…
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೆರಡನೆಯ ಬರಹ

Read More

ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ

ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೊಂದನೆಯ ಬರಹ

Read More

ಆರ್. ಕಲ್ಯಾಣಮ್ಮ ಮತ್ತು ಶ್ಯಾಮಲಾದೇವಿ: ನವೋದಯ ಸ್ತ್ರೀಸಾಹಿತ್ಯದ ಎರಡು ಆದಿದೀಪಗಳು: ಡಾ.ಎಲ್.ಜಿ. ಮೀರಾ ಅಂಕಣ

ಜನಮಾನಸಕ್ಕೆ ನವೋದಯ ಲೇಖಕಿಯರ ಮಹತ್ವದ ಕೊಡುಗೆಯನ್ನು ಪರಿಚಯ ಮಾಡಿಕೊಡುವಲ್ಲಿ ಮುಂದಿನ ಪೀಳಿಗೆಗಳ ಲೇಖಕಿಯರು ಮಾಡಿರುವ ಅಪಾರ ಪರಿಶ್ರಮವನ್ನು ನಾವು ನೆನೆಯಬೇಕು. ಪ್ರಧಾನವಾಹಿನಿಯ ಸಾಹಿತ್ಯಚರಿತ್ರೆಯು ಹಿರಿಯಲೇಖಕಿಯರನ್ನು ನಿರ್ಲಕ್ಷಿಸಿದ್ದ ಸಂದರ್ಭದಲ್ಲಿ, ಪ್ರೊ.ಚಿ.ನ.ಮಂಗಳಾರಂತಹ ವಿದ್ವಾಂಸೆಯರ ಆಸಕ್ತ ಪ್ರಯತ್ನಗಳು ಈ ಕೊರತೆಯನ್ನು ತುಂಬಲು ಪ್ರಾರಂಭಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ